ಆ್ಯಪ್ನಗರ

ವ್ಯಾಯಾಮ ಮಾಡದೇ ತೂಕ ಇಳಿಸಬಹುದು! ಅದು ಹೇಗೆ ಗೊತ್ತಾ?

ಆರೋಗ್ಯ ಹಾಗೂ ಫಿಟ್ನೆಸ್ ಕಾಪಾಡಲು ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಂಡರೆ ಸಹಕಾರಿ.

Vijaya Karnataka Web 21 Jan 2021, 3:04 pm
ದೇಹದ ತೂಕ ಸಮತೋಲದಲ್ಲಿ ಇರಬೇಕು ಎಂದು ವೈದ್ಯಕೀಯವಾಗಿ ಹೇಳಲಾಗಿದೆ. ಅದು ಹೆಚ್ಚು ಅಲ್ಲ ಅಥವಾ ಅತೀ ಕಡಿಮೆಯೂ ಅಲ್ಲದ ಹಾಗೆ ಇರಬೇಕು. ಹೀಗಿದ್ದರೆ ಆರೋಗ್ಯವು ಉತ್ತಮವಾಗಿರುವುದು.
Vijaya Karnataka Web effective ways to lose weight without exercise
ವ್ಯಾಯಾಮ ಮಾಡದೇ ತೂಕ ಇಳಿಸಬಹುದು! ಅದು ಹೇಗೆ ಗೊತ್ತಾ?


ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಅತಿಯಾಗಿ ಬೊಜ್ಜು ಬೆಳೆಸಿಕೊಂಡಿರುವರು. ಇದರಿಂದಾಗಿ ಇದನ್ನು ಕಡಿಮೆ ಮಾಡಿಕೊಂಡು ದೇಹದ ಸಮತೋಲನ ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಚಿಂತೆಯು ಅವರನ್ನು ಕಾಡುತ್ತಲೇ ಇರುವುದು.

ಪ್ರತಿಯೊಬ್ಬರು ಒಂದೊಂದು ರೀತಿಯ ವ್ಯಾಯಾಮ ಹಾಗೂ ಆಹಾರ ಕ್ರಮವನ್ನು ಅಳವಡಿಸಿಕೊಂಡು ಹೋಗುವರು. ಇದರಿಂದ ತೂಕ ಇಳಿಸಲು ಸಹಕಾರಿ. ಆದರೆ ಪ್ರತಿಯೊಬ್ಬರಿಗೂ ಇಂತಹ ಆಹಾರ ಕ್ರಮ ಹಾಗೂ ವ್ಯಾಯಾಮ ಹಿಡಿಸದೆ ಇರಬಹುದು.

ಇದಕ್ಕಾಗಿ ಕೆಲವೊಂದು ಸುಲಭ ವಿಧಾನಗಳನ್ನು ಅನುಸರಿಕೊಂಡು ಹೋಗಬೇಕು. ದೇಹದ ತೂಕ ಇಳಿಸಲು ಹಾಗೂ ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ಪರಿಣಾಮಕಾರಿ ವಿಧಾನಗಳನ್ನು ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.

​ದೇಹವನ್ನು ಹೈಡ್ರೇಟ್ ಆಗಿಡಿ

ದೇಹದ ಅರ್ಧಕ್ಕಿಂತಲೂ ಹೆಚ್ಚಿನ ಭಾಗದಲ್ಲಿ ನೀರಿನಾಂಶವಿದ್ದು, ನಮ್ಮ ದೇಹಕ್ಕೆ ಪ್ರಮುಖ ಅಗತ್ಯತೆಯೇ ನೀರು. ದಿನವಿಡಿ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿದು, ದೇಹವನ್ನು ತೇವಾಂಶದಿಂದ ಇಟ್ಟರೆ, ಆಗ ಖಂಡಿತವಾಗಿಯೂ ಒಳಗಿನ ಅಂಗಾಂಗಗಳು ಸರಿಯಾಗಿ ಕೆಲಸ ಮಾಡುವುದು.

ನೀರು ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಖುವುದು ಮತ್ತು ಚಯಾಪಚಯ ವೃದ್ಧಿಸಿ, ಕ್ಯಾಲರಿ ಅಧಿಕವಾಗಿ ದಹಿಸುವಂತೆ ಮಾಡುವುದು. ಊಟಕ್ಕೆ ಮೊದಲು ಒಂದು ದೊಡ್ಡ ಲೋಟದಲ್ಲಿ ನೀರು ಕುಡಿದರೆ ಅದರಿಂದ ಕಡಿಮೆ ಕ್ಯಾಲರಿ ಸೇವನೆ ಮಾಡಬಹುದು ಮತ್ತು ತೂಕ ಕೂಡ ಇಳಿಸಬಹುದು. ನಿರ್ಜಲೀಕರಣದಿಂದಾಗಿ ಹೆಚ್ಚು ತಿನ್ನುವಂತೆ ಆಗುವುದು. ಪ್ರತಿನಿತ್ಯವೂ ಎರಡು ಲೀಟರ್ ನಷ್ಟು ನೀರು ಕುಡಿಯಿರಿ.

ಚಳಿಗಾಲದಲ್ಲಿ ದೇಹವನ್ನು ಹೈಡ್ರೇಟ್ ಆಗಿಡಲು ಸೇವಿಸಬೇಕಾದ ಆಹಾರಗಳು

​ಅಧಿಕ ಪ್ರೋಟೀನ್

  • ಪ್ರೋಟೀನ್ ಅಂಗಾಂಶಗಳನ್ನು ಬಲಪಡಿಸುವುದು ಮತ್ತು ತೂಕ ಇಳಿಸಲು ಇದು ಪ್ರಮುಖ ಪೋಷಕಾಂಶವಾಗಿದೆ. ಕೇವಲ ದೇಹದ ಸ್ನಾಯುಗಳನ್ನು ಕಟ್ಟುಮಸ್ತಾಗಿರಿಸಲು ಬಯಸುವವರಿಗೆ ಮಾತ್ರವಲ್ಲದೆ, ಸಾಮಾನ್ಯರಿಗೂ ದೇಹದ ಸಮತೋಲನಕ್ಕೆ ಪ್ರೋಟೀನ್ ಅಗತ್ಯವಾಗಿ ಬೇಕು.
  • ಅಧಿಕ ಪ್ರೋಟಿನ್ ಇರುವ ಆಹಾರ ಸೇವನೆ ಮಾಡಿದರೆ, ಚಯಾಪಚಯ ವೃದ್ಧಿ ಆಗುವುದು ಮತ್ತು ಅಧಿಕವಾಗಿ ತಿನ್ನುವುದು ತಪ್ಪುವುದು. ಮೊಟ್ಟೆ, ಕೋಳಿ ಮಾಂಸ, ಕಡಲೆ, ಬೀಜಗಳು ಮತ್ತು ಕಾಟೇಜ್ ಚೀಸ್ ಅಧಿಕ ಗುಣಮಟ್ಟದ ಪ್ರೋಟೀನ್ ಇರುವಂತಹ ಆಹಾರಗಳು.

​ಆರೋಗ್ಯಕಾರಿ ಕಾರ್ಬ್ಸ್ ಮತ್ತು ಕೊಬ್ಬು

  • ಕಾರ್ಬ್ಸ್ ಮತ್ತು ಕೊಬ್ಬು ಸೇವನೆ ಮಾಡಿದರೆ, ಅದರು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ನಂಬಿಕೆಯು ಇದೆ. ಆದರೆ ಕಾರ್ಬ್ಸ್ ಮತ್ತು ಕೊಬ್ಬು ಸೇವನೆ ಮಾಡಿದರೆ ದೇಹಕ್ಕೆ ಬೇಕಾಗುವಂತಹ ಪ್ರಮುಖ ಪೋಷಕಾಂಶಗಳು ಲಭ್ಯವಾಗುವುದು.
  • ಇದರಿಂದ ಸಂಪೂರ್ಣವಾಗಿ ಇದನ್ನು ಕಡೆಗಣಿಸಿದರೆ ತೊಂದರೆ ಆಗುವುದು. ಆರೋಗ್ಯಕಾರಿ ಕಾರ್ಬ್ಸ್ ಮತ್ತು ಕೊಬ್ಬನ್ನು ಸೇವನೆ ಮಾಡಿದರೆ ಒಳ್ಳೆಯದು. ಕಾರ್ಬ್ಸ್ ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುವುದು, ಅದೇ ಕೊಬ್ಬು ದೇಹದಲ್ಲಿ ಕೊಬ್ಬು ಹೀರಿಕೊಳ್ಳುವ ವಿಟಮಿನ್ ಗಳ ಹೀರಿಕೊಳ್ಳುವಿಕೆಗೆ ಅಗತ್ಯವಾಗಿ ಬೇಕು. ಇದನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉತ್ತಮ.

​ಉಪಾಹಾರ ಬಿಡಬೇಡಿ

  • ತೂಕ ಇಳಿಸಲು ಕೆಲವರಿ ಮಧ್ಯಾಹ್ನ ಹಾಗೂ ಸಂಜೆ ಊಟ, ಉಪಾಹಾರ ಬಿಡುವರು. ಆದರೆ ಉಪಾಹಾರ ಬಿಟ್ಟರೆ ಅದರಿಂದ ಮತ್ತಷ್ಟು ಸಮಸ್ಯೆಯು ಕಾಡುವುದು. ಉಪಾಹಾರ ತ್ಯಜಿಸಿದರೆ, ಆಗ ಇನ್ನಷ್ಟು ಕ್ಯಾಲರಿಯನ್ನು ನೀವು ಸೇವನೆ ಮಾಡುವುದು ಖಚಿತ.
  • ಉಪಾಹಾರ ಇಲ್ಲದೆ ಇದ್ದರೆ ಆಗ ದಿನವಿಡಿ ನೀವು ಅತಿಯಾಗಿ ತಿನ್ನುವಿರಿ. ಇದರಿಂದ ಉಪಹಾರದಲ್ಲಿ ಆರೋಗ್ಯಕಾರಿ ಆಹಾರ ಸೇವನೆ ಮಾಡಿ. ಸಂಪೂರ್ಣವಾಗಿ ಉಪಹಾರವನ್ನು ಕಡೆಗಣಿಸಬೇಡಿ.
  • ಊಟ ಬಿಡುವುದರಿಂದ ಚಯಾಪಚಯ ಕ್ರಿಯೆ ನಿಧಾನವಾಗುವುದು ಮತ್ತು ಇದರಿಂದ ಬೊಜ್ಜು ಕರಗಿಸುವ ಕ್ರಮಕ್ಕೆ ತೊಂದರೆ ಆಗಬಹುದು.

ದೇಹ ತೂಕ ಇಳಿಸಲು ಐದು ಪ್ರೋಟೀನ್‌ಯುಕ್ತ ಉಪಾಹಾರಗಳು

​ಪಾನೀಯಗಳ ಬಗ್ಗೆ ಎಚ್ಚರ

  • ಕೆಲವೊಂದು ಪಾನೀಯಗಳಲ್ಲಿ ಕೂಡ ಹೆಚ್ಚಿನ ಕ್ಯಾಲರಿ ಇರುವುದು. ಹೀಗಾಗಿ ನೀವು ಕೃತಕ ಸಕ್ಕರೆ ಹಾಗೂ ಕಾರ್ಬೋನೇಟೆಡ್ ಪಾನೀಯಗಳನ್ನು ಸೇವನೆ ಮಾಡಬೇಡಿ.
  • ಎರಡು ಅಥವಾ ಮೂರು ಕಪ್ ಕಾಫಿ ಅಥವಾ ಟೀ ಸೇವನೆ ಮಾಡಿದರೆ ಅದರಿಂದ ದೈನಂದಿನ ಕ್ಯಾಲರಿಯು ವೃದ್ಧಿ ಆಗುವುದು.
  • ಇದರಿಂದ ನೀವು ಟೀ ಮತ್ತು ಕಾಫಿ ಕಡಿಮೆ ಮಾಡಿ. ಇದರ ಬದಲಿಗೆ ಬ್ಲ್ಯಾಕ್ ಕಾಫಿ ಸೇವಿಸಿ. ತೂಕ ಇಳಿಸಲು ಬಯಸುವವರಿಗೆ ಗ್ರೀನ್ ಟೀ ಪರಿಣಾಮಕಾರಿ. ಇದರಲ್ಲಿ ಪ್ರಬಲ ಆಂಟಿಆಕ್ಸಿಡೆಂಟ್ ಗಳು ಇದೆ. ಅದೇ ರೀತಿ ಇದು ಕೊಬ್ಬು ಕರಗಿಸಲು ನೆರವಾಗುವುದು.

​ಸಂಸ್ಕರಿಸಿದ ಮತ್ತು ರಿಫೈನ್ಡ್ ಉತ್ಪನ್ನಗಳನ್ನು ಕಡೆಗಣಿಸಿ

  • ಸಂಸ್ಕರಿಸಿರುವ ಮತ್ತು ರಿಫೈನ್ಡ್ ಆಹಾರಗಳು ಯಾವಾಗಲೂ ದೇಹದ ತೂಕ ಹೆಚ್ಚು ಮಾಡುವುದು. ಹೀಗಾಗಿ ತೂಕ ಕಡಿಮೆ ಮಾಡಬೇಕು ಎಂದು ಬಯಸುವವರು ಇಂತಹ ಆಹಾರಗಳನ್ನು ತಿನ್ನಬಾರದು. ರಿಫೈನ್ಡ್ ಸಕ್ಕರೆ, ಹಿಟ್ಟು ಮತ್ತು ಎಣ್ಣೆಯನ್ನು ಕಡೆಗಣಿಸಬೇಕು.
  • ಇಡೀ ಧಾನ್ಯಗಳು, ಹಸಿರು ತರಕಾರಿಗಳು, ಹಣ್ಣುಗಳನ್ನು ಸೇವನೆ ಮಾಡಿ. ಇದೆಲ್ಲವೂ ತುಂಬಾ ಆರೋಗ್ಯಕಾರಿ ಮತ್ತು ಪೋಷಕಾಂಶಗಳಿಂದ ಕೂಡಿದೆ. ಈ ಪೋಷಕಾಂಶಗಳು ತೂಕ ಇಳಿಸಲು ಸಹಕಾರಿ ಮತ್ತು ಚಯಾಪಚಯ ಕೂಡ ವೃದ್ಧಿಸಲು ನೆರವಾಗುವುದು.

​ಆಹಾರ ಪ್ರಮಾಣದ ಮೇಲೆ ನಿಗಾ ಇರಲಿ

  • ತೂಕ ಇಳಿಸುವ ಪ್ರಮುಖ ನಿಯಮವೆಂದರೆ, ಕಡಿಮೆ ತಿನ್ನುವುದು ಮತ್ತು ಹೆಚ್ಚು ಕ್ಯಾಲರಿ ದಹಿಸುವುದು. ಇದಕ್ಕಾಗಿ ತಿನ್ನುವ ಪ್ರಮಾಣದ ಮೇಲೆ ನಿಗಾ ಇರಬೇಕು ಮತ್ತು ಕ್ಯಾಲರಿ ಕೂಡ ಲೆಕ್ಕ ಹಾಕಬೇಕು. ನಾವು ತಿನ್ನುವಂತಹ ಪ್ರತಿಯೊಂದು ಆಹಾರದಲ್ಲೂ ಕ್ಯಾಲರಿ ಇರುವುದು.
  • ಇದರಿಂದಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸಿದರೆ ಆಗ ತೂಕ ಇಳಿಸಲು ಸಹಕಾರಿ ಆಗುವುದು. ನಿಮ್ಮ ದಿನದ ಊಟವನ್ನು ಮೂರು ವಿಭಾಗವಾಗಿ ವಿಂಗಡಿಸಿ ಮತ್ತು ಎರಡು ಸಲ ತಿಂಡಿ ತಿನ್ನಿ. ಕ್ಯಾಲರಿ ಸೇವನೆ ಬಗ್ಗೆ ಹದ್ದಿನ ಕಣ್ಣಿಡಿ. ಇದನ್ನು ನೀವು ಬರೆದಿಡಬಹುದು ಅಥವಾ ಯಾವುದೇ ಆಪ್ ಕೂಡ ಇದಕ್ಕಾಗಿ ಬಳಕೆ ಮಾಡಬಹುದು.

​ವ್ಯಾಯಾಮ

  • ತೂಕ ಇಳಿಸಲು ಮುಖ್ಯವಾಗಿ ಆಹಾರ ಪಥ್ಯವು ಪ್ರಮುಖ ಕಾರಣವಾಗಿರುವುದು ಮತ್ತು ಇದರ ಬಳಿಕ ವ್ಯಾಯಾಮ. ಶೇ.80ರಷ್ಟು ಆಹಾರ ಪಥ್ಯ ಮತ್ತು ಶೇ.20ರಷ್ಟು ವ್ಯಾಯಾಮ ಮಾಡಬೇಕು. ಆದರೆ ವ್ಯಾಯಾಮವಿಲ್ಲದೆ ದೇಹದ ತೂಕ ಕಾಪಾಡಿಕೊಳ್ಳಲು ಆಗದು.
  • ದೈಹಿಕವಾಗಿ ಚಟುವಟಿಕೆಯಿಂದ ಇದ್ದರೆ ಆಗ ಹೆಚ್ಚು ಕ್ಯಾಲರಿ ದಹಿಸಲು ಸಾಧ್ಯವಾಗುವುದು, ದೇಹ ಹಾಗೂ ಸ್ನಾಯುಗಳು ಬಲವಾಗುವುದು.

​ಸಮಯಕ್ಕೆ ಸರಿಯಾಗಿ ಮಲಗಿ

  • ತೂಕ ಹೆಚ್ಚಳಕ್ಕೆ ನಿಮ್ಮ ನಿದ್ರೆಯ ಕ್ರಮವು ಕೂಡ ಪರಿಣಾಮ ಬೀರಬಹುದು. ನಿದ್ರಾಹೀನತೆ ಅಥವಾ ಅನಿಯಮಿತ ನಿದ್ರೆಯ ಆವರ್ತನದಿಂದಾಗಿ ಹಸಿವು ಹೆಚ್ಚಾಗುವುದು ಹಾಗೂ ಬೆಳಗ್ಗೆ ಕಿರಿಕಿರಿ ಕಾಡುವುದು.
  • ಇದರಿಂದಾಗಿ ಬೆಳಗ್ಗೆ ಅತಿಯಾಗಿ ತಿನ್ನಬಹುದು. ಇದಕ್ಕಾಗಿ ಪ್ರತೀ ರಾತ್ರಿ 7-8 ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡಿ. ನಿದ್ರೆಯ ಆವರ್ತನವನ್ನು ಸರಿಯಾಗಿಟ್ಟುಕೊಂಡರೆ ಆಗ ಸಂಪೂರ್ಣ ಆರೋಗ್ಯಕ್ಕೆ ಇದರಿಂದ ನೆರವಾಗುವುದು ಮತ್ತು ಒತ್ತಡ ಕಡಿಮೆ ಮಾಡುವುದು.
  • ನಿದ್ರೆ ಕಡಿಮೆ ಆದರೆ ಅದು ಬೊಜ್ಜು ಉಂಟು ಮಾಡುವುದು ಎಂದು ಅಧ್ಯಯನಗಳು ಕೂಡ ಹೇಳಿವೆ. ನಿದ್ರೆಯು ಕಡಿಮೆ ಆದರೆ ಅದರಿಂದ ಮಕ್ಕಳಲ್ಲಿ ಶೇ.89ರಷ್ಟು ಮತ್ತು ದೊಡ್ಡವರಲ್ಲಿ ಶೇ.55ರಷ್ಟು ಬೊಜ್ಜಿನ ಅಪಾಯ ಹೆಚ್ಚಿಸುವುದು.

​ಜೀವನ ಶೈಲಿ ಬದಲಾಯಿಸಿ

  • ತೂಕ ಇಳಿಸಬೇಕೆಂದು ನಿರ್ಧಾರ ಮಾಡಿಕೊಂಡಿರುವವರು ತಮ್ಮ ಜೀವನಶೈಲಿ ಬದಲಾವಣೆ ಬಗ್ಗೆ ಗಮನಿಸಬೇಕು. ದೇಹಕ್ಕೆ ಪೋಷಣೆ ನೀಡಿ ಮತ್ತು ಆರೋಗ್ಯಕಾರಿ ಆಹಾರ ಸೇವನೆ ಮಾಡಿ.
  • ಕೆಲವೊಂದು ಆರೋಗ್ಯಕಾರಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಮತ್ತು ಸಮಯಕ್ಕೆ ಸರಿಯಾಗಿ ಮಲಗಿ, ಆಲ್ಕೋಹಾಲ್ ಸೇವನೆ, ಧೂಮಪಾನ ಕಡಿಮೆ ಮಾಡಿ.
  • ಒತ್ತಡ ಕಡಿಮೆ ಮಾಡಿಕೊಳ್ಳಿ. ಇದೆಲ್ಲವೂ ನಿಮ್ಮ ಬೊಜ್ಜು ಕಡಿಮೆ ಮಾಡಲು ನೆರವಾಗುವುದು ಹಾಗೂ ದೇಹವು ಫಿಟ್ ಆಗಿರಲು ಸಹಕಾರಿ.

Read in English: Weight Loss Tips: How to lose weight effectively

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ