ಆ್ಯಪ್ನಗರ

ಒಂದು ಗುಟುಕು ನೀರಿನೊಂದಿಗೆ ಮಾತ್ರೆ ಸೇವಿಸುವುದು ಎಷ್ಟು ಅಪಾಯಕಾರಿ ಗೊತ್ತಾ!

ತೀವ್ರ ಎದೆ ನೋವಿನಿಂದ ಬಳಲುತ್ತಿರುವ 1,000 ರೋಗಿಗಳ ಮೇಲೆ ನಡೆಸಿದ ವೈಜ್ಞಾನಿಕ ಅಧ್ಯಯನವು ಮಾತ್ರೆಗಳಿಂದಾಗಿ ಅನ್ನನಾಳದಲ್ಲಾಗುವ ಗಾಯದಿಂದಾಗಿ ಹೆಚ್ಚಿನ ಜನರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ ಎಂಬುದನ್ನು ಬಹಿರಂಗ ಪಡಿಸಿದೆ.

TIMESOFINDIA.COM 22 Oct 2018, 10:41 am
ಅಹಮದಾಬಾದ್: ಒಂದೇ ಒಂದು ಗುಟುಕು ನೀರಿನೊಂದಿಗೆ ಮಾತ್ರೆ ನುಂಗುವ ಅಭ್ಯಾಸ ನಿಮಗಿದೆಯೇ? ಹಾಗಾದರೆ ತಕ್ಷಣಕ್ಕೆ ಇದನ್ನು ಬದಲಾಯಿಸಿಕೊಳ್ಳಿ. ಕಾರಣ ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
Vijaya Karnataka Web 66302625


ತೀವ್ರ ಎದೆ ನೋವಿನಿಂದ ಬಳಲುತ್ತಿರುವ 1,000 ರೋಗಿಗಳ ಮೇಲೆ ನಡೆಸಿದ ವೈಜ್ಞಾನಿಕ ಅಧ್ಯಯನವು ಮಾತ್ರೆಗಳಿಂದಾಗಿ ಅನ್ನನಾಳದಲ್ಲಾಗುವ ಗಾಯದಿಂದಾಗಿ ಹೆಚ್ಚಿನ ಜನರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ ಎಂಬುದನ್ನು ಬಹಿರಂಗ ಪಡಿಸಿದೆ. ಹಾಸಿಗೆಗೆ ಜಾರುವ ಕೆಲವೇ ನಿಮಿಷಗಳ ಮೊದಲು ಔಷಧಿ ತೆಗೆದುಕೊಳ್ಳುವ ಅಭ್ಯಾಸವಿರುವವರ ಅನ್ನನಾಳದಲ್ಲಿ ಗಂಭೀರ ಗಾಯಗಳಾಗುವ ಅಪಾಯವಿದೆ ಎಂದು ವರದಿ ತಿಳಿಸಿದೆ.

"ನುಂಗುವ ಸಮಯದಲ್ಲಿ ಎದೆಯ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಮಾತ್ರೆ ಸೇವನೆಯಿಂದ ಗಾಯದಿಂದ" ಎಂಬ ಶೀರ್ಷಿಕೆಯ ಈ ಅಧ್ಯಯನ 25% ರೋಗಿಗಳಲ್ಲಿ ಜೀರ್ಣಾಂಗವ್ಯೂಹದ ಸಮಸ್ಯೆಯಿಂದ ಎದೆ ನೋವು ಕಾಣಿಸಿಕೊಂಡಿದೆ. ಮತ್ತಿದು ಹೃದಯಾಘಾತದ ಲಕ್ಷಣವಲ್ಲ ಎಂದು ಬಹಿರಂಗಪಡಿಸಿದೆ.

"ಎದೆಯ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಂಡರೆ ಸಾಮಾನ್ಯವಾಗಿ ಹೃದಯಾಘಾತದ ಲಕ್ಷಣವೆಂದು ಗ್ರಹಿಸಲ್ಪಡುತ್ತದೆ. ಆದರೆ ಅದು ಎಸಿಡಿಟಿ, ಮಾತ್ರೆಯಿಂದಾಗಿ ಅನ್ನನಾಳದಲ್ಲಾದ ಗಾಯ, ಉರಿಯೂತದ ಕಾರಣದಿಂದಾಗಿರಬಹುದು" ಎಂದು ಡಾ ಮುಕುಂದ್ ಪಟೇಲ್ ಅವರು ಡಾ. ಧ್ರುವ ಪಟೇಲ್, ಜಠರಶಾಸ್ತ್ರಜ್ಞ ಡಾ. ಸಂಜಯ್ ರಜಪೂತ ಮತ್ತು ಹೃದ್ರೋಗ ತಜ್ಞ ಡಾ. ಕಮಲ್ ಶರ್ಮಾರೊಂದಿಗೆ ನಡೆಸಿದ ಅಧ್ಯಯನದಲ್ಲಿ ಬಂದ ಫಲಿತಾಂಶವಾಗಿದೆ. ಈ ಅಧ್ಯಯನವನ್ನು ಅಂತರರಾಷ್ಟ್ರೀಯ ಪತ್ರಿಕೆ 'ಸೆಂಟ್ರಲ್ ಡ್ರಗ್ ಸೇಫ್ಟಿ' ಯಲ್ಲಿ ಪ್ರಕಟಿಸಲಾಗಿದೆ.

ಅಧ್ಯಯನದಲ್ಲಿ ಪಾಲ್ಗೊಂಡ 23 ರೋಗಿಗಳಿಗೆ ಮಾತ್ರೆ ಸೇವಿಸುವಾಗಿನ ತಪ್ಪು ಕ್ರಮದಿಂದ ತೀವ್ರ ಪ್ರಮಾಣದ ಕೇಂದ್ರ ಎದೆ ನೋವು ಕಾಣಿಸಿಕೊಂಡಿತ್ತು ಎಂಬುದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಕೇವಲ ಒಂದು ಗುಟುಕು ನೀರಿನೊಂದಿಗೆ ಮಾತ್ರೆ ಸೇವಿಸಿದರೆ ಅನ್ನನಾಳದಿಂದ ಔಷಧಿ ಕೆಳಗಿಳಿಯುವುದಿಲ್ಲ. ಅನ್ನನಾಳದ ಮಧ್ಯೆ ಮಾತ್ರೆ ಸಿಕ್ಕಿ ಹಾಕಿಕೊಳ್ಳುವುದರಿಂದ ಅಲ್ಲಿ ಗಾಯ ಉಂಟಾಗುತ್ತದೆ. ಪದೇ ಪದೇ ಇದೇ ತಪ್ಪು ನಡೆದರೆ ಉಂಟಾಗುವ ಕಿಸ್ಸಿಂಗ್ ಅಲ್ಸರ್‌ಗೆ ಕಾರಣವಾಗಬಹುದು ಎಂದು ಡಾ. ರಜಪೂತ್ ಹೇಳಿದ್ದಾರೆ.

ನೋವು ನಿವಾರಕ , ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಔಷಧವನ್ನು ಸೇವಿಸುವವರು, ಔಷಧಿಯನ್ನು ತೆಗೆದುಕೊಳ್ಳುವ ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಮುಖ್ಯ, ಎನ್ನುವುದು ಡಾಕ್ಟರ್ ರಜಪೂತ್ ಸಲಹೆ

ಔಷಧಿ ಜತೆ ಕುಡಿಯಬೇಕಾದ ನೀರಿನ ಪ್ರಮಾಣವೆಷ್ಟು?

ಮಾತ್ರೆಯನ್ನು ಸೇವಿಸುವಾಗ ಒಂದು ದೊಡ್ಡ ಗ್ಲಾಸ್ ತುಂಬ ನೀರನ್ನು ಕುಡಿಯುವುದು ಸೂಕ್ತ. ಅದರ ಜತೆಗೆ ಮಲಗುವ ಕೆಲವೇ ನಿಮಿಷಗಳ ಮೊದಲು ಅಥವಾ ಮಲಗುವ ಭಂಗಿಯಲ್ಲಿದ್ದುಕೊಂಡು ಔಷಧಿ ಸೇವಿಸಿದರೆ ( ವಿಶೇಷವಾಗಿ ಹಿರಿಯ ನಾಗರಿಕರು) ಹೊಟ್ಟೆಗೆ ಸರಳವಾಗಿ . ಪರಿಣಾಮ ನುಂಗುವಾಗ ತೀವ್ರ ಎದೆನೋವು ಕಾಣಿಸಿಕೊಳ್ಳಬಹುದು. ಹೀಗಾಗಿ ಯಾವಾಗಲೂ ಕುಳಿತುಕೊಂಡೇ ಔಷಧಿ ಸೇವಿಸಿ ಮತ್ತು ಮಲಗುವುದಕ್ಕಿಂತ ಅರ್ಧ ಗಂಟೆ ಮೊದಲು ಸೇವಿಸಿ ಎಂದು ಸಲಹೆ ನೀಡುತ್ತಾರೆ ಡಾ. ರಜಪೂತ್.

ಎದೆ ಉರಿ ಕೂಡ ಹೃದಯಘಾತದ ಲಕ್ಷಣ

ಎದೆ ಉರಿ, ನಡೆದಾಡುವಾಗ ಎದೆನೋವು ಬರುವುದು ಹೃದಯಾಘಾತದ ಸೂಚನೆಗಳಿರಬಹುದು. ಇಂತಹ ಲಕ್ಷಣಗಳಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉಚಿತವೆನ್ನುತ್ತಾರೆ ಡಾ. ಪಟೇಲ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ