ಆ್ಯಪ್ನಗರ

ಕೂದಲು ಬೆಳವಣಿಗೆಯಲ್ಲಿ ವಿಟಮಿನ್‌ ಪಾತ್ರ ಎಷ್ಟು ಗೊತ್ತಾ?

ಕೂದಲು ಬೆಳವಣಿಗೆಗೆ ವಿಟಮಿನ್‌ಗಳು ಸಹ ಅಗತ್ಯವಾಗಿದೆ. ಈ ಹಿನ್ನೆಲೆ ಹಲವು ವಿಧದ ವಿಟಮಿನ್‌ಗಳನ್ನು ಸೇವಿಸುವುದು ಅಗತ್ಯವಾಗಿದೆ. ಪೌಷ್ಠಿಕ ಆಹಾರ ಸೇವನೆಯೇ ಕೂದಲು ಬೆಳವಣಿಗೆಗೆ ಪ್ರಮುಖ ಅಂಶವಾಗಿದೆ.

Vijaya Karnataka Web 7 Mar 2019, 7:51 pm
ತಲೆಯಲ್ಲಿ ಆರೋಗ್ಯಕರವಾಗಿ ಕಾಣುವ ಕೂದಲು ಆರೋಗ್ಯ ಅಥವಾ ಸೌಂದರ್ಯದ ಸಂಕೇತವಾಗಿದೆ. ನಿಮ್ಮ ದೇಹದಲ್ಲಿ ಕೂದಲು ಆರೋಗ್ಯಕರವಾಗಿರಲು ಹಾಗೂ ಬೆಳವಣಿಗೆಗೆ ನಾನಾ ವಿಧದ ಪೌಷ್ಠಿಕಾಂಶಗಳ ಅಗತ್ಯವಿದೆ.
Vijaya Karnataka Web hair loss


ಇನ್ನು, ವಯಸ್ಸು, ಜೆನೆಟಿಕ್ಸ್ ಹಾಗೂ ಹಾರ್ಮೋನುಗಳು ಕೂದಲು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆದರೂ ಪೌಷ್ಠಿಕ ಆಹಾರ ಸೇವನೆಯೇ ಕೂದಲು ಬೆಳವಣಿಗೆಗೆ ಪ್ರಮುಖ ಅಂಶವಾಗಿದೆ. ಇದರಿಂದ ದೇಹಕ್ಕೆ ಹೆಚ್ಚು ವಿಟಮಿನ್ ಪೂರೈಕೆ ಆಗುತ್ತದೆ.

ಈ ಪೈಕಿ, ತಲೆಯಲ್ಲಿ ಕೂದಲು ಬೆಳವಣಿಗೆಗೆ ಅಗತ್ಯವಿರುವ 5 ವಿಟಮಿನ್‌ಗಳು ಯಾವುವು ಎಂದರೆ,

1. ವಿಟಮಿನ್ ಎ
ಎಲ್ಲ ಜೀವಕೋಶಗಳ ಬೆಳವಣಿಗೆಗೂ ವಿಟಮಿನ್ ಎ ಅಗತ್ಯ. ಇದೇ ರೀತಿ ಮಾನವ ದೇಹದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆಯಾಗುವ ಅಂಗಾಂಶವಾದ ಕೂದಲಿಗೂ ವಿಟಮಿನ್ ಎ ಅಗತ್ಯ. ಹೀಗಾಗಿ, ವಿಟಮಿನ್ ಎ ಕೊರತೆಯಿಂದ ಕೂದಲು ಕಡಿಮೆಯಾಗುವ ಸಂಭವ ಇರುತ್ತದೆ.

2. ಬಿ ವಿಟಮಿನ್
ಬಯೋಟಿನ್‌ ಎನ್ನುವುದು ಕೂದಲಿನ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗಿರುವ ಬಿ ವಿಟಮಿನ್ ಆಗಿದೆ. ಬಯೋಟಿನ್‌ ಕೊರತೆಯಿಂದ ಮನುಷ್ಯರಲ್ಲಿ ಕೂದಲು ಕಡಿಮೆಯಾಗುತ್ತದೆ. ಅಲ್ಲದೆ, ಇತರೆ ಬಿ ವಿಟಮಿನ್‌ಗಳು ಕೆಂಪು ರಕ್ತ ಕಣಗಳನ್ನು ರಚಿಸಲು ಸಹಾಯ ಮಾಡುತ್ತದೆ.

3. ವಿಟಮಿನ್ ಸಿ
ವಿಟಮಿನ್ ಸಿ ಪ್ರಬಲ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಫ್ರೀ ರ‍್ಯಾಡಿಕಲ್ಸ್‌ನಿಂದ ಉಂಟಾಗಿರುವ ಆಕ್ಸಿಡೇಟೀವ್‌ ಒತ್ತಡದಿಂದ ರಕ್ಷಣೆ ಮಾಡುತ್ತದೆ. ಇದರಿಂದ ನಿಮ್ಮ ಕೂದಲಿಗೆ ವಯಸ್ಸಾಗುವುದನ್ನು ತಡೆಗಟ್ಟುತ್ತದೆ. ಜತೆಗೆ, ಕೊಲ್ಲಾಜನ್ ಎಂಬ ಪ್ರೋಟೀನ್ ಸಹ ಅತ್ಯಗತ್ಯವಾಗಿ ಬೇಕಾಗಿದೆ. ಅಲ್ಲದೆ, ಕೂದಲು ಬೆಳವಣಿಗೆಗೆ ಬೇಕಾದ ಕಬ್ಬಿಣದ ಅಂಶವನ್ನು ಸಹ ನಿಮ್ಮ ದೇಹ ಹೀರಿಕೊಳ್ಳಲು ನೆರವಾಗುತ್ತದೆ.

4. ವಿಟಮಿನ್ ಡಿ
ವಿಟಮಿನ್ ಡಿ ಕಡಿಮೆ ಇದ್ದರೆ ಅಲೋಪೇಶಿಯಾ ( ಕೂದಲು ಉದುರುವ) ಸಮಸ್ಯೆ ಕಾಡುತ್ತದೆ. ಸೂರ್ಯನ ಕಿರಣಗಳ ಮೂಲಕ ನಿಮ್ಮ ದೇಹಕ್ಕೆ ವಿಟಮಿನ್ ಡಿ ಪೂರೈಕೆ ನೇರವಾಗಿ ಆಗುತ್ತದೆ. ಜತೆಗೆ, ಇತರೆ ಕೆಲ ಆಹಾರಗಳಿಂದ ವಿಟಮಿನ್ ಡಿ ಯನ್ನು ಪಡೆಯಬಹುದಾಗಿದೆ.

5. ವಿಟಮಿನ್ ಇ:

ಇನ್ನು, ವಿಟಮಿನ್ ಇ ಸಹ ವಿಟಮಿನ್ ಸಿ ರೀತಿಯಲ್ಲೇ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಆಕ್ಸಿಡೇಟೀವ್‌ ಒತ್ತಡವನ್ನು ನಿಯಂತ್ರಿಸುತ್ತದೆ. 8 ತಿಂಗಳ ಕಾಲ ವಿಟಮಿನ್ ಇ ಸಪ್ಲಿಮೆಂಟ್ ಅನ್ನು ತೆಗೆದುಕೊಂಡರೆ ಕೂದಲು ಬೆಳವಣಿಗೆ ಹೆಚ್ಚಾಗುವ ಸಾಧ್ಯತೆ ಶೇ. 34.5ರಷ್ಟು ಹೆಚ್ಚಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ