ಆ್ಯಪ್ನಗರ

ವಯಸ್ಸು 40 ದಾಟುತ್ತಿದ್ದಂತೆ ಈ ರಕ್ತದ ಪರೀಕ್ಷೆಗಳು ಪ್ರತಿಯೊಬ್ಬರಿಗೂ ಕಡ್ಡಾಯ!

ಮನುಷ್ಯನಿಗೆ ನಲವತ್ತು ವರ್ಷ ವಯಸ್ಸಾಗುತ್ತಿದ್ದಂತೆ ರೋಗನಿರೋಧಕ ಶಕ್ತಿ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇಲ್ಲವೆಂದರೆ ಆರೋಗ್ಯ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ರಕ್ತ ಪರೀಕ್ಷೆ ಮಾಡಿಸಿ ಕೊಳ್ಳಲು ಹಿಂದೇಟು ಹಾಕಬಾರದು.

Vijaya Karnataka Web 15 Apr 2021, 4:03 pm
ಮನುಷ್ಯ ತನ್ನ ದೇಹದಲ್ಲಿ ರಕ್ತದ ಪರೀಕ್ಷೆ ನಡೆಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಪತ್ತೆ ಹಚ್ಚಿಕೊಳ್ಳಬಹುದು. ಮುಖ್ಯವಾಗಿ ಲೈಂಗಿಕ ಆರೋಗ್ಯ ಸಮಸ್ಯೆಗಳು ಸೇರಿದಂತೆ ಇನ್ನುಳಿದ ಮಾರಕ ತೊಂದರೆಗಳನ್ನು ಈ ವಿಧಾನದಲ್ಲಿ ತಿಳಿದುಕೊಳ್ಳಬಹುದು.
Vijaya Karnataka Web blood tests you must go for after fourty
ವಯಸ್ಸು 40 ದಾಟುತ್ತಿದ್ದಂತೆ ಈ ರಕ್ತದ ಪರೀಕ್ಷೆಗಳು ಪ್ರತಿಯೊಬ್ಬರಿಗೂ ಕಡ್ಡಾಯ!


ಮನುಷ್ಯನಿಗೆ ಸಿಗುತ್ತಿರುವ ಪೌಷ್ಠಿಕಾಂಶಗಳು ರಕ್ತದಲ್ಲಿ ಯಾವ ಪ್ರಮಾಣದಲ್ಲಿ ಸದ್ಯದ ಆರೋಗ್ಯ ಸ್ಥಿತಿಯಲ್ಲಿವೆ ಎಂಬುದನ್ನು ಕೂಡ ಕಂಡುಹಿಡಿದುಕೊಳ್ಳಬಹುದು. 40 ವರ್ಷ ವಯಸ್ಸು ದಾಟಿದ ಮನುಷ್ಯ ಯಾವುದೇ ಕಾರಣಕ್ಕೂ ತನ್ನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ.

ಆಗಾಗ ತನ್ನ ಆರೋಗ್ಯದ ಸ್ಥಿತಿಯನ್ನು ವೈದ್ಯರ ಮೂಲಕ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಕೆಲವೊಂದು ರಕ್ತದ ಪರೀಕ್ಷೆಗಳನ್ನು ನಡೆಸುವುದರಿಂದ ನಿಮ್ಮ ಸದ್ಯದ ಆರೋಗ್ಯ ಪರಿಸ್ಥಿತಿಯನ್ನು ಮತ್ತು ನಿಮಗೆ ಮುಂದೆ ಎದುರಾಗಲಿರುವ ಆರೋಗ್ಯ ಸಮಸ್ಯೆಯನ್ನು ಕಂಡು ಹಿಡಿದುಕೊಂಡು ಅದಕ್ಕೆ ಸರಿಯಾದ ಚಿಕಿತ್ಸೆಗಳನ್ನು ಆರಂಭದಿಂದಲೇ ಮುಂದುವರೆಸಬಹುದು.

ಯಾವ ಯಾವ ರಕ್ತದ ಪರೀಕ್ಷೆಗಳು 40 ವರ್ಷ ವಯಸ್ಸು ದಾಟಿದ ಪುರುಷರಿಗೆ ಮತ್ತು ಮಹಿಳೆಯರಿಗೆ ಸಾಮಾನ್ಯ ಎಂಬುದನ್ನು ಈ ಲೇಖನದಲ್ಲಿ ಒಂದೊಂದಾಗಿ ನೋಡೋಣ

​ಅನಿಮಿಯಾ ಸಮಸ್ಯೆಯನ್ನು ಪತ್ತೆಹಚ್ಚಲು.......

  • ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ ಬಿ12 ಅಂಶ, ಫೋಲಿಕ್ ಆಮ್ಲ ಅಥವಾ ಕಬ್ಬಿಣದ ಅಂಶ ಕೊರತೆ ಕಂಡರೆ ಅದರಿಂದ ಅನಿಮಿಯ ಸಮಸ್ಯೆ ಉಂಟಾಗುತ್ತದೆ ಎಂದು ಊಹಿಸಬಹುದು.
  • ದೇಹಕ್ಕೆ ಪ್ರತಿದಿನವು ಅಗತ್ಯವಾಗಿ ಬೇಕಾದ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಕಡಿಮೆಯಾಗುತ್ತಾ ಸಾಗಿದರೆ ಅದರಿಂದ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.
  • ವಯಸ್ಸಾದಂತೆ ಮನುಷ್ಯನಿಗೆ ರೋಗನಿರೋಧಕ ಶಕ್ತಿ ಅತ್ಯುತ್ತಮವಾಗಿ ನಿರ್ವಹಣೆ ಆಗಬೇಕಾದದ್ದು ಸಹಜ. ಆದರೆ ಇದು ವಿರುದ್ಧವಾಗಿ ನಡೆಯುವುದರಿಂದ ಮನುಷ್ಯನ ಆರೋಗ್ಯ ಹದಗೆಡುತ್ತದೆ ಮತ್ತು ದೇಹಕ್ಕೆ ಹಲವಾರು ಕಾಯಿಲೆಗಳು ಆವರಿಸಿಕೊಳ್ಳುತ್ತವೆ ಎಂದು ಹೇಳಬಹುದು.
  • ಸಂಪೂರ್ಣ ರಕ್ತದ ಪರೀಕ್ಷೆ ಕೂಡ ಈ ವಯಸ್ಸಿನಲ್ಲಿ ಅತ್ಯಗತ್ಯ ಎಂದು ಹೇಳಲಾಗುತ್ತದೆ. ಕೆಟ್ಟ ಆರೋಗ್ಯ ಚಟಗಳನ್ನು ಕಡಿಮೆ ಮಾಡಿಕೊಂಡರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

​ಮಧುಮೇಹ ಪರೀಕ್ಷೆ

  • ಮಧುಮೇಹವನ್ನು ಸಹ ಪತ್ತೆಹಚ್ಚಲು ರಕ್ತಪರೀಕ್ಷೆ ನಡೆಸಬೇಕಾಗುತ್ತದೆ. ಯಾರೂ ತಮ್ಮ ಜೀವನದಲ್ಲಿ ತುಂಬಾ ಜಡ ಜೀವನಶೈಲಿಯನ್ನು ಅನುಸರಿಸುತ್ತಾರೆ ಜೊತೆಗೆ ಅನಾರೋಗ್ಯಕರ ಆಹಾರ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುತ್ತಾರೆ ಅಂತಹವರಿಗೆ ಮಧುಮೇಹ ಸಮಸ್ಯೆ ಸಾಮಾನ್ಯ ಎಂದು ಹೇಳಬಹುದು.
  • ಮಹಿಳೆಯರು ಗರ್ಭಿಣಿ ಆದಂತಹ ಸಂದರ್ಭದಲ್ಲಿ, ದೇಹದ ತೂಕ ಇದ್ದಕ್ಕಿದ್ದಂತೆ ಹೆಚ್ಚಾದ ಸಮಯದಲ್ಲಿ ಮತ್ತು ಜಡ ಜೀವನಶೈಲಿಯನ್ನು ಅನುಸರಿಸುತ್ತಿರುವ ಸಂದರ್ಭದಲ್ಲಿ ಕಡ್ಡಾಯವಾಗಿ ಒಮ್ಮೆಯಾದರೂ ಮಧುಮೇಹದ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

​ಥೈರಾಯ್ಡ್ ಪರೀಕ್ಷೆ

  • ಒಂದು ವೇಳೆ ನಿಮ್ಮ ದೇಹದ ತೂಕ ಈಗಾಗಲೇ ಹೆಚ್ಚಾಗಿದ್ದು, ಅತಿಯಾದ ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ನಿಮಗೆ ಬಹುಶಃ ಗೊತ್ತಿಲ್ಲದಂತೆ ಹೈಪೋಥೈರಾಯ್ಡಿಸಂ ಅಥವಾ ಹೈಪರ್ಥೈರಾಯ್ಡಿಸಂ ಸಮಸ್ಯೆ ಇರಬಹುದು.
  • ಇದು ಮುಂಬರುವ ದಿನಗಳಲ್ಲಿ ಥೈರಾಯ್ಡ್ ಕ್ಯಾನ್ಸರ್ ತೊಂದರೆಗೂ ಕೂಡ ಕಾರಣವಾಗುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ವೈದ್ಯರನ್ನು ಒಮ್ಮೆ ಭೇಟಿಯಾಗಿ ನಿಮ್ಮ ಆರೋಗ್ಯದ ಸಮಸ್ಯೆಯನ್ನು ಅವರಿಗೆ ವಿವರಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

ಥೈರಾಯ್ಡ್ ಸಮಸ್ಯೆಗೆ ಭಯಬೇಡ, ಈ ಯೋಗಾಸನಗಳನ್ನು ದಿನಾ ಮಾಡಿ

​ಲೈಂಗಿಕವಾಗಿ ಹರಡುವ ರೋಗಗಳು

  • ಲೈಂಗಿಕವಾಗಿ ಹರಡುವ ರೋಗ ಎಂದರೆ ಮೊದಲು ನೆನಪಿಗೆ ಬರುವುದು ಹೆಚ್ಐವಿ ಅಥವಾ ಏಡ್ಸ್. ಇದರ ಜೊತೆಗೆ ಹೆಪಟೈಟಿಸ್-ಬಿ ಕೂಡ ಹರಡುತ್ತದೆ ಎಂಬುದು ತಿಳಿದುಬಂದಿದೆ.
  • ಒಂದು ವೇಳೆ ನಿಮಗೆ ಈಗಾಗಲೇ 40ವರ್ಷ ದಾಟಿದ್ದರೆ, ನೀವು ಸಾಧ್ಯವಾದಷ್ಟು ಇಂತಹ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವುದು ಒಳ್ಳೆಯದು.
  • ಏಕೆಂದರೆ ನಿಮ್ಮಿಂದ ನಿಮ್ಮ ಸಂಗಾತಿಗೆ ಅಥವಾ ನಿಮ್ಮ ಸಂಗಾತಿಯಿಂದ ನಿಮಗೆ ಲೈಂಗಿಕವಾಗಿ ರೋಗಗಳು ಯಾವುದೇ ಕ್ಷಣದಲ್ಲಿ ಹರಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಮೊದಲು ಎಚ್ಚರ ವಹಿಸಿ.

​ಸಿಬಿಸಿ ಪರೀಕ್ಷೆ

  • ಒಂದು ವೇಳೆ ನಿಮಗೆ ಮಲೇರಿಯಾ ಅಥವಾ ಟಿಬಿ ಕಾಯಿಲೆ ಬಂದಂತಹ ಸಂದರ್ಭದಲ್ಲಿ ವೈರಾಣುಗಳ ಪತ್ತೆಹಚ್ಚುವ ಸಲುವಾಗಿ ವೈದ್ಯರು ನಮಗೆ ಈ ಪರೀಕ್ಷೆಗೆ ಬರೆದುಕೊಡುತ್ತಾರೆ. ಕೇವಲ ಅರ್ಧ ಅಥವಾ ಒಂದು ದಿನದಲ್ಲಿ ನಿಮಗೆ ಫಲಿತಾಂಶಗಳು ಸಿಗುತ್ತದೆ.
  • ಸಾಮಾನ್ಯವಾಗಿ ನಿಮಗೆ ಸೊಳ್ಳೆ ಕಚ್ಚಿದ ಸಂದರ್ಭದಲ್ಲಿ ಮಲೇರಿಯಾ ವೈರಾಣುಗಳು ನಿಮ್ಮ ದೇಹದಲ್ಲಿ ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡು ನಿಮಗೆ ರೋಗ ಉಂಟುಮಾಡುತ್ತವೆ.
  • ಬ್ಯಾಕ್ಟೀರಿಯಾದ ಪ್ರಭಾವದಿಂದಲೂ ಕೂಡ ನಿಮಗೆ ರೋಗಾಣುಗಳ ಸಂತತಿ ಹೆಚ್ಚಾಗಿ ಟಿಬಿ ಕಾಯಿಲೆ ಕಂಡುಬರುವ ಸಾಧ್ಯತೆ ಇದೆ.
  • ಹಾಗಾಗಿ ಈ ಪರೀಕ್ಷೆಗಳು ಸಹ ನಿಮಗೆ ಆರೋಗ್ಯದ ಅಸ್ವಸ್ಥತೆ ಉಂಟಾದ ಸಂದರ್ಭದಲ್ಲಿ ಕಡ್ಡಾಯವಾಗಿ ಇರುತ್ತವೆ ಎಂದು ಹೇಳಬಹುದು.

ಮದುವೆ ಮುಂಚೆ ಹುಡುಗ-ಹುಡುಗಿ ಇಬ್ಬರೂ ರಕ್ತದ ಪರೀಕ್ಷೆ ಮಾಡಿಸಿಕೊಳ್ಳಬೇಕಂತೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ