ಆ್ಯಪ್ನಗರ

ತುಂಬಾ ಬೆವರಿದರೆ ಬೇಗ ಕೊಬ್ಬು ಕರಗುವುದೇ?

ಜಿಮ್‌ಗೆ ಹೋಗಿ ಅರ್ಧಗಂಟೆ ವರ್ಕ್‌ಔಟ್‌ ಮಾಡಿದರೆ ಬೆವರಿನಿಂದ ಡ್ರೆಸ್ಸೆಲ್ಲಾ ಒದ್ದೆ ಆಗಿ ಬಿಡುತ್ತದೆ, ಅದೇ ಯೋಗ ಒಂದು ಗಂಟೆ ಮಾಡಿದರೆ ಅಷ್ಟೇನು ಬೆವರುವುದಿಲ್ಲ.

ವಿಕ ಸುದ್ದಿಲೋಕ 11 Aug 2017, 1:08 pm
ಜಿಮ್‌ಗೆ ಹೋಗಿ ಅರ್ಧಗಂಟೆ ವರ್ಕ್‌ಔಟ್‌ ಮಾಡಿದರೆ ಬೆವರಿನಿಂದ ಡ್ರೆಸ್ಸೆಲ್ಲಾ ಒದ್ದೆ ಆಗಿ ಬಿಡುತ್ತದೆ, ಅದೇ ಯೋಗ ಒಂದು ಗಂಟೆ ಮಾಡಿದರೆ ಅಷ್ಟೇನು ಬೆವರುವುದಿಲ್ಲ. ಕೊಬ್ಬು ಕರಗಬೇಕೆಂದರೆ ಚೆನ್ನಾಗಿ ಬೆವರಬೇಕು ಎಂದು ಹೇಳುವುದನ್ನು ಕೇಳಿರಬಹುದು.
Vijaya Karnataka Web does sweating mean more fat loss
ತುಂಬಾ ಬೆವರಿದರೆ ಬೇಗ ಕೊಬ್ಬು ಕರಗುವುದೇ?


ಆದರೆ ಚೆನ್ನಾಗಿ ಬೆವರಿದ ತಕ್ಷಣ ನಿಮ್ಮ ಮೈ ತೂಕ ಕಮ್ಮಿಯಾಗುವುದಿಲ್ಲವೆಂದು ನಿಮಗೆ ಗೊತ್ತೇ? ಹೌದು ಬೆವರಿದಾಗ ಕ್ಯಾಲೋರಿ ಕಡಿಮೆಯಾಗುತ್ತದೆ ಹೊರತು ಕೊಬ್ಬು ಕರಗುವುದಿಲ್ಲ.

ಕ್ಯಾಲೋರಿಯಂಶ ಕಡಿಮೆಯಾದಾಗ ದೇಹಕ್ಕೆ ಅವಶ್ಯಕವಾದ ಕ್ಯಾಲೋರಿಯಂಶವನ್ನು ದೇಹವು ಕೊಬ್ಬಿನಿಂದ ಪಡೆಯುತ್ತದೆ. ನಾವು ಆಹಾರ ಸೇವಿಸಿದಾಗ ಮತ್ತೆ ಕೊಬ್ಬು ಶೇಖರವಾಗುತ್ತದೆ. ಆದ್ದರಿಂದಲೇ ವರ್ಕ್‌ಔಟ್‌ ಮಾಡಿ ಎಷ್ಟೇ ಬೆವರಿದರೂ ತೂಕ ಮಾತ್ರ ಹಾಗೇ ಇರುತ್ತದೆ. ತೂಕ ಕಮ್ಮಿಯಾಗಬೇಕೆಂದರೆ ಬೆವರಿದರೆ ಮಾತ್ರ ಸಾಲದು, ಕೊಬ್ಬು ಕರಗಿಸುವ ವಿಧಾನವಿದೆ ಅದನ್ನು ಪಾಲಿಸಬೇಕು.

ತೂಕ ಕರಗಿಸಲು ಮೊದಲು ಮಾಡಬೇಕಾದ ಕಾರ್ಯವೆಂದರೆ ಒಳ್ಳೆಯ ಕೊಬ್ಬಿನಂಶ ಹಾಗೂ ಪ್ರೊಟೀನ್‌ ಇರುವ ಆಹಾರ ಸೇವಿಸಬೇಕು ಹಾಗೂ ಕಾರ್ಡಿಯೋ ವರ್ಕ್‌ಔಟ್‌ ಮಾಡಬೇಕು. ಆಗ ಮಾತ್ರ ದೇಹದಲ್ಲಿರುವ ಕೊಬ್ಬಿನಂಶವೂ ಕರಗಲಾರಂಭಿಸುತ್ತದೆ.

ಇನ್ನು ಯೋಗ ಮತ್ತು ಪೈಲೇಟ್ಸ್‌ ವ್ಯಾಯಾಮಗಳಲ್ಲಿ ಕಡಿಮೆ ಬೆವರಿದರೂ ದೇಹವನ್ನು ಸದೃಢ ಮಾಡುವಲ್ಲಿ ಪರಿಣಾಮಕಾರಿ. ಆದ್ದರಿಂದ ಬೆವರಿದ ತಕ್ಷಣ ತೂಕ ಕಮ್ಮಿಯಾಗುತ್ತದೆ ಎಂಬ ಕಲ್ಪನೆ ಬಿಟ್ಟು ಫಿಟ್ನೆಸ್‌ ನೀಡುವ ವ್ಯಾಯಾಮ ಅಥವಾ ಯೋಗಕ್ಕೆ ಮೊರೆ ಹೋಗುವುದು ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ