ಆ್ಯಪ್ನಗರ

ಮಧುಮೇಹವಿದ್ದರೆ ಕ್ಯಾನ್ಸರ್‌ ಬರುತ್ತಾ?

ಮಧುಮೇಹ ಇಂದು ಅತಿ ಹೆಚ್ಚಿನ ಜನರನ್ನು ಕಾಡುತ್ತಿರುವ ಸಮಸ್ಯೆ. ಹಲವಾರು ಕಾಯಿಲೆಗಳಿಗೆ ಆಹ್ವಾನ ನೀಡುವ ಇದರ ಪಟ್ಟಿಯಲ್ಲಿ ಕ್ಯಾನ್ಸರ್ ಕೂಡ ಸೇರಿದೆ. ಅನಿಯಂತ್ರಿತ ಮಧುಮೇಹವು ಕ್ಯಾನ್ಸರ್‌ ಸಾಧ್ಯತೆಯನ್ನು ಹೆಚ್ಚಿಸಲಿದೆ, ಎಂಬುದು ಸಂಶೋಧನೆಗಳಿಂದ ಬಹಿರಂಗವಾಗಿದೆ.

Agencies 14 Jun 2019, 11:25 am
ಮಧುಮೇಹ ಸಮಸ್ಯೆಯು ನಾನಾ ಬಗೆಯ ಕ್ಯಾನ್ಸರ್‌ ಸಾಧ್ಯತೆಯನ್ನು ಹೆಚ್ಚಿಸಲಿದೆ.
Vijaya Karnataka Web Diabetes


ಮಧುಮೇಹ ಇಂದು ಅತಿ ಹೆಚ್ಚಿನ ಜನರನ್ನು ಕಾಡುತ್ತಿರುವ ಸಮಸ್ಯೆ. ಹಲವಾರು ಕಾಯಿಲೆಗಳಿಗೆ ಆಹ್ವಾನ ನೀಡುವ ಇದರ ಪಟ್ಟಿಯಲ್ಲಿ ಕ್ಯಾನ್ಸರ್ ಕೂಡ ಸೇರಿದೆ. ಅನಿಯಂತ್ರಿತ ಮಧುಮೇಹವು ಕ್ಯಾನ್ಸರ್‌ ಸಾಧ್ಯತೆಯನ್ನು ಹೆಚ್ಚಿಸಲಿದೆ, ಎಂಬುದು ಸಂಶೋಧನೆಗಳಿಂದ ಬಹಿರಂಗವಾಗಿದೆ.

ಚಯಾಪಚಯ ಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿ ಕ್ಯಾನ್ಸರ್‌ ಗಡ್ಡೆಗಳ ಬೆಳವಣಿಗೆಯಾಗಬಹುದು. ಅಷ್ಟೆ ಅಲ್ಲ, ಸಕ್ಕರೆ ಪ್ರಮಾಣ ನಿಯಂತ್ರಣ ತಪ್ಪಿದರೆ ಕ್ಯಾನ್ಸರ್‌ ಸೇರಿದಂತೆ ಹಲವು ರೋಗಗಳು ಎದುರಾಗುವ ಸಾಧ್ಯತೆ ಇರುತ್ತದೆ ಎಂಬುದನ್ನು ಪರಿಣಿತರು ಪತ್ತೆ ಮಾಡಿದ್ದಾರೆ.

ಇತ್ತೀಚಿಗೆ ನಮ್ಮ ದೇಶದಲ್ಲಿಯೇ ನಡೆಸಿದ ಅಧ್ಯಯನ ಒಂದರಲ್ಲಿ ಬೆಳಕಿಗೆ ಬಂದಿರುವ ವಿಚಾರವೆಂದರೆ ಮಧುಮೇಹಿಗಳಲ್ಲಿ ಹೊಟ್ಟೆ, ಯಕೃತ್ತು, ಮೆದೋಜ್ಜೀರಕ ಗ್ರಂಥಿ, ಅಂತರಗರ್ಭ ಹಾಗೂ ಮೂತ್ರಪಿಂಡಗಳ ಕ್ಯಾನ್ಸರ್‌ ಸಮಸ್ಯೆ ಸಾಧ್ಯತೆ ಶೇ. 25ರಿಂದ 50ರಷ್ಟಿರುತ್ತದೆ.

ದೇಹದಲ್ಲಿನ ಚಯಾಪಚಯ ಕ್ರಿಯೆಯ ಕಾರ್ಯವಿಧಾನದಲ್ಲಿ ಬದಲಾವಣೆಯಾಗಿ ಮಧುಮೇಹ ತಲೆದೋರುತ್ತದೆ. ನಂತರ ಇನ್ಸುಲಿನ್‌ ಪ್ರಮಾಣ ಹೆಚ್ಚಾಗುವುದು ಮತ್ತು ಇನ್ಸುಲಿನ್‌ನಿಯಂತ್ರಣಗಳಿಂದಾಗಿ ಕ್ಯಾನ್ಸರ್‌ ತಲೆದೂರಲು ಬೇಕಾದ ಅಗತ್ಯದ ಸ್ಥಿತಿಗತಿಗಳು ನಿರ್ಮಾಣವಾಗಿರುತ್ತದೆ. ಈ ಎರಡು ಕಾಯಿಲೆಗಳು ಒಕ್ಕರಿಸಲು ಸಾಮಾನ್ಯ ಕಾರಣವೆಂದರೆ ಸ್ಥೂಲಕಾಯ.

ಸ್ಥೂಲಕಾಯದಿಂದ ದೀರ್ಘಕಾಲದವರೆಗೆ ಕಡಿಮೆ ಪ್ರಮಾಣದ ಉರಿಯೂತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ದೀರ್ಘಕಾಲ ಉಳಿದಲ್ಲಿ ಡಿಎನ್‌ಎ ಹಾನಿಗೊಳಗಾಗಿ ಕ್ಯಾನ್ಸರ್‌ ಆಗಿ ಪರಿವರ್ತನೆಯಾಗುತ್ತದೆ. ಹೆಚ್ಚುವರಿಯಾಗಿ ರಕ್ತದಲ್ಲಿನ ಅನಿಯಂತ್ರಿತ ಗ್ಲೂಕೋಸ್‌ (ಸಕ್ಕರೆ) ಪ್ರಮಾಣದಿಂದಾಗಿ ಉರಿಯೂತದ ಸಮಸ್ಯೆ ಹೆಚ್ಚಾಗುತ್ತದೆ. ಇದು ಕ್ಯಾನ್ಸರ್‌ ಬೆಳವಣಿಗೆಗೆ ಪೂರಕವಾಗುತ್ತದೆ.

ಕ್ಯಾನ್ಸರ್‌ನಿಂದ ದೂರವಿರಲು ಮಧುಮೇಹಿಗಳು ಸಮತೋಲಿತ ಆಹಾರ ಸೇವಿಸುವುದು ಅವಶ್ಯ

ದಿನನಿತ್ಯ ವ್ಯಾಯಾಮ ಮಾಡಿ.

ಆರೋಗ್ಯಕರ ಆಹಾರ ಪದ್ಧತಿ ರೂಢಿಸಿಕೊಳ್ಳಿ.

ಧೂಮಪಾನ, ಮದ್ಯಪಾನದಿಂದ ದೂರ ಉಳಿಯಿರಿ.

ದಿನ ನಿತ್ಯ ಹಣ್ಣುಗಳನ್ನು ಸೇವಿಸಿ.

ದವಸ ಧಾನ್ಯಗಳು, ದ್ವಿದಳ ಧಾನ್ಯಹಾಗೂ ಕಡಿಮೆ ಕೊಬ್ಬಿನ ಅಂಶವಿರುವ ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ