ಆ್ಯಪ್ನಗರ

40ರ ನಂತರ ಪುರುಷರಿಗೂ ಕಾಡುತ್ತದೆ ಮೆನೋಪಾಸ್‌

ಪುರುಷರಲ್ಲಿ ಕಂಡು ಬರುವ ಮೆನೋಪಾಸ್‌ ಸಮಸ್ಯೆಯನ್ನು ನಿರ್ವಹಿಸಲು ಜೀವನಶೈಲಿಯನ್ನು ಬದಲಿಸಿಕೊಳ್ಳಿ.

Agencies 20 May 2019, 11:10 am
ವಯಸ್ಸು ಏರುತ್ತಿದ್ದಂತೆ ಬದಲಾವಣೆ ಸಹಜ. ಮಹಿಳೆ ಮೆನೋಪಾಸ್ ತಲುಪುತ್ತಿದ್ದಾಳೆ ಅನ್ನುವುದಕ್ಕೆ ನಿರ್ದಿಷ್ಟ ಸೂಚನೆಗಳಿವೆ. ಆದರೆ ಪುರುಷರಲ್ಲಿ ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ನಲವತ್ತರ ಹೊತ್ತಿಗೆ ಮಹಿಳೆಯರನ್ನು ಬೆನ್ನು ಹತ್ತುವ ಮೆನೋಪಾಸ್ ಹೆಣ್ತನವನ್ನೇ ಮುದುಡಿಸಿ ಬಿಡುತ್ತದೆ. ಹೆಚ್ಚುಕಮ್ಮಿ ಅದೇ ವಯಸ್ಸಿಗೆ ಪುರುಷರನ್ನು ಮೆನೋಪಾಸ್ ಕಾಡುತ್ತದೆ. ಇಬ್ಬರಿಗೂ ವಯಸ್ಸಾಯಿತು ಎಂದು ಸೂಚಿಸುವ ಬದಲಾವಣೆಯಾದರೂ ಮಹಿಳೆಯರಲ್ಲಿ ಕಾಣಿಸುವ ಮೆನೋಪಾಸ್ ಇದಲ್ಲ.
Vijaya Karnataka Web Stress man


ಹೌದು, ಮೆನೋಪಾಸ್‌ ಕೇವಲ ಮಹಿಳೆಯರನ್ನಷ್ಟೇ ಕಾಡುವುದಿಲ್ಲ. ಪುರುಷರಲ್ಲಿ ಹೆಚ್ಚು ಕಮ್ಮಿ 40ರ ನಂತರ ಕಾಡಲು ಆರಂಭಿಸುತ್ತದೆ. ಸಾಮಾನ್ಯವಾಗಿ 40ರಿಂದ 60ರ ವಯಸ್ಸನ್ನು ಮೇಲ್ ಮೆನೋಪಾಸ್ ಅವಧಿ ಅನ್ನಬಹುದು. ಆದರೆ ಜೀವನ ಶೈಲಿ ಬದಲಾವಣೆ, ವಾತಾವರಣದಿಂದ ಇನ್ನೂ ಮೊದಲೇ ಇದು ಬರಬಹುದು.

ಪುರುಷರಲ್ಲಿ ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಆ ಹಂತದಲ್ಲಿದ್ದರೂ ಅದು ಗಮನಕ್ಕೆ ಬಾರದೇ ಹೋಗಬಹುದು. ಯಾವತ್ತೂ ಇಲ್ಲದ ಆಯಾಸ, ವಿಪರೀತ ಕಾಡುವ ಒತ್ತಡ, ಲೈಂಗಿಕ ಬದುಕು ಮುಗಿದೇ ಹೋಯಿತು ಅನ್ನುವ ಭಾವ ಇನ್ನೇನೂ ಉಳಿದಿಲ್ಲ ಅನ್ನುವ ಮಟ್ಟಿಗೆ ಸತಾಯಿಸುತ್ತದೆ.

ಪುರುಷರಲ್ಲಿ ಮೆನೋಪಾಸ್ ಸಾಮಾನ್ಯ ಲಕ್ಷಣಗಳೆಂದರೆ

ಜ್ಞಾಪಕಶಕ್ತಿ ಕುಂಠಿತವಾಗುತ್ತದೆ. ಗ್ರಹಿಕೆ ಸಾಮಾರ್ಥ್ಯದಲ್ಲಿ ನಿಧಾನ, ಗಮನ ಕೇಂದ್ರಿಕರಣ ಕಷ್ಟ, ದೇಹದ ಎತ್ತರದಲ್ಲಿ ಕುಗ್ಗುವಿಕೆ, ಲೈಂಗಿಕ ಆಸಕ್ತಿ ಕಮ್ಮಿ ಅಥವಾ ಉದ್ದೀಪನ ಪ್ರಕ್ರಿಯೆಯಲ್ಲಿ ನಿಧಾನವಾಗಬಹುದು. ಕೆಲವು ಪುರುಷರಲ್ಲಿ ಆಯಾಸ, ಒತ್ತಡ, ಅಶಕ್ತತೆ, ಲೈಂಗಿಕ ಸಮಸ್ಯೆ ಕಂಡು ಬರುತ್ತದೆ. ಆದರೆ ಇದು ಇತರೇ ರೋಗದ ಲಕ್ಷಣವೂ ಇರಬಹುದು. ಅಗತ್ಯವಿದ್ದರೆ ಟೆಸ್ಟೋಸ್ಟೆರಾನ್‌ ಬದಲಿ ಥೆರಪಿ ನೀಡಬಹುದು. ಲೈಂಗಿಕ ಆಸಕ್ತಿ ಕಳೆದುಕೊಳ್ಳುವಿಕೆ, ಖಿನ್ನತೆ, ಆಲಸ್ಯಕ್ಕೆ ಚಿಕಿತ್ಸೆ ನೀಡಬಹುದು. ಆದರೆ ಇದರಿಂದ ಅಡ್ಡ ಪರಿಣಾಮ ಉಂಟಾಗಬಹುದು.

ಹಾಗಂತ ಇದೇನು ರೋಗವಲ್ಲ. ದೇಹಕ್ಕೆ ವಯಸ್ಸಾದಂತೆ ಉಂಟಾಗುವ ಬದಲಾವಣೆಯಷ್ಟೆ. ಮೇಲ್ ಮೆನೋಪಾಸ್ ತಲುಪಿದ ನಂತರ ಸಂತಾನೋತ್ಪತ್ತಿ ಅಸಾಧ್ಯ ಅಂತಲ್ಲ. ಆದರೆ ಪ್ರಮಾಣ ಕಡಿಮೆಯಾಗಬಹುದಷ್ಟೆ.

ಹೀಗೆ ಮಾಡಿ


ನಿಯಮಿತ ವ್ಯಾಯಾಮ ಮಾಡಿ.

ಪೌಷ್ಟಿಕ ಆಹಾರ ಸೇವಿಸಿ.

ಕೊಬ್ಬಿನ ಅಂಶ ಇರುವ ಆಹಾರ ಸೇವನೆಯಿಂದ ದೂರ ಇರಿ.

ಬೇಳೆ, ತರಕಾರಿ, ಹಣ್ಣು, ಮೊಳಕೆಕಾಳು, ಮೊಸರು ನಿತ್ಯದ ಆಹಾರದಲ್ಲಿರಲಿ.

ಧನಾತ್ಮಕ ಚಿಂತನೆ ರೂಪಿಸಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ