ಆ್ಯಪ್ನಗರ

ಇಂತಹ ಆಹಾರಗಳನ್ನು ತಿಂದರೆ ಹಲ್ಲುಗಳು ಹಾಳಾಗುವುದಲ್ಲದೇ ಮತ್ತೇನು?

ಈಗಾಗಲೇ ಹುಳುಕು ಹಲ್ಲು, ವಸಡುಗಳ ಸಮಸ್ಯೆ ಮತ್ತು ಬಾಯಿಯ ದುರ್ನಾತ ಸಮಸ್ಯೆಯನ್ನು ಹೊಂದಿರುವವರು, ಕೆಲವೊಂದು ಆಹಾರ ಪದಾರ್ಥಗಳಿಂದ ದೂರವಿರಿ.

Vijaya Karnataka Web 24 Sep 2021, 4:39 pm
ನಾವು ಯಾವುದೇ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕಾದರೆ ನಮ್ಮ ಹಲ್ಲುಗಳು ಪ್ರಮುಖವಾಗಿ ಕೆಲಸಕ್ಕೆ ಬರುತ್ತವೆ. ಹಾಗಾಗಿ ಹಲ್ಲುಗಳ ಆರೋಗ್ಯ ನಮ್ಮ ಪ್ರಥಮ ಆದ್ಯತೆ ಆಗಬೇಕು. ಬಾಯಿಯ ದುರ್ವಾಸನೆಯನ್ನು, ವಸಡುಗಳ ಅನಾರೋಗ್ಯವನ್ನು, ಹಲ್ಲುಗಳ ಹುಳುಕುತನವನ್ನು ದೂರ ಮಾಡಿಕೊಳ್ಳಬೇಕು ಎಂದರೆ ಅತ್ಯುತ್ತಮ ಆಹಾರ ಪದ್ಧತಿ ಮತ್ತು ಸ್ವಚ್ಛತೆ ನಮ್ಮದಾಗಬೇಕು.
Vijaya Karnataka Web dont spoil your teeth by eating these foods
ಇಂತಹ ಆಹಾರಗಳನ್ನು ತಿಂದರೆ ಹಲ್ಲುಗಳು ಹಾಳಾಗುವುದಲ್ಲದೇ ಮತ್ತೇನು?


ಕೆಲವೊಂದು ಆಹಾರ ಪದಾರ್ಥಗಳು ಹಲ್ಲುಗಳ ಆರೋಗ್ಯವನ್ನು ರಕ್ಷಣೆ ಮಾಡಿದರೆ ಇನ್ನೂ ಕೆಲವು ಹಲ್ಲುಗಳನ್ನು ಮತ್ತು ವಸಡುಗಳನ್ನು ಹಾಳುಮಾಡುತ್ತವೆ. ಅಂತಹ ಆಹಾರ ಪದಾರ್ಥಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನ ಈ ಲೇಖನದಲ್ಲಿ ಮಾಡಲಾಗಿದೆ. ನಿಮ್ಮ ಹಲ್ಲುಗಳನ್ನು ಹಾಳು ಮಾಡುವ ಆಹಾರಗಳಿವು

​ಗಟ್ಟಿಯಾದ ಚಾಕ್ಲೇಟ್‌ಗಳು

  • ಚಾಕ್ಲೆಟ್ ಗಳು ಎಂದ ಮೇಲೆ ಅವುಗಳಲ್ಲಿ ಸಕ್ಕರೆ ಅಂಶ ಬಿಟ್ಟು ಬೇರೆ ಏನು ಇರುವುದಿಲ್ಲ. ಚಾಕ್ಲೆಟ್ ಅನ್ನು ನೀವು ಬಾಯಿಯಲ್ಲಿ ಹಾಕಿಕೊಂಡು ದೀರ್ಘ ಕಾಲ ಚೀಪುವುದರಿಂದ ಅತಿ ಹೆಚ್ಚಿನ ಒತ್ತು ಸಕ್ಕರೆ ಅಂಶ ನಿಮ್ಮ ಬಾಯಿಯ ಒಳಭಾಗದಲ್ಲಿ ಉಳಿದುಕೊಳ್ಳುತ್ತದೆ.
  • ಇದರಿಂದ ಹಲ್ಲುಗಳಿಗೆ ಮತ್ತು ವಸಡುಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ. ಬಾಯಿಯಲ್ಲಿ ಕೆಟ್ಟ ಬ್ಯಾಕ್ಟೀರಿಯಗಳು ಬೆಳವಣಿಗೆ ಹೊಂದಲು ಇದು ಸಹಕಾರಿಯಾಗಿ ಕೆಲಸ ಮಾಡುತ್ತದೆ.

​ಉಪ್ಪಿನಕಾಯಿ ಸೇವನೆ

ಸಾಮಾನ್ಯವಾಗಿ ಉಪ್ಪಿನಕಾಯಿಯಲ್ಲಿ ಆಮ್ಲದ ಅಂಶ ಹೆಚ್ಚಾಗಿರುತ್ತದೆ. ನೀನು ಕೆಲವೊಂದು ಉಪ್ಪಿನಕಾಯಿಯಲ್ಲಿ ವಿನೆಗರ್ ಅಂಶ ಕಂಡುಬರುತ್ತದೆ. ಇದರ ಜೊತೆಗೆ ಸ್ವಲ್ಪ ಸಕ್ಕರೆ ಅಂಶ ಕೂಡ ಇರುವುದರಿಂದ ಹಲ್ಲುಗಳ ತೊಂದರೆ ಇವುಗಳಿಂದ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

​ಡಯಟ್ ಸೋಡಾ

ಡಯಟ್ ಸೋಡಾದಲ್ಲಿ ಸಕ್ಕರೆ ಅಂಶ ಇಲ್ಲದೆ ಇದ್ದರೂ ಕೂಡ ಹಲ್ಲುಗಳಿಗೆ ಮಾತ್ರ ಇದು ಅಷ್ಟು ಒಳ್ಳೆಯದಲ್ಲ. ಬಾಯಿಯ ದುರ್ವಾಸನೆ ಮತ್ತು ವಸಡುಗಳ ಹಾನಿ ಉಂಟು ಮಾಡುವುದರಲ್ಲಿ ಡಯಟ್ ಸೋಡಾ ಎತ್ತಿದ ಕೈ. ಹಾಗಾಗಿ ಸಾಧ್ಯವಾದಷ್ಟು ನಿಮ್ಮ ಹಲ್ಲುಗಳ ರಕ್ಷಣೆ ನಿಮ್ಮ ಪ್ರಥಮ ಆದ್ಯತೆ ಆಗಿದ್ದರೆ ಇಂತಹ ಆಹಾರ ಪದಾರ್ಥಗಳಿಂದ ದೂರ ಉಳಿಯಿರಿ.

​ಸಲಾಡ್ ಸೇವನೆ

ಎಲ್ಲಾ ಬಗೆಯ ಸಲಾಡ್ ಹಲ್ಲುಗಳಿಗೆ ಹಾನಿಕಾರಕವಲ್ಲ. ಆದರೆ ಯಾವ ಸಲಾಡ್ ನಲ್ಲಿ ಹೆಚ್ಚಾಗಿ ವಿನೆಗರ್ ಮತ್ತು ಸಕ್ಕರೆ ಅಂಶ ಕಂಡುಬರುತ್ತದೆ ಅಂತಹ ಸಲಾಡ್ ನಿಮ್ಮ ಹಲ್ಲುಗಳಿಗೆ ಮತ್ತು ವಸಡುಗಳಿಗೆ ಸಾಕಷ್ಟು ತೊಂದರೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಇಂತಹ ಪದಾರ್ಥಗಳನ್ನು ದೂರವಿಡಿ.

​ಕೊನೆಯ ಮಾತು

ಹಲ್ಲುಗಳನ್ನು ಹಾನಿ ಮಾಡುವ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕು ಎಂದೇನಿಲ್ಲ. ಇವುಗಳನ್ನು ಸೇವನೆ ಮಾಡಿದ ನಂತರ ನೀರು ಹಾಕಿಕೊಂಡು ಬಾಯಿ ಮುಕ್ಕಳಿಸಿ ಉಗಿದು ಬಿಟ್ಟರೆ ನಿಮ್ಮ ಹಲ್ಲುಗಳ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ವಸಡುಗಳು ಆರೋಗ್ಯದಿಂದ ಕೂಡಿರುತ್ತವೆ. ಬಾಯಿಯ ದುರ್ವಾಸನೆ ದೂರವಾಗಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಹಾಗೂ ಸಂತತಿ ಕಡಿಮೆಯಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ