ಆ್ಯಪ್ನಗರ

ಸಾಧ್ಯವಾದರೆ ಪ್ರತಿ ದಿನ ಬೀನ್ಸ್ ಸೇವನೆ ಮಾಡಬೇಕು! ಯಾಕೆ ಗೊತ್ತಾ?

ಬೀನ್ಸ್ ಸೇವನೆ ಮಾಡುವುದರಿಂದ ಶಕ್ತಿಯುತವಾದ ಪೌಷ್ಟಿಕ ಸತ್ವಗಳು ಸಿಗುತ್ತವೆ. ಜೊತೆಗೆ ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು.

Vijaya Karnataka Web 31 Jul 2021, 5:50 pm
ನಿತ್ಯ ನಿಯಮಿತವಾಗಿ ನಾವು ಬಳಕೆ ಮಾಡುವ ಹಲವಾರು ತರಕಾರಿಗಳಲ್ಲಿ ಬೀನ್ಸ್ ಮೊದಲನೆಯದು ಎಂದು ಹೇಳಬಹುದು. ಏಕೆಂದರೆ ಯಾವುದೇ ತರಕಾರಿ ಸಾಂಬಾರ್ ಮಾಡಿದ ಸಂದರ್ಭದಲ್ಲಿ ಯಾರು ಸಹ ಹುರುಳಿಕಾಯಿ ಇಲ್ಲದೆ ಸಾರು ಮಾಡುವುದಿಲ್ಲ.
Vijaya Karnataka Web evidence based health benefits of green beans
ಸಾಧ್ಯವಾದರೆ ಪ್ರತಿ ದಿನ ಬೀನ್ಸ್ ಸೇವನೆ ಮಾಡಬೇಕು! ಯಾಕೆ ಗೊತ್ತಾ?


ಆಹಾರ ಪದಾರ್ಥಗಳಲ್ಲಿ ಇವುಗಳ ಬಳಕೆಯಿಂದ ತಯಾರಾಗುವ ಆಹಾರ ಪದಾರ್ಥದ ಸ್ವಾದ ಹೆಚ್ಚಾಗುವುದು ಮಾತ್ರವಲ್ಲದೆ ದೇಹಕ್ಕೆ ಬಹುತೇಕ ಅಗತ್ಯ ಪ್ರಮಾಣದ ಪೌಷ್ಠಿಕ ಸತ್ವಗಳು ಸಿಗುತ್ತವೆ.

ಮುಖ್ಯವಾಗಿ ಬೀನ್ಸ್ ಗಳಲ್ಲಿ ಶಕ್ತಿಯುತವಾದ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಅಂಶ ಕಂಡುಬರುತ್ತದೆ. ಇದರ ಜೊತೆಗೆ ಅಪಾರ ಪ್ರಮಾಣದ ನಾರಿನ ಅಂಶ ಮತ್ತು ಫೋಲಿಕ್ ಆಮ್ಲ ಕೂಡ ಇರುತ್ತದೆ. ಹಸಿರು ಬೀನ್ಸ್ ಸೇವನೆ ಮಾಡುವುದರಿಂದ ಬೆಂಡೆಕಾಯಿಯಲ್ಲಿ ಸಿಗುವಂತಹ ಆರೋಗ್ಯದ ಲಾಭಗಳು ಸಿಗುತ್ತವೆ ಎಂದು ಆಹಾರ ತಜ್ಞರು ಹೇಳುತ್ತಾರೆ.

​ಬೀನ್ಸ್‌ನಲ್ಲಿ ಕಂಡುಬರುವ ಆರೋಗ್ಯ ಲಾಭಗಳು

  • ಮೊದಲೇ ಹೇಳಿದಂತೆ ಬೀನ್ಸ್ ನಲ್ಲಿ ವಿಟಮಿನ್ ಅಂಶಗಳ ಪ್ರಮಾಣ ಹೆಚ್ಚಾಗಿ ಸಿಗುತ್ತದೆ. ಇದರ ಜೊತೆಗೆ ದೇಹಕ್ಕೆ ಅಗತ್ಯವಾಗಿ ಬೇಕಾದ ದಿನದ ಅವಶ್ಯಕತೆಗೆ ಅನುಗುಣವಾದ ಕ್ಯಾಲೋರಿಗಳು, ಒಳ್ಳೆಯ ಕೊಬ್ಬಿನ ಅಂಶ, ಕಾರ್ಬೋಹೈಡ್ರೇಟ್ ಅಂಶ, ನಾರಿನ ಅಂಶ, ನೈಸರ್ಗಿಕವಾದ ಸಕ್ಕರೆ ಅಂಶ, ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪಾಸ್ಪರಸ್, ಪೊಟಾಸಿಯಂ, ಫೋಲೆಟ್ ಇತ್ಯಾದಿಗಳು ಸಿಗುತ್ತವೆ.
  • ಬೀನ್ಸ್ ಸೇವನೆ ಮಾಡುವುದರಿಂದ ಈ ಮೇಲಿನ ಆರೋಗ್ಯ ಪ್ರಯೋಜನಗಳು ಸಿಕ್ಕಿದಂತಾಗಿ, ಇನ್ನು ಕೆಲವು ಊಹೆಗೆ ಮೀರಿದ ಆರೋಗ್ಯದ ಲಾಭಗಳು ಲಭ್ಯವಾಗುತ್ತವೆ. ಉದಾಹರಣೆಗೆ ನೋಡುವುದಾದರೆ

​ಕ್ಯಾನ್ಸರ್ ಸಮಸ್ಯೆ ನಿಯಂತ್ರಣವಾಗುತ್ತದೆ

  • ಬೀನ್ಸ್ ನಲ್ಲಿ ಕಂಡುಬರುವ ಕ್ಲೋರೋಫಿಲ್ ಅವುಗಳ ಹಸಿರು ಬಣ್ಣಕ್ಕೆ ಕಾರಣ ಎನ್ನುವ ಸತ್ಯದ ಜೊತೆಗೆ ತನ್ನಲ್ಲಿ ಕಾರ್ಸಿನೋಗೆನಿಕ್ ಪ್ರಭಾವವನ್ನು ತಡೆಯುವ ಗುಣವನ್ನು ಸಹ ಪಡೆದುಕೊಂಡಿದೆ ಎಂದು ಹೇಳಬಹುದು.
  • ಹಾಗಾಗಿ ಕ್ಯಾನ್ಸರ್ ಸಮಸ್ಯೆಯಿಂದ ಈಗಾಗಲೇ ಬಳಲುತ್ತಿರುವವರು ಕೂಡ ಸುಲಭವಾಗಿ ಬೀನ್ಸ್ ಸೇವನೆ ಮಾಡಬಹುದು ಮತ್ತು ತಮ್ಮ ಸಮಸ್ಯೆಯನ್ನು ನಿಯಂತ್ರಣ ಮಾಡಿಕೊಳ್ಳಬಹುದು.

ಹೊಟ್ಟೆಯ ಕ್ಯಾನ್ಸರ್ ಸಮಸ್ಯೆಗೆ ಅರಿಶಿನ ಮನೆ ಮದ್ದು ಹೇಗೆ?

​ಫಲವತ್ತತೆ ಮತ್ತು ಗರ್ಭಾವಸ್ಥೆ ಸಂದರ್ಭಕ್ಕೆ ಒಳ್ಳೆಯದು

  • ಗರ್ಭಿಣಿ ಮಹಿಳೆಯರಿಗೆ ತಮ್ಮ ದೇಹದ ರಕ್ತದಲ್ಲಿ ಕಬ್ಬಿಣದ ಅಂಶದ ಪ್ರಮಾಣ ಹೆಚ್ಚಾಗಿ ಇರಬೇಕು ಎಂದು ಹೇಳುತ್ತಾರೆ. ಏಕೆಂದರೆ ಇದು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಂದರ್ಭದಲ್ಲಿ ದೇಹದಲ್ಲಿ ರಕ್ತದ ಪ್ರಮಾಣವನ್ನು ಅಚ್ಚುಕಟ್ಟಾಗಿ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ.
  • ಇದರ ಜೊತೆಗೆ ಗರ್ಭಾವಸ್ಥೆಗೆ ತಲುಪಲು ಕೂಡ ಮಹಿಳೆಯರಿಗೆ ದೇಹದಲ್ಲಿ ಕಬ್ಬಿಣದ ಅಂಶದ ಪ್ರಮಾಣ ಹೆಚ್ಚಾಗಿ ಇರಬೇಕಾದ ಅನಿವಾರ್ಯತೆ ಇದೆ.
  • ಮಹಿಳೆಯರ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಬೀನ್ಸ್ ಮತ್ತು ಇನ್ನಿತರ ತರಕಾರಿಗಳು ತುಂಬಾ ಅವಶ್ಯಕವಾಗಿ ಬೇಕು. ಮುಖ್ಯವಾಗಿ ಹುಟ್ಟುವ ಮಗು ಮೆದುಳು ಹಾಗೂ ನರಮಂಡಲದ ನ್ಯೂನ್ಯತೆಯಿಂದ ರಕ್ಷಣೆ ಆಗಲು ಇದು ಅನುಕೂಲವಾಗುತ್ತದೆ.

ಪುರುಷರ ಫಲವತ್ತತೆ ಬಗ್ಗೆ ಇರುವ ಈ ಕಟ್ಟುಕಥೆಗಳನ್ನು ನಂಬಲೇಬೇಡಿ!

​ಮಾನಸಿಕ ಒತ್ತಡ ಸಮಸ್ಯೆ ದೂರವಾಗುತ್ತದೆ

  • ಯಾರು ನಿಯಮಿತವಾಗಿ ಪ್ರತಿ ದಿನ ಬೀನ್ಸ್ ಸೇವನೆ ಮಾಡುತ್ತಾರೆ, ಅವರಿಗೆ ಮಾನಸಿಕ ಒತ್ತಡದ ಸಮಸ್ಯೆ ಇರುವುದಿಲ್ಲ ಎಂದು ಹೇಳುತ್ತಾರೆ.
  • ಏಕೆಂದರೆ ಬೀನ್ಸ್ ನಲ್ಲಿ ಕಂಡುಬರುವ ಫೋಲೆಟ್ ಅಂಶ ದೇಹದಲ್ಲಿ ಹೋಮೊಸಿಸ್ಟೀನೆ ಅಂಶ ಹೆಚ್ಚು ಶೇಖರಣೆ ಆಗದಂತೆ ನೋಡಿಕೊಳ್ಳುತ್ತದೆ.
  • ಹೀಗಾಗಿ ಮೆದುಳಿನ ಭಾಗಕ್ಕೆ ಅಗತ್ಯ ಪ್ರಮಾಣದ ಪೌಷ್ಠಿಕ ಸತ್ವಗಳು ಸುಲಭವಾಗಿ ತಲುಪಲು ಅನುಕೂಲವಾಗುತ್ತದೆ. ಮೆದುಳು ತನ್ನ ಅಗತ್ಯತೆಗೆ ಬೇಕಾದ ಸೇರೋಟೋನಿನ್ ಮತ್ತು ಡೋಪಮೈನ್ ಅಂಶವನ್ನು ಉತ್ಪತ್ತಿ ಮಾಡಲು ಸಹ ಸಹಕಾರಿಯಾಗುತ್ತದೆ.

ಆತಂಕ, ಒತ್ತಡ ನಿವಾರಣೆ ಮಾಡುವ ಗಿಡಮೂಲಿಕೆಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ