ಆ್ಯಪ್ನಗರ

ಬ್ರಾ ಸ್ಟ್ರಾಪ್‌ ಸಿಂಡ್ರೋಮ್‌

ಸರಿಯಾದ ಅಳತೆಯ ಬ್ರಾ ಧರಿಸಬಹುದು ನೀವು ಹಾಗಂತ ನೀವು ಸೇಫ್‌ ಎಂದುಕೊಳ್ಳಬೇಡಿ.

Vijaya Karnataka 15 Mar 2018, 5:00 am

ಸರಿಯಾದ ಅಳತೆಯ ಬ್ರಾ ಧರಿಸಬಹುದು ನೀವು. ಹಾಗಂತ ನೀವು ಸೇಫ್‌ ಎಂದುಕೊಳ್ಳಬೇಡಿ. ಏಕೆಂದರೆ ಸರಿಯಾದ ಅಳತೆಯ ಬ್ರಾ ಕೂಡ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ ಅಧ್ಯಯನ. ದೇಹಕ್ಕೆ ಉತ್ತಮ ಆಕಾರ ನೀಡುವ ವಿಭಿನ್ನ ಬಗೆಯ ಬ್ರಾಗಳು ಮಹಿಳೆಯುರನ್ನು ಸೆಳೆಯುತ್ತಿವೆ. ಆದರೆ ಅಷ್ಟೆ ಬೇಗ ಭುಜ, ಕೈ ನೋವು ಬೆನ್ನು ನೋವಿನಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಹಲವರು. ಬಹುತೇಕರಿಗೆ ತಮ್ಮ ನೋವಿನ ಕಾರಣ ತಾವೇ ಧರಿಸಿರುವ ಒಳ ಉಡುಪು ಎಂಬುದರ ಅರಿವು ಕೂಡ ಇರುವುದಿಲ್ಲ. ಆದರೆ ನಿಮ್ಮ ನೋವಿನ ಮೂಲ ಇದೇ ಬಿಗಿ ಪಟ್ಟಿಯ ಬ್ರಾ ಎಂಬುದು ನೆನಪಿರಲಿ. ಹೌದು, ಬಿಗಿಯಾದ ಪಟ್ಟಿ ಒಳಗೊಂಡ ಬ್ರಾ ಧರಿಸುವುದರಿಂದ ನಿಮ್ಮಲ್ಲಿ ಬ್ರಾ ಸ್ಟ್ರಾಫ್ಸ್‌ ಸಿಂಡ್ರೋಮ್‌ ಕಾಣಿಸಬಹುದು. ಬ್ರಾ ಪಟ್ಟಿಗಳು ಕುತ್ತಿಗೆ, ಭುಜ ಹಾಗೂ ಕೈ ಮೇಲಿನ ಒತ್ತಡ ಹೆಚ್ಚಿಸಬಹುದು. ಪ್ಲಾಸ್ಟಿಕ್‌ ಸ್ಟ್ರಾಫ್ಸ್‌ಗಳು ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿದೆ. ಅಲ್ಲದೆ ನರಗಳನ್ನು ಕೂಡ ಡ್ಯಾಮೇಜ್‌ ಮಾಡಲಿವೆ. ಆದ್ದರಿಂದ ನೋವಿನ ಸೂಚನೆ ಕಂಡು ಬಂದಾಗ ಎಚ್ಚರವಹಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ