ಆ್ಯಪ್ನಗರ

ಮೊಬೈಲ್ ಫೋನ್‌ ಜಾಸ್ತಿ ಬಳಸಿದರೆ ಮೆದುಳಿನ ಕ್ಯಾನ್ಸರ್ ಬರುವುದೇ?

ಇಂದು ಪ್ರತಿಯೊಬ್ಬರಿಗೂ ಅವಶ್ಯಕವಾಗಿರುವ ಮೊಬೈಲ್ ಫೋನ್ ಯಾವ ರೀತಿಯ ಹಾನಿ ಉಂಟು ಮಾಡುವುದು? ಇದು ಮೆದುಳಿನ ಕ್ಯಾನ್ಸರ್ ಗೆ ಕಾರಣವಾಗಬಹುದೇ?

Vijaya Karnataka Web 11 Jan 2020, 12:19 pm
ಹಿಂದೆ ಊಟ, ಬಟ್ಟೆ ಮತ್ತು ಮನೆ ಪ್ರಮುಖ ಮೂಲಭೂತ ಅವಶ್ಯಕತೆಗಳಾಗಿದ್ದವು. ಆದರೆ ಇಂದು ಮೊಬೈಲ್ ಕೂಡ ಇದಕ್ಕೆ ಸೇರ್ಪಡೆಯಾಗಿದೆ. ಮೊಬೈಲ್ ಇಲ್ಲದೆ ಇರುವ ಜನರು ಈ ಜಗತ್ತಿನಲ್ಲಿ ತುಂಬಾ ಕಡಿಮೆ ಎನ್ನಬಹುದು. ಪ್ರತಿಯೊಬ್ಬರ ಕೈಯಲ್ಲೂ ಇಂದು ಒಂದು ಸಣ್ಣ ಮೊಬೈಲ್ ಆದರೂ ಇದ್ದೇ ಇದೆ. ಶಾಲೆಗೆ ಹೋಗುವ ಹದಿಹರೆಯದವರಿಂದ ಹಿಡಿದು ನಿವೃತ್ತಿ ಪಡೆದು ಮನೆಯಲ್ಲಿ ಇರುವವರಲ್ಲೂ ಮೊಬೈಲ್ ಕಾಣಸಿಗುವುದು.
Vijaya Karnataka Web do cell phones increase the risk of brain cancer
ಮೊಬೈಲ್ ಫೋನ್‌ ಜಾಸ್ತಿ ಬಳಸಿದರೆ ಮೆದುಳಿನ ಕ್ಯಾನ್ಸರ್ ಬರುವುದೇ?


​​ಎಲ್ಲದಕ್ಕೂ ಮೊಬೈಲ್‌

ಮೊಬೈಲ್ ನಿಂದ ನಾವು ಇಂದು ಕೇವಲ ಸಂಪರ್ಕ ಮಾತ್ರವಲ್ಲದೆ, ಬ್ಯಾಂಕ್ ಹಾಗೂ ಇನ್ನಿತರ ಹಲವಾರು ಕೆಲಸಗಳನ್ನು ಕುಳಿತಲ್ಲೇ ಮಾಡಬಹುದಾದ ಕಾರಣ ಮೊಬೈಲ್ ನಮ್ಮ ಜೀವನದ ಒಂದು ಪ್ರಮುಖ ಅಂಗವಾಗಿದೆ. ಹೀಗಾಗಿ ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎನ್ನುವಂತಾಗಿದೆ. ನಿಜವಾಗಿಯೂ ಇಂದು ಮೊಬೈಲ್ ಕಂಡುಹಿಡಿದವರಿಗೆ ಒಂದು ಸಲಾಂ ಹೊಡೆಯಬೇಕು ಎಂದನಿಸುತ್ತದೆ. ಯಾಕೆಂದರೆ ಒಂದು ಹತ್ತು ವರ್ಷಗಳ ಹಿಂದೆ ಹಣ ಯಾರಿಗಾದರೂ ನೀಡಬೇಕಿದ್ದರೆ ಆಗ ಬ್ಯಾಂಕ್ ಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ಹಣ ತೆಗೆಯಬೇಕಿತ್ತು. ಆದರೆ ಈಗ ಕೇವಲ ಕೆಲವೇ ನಿಮಿಷದಲ್ಲಿ ಇದು ಮೊಬೈಲ್ ಮೂಲಕ ಸಾಧ್ಯವಿದೆ. ಹೀಗಾಗಿ ಮೊಬೈಲ್ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ. 2019ರಲ್ಲಿ ವಿಶ್ವದೆಲ್ಲೆಡೆಯಲ್ಲಿ ಮೊಬೈಲ್ ಬಳಸುವವರ ಸಂಖ್ಯೆಯು ಶೇ.67ರಷ್ಟಾಗಿದೆ ಎಂದು ಅಧ್ಯಯನಗಳು ಹೇಳಿವೆ.

ಕ್ಯಾನ್ಸರ್ ತಡೆಗಟ್ಟಲು ಈ 8 ಮಸಾಲೆ ಪದಾರ್ಥಗಳನ್ನು ಬಳಸಿ

​ಮೊಬೈಲ್ ಫೋನ್‌ನಿಂದಾಗಿ ಮೆದುಳಿನ ಕ್ಯಾನ್ಸರ್‌ ಬರಬಹುದೇ?

ಸ್ಮಾರ್ಟ್ ಪೋನ್ ಬಳಕೆಯಿಂದಾಗಿ ಮೊಬೈಲ್ ಜನಪ್ರಿಯ ಸಾಧನವಾಗಿದೆ. ಶೇ. 50 ಜನರಲ್ಲಿ ಸ್ಮಾರ್ಟ್ ಪೋನ್ ಇದೆ. ಇಷ್ಟು ಮಾತ್ರವಲ್ಲದೆ ಕಳೆದ ಕೆಲವು ದಶಕಗಳಿಂದ ಮೊಬೈಲ್ ನಲ್ಲಿ ಜನರು ಕಳೆಯುತ್ತಿರುವ ಸಮಯವು ಹೆಚ್ಚುತ್ತಲೇ ಇದೆ. ಆದರೆ ಪ್ರತಿಯೊಂದು ವಸ್ತುವಿನಲ್ಲಿ ಒಳ್ಳೆಯದು ಇರುವಂತೆ ಅದರಿಂದ ಇತರ ಕೆಲವು ಅಡ್ಡ ಪರಿಣಾಮವು ಇದ್ದೇ ಇರುತ್ತದೆ. ಹೀಗಾಗಿ ಮೊಬೈಲ್ ಫೋನ್ ನಿಂದ ಹಲವು ಹಾನಿಗಳು ಇದೆ ಎಂದು ಅಧ್ಯಯನಗಳು ಹೇಳಿವೆ. ಮುಖ್ಯವಾಗಿ ಇದು ಮೆದುಳಿನ ಕ್ಯಾನ್ಸರ್ ಗೆ ಕಾರಣವಾಗಬಹುದೇ ಎನ್ನುವುದು ದೊಡ್ಡ ಪ್ರಶ್ನೆಯಾಗಿ ಎಲ್ಲರನ್ನು ಕಾಡುತ್ತಿದೆ.

​ರೇಡಿಯೋ ತರಂಗಾಂತರ ಅಲೆಗಳು

ಮೊಬೈಲ್ ಫೋನ್ ರೇಡಿಯೋ ತರಂಗಾಂತರ ಅಲೆಗಳ ಶಕ್ತಿಯ ಒಂದು ರೂಪವನ್ನು ನೀಡುತ್ತದೆ. ಈ ಅಲೆಗಳು ಮೆದುಳು ಅಥವಾ ಕುತ್ತಿಗೆ ಸುತ್ತಲು ಗಡ್ಡೆಯನ್ನು ಉಂಟು ಮಾಡುವ ಸಾಧ್ಯತೆಯು ಹೆಚ್ಚಾಗಿರುವುದೇ ಎನ್ನುವ ಪ್ರಶ್ನೆಯು ಬರುವುದು. ಇದರ ಬಗ್ಗೆ ನೀವು ತಿಳಿಯಿರಿ.

​ಮೊಬೈಲ್ ಫೋನ್ ಹೇಗೆ ಕೆಲಸ ಮಾಡುತ್ತದೆ?

ರೇಡಿಯೋ ತರಂಗಾಂತರ ಅಲೆಗಳ ಮೂಲಕ ಮೊಬೈಲ್ ಫೋನ್ ತನ್ನ ಹತ್ತಿರದಲ್ಲಿಇರುವ ಟವರ್ ನಿಂದ ಸಿಗ್ನಲ್ ನ್ನು ಕಳುಹಿಸುವುದು ಅಥವಾ ಅದನ್ನು ಸ್ವೀಕರಿಸುವುದು. ಈ ಅಲೆಗಳು ವಿದ್ಯುತ್ಕಾಂತೀಯ ಶಕ್ತಿ ಮತ್ತು ಅಯಾನೀಕರಿಸದ ವಿಕಿರಣ ಕಣಗಳಾಗಿರುವುದು. ಈ ಅಲೆಗಳು ಎಕ್ ರೇ ಮತ್ತು ಯುವಿ ಕಿರಣಗಳಂತೆ ಅಂಗಾಂಶಗಳ ಒಳಗೆ ಇರುವಂತಹ ಡಿಎನ್ ಎ ವಿಘಟಿಸುವಷ್ಟು ಶಕ್ತಿಶಾಲಿ ಅಲ್ಲ. ಆದರೆ ಉನ್ನತ ಮಟ್ಟದ ರೇಡಿಯೋ ತರಂಗಾಂತರಗಳು ದೇಹದ ಅಂಗಾಂಶಗಳನ್ನು ಬಿಸಿ ಮಾಡುವುದು.

​ಇದು ಹೇಗೆ ಹಾನಿಕಾರಕ?

ರೇಡಿಯೋ ತರಂಗಾಂತರಗಳು ಮೊಬೈಲ್ ನ ಆಂಟೆನಾದಿಂದ ಬರುವುದು. ಆಂಟೆನಾದಲ್ಲಿ ಅಲೆಗಳು ತುಂಬಾ ಪ್ರಬಲವಾಗಿರುವುದು ಮತ್ತು ಇದು ನಾವು ಹಿಡಿದುಕೊಂಡಿರುವ ಮೊಬೈಲ್ ನ ಭಾಗವಾಗಿರುವುದು. ಮಾತನಾಡುವ ವೇಳೆ ನಾವು ತಲೆಗೆ ವಿರುದ್ಧ ಬದಿಯಲ್ಲಿ ಮೊಬೈಲ್ ಹಿಡಿದುಕೊಂಡಿರುತ್ತೇವೆ. ಇದು ಕಿವಿ ಮತ್ತು ಕುತ್ತಿಗೆಯನ್ನು ಸ್ಪರ್ಶಿಸುತ್ತಾ ಇರುವುದು. ಆಂಟೆನಾ ತುಂಬಾ ಹತ್ತಿರವಾಗಿ ಇರುವಷ್ಟು ಆ ವ್ಯಕ್ತಿಯು ರೇಡಿಯೋ ತರಂಗಾಂತರ ಅಲೆಗಳಿಗೆ ಒಗ್ಗಿಕೊಳ್ಳುವುದು ಹೆಚ್ಚು. ಮೊಬೈಲ್ ಗೆ ಹತ್ತಿರವಾಗಿ ಇರುವ ದೇಹದ ಅಂಗಾಂಶವು ಹೆಚ್ಚು ಅಲೆಗಳನ್ನು ಹೀರಿಕೊಳ್ಳುವುದು.

ರೇಡಿಯೋ ತರಂಗಾಂತರ ಹೀರಿಕೊಳ್ಳುವುದರಿಂದ ಆಗುವ ಪರಿಣಾಮಗಳು

1. ಮೊಬೈಲ್ ಫೋನ್ ನಲ್ಲಿ ವ್ಯಕ್ತಿಯು ಎಷ್ಟು ಸಮಯ ಮಾತನಾಡುತ್ತಾನೆ ಎನ್ನುವುದು.

2. ಸ್ಪೀಕರ್ ಫೋನ್ ಅಥವಾ ಹೆಡ್ ಫೋನ್ ಧರಿಸಿ ಮಾತನಾಡುತ್ತಿದ್ದಾರೆ ಎನ್ನುವುದು. ಇದನ್ನು ಬಳಸಿದರೆ ಆಗ ರೇಡಿಯೋ ತರಂಗಾಂತರ ಅಲೆಗಳು ಹೀರಿಕೊಳ್ಳುವ ಸಾಧ್ಯತೆಗಳು ತುಂಬಾ ಕಡಿಮೆ ಇರುವುದು.

3. ನಿಮ್ಮ ಹತ್ತಿರದ ಮೊಬೈಲ್ ಟವರ್ ಮತ್ತು ಮೊಬೈಲ್ ಫೋನ್ ನಡುವಿನ ಅಂತರ. ಟವರ್ ದೂರವಿದ್ದಷ್ಟು ಸಿಗ್ನಲ್ ಪಡೆಯಲು ಅದಕ್ಕೆ ಹೆಚ್ಚಿನ ಶಕ್ತಿ ಬೇಕಾಗುವುದು(ಯಾವುದೇ ಕಟ್ಟಡ ಅಥವಾ ಬೇಸ್ ಮೆಂಟ್ ನಲ್ಲಿದ್ದರೆ ಹೀಗೆ ಆಗುವುದು.)

4. ಬಳಸುತ್ತಿರುವಂತಹ ಮೊಬೈಲ್ ನ ಮಾಡಲ್. ಬೇರೆ ಬೇರೆ ಮಾಡಲ್ ಗಳು ಭಿನ್ನ ಶಕ್ತಿಯನ್ನು ಹೊರಹಾಕುವುದು.

ತಾಮ್ರದ ಮಡಕೆಯಲ್ಲಿ ಶೇಖರಿಸಿದ ನೀರು ಕುಡಿದರೆ ಸಿಗುವ ಆರೋಗ್ಯ ಲಾಭಗಳು

​ಮೊಬೈಲ್ ಫೋನ್ ಮತ್ತು ಮೆದುಳಿನ ಕ್ಯಾನ್ಸರ್

ತಲೆ ಹತ್ತಿರ ಮೊಬೈಲ್ ಫೋನ್ ನ್ನು ಹಿಡಿದಾಗ ಅದು ಕ್ಯಾನ್ಸರ್ ಕಾರಕ ಮೆದುಳಿನ ಗಡ್ಡೆ ಉಂಟು ಮಾಡುವುದೇ ಅಥವಾ ಸಾಮಾನ್ಯ ಗಡ್ಡೆಗಳನ್ನೇ? ಪ್ರಯೋಗಾಲಯಗಳಲ್ಲಿ ಪ್ರಾಣಿಗಳನ್ನು ರೇಡಿಯೋ ತರಂಗಾಂತರ ಅಲೆಗಳಿಗೆ ಒಡ್ಡಿದಾಗ ಈ ಅಲೆಗಳು ಅಷ್ಟು ಪ್ರಬಲವಾಗಿಲ್ಲ ಮತ್ತು ಡಿಎನ್ ಎ ವಿಘಟಿಸುವುದಿಲ್ಲ ಎಂದು ಕಂಡುಕೊಳ್ಳಲಾಗಿದೆ. ಇದರಿಂದ ಇವುಗಳು ಕ್ಯಾನ್ಸರ್ ಉಂಟು ಮಾಡುವುದಿಲ್ಲ. ಆದರೆ ಇನ್ನು ಕೆಲವೊಂದು ಸಂಶೋಧನೆಗಳ ಪ್ರಕಾರ ಈ ಅಲೆಗಳು ಅಂಗಾಂಶಗಳಿಗೆ ತೀವ್ರ ರೀತಿಯಲ್ಲಿ ಹಾನಿ ಉಂಟು ಮಾಡಬಹುದು. ಇದರಿಂದಾಗಿ ಗಡ್ಡೆಯ ಬೆಳವಣಿಗೆ ಆಗಬಹುದು.

​ಅಧ್ಯಯನಗಳ ಪ್ರಕಾರ

ಮನುಷ್ಯರ ಮೇಲೆ ನಡೆಸಿರುವಂತಹ ಕೆಲವೊಂದು ಅಧ್ಯಯನಗಳು ಇದಕ್ಕೆ ಕೆಲವೊಂದು ಸಂಬಂಧವನ್ನು ಒದಗಿಸಿಕೊಟ್ಟಿದೆ. ಆದರೆ ಕೆಲವು ಸಾಕ್ಷ್ಯಗಳು ಇಲ್ಲವಾಗಿದೆ. ಮೆದುಳಿನ ಗಡ್ಡೆಗೆ ಒಳಗಾಗಿರುವಂತಹ ಜನರು ಬೇರೆ ಜನರಷ್ಟು ಮೊಬೈಲ್ ಫೋನ್ ನ್ನು ಬಳಕೆ ಮಾಡಿದವರಲ್ಲ ಮತ್ತು ಮೆದುಳಿನ ಗಡ್ಡೆಯು ಮೊಬೈಲ್ ಫೋನ್ ಹಿಡಿಯು ಬದಿಯಲ್ಲೇ ಬೆಳೆಯುವುದು ಎನ್ನುವುದಕ್ಕೆ ಕೂಡ ಯಾವುದೇ ಸಾಕ್ಷ್ಯಗಳು ಇಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ