ಆ್ಯಪ್ನಗರ

ಕಣ್ಣಿನ ಆರೋಗ್ಯ ಉತ್ತಮವಾಗಿರಬೇಕಾದರೆ ಬೆಂಡೆಕಾಯಿಯನ್ನು ಸವಿಯಬೇಕು

ಕಣ್ಣಿನ ದೋಷ ತಡೆಯಲು ಹಾಗೂ ಅದರ ದೃಷ್ಟಿಯ ಶಕ್ತಿಯನ್ನು ಹೆಚ್ಚಿಸಲು ಬೆಂಡೆಕಾಯನ್ನು ಸವಿಯಬಹುದು. ಬೆಂಡೆಕಾಯಿ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

Vijaya Karnataka Web 30 Sep 2021, 5:05 pm
ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಕಣ್ಣು ಸಹ ಒಂದು. ಕಣ್ಣಿನ ದೃಷ್ಟಿ ಉತ್ತಮವಾಗಿರಲು ಕೆಲವು ಪೋಷಕಾಂಶಗಳಿಂದ ಕೂಡಿರುವ ಆಹಾರವನ್ನು ಸೇವಿಸಬೇಕು. ಆಗ ಕಣ್ಣಿನ ಸ್ನಾಯುಗಳು ಮತ್ತು ದೃಷ್ಟಿಯ ಶಕ್ತಿಯು ಹೆಚ್ಚುವುದು. ಹಾಗಾಗಿ ಮಕ್ಕಳು, ವಯಸ್ಕರು ಮತ್ತು ವೃದ್ಧರು ಅಗತ್ಯವಾಗಿ ತಮ್ಮ ಆಹಾರ ಕ್ರಮದಲ್ಲಿ ಬೆಂಡೆಕಾಯನ್ನು ಸೇರಿಸಿಕೊಳ್ಳಬಹುದು.
Vijaya Karnataka Web do you know eating ladies finger is good for eyes
ಕಣ್ಣಿನ ಆರೋಗ್ಯ ಉತ್ತಮವಾಗಿರಬೇಕಾದರೆ ಬೆಂಡೆಕಾಯಿಯನ್ನು ಸವಿಯಬೇಕು


​ಬೆಂಡೆಕಾಯಿಯ ಪ್ರಯೋಜನಗಳು

ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇದು ಕಣ್ಣಿನ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುವುದು. ಬೆಂಡೆ ಕಾಯಿಯಲ್ಲಿ ಬೀಟಾ ಕ್ಯಾರೋಟಿನ್ ಇರುವುದರಿಂದ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುವುದು. ತಜ್ಞರು ಹೇಳುವ ಪ್ರಕಾರ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಕಣ್ಣಿನ ಸಮಸ್ಯೆಗಳ ವಿರುದ್ಧ ಹೋರಾಡುತ್ತವೆ.

ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಮಧುಮೇಹಿಗಳಿಗೆ ಈ 8 ಹಣ್ಣುಗಳು ಬೆಸ್ಟ್

​ದೃಷ್ಟಿ ತೀಕ್ಷ್ಣತೆಗೆ ಸಹಾಯ

ಬೆಂಡೆ ಕಾಯನ್ನು ನಿಯಮಿತವಾಗಿ ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದು. ವಿಶೇಷವಾಗಿ ಕಣ್ಣಿನ ದೃಷ್ಟಿಯು ತೀಕ್ಷಣತೆಯನ್ನು ಪಡೆದುಕೊಳ್ಳುವುದು. ವಯಸ್ಸಾದ ಜನರಲ್ಲಿ ಕಾಣಿಸಿಕೊಳ್ಳುವ ಕಣ್ಣಿನ ಪೊರೆಯಂತಹ ಸಮಸ್ಯೆಗಳನ್ನು ನಿವಾರಿಸುವುದು. ನಿತ್ಯದ ಆಹಾರದಲ್ಲಿ ಬೆಂಡೆಕಾಯಿ ಸೇರಿಸಿಕೊಂಡರೆ ಕಣ್ಣಿನ ಪೊರೆ ಹಾಗೂ ಸೋಂಕಿನಂತಹ ಸಮಸ್ಯೆಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಡಬಹುದು.

​ಬೆಂಡೆಕಾಯಿ ಸೇವಿಸುವ ಕ್ರಮ

ಬೆಂಡೆಕಾಯನ್ನು ವಿವಿಧ ರೀತಿಯಲ್ಲಿ ಆಹಾರ ಭಕ್ಷ್ಯವನ್ನಾಗಿ ಸವಿಯಬಹುದು. ಬೆಂಡೆಕಾಯಿ ಕಣ್ಣಿನ ಸದೃಷ್ಟಿಯಷ್ಟೇ ಅಲ್ಲ ತೂಕ ಇಳಿಸಲು, ಉತ್ತಮ ಜೀರ್ಣಕ್ರಿಯೆಗೆ, ಬಲಬದ್ಧತೆಯ ನಿವಾರಣೆಗೆ ಹೀಗೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಡಬಹುದು. ನಿಮಗೆ ಬೆಂಡೆಕಾಯಿಯ ಆಹಾರ ತಯಾರಿಸಲು ಕಷ್ಟವಾದರೆ ಪ್ರತಿ ದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ 1-2 ಹಸಿ ಬೆಂಡೆಕಾಯನ್ನು ಸೇವಿಸಬಹುದು.

ನೀವು ಪ್ರತಿದಿನ ಅವಕಾಡೊ ಸೇವಿಸುವುದರ ಲಾಭಗಳೇನು ಗೊತ್ತಾ?

​ಹಾಲಿನೊಂದಿಗೆ ಬೆಂಡೆಕಾಯಿ

- ಮೊದಲಿಗೆ 10 ಗ್ರಾಂ ನಷ್ಟು ಬೆಂಡೆಕಾಯನ್ನು ಚೆನ್ನಾಗಿ ತೊಳೆದು, ಸ್ವಚ್ಛಗೊಳಿಸಿ.

- ಸಿದ್ಧಪಡಿಸಿದ ಬೆಂಡೆಕಾಯನ್ನು ಒಂದು ಲೋಟ ಹಾಲಿಗೆ ಸೇರಿಸಿ, ಕುದಿಯಲು ಇಡಿ.

- ನಂತರ ಚೆಂಡೆಕಾಯಿ ಚೆನ್ನಾಗಿ ಬೆಂದ ನಂತರ ಹಾಲನ್ನು ಸೋಸಿಕೊಂಡು ಕುಡಿಯಿರಿ.

- ಬೆಂಡೆಕಾಯಿಯ ಪುಡಿ ಇದ್ದರೆ ಒಂದು ಲೋಟ ಹಾಲಿಗೆ ಸೇರಿಸಿ ಕುಡಿಯಬಹುದು.

​ಬೆಂಡೆಕಾಯಿ ನೀರು

- ಬೆಂಡೆಕಾಯನ್ನು ಚೆನ್ನಾಗಿ ತೊಳೆದು, ತುದಿ ಮತ್ತು ಬುಡವನ್ನು ಕತ್ತರಿಸಿಕೊಳ್ಳಿ.

- ಬಳಿಕ ಬೆಂಡೆಕಾಯಿಯ ಮಧ್ಯ ಸೀಳಿ.

- ಒಂದು ಗ್ಲಾಸ್ ನೀರನ್ನು ಒಂದು ಪಾತ್ರೆಗೆ ಸೇರಿಸಿ ಅದರೊಟ್ಟಿಗೆ ಸೀಳಿಕೊಂಡ ಬೆಂಡೆಕಾಯನ್ನು ನೆನೆಸಿ.

- ರಾತ್ರಿ ಪೂರ್ತಿ ಬೆಂಡೆಕಾಯಿ ನೀರಿನಲ್ಲಿ ನೆನೆಯಲು ಬಿಡಿ.

- ನಂತರ ನೀರನ್ನು ಮಾತ್ರ ಸೋಸಿಕೊಂಡು ಕುಡಿಯಿರಿ.

- ಹೀಗೆ ಮಾಡುವುದರಿಂದ ಕಣ್ಣಿನ ಆರೋಗ್ಯವನ್ನು ಸುಧಾರಿಸಬಹುದು. ದೃಷ್ಟಿಯು ಉತ್ತಮವಾಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ