ಆ್ಯಪ್ನಗರ

ಗರ್ಭಾವಸ್ಥೆಯ ಡಯಟ್‌ನಲ್ಲಿ ಇರಲೇಬೇಕಾದ ಹಣ್ಣುಗಳು

ಗರ್ಭಾವಸ್ಥೆಯಲ್ಲಿ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ಮಗು ಹಾಗೂ ಗರ್ಭಿಣಿಯ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.

Vijaya Karnataka 30 Aug 2018, 5:00 am
ಆರೋಗ್ಯಪೂರ್ಣ ಗರ್ಭಾವಸ್ಥೆಗೆ ಹಣ್ಣುಗಳು ಪೂರಕ. ಕೆಲವು ಹಣ್ಣುಗಳು ಅಗಾಧವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಆದರೆ ಈ ಸಂದರ್ಭದಲ್ಲಿ ಯಾವುದನ್ನು ಸೇವಿಸಬೇಕು ಎಂಬುದು ಮುಖ್ಯ. ಏಕೆಂದರೆ ನೀವು ಸೇವಿಸುವ ಆಹಾರ ಮಗುವಿನ ಬೆಳವಣಿಗೆ ಹಾಗೂ ಗರ್ಭಿಣಿಯ ಆರೋಗ್ಯಕ್ಕೆ ಪೂರಕವಾಗಿರಬೇಕು.
Vijaya Karnataka Web diet plan
ಗರ್ಭಾವಸ್ಥೆಯ ಡಯಟ್‌ನಲ್ಲಿ ಇರಲೇಬೇಕಾದ ಹಣ್ಣುಗಳು


1ಕಿತ್ತಳೆ
ಕಿತ್ತಳೆಯು ವಿಟಮಿನ್‌ ಸಿ ಆಗರ. ದೇಹ ನಿರ್ಜಲೀಕರಣಗೊಳ್ಳದಂತೆ, ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ. ಮಗುವಿನಲ್ಲಿ ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳದಂತೆ ಕಾಪಾಡುತ್ತದೆ.
2 ಸೀಬೆಹಣ್ಣು
ಹಲವಾರು ಸಮಸ್ಯೆಗಳಿಗೆ ರಾಮಬಾಣ ಎಂದೆನಿಸಿರುವ ಸೀಬೆಹಣ್ಣು ನಾರಿನಂಶ, ಪೋಟ್ಯಾಷಿಯಂ ಸೇರಿದಂತೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಮಗು ಹಾಗೂ ತಾಯಿಯ ಹೃದಯದ ಆರೋಗ್ಯಕ್ಕೆ ಪೋಟ್ಯಾಷಿಯಂ ಅಗತ್ಯ. ಹೀಗಾಗಿ ಈ ಹಣ್ಣನ್ನು ಸೇವಿಸಬಹುದು.
3 ದಾಳಿಂಬೆ
ವಿಟಮಿನ್‌ ಕೆ, ಕ್ಯಾಲ್ಷಿಯಂ, ಕಬ್ಬಿಣಂಶ, ನಾರಿನಂಶ ಒಳಗೊಂಡಿರುವ ದಾಳಿಂಬೆ ಶಕ್ತಿಯ ಮೂಲ. ಕಬ್ಬಿಣಂಶದ ಕೊರತೆಯನ್ನು ನೀಗಿಸುತ್ತದೆ. ಇದರಲ್ಲಿರುವ ವಿಟಮಿನ್‌ ಕೆ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.
4 ಬೆಣ್ಣೆ ಹಣ್ಣು
ಮಗುವಿನ ಚರ್ಮ ಹಾಗೂ ಮಿದುಳಿನ ಕೋಶಗಳ ಬೆಳವಣಿಗೆಗೆ ಬೆಣ್ಣೆಹಣ್ಣು ಸಹಕಾರಿ. ನರ ಸಂಬಂಧಿ ಸಮಸ್ಯೆಯಿಂದ ಮಗು ಹುಟ್ಟುವುದನ್ನು ಇದು ತಪ್ಪಿಸುತ್ತದೆ. ಇದರಲ್ಲಿ ವಿಟಮಿನ್‌ ಸಿ, ಇ, ಕೆ ಅಂಶಗಳಿವೆ.
5 ಬಾಳೆಹಣ್ಣು
ವಿಟಮಿನ್‌ ಸಿ, ಪೋಟ್ಯಾಷಿಯಂ, ವಿಟಮಿನ್‌ ಬಿ-6, ನಾರಿನಂಶ ಒಳಗೊಂಡಿರುವ ಬಾಳೆಹಣ್ಣು ಗರ್ಭಧಾರಣೆಯ ಸಂÜದರ್ಭದಲ್ಲಿ ಉಂಟಾಗುವ ಮಲಬದ್ಧತೆಯನ್ನು ನಿವಾರಿಸುತ್ತದೆ. ಮೊದಲ ಮೂರು ತಿಂಗಳು ಉಂಟಾಗುವ ವಾಂತಿ ಹಾಗೂ ವಾಕರಿಕೆಯಿಂದ ದೂರ ಇರುವಂತೆ ಮಾಡುತ್ತದೆ ಇದರಲ್ಲಿರುವ ವಿಟಮಿನ್‌ ಬಿ-6.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ