ಆ್ಯಪ್ನಗರ

ಎಚ್ಚರ! ಸ್ಮಾರ್ಟ್‌ಫೋನ್‌ ಹೆಚ್ಚು ಬಳಸದಿರಿ: ಕುತ್ತಿಗೆ ನೋವಿನಿಂದ ಬಳಲಬೇಕಾದೀತು!

ವಿಶ್ವದಲ್ಲಿ ಒಟ್ಟಾರೆ 3.4 ಬಿಲಿಯನ್‌ ನಷ್ಟು ಜನ ಸ್ಮಾರ್ಟ್‌ ಫೋನ್‌ ಬಳಸುತ್ತಿದ್ದು, ಇವರಲ್ಲಿ ಕುತ್ತಿಗೆ ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ಇದಕ್ಕೆ ಟೆಕ್ಸ್ಟ್‌ ನೆಕ್ ಸಿಂಡ್ರೋಮ್‌ ಎಂದು ಹೇಳುತ್ತಾರೆ ಎಂಬುದಾಗಿ ಹಾರ್ವರ್ಡ್‌ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧನೆ ಮಾಹಿತಿ ನೀಡಿದೆ.

Times Now 18 Jan 2019, 10:44 pm
[This story originally published in Times of India on Jan 18,2019]
Vijaya Karnataka Web do you know what are the symptoms of text neck syndrome and how to prevent it
ಎಚ್ಚರ! ಸ್ಮಾರ್ಟ್‌ಫೋನ್‌ ಹೆಚ್ಚು ಬಳಸದಿರಿ: ಕುತ್ತಿಗೆ ನೋವಿನಿಂದ ಬಳಲಬೇಕಾದೀತು!


ಹೊಸದಿಲ್ಲಿ: ಸ್ಮಾರ್ಟ್‌ಫೋನ್ ಬಳಕೆಯಿಂದ ನಮ್ಮ ದಿನ ನಿತ್ಯದ ಜೀವನದ ಅನೇಕ ಕೆಲಸಗಳು ಸಲಭ ಸಾಧ್ಯವಾಗಿರಬಹುದು. ಅದರ ಜತೆಗೆ ಅನೇಕ ರೀತಿಯ ಜೀವನ ಕ್ರಮದ ಬದಲಾವಣೆಗೂ ಸ್ಮಾರ್ಟ್‌ಫೋನ್‌ಗಳು ಕಾರಣವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.
ಈಗಾಗಲೇ ಸ್ಮಾರ್ಟ್‌ಫೋನ್‌ಗಳ ಹೆಚ್ಚು ಬಳಕೆಯಿಂದ ಹೃದ್ರೋಗ, ರಕ್ತದೊತ್ತಡ ಇತ್ಯಾದಿ ಅನೇಕ ಸಮಸ್ಯೆಗಳು ಉಲ್ಬಣಗೊಳ್ಳುವುದಾಗಿ ಸಂಶೋಧನೆಗಳಿಂದ ಗೊತ್ತಾಗಿದೆ.

ವಿಶ್ವದಲ್ಲಿ ಒಟ್ಟಾರೆ 3.4 ಬಿಲಿಯನ್‌ ನಷ್ಟು ಜನ ಸ್ಮಾರ್ಟ್‌ ಫೋನ್‌ ಬಳಸುತ್ತಿದ್ದು, ಇವರಲ್ಲಿ ಕುತ್ತಿಗೆ ನೋವಿನ ಸಮಸ್ಯೆ ಕಾಣಿಸಿಕೊಂಡಿದ್ದು, ಇದಕ್ಕೆ ಟೆಕ್ಸ್ಟ್‌ ನೆಕ್ ಸಿಂಡ್ರೋಮ್‌ ಎಂದು ಹೇಳುತ್ತಾರೆ ಎಂದು ಅಧ್ಯಯನ ಹೇಳಿದೆ. ಅದರಲ್ಲೂ ಈ ಸಮಸ್ಯೆ ಯುವ ಸಮುದಾಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.

ಹಾರ್ವರ್ಡ್‌ ವೈದ್ಯಕೀಯ ವಿಶ್ವವಿದ್ಯಾಯಲ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಗೊತ್ತಾಗಿದೆ. ಹೆಚ್ಚಾಗಿ ಮೊಬೈಲ್‌ ಬಳಕೆ, ತಪ್ಪಾಗಿ ಕುಳಿತು ಅಥವಾ ನಿಂತು ಮೊಬೈಲ್‌ ನೋಡುವುದು, ಗಂಟೆಗಟ್ಟಲೆ ಒಂದೇ ರೀತಿಯಲ್ಲಿ ಕುಳಿತು ಮೊಬೈಲ್‌ ಬಳಸುವುದರಿಂದ ಕುತ್ತಿಗೆಯ ಹಿಂಭಾಗಕ್ಕೆ ಅತ್ಯಂತ ಹೊಡೆತ ಬೀಳುತ್ತದೆ. ಇದರಿಂದ ಕುತ್ತಿಗೆ ಹಿಂಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.

ಒಂದೇ ಸ್ಥಿತಿಯಲ್ಲಿ ಗಂಟೆಗಟ್ಟಲೆ ಮೊಬೈಲ್‌ ನೋಡುವುದು, ಅಥವಾ ಮೆಸೇಜ್‌ ಮಾಡುತ್ತಿರುವುದರಿಂದ ಕುತ್ತಿಗೆಯ ಭಾಗದಲ್ಲಿರುವ ಮೆದುವಾಗಿರುವ ಮಾಂಸಗಳಿಗೆ ತೀವ್ರವಾದ ಒತ್ತಡ ಬೀಳುತ್ತದೆ. ಇದು ಇದೇ ರೀತಿ ಮುಂದುವರೆದರೆ ಸಮಸ್ಯೆ ಗಂಭೀರವಾಗುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಮಸ್ಯೆ ಭುಜ, ಬೆನ್ನು, ತಲೆನೋವುಗಳಿಗೂ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ. ಕುತ್ತಿಗೆಯ ಭಾಗದಲ್ಲಿ ಸಿಡಿತ, ಸ್ವಲ್ಪ ಹೊತ್ತು ಒಂದೇ ಸ್ಥಿತಿಯಲ್ಲಿ ಮುಖ ಇದ್ದ ಕೂಡಲೇ ಕುತ್ತಿಗೆ ನೋವು ಆರಂಭವಾಗುವುದು ಟೆಕ್ಸ್ಟ್‌ ನೆಕ್‌ ಸಿಂಡ್ರೋಮ್‌ನ ಸಾಮಾನ್ಯ ಲಕ್ಷಣ. ಇದರೊಂದಿಗೆ ಕೆಲವರಿಗೆ ತಲೆ ನೋವು, ಆಲಸ್ಯವೂ ಉಂಟಾಗುವುದು ಇದೆ.

ತಡೆಯುವುದು ಹೇಗೆ ?
ಇಂತಹ ಸಮಸ್ಯೆ ದೀರ್ಘಕಾಲದ ಆರೋಗ್ಯ ಸಮಸ್ಯೆಗೆ ಎಡೆ ಮಾಡಿಕೊಡುವುದರಿಂದ ದಿನ ನಿತ್ಯದ ಜೀವನ ಕ್ರಮದಲ್ಲಿ ಬದಲಾವಣೆ ಅತ್ಯಗತ್ಯ.
ಸ್ಮಾರ್ಟ್‌ಫೋನ್ ಬಳಕೆ, ಚ್ಯಾಟಿಂಗ್‌, ಒಂದೇ ಸ್ಥಿತಿಯಲ್ಲಿ ಹೆಚ್ಚು ಹೊತ್ತು ಕುಳಿತು ಟೆಕ್ಸ್ಟ್‌ ಅಥವಾ ಮೊಬೈಲ್‌ ನೋಡುವುದನ್ನು ನಿಲ್ಲಿಸುವುದೇ ಈ ಸಮಸ್ಯೆಗೆ ಪ್ರಮುಖ ಪರಿಹಾರ.


ಕೆಲಸದ ವೇಳೆಯಲ್ಲಿ ನಿಗದಿತ ಸಮಯಕ್ಕೆ ಸಣ್ಣದೊಂದು ವಿರಾಮ ತೆಗೆದುಕೊಳ್ಳುವುದನ್ನು ಮರಯಲೇ ಬಾರದು. ಈ ವೇಳೆ ಕುತ್ತಿಗೆ, ಭುಜ, ಕೈಕಾಲುಗಳನ್ನು ಕೊಂಚ ಸಡಿಲಗೊಳಿಸುವುದು ಸೂಕ್ತ.

ನಿಮ್ಮ ಕಣ್ಣುಗಳ ನೇರಕ್ಕೆ ಮೊಬೈಲ್‌ ಅಥವಾ ಕಂಪ್ಯೂಟರ್‌ಗಳನ್ನು ನೋಡುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಒಂದು ಬಾರಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮೊಬೈಲ್‌ ನೋಡುವುದನ್ನು ಬಿಟ್ಟು ಬಿಡಿ. ಪ್ರತಿದಿನ ತುಂಬಾ ಹೊತ್ತು ಫೋನ್‌ನಲ್ಲಿ ಮಾತನಾಡುತ್ತೀರಿ ಎಂದಾದರೆ, ಹೆಡ್‌ಸೆಟ್‌ಗಳನ್ನು ಬಳಸುವುದು ಹೆಚ್ಚು ಸೂಕ್ತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ