ಆ್ಯಪ್ನಗರ

ಒಂದು ಮುತ್ತಿಗೆ ಮೂರು ಕಾಯಿಲೆ ಫ್ರೀ, ಇದು ಒಂದು ಮುತ್ತಿನ ಕಥೆ!!

ಇನ್ನೇನಿದ್ದರೂ ನೀವು ನಿಮ್ಮ ಸಂಗಾತಿಯನ್ನು ಕೇವಲ ಮುಟ್ಟಿ ಸಂತೋಷ ಪಡಬಹುದು ಅಷ್ಟೇ. ಅಪ್ಪಿ ತಪ್ಪಿ ಮುತ್ತು ಕೊಡಲು ಹೋದರೆ ನಿಮಗೆ ವೈರಸ್ ಸೋಂಕು ಉಂಟಾಗಲಿದೆ ಎಚ್ಚರ !!

Vijaya Karnataka Web 14 Oct 2020, 1:39 pm
ಭಾವನಾತ್ಮಕವಾಗಿ ಒಮ್ಮೆ ನಿಮ್ಮ ಸಂಗಾತಿಯ ಜೊತೆ ನೀವು ಬೆರೆತುಕೊಂಡ ಮೇಲೆ ನಿಮ್ಮಿಬ್ಬರ ಮಧ್ಯೆ ನಿಮ್ಮ ಒಪ್ಪಿಗೆಯಂತೆ ಏನು ಬೇಕಾದರೂ ನಡೆಯಬಹುದು. ಮೊದಲು ಒಂದು ಮುತ್ತಿನಿಂದ ಪ್ರಾರಂಭವಾಗಿ ನಂತರ ರೋಮ್ಯಾನ್ಸ್ ಮೂಲಕ ಇಬ್ಬರೂ ಮೈ ಮರೆಯುವುದು ಸಾಮಾನ್ಯ. ಆದರೆ ನೀವು ನಿಮ್ಮ ಸಂಗಾತಿಗೆ ಕೊಡುವ ಮೊದಲ ಮುತ್ತೇ ನಿಮಗೆ ಕುತ್ತಾದರೆ ??
Vijaya Karnataka Web did you know these infections you can get from kissing
ಒಂದು ಮುತ್ತಿಗೆ ಮೂರು ಕಾಯಿಲೆ ಫ್ರೀ, ಇದು ಒಂದು ಮುತ್ತಿನ ಕಥೆ!!


ಗಾಬರಿ ಮತ್ತು ಆಶ್ಚರ್ಯ ಎರಡೂ ಆಗುತ್ತಿದೆ ಅಲ್ಲವೇ? ಇದು ಸತ್ಯ. ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಿಮ್ಮ ಸಂಗಾತಿಗೆ ನೀವು ಕೊಡುವ ಒಂದು ಮುತ್ತಿನಿಂದ ನಿಮಗೆ ವೈರಸ್ ಅಥವಾ ಬ್ಯಾಕ್ಟೀರಿಯಾಗಳ ಸೋಂಕು ಉಂಟಾಗಿ ನಿಮ್ಮ ಜೀವವೇ ಹೋಗಬಹುದು.

ನೀವು ನಿಮ್ಮ ಸಂಗಾತಿಯ ಜೊತೆ ಚೆನ್ನಾಗಿದ್ದೀರಿ ಎಂಬ ಹೊಟ್ಟೆ ಉರಿಯಿಂದ ನಾವು ಇದನ್ನು ಹೇಳುತ್ತಿದ್ದೇವೆ ಎಂದುಕೊಳ್ಳಬೇಡಿ. ಬದಲಾಗಿ ಲೈಂಗಿಕ ತಜ್ಞರು ಈ ಒಂದು ಶಾಕಿಂಗ್ ಸುದ್ದಿಯನ್ನು ಮುತ್ತು ಕೊಟ್ಟು ಮುದ್ದಾಡಿ ಮೈ ಮರೆಯುವ ಸಂಗಾತಿಗಳಿಗಾಗಿಯೇ ಉಡುಗೊರೆಯಾಗಿ ನೀಡಿದ್ದಾರೆ. ನಿಮ್ಮ ಸಂಗಾತಿಗೆ ಮುತ್ತು ಕೊಡುವುದರಿಂದ ಈ ಕೆಳಗಿನ ಸೋಂಕುಗಳು ನಿಮಗೆ ಎದುರಾಗಬಹುದು

Herpes (ಹರ್ಪಿಸ್)

  • ನಿಮ್ಮ ಸಂಗಾತಿಗೆ ಮುತ್ತು ಕೊಡುವ ಮೂಲಕ ಈ ಕಾಯಿಲೆಯನ್ನು ನೀವು ಸುಲಭವಾಗಿ ನಿಮ್ಮದಾಗಿಸಿಕೊಳ್ಳಬಹುದು. ಲೈಂಗಿಕ ತಜ್ಞರ ಪ್ರಕಾರ ಸುಮಾರು 67 % ಮಂದಿ ( ಐವತ್ತು ವರ್ಷಕ್ಕಿಂತ ಕಡಿಮೆ ಇರುವವರು ) ಯಾವುದೇ ರೋಗ - ಲಕ್ಷಣಗಳನ್ನು ತೋರಿಸದೇ ಈ ಕಾಯಿಲೆಯನ್ನು ಪಡೆದುಕೊಳ್ಳುತ್ತಿದ್ದಾರೆ.
  • ' Herpes simplex virus 1' ಎಂಬ ವೈರಸ್ ಈ ಕಾಯಿಲೆಗೆ ಕಾರಣವಾಗುತ್ತಿದೆ ಎಂದು ಹೇಳುತ್ತಾರೆ. ಒಂದು ವೇಳೆ ಮುತ್ತು ಕೊಡುವ ಮೂಲಕ ನಿಮ್ಮ ಸಂಗಾತಿಯಿಂದ ನಿಮಗೆ ಈ ವೈರಸ್ ಪ್ರವೇಶ ಮಾಡಿದೆ ಎಂದರೆ ಮೊದಲಿಗೆ ನಿಮ್ಮ ಬಾಯಿಯ ಮೇಲೆ ಕೆಂಪು ಬಣ್ಣದ ಅಥವಾ ಸಣ್ಣದಾದ ಬಿಳಿ ಬಣ್ಣದ ಗುಳ್ಳೆಗಳು ಉಂಟಾಗಲು ಪ್ರಾರಂಭವಾಗುತ್ತವೆ.
  • ನಂತರ ಇದು ನಿಧಾನವಾಗಿ ರಕ್ತ ಸ್ರಾವವಾಗಲು ಶುರುವಾಗಿ ನಿಮ್ಮ ಬಾಯಿಯ ಎಂಜಲಿನ ಮೂಲಕ ನೀವು ಬಳಕೆ ಮಾಡುವ ಅಡುಗೆ ಮನೆಯ ಪಾತ್ರಗಳಿಗೆ ಕೂಡ ಆಂಟಿ ಕೊಳ್ಳಬಹುದು. ಇದರಿಂದ ಮನೆ ಮಂದಿಗಲ್ಲಾ ಈ ವೈರಸ್ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
  • ನಿಮ್ಮ ಸಂಗಾತಿಯಿಂದ ನಿಮಗೆ ಲೈಂಗಿಕ ಸಂಪರ್ಕದಿಂದ ಈ ವೈರಸ್ ಬರುವ ಸಾಧ್ಯತೆ ಒಂದು ಕಡೆಯಾದರೆ ಬಾಯಿಂದ ಬಾಯಿಗೆ ಹರಡುವ ಸಾಧ್ಯತೆ ಇನ್ನೊಂದು ಕಡೆ. ಒಮ್ಮೆ ' herpes simplex virus 2'ನಿಮಗೆ ಲೈಂಗಿಕ ಸಂಪರ್ಕದ ಮೂಲಕ ಹರಡಿತು ಎಂದರೆ ಅದಕ್ಕೆ ಚಿಕಿತ್ಸೆ ಇಲ್ಲ ಎಂದು ಹೇಳುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದರ ರೋಗ - ಲಕ್ಷಣಗಳನ್ನು ಮಾತ್ರ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದು ವೈದ್ಯರ ಮಾತು.

Cytomegalovirus

ಇದು ಕೂಡ ಒಂದು ವೈರಸ್ ಸೋಂಕು ಎಂದು ಪರಿಗಣಿಸಲಾಗಿದ್ದು ನಿಮ್ಮ ಸಂಗಾತಿಗೆ ಮುತ್ತು ನೀಡುವ ಮೂಲಕ ಎಂಜಲಿನಲ್ಲಿ ಇದು ನಿಮಗೆ ತಾಗುತ್ತದೆ ಎಂದು ಹೇಳುತ್ತಾರೆ. ಇದರ ಜೊತೆಗೆ ಇನ್ನೂ ಕೆಲವು ಮೂಲಗಳು ಇದರ ಹಬ್ಬುವಿಕೆಗೆ ಕಾರಣವಾಗುತ್ತದೆ ಎನ್ನುವುದಾದರೆ ಮೂತ್ರದ ಮೂಲಕ, ರಕ್ತದ ಮೂಲಕ ಮತ್ತು ಎದೆ ಹಾಲಿನ ಮೂಲಕ ಹಬ್ಬುವ ಸಾಧ್ಯತೆ ಇದೆ.

ಬಹುತೇಕ ಇದು ಲೈಂಗಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ವೈರಸ್ ಸೋಂಕು ಎಂದು ಗುರುತಿಸಿ ಕೊಂಡಿದ್ದು ಜ್ವರ, ಮೈ - ಕೈ ನೋವು, ಗಂಟಲು ನೋವು ಇದರ ಸಾಮಾನ್ಯ ರೋಗ - ಲಕ್ಷಣಗಳು. ಕೆಲವೊಮ್ಮೆ ನೀವು ಯಾವುದೇ ರೋಗ - ಲಕ್ಷಣಗಳನ್ನು ತೋರಿಸದೇ ಕೂಡ ಇರಬಹುದು.

ಆರೋಗ್ಯ ತಜ್ಞರ ಪ್ರಕಾರ ' cytomegalovirus'ಕೂಡ ಪರಿಹಾರವಾಗದಂತಹ ಕಾಯಿಲೆಯಾಗಿದ್ದು ಬರುವುದಕ್ಕೆ ಮುನ್ನ ಎಚ್ಚರ ವಹಿಸುವುದು ಒಳ್ಳೆಯದು.

ವೈರಲ್ ಜ್ವರವನ್ನು ಕೂಡಲೇ ಕಡಿಮೆ ಮಾಡುವ ಪವರ್‌ಫುಲ್ ಮನೆಮದ್ದುಗಳು

Syphilis

  • ಇದೊಂದು ಬ್ಯಾಕ್ಟೀರಿಯಲ್ ಸೋಂಕು ಎಂದು ಕರೆಯಲ್ಪಟ್ಟಿದ್ದು ಬಾಯಿಯ ಮೂಲಕ ಮತ್ತು ಜನನಾಂಗಗಳ ಮೂಲಕ ಸಂಗಾತಿಯಿಂದ ಸಂಗಾತಿಗೆ ಹರಡುವ ಸಾಧ್ಯತೆ ಇರುತ್ತದೆ. ಆದರೆ ಕೆಲವೊಮ್ಮೆ ನಿಮ್ಮ ಸಂಗಾತಿಯನ್ನು ಪ್ರೀತಿಯಿಂದ ಅಪ್ಪಿ ಮುತ್ತಿಡುವ ಸಂದರ್ಭದಲ್ಲೂ ಕೂಡ ನಿಮಗೆ ಇದು ಬರಬಹುದು.
  • ಮೊದಲಿಗೆ ಬಾಯಿಯ ಮೇಲೆ ಸಣ್ಣದಾಗಿ ಗುಳ್ಳೆಗಳು ಉಂಟಾಗಲು ಪ್ರಾರಂಭವಾಗಿ ನಿಧಾನವಾಗಿ ರೋಗ - ಲಕ್ಷಣಗಳು ಉಲ್ಬಣಗೊಂಡು ನಿಮಗೆ ಇದ್ದಕ್ಕಿದ್ದಂತೆ ಜ್ವರ, ತಲೆ ನೋವು, ಗಂಟಲು ನೋವು ಮತ್ತು ನಿಮ್ಮ ದುಗ್ದ ರಸ ಗ್ರಂಥಿ ಊದಿಕೊಳ್ಳುವ ಸಾಧ್ಯತೆ ಹೆಚ್ಚಾಗುವುದರ ಜೊತೆಗೆ ಮೈ - ಕೈ ನೋವು ಮತ್ತು ತಲೆ ಕೂದಲು ಉದುರುವಿಕೆ ಕೂಡ ಕಂಡು ಬರುತ್ತದೆ.
  • ಈ ಬ್ಯಾಕ್ಟೀರಿಯಲ್ ಸೋಂಕು ಕಂಡು ಬರುವವರಿಗೆ ದೈಹಿಕ ಆಯಾಸ ಮತ್ತು ಮುಖದ ಮೇಲೆ ಗುಳ್ಳೆಗಳು ಮೂಡಿ ಬರುವುದು ಸಹಜ ಎಂದು ಹೇಳುತ್ತಾರೆ. ರೋಗ - ಲಕ್ಷಣಗಳು ಹೆಚ್ಚು ಉಲ್ಬಣಗೊಂಡಂತೆ ಕಣ್ಣುಗಳು ಕಾಣಿಸದೆ ಆಗಬಹುದು.
  • ಹೃದಯದ ಸಮಸ್ಯೆ ಎದುರಾಗಬಹುದು. ಇಲ್ಲವೆಂದರೆ ಮೆದುಳಿಗೂ ಕೂಡ ಹಾನಿ ಉಂಟಾಗಬಹುದು. ಆರಂಭದಲ್ಲಿ ಇದನ್ನು ಗುಣ ಮಾಡಿಕೊಳ್ಳಬಹುದು. ಇದಕ್ಕೆ ' ಪೆನ್ಸಿಲಿನ್ ' ಎಂಬ ಆಂಟಿ - ಬಯೋಟಿಕ್ ನೀಡಲಾಗುತ್ತದೆ ಎಂದು ಹೇಳುತ್ತಾರೆ.

ಎಚ್ಚರಿಕೆ ಬಹಳ ಮುಖ್ಯ

ಯಾವುದೇ ಒಂದು ಬ್ಯಾಕ್ಟೀರಿಯಾದ ಅಥವಾ ವೈರಸ್ ಗೆ ಸಂಬಂಧ ಪಟ್ಟ ಸೋಂಕನ್ನು ನಿಮಗೆ ನೀವೇ ಅಂಟಿಸಿಕೊಳ್ಳುವ ಮೊದಲು ಅದರ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು.

ಲೈಂಗಿಕವಾಗಿ ನಿಮ್ಮ ಸಂಗಾತಿಯಿಂದ ನಿಮಗೆ ಇಂತಹ ರೋಗ - ಲಕ್ಷಣಗಳು ಬರುವ ಸಾಧ್ಯತೆ ಹೆಚ್ಚಾಗಿದ್ದರೆ ಮೊದಲಿಗೆ ಇದರ ಬಗ್ಗೆ ಕುರಿತು ನಿಮ್ಮ ಸಂಗಾತಿಯಲ್ಲಿ ಸವಿನಯವಾಗಿ ಮಾತನಾಡಿ. ಇದರ ಬಗ್ಗೆ ನೀವೂ ತಿಳಿದುಕೊಂಡು ನಿಮ್ಮ ಸಂಗಾತಿಗೂ ಅರ್ಥ ಮಾಡಿಸಿ ಸಾಧ್ಯವಾದರೆ ವೈದ್ಯರ ಔಷಧೀಯ ನೆರವು ಪಡೆದುಕೊಳ್ಳುವುದು ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ