ಆ್ಯಪ್ನಗರ

ಶೀತ, ಕೆಮ್ಮು ಇವುಗಳಿಗೆ ರಾಮಬಾಣ ಈ ಶುಂಠಿ ಮತ್ತು ಬೆಲ್ಲದ ಉಂಡೆ!

ಬೇಸಿಗೆಕಾಲ ಬರುತ್ತಿದ್ದಂತೆ ನಿಮಗೆ ಮೈಯಲ್ಲಿ ಹುಷಾರಿಲ್ಲವೇ? ತಕ್ಷಣ ಈ ಲಾಡು ಮಾಡಿಕೊಂಡು ತಿಂದುಬಿಡಿ. ಆಗ ನಿಮ್ಮ ಚೈತನ್ಯ ಹೇಗೆ ಹೆಚ್ಚುತ್ತದೆ ನೀವೇ ನೋಡಿ!

Produced byಮನೋಹರ್ ಶೆಟ್ಟಿ | Vijaya Karnataka Web 18 Jul 2023, 3:24 pm
ಜನವರಿ ಕಳೆದ ನಂತರ ಫೆಬ್ರವರಿ ಬಂದ ಹಾಗೆ ಚಳಿಗಾಲ ಕಳೆದ ನಂತರ ಬೇಸಿಗೆ ಕಾಲ ಬರುವ ಸಮಯ ಇದು. ಅಂದರೆ ವಾತಾವರಣದಲ್ಲಿ ಸಂಪೂ ರ್ಣವಾಗಿ ಬದಲಾವಣೆಯಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ಪ್ರಭಾವ ಬೀರದೆ ಇರುತ್ತಾ? ಖಂಡಿತ ಹಲವರಿಗೆ ಈ ಸಂದರ್ಭದಲ್ಲಿ ಹುಷಾರು ತಪ್ಪುತ್ತದೆ. ಹೆಚ್ಚಿನವರಿಗೆ ಶೀತ, ಕೆಮ್ಮು, ನೆಗಡಿ, ಜ್ವರ ಕಾಡುತ್ತದೆ.
Vijaya Karnataka Web have this super food jaggery ginger ladoo to protect your health from season changing
ಶೀತ, ಕೆಮ್ಮು ಇವುಗಳಿಗೆ ರಾಮಬಾಣ ಈ ಶುಂಠಿ ಮತ್ತು ಬೆಲ್ಲದ ಉಂಡೆ!


ಆದರೆ ಈ ಸಂದರ್ಭದಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಟೆಕ್ನಿಕ್ ಗೊತ್ತಿದ್ದರೆ, ನಮ್ಮ ರೋಗ ನಿರೋಧಕ ಶಕ್ತಿಯನ್ನು ನಾವು ಬಲಪಡಿಸಿಕೊಳ್ಳಬಹುದು ಮತ್ತು ನಮ್ಮ ದೇಹವನ್ನು ಕಾಯಿಲೆಗಳಿಂದ ಸುರಕ್ಷತೆಯಿಂದ ಕಾಪಾಡಿಕೊಳ್ಳಬಹುದು....

ಶೀತ, ಕೆಮ್ಮಿನ ಸಮಸ್ಯೆಗೆ ಶುಂಠಿ ಮತ್ತು ಬೆಲ್ಲ ಉಂಡೆ!

View this post on Instagram A post shared by Dr.Khatri's Shashwat Ayurvedam (@vaidya_mihir_khatri)

ಆಯುರ್ವೇದ ತಜ್ಞರ ಪ್ರಕಾರ

  • ಈ ಬಗ್ಗೆ ಆಯುರ್ವೇದ ತಜ್ಞರಾದ ಮಿಹಿರ್ ಕತ್ರಿ ರೋಗನಿ ರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಒಂದು ಅದ್ಭುತ ಲಾಡು ತಯಾರಿಸಿ ತಿನ್ನಬೇಕು ಎಂದು ಹೇಳುತ್ತಾರೆ. ಅಂದ ಹಾಗೆ ಇದು ಯಾವ ಲಾಡು ಗೊತ್ತಾ? ಶುಂಠಿ ಮತ್ತು ಬೆಲ್ಲದ ಲಾಡು!
  • ಇದನ್ನು ವೈದ್ಯರು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಮಕ್ಕಳಿಗೆ, ದೊಡ್ಡವರಿಗೆ ಮತ್ತು ವಯಸ್ಸಾದವರಿಗೆ ಈ ಸಮಯದಲ್ಲಿ ಆರೋಗ್ಯಕ್ಕೆ ತುಂಬಾ ಬೆಸ್ಟ್ ಎಂದು ಹೇಳುತ್ತಾರೆ.​

ಲಾಡು ತಯಾರು ಮಾಡಲು ಬೇಕಾಗಿರುವ ಸಾಮಗ್ರಿಗಳು

  • ಒಣಗಿದ ಶುಂಠಿ ಪುಡಿ
  • ಬೆಲ್ಲ
  • ಅಪ್ಪಟ ಹಸುವಿನ ತುಪ್ಪ​

ಇದನ್ನು ತಯಾರಿಸುವ ವಿಧಾನ

ಈ ಮೇಲಿನ ಮೂರು ಪದಾರ್ಥಗಳನ್ನು ಒಂದು ಬೌಲ್ ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ ಗೋಲಿ ಆಕಾರದಲ್ಲಿ ಉಂಡೆ ಮಾಡಿ ಶೇಖರಿಸಿ ಇಟ್ಟುಕೊಂಡು ಸೇವಿಸಬಹುದು.

ದೇಹದ ಮೇಲೆ ಇದರ ಪ್ರಭಾವ

  • ಯಾವ ಮಕ್ಕಳಿಗೆ ಅಲರ್ಜಿ, ಶೀತ, ಕೆಮ್ಮು, ವೈರಲ್ ಸೋಂಕುಇರುತ್ತದೆ ಅವರಿಗೆ ಇದು ಬೆಸ್ಟ್ ಎಂದು ಡಾಕ್ಟರ್ ಹೇಳುತ್ತಾರೆ.
  • ಸೋಂಕು ನಿವಾರಣೆ ಮಾಡುವುದರ ಜೊತೆಗೆ ಶೀತದ ಸಮಸ್ಯೆಗಳಿಂದ ಬಹಳ ಬೇಗನೆ ಮುಕ್ತಿ ಕೊಡುತ್ತದೆ.
  • ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಜೀರ್ಣತೆ, ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.
  • ನಿಮಗೆ ಸುಸ್ತಾದಂತೆ ಅಥವಾ ಆಯಾಸವಾದಂತೆ ಇದ್ದರೆ, ತಕ್ಷಣ ನಿಮಗೆ ಶಕ್ತಿ ಕೊಡುತ್ತದೆ.

ಇದನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?

ಪ್ರತಿದಿನ ಒಂದನ್ನು ಅಥವಾ ದಿನದಲ್ಲಿ ಎರಡನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಹಸಿ ಶುಂಠಿ ಹಾಗೂ ಒಣ ಶುಂಠಿಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ

ಇದರಲ್ಲಿರುವ ಉತ್ಪನ್ನಗಳ ಬಗ್ಗೆ ಒಂದಿಷ್ಟು ಮಾಹಿತಿ

  • ಆಯುರ್ವೇದ ತಜ್ಞರಾದ ಡಾ. ದೀಕ್ಷಾ ಭಾವಸಾರ್ ಹೇಳುವ ಪ್ರಕಾರ ಬೆಲ್ಲ ಮತ್ತು ಒಣಗಿದ ಶುಂಠಿ ಶೀತದ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಕೆಲಸ ಮಾಡುತ್ತದೆ.
  • ಅಷ್ಟೇ ಅಲ್ಲದೆ ಒಣಗಿದ ಶುಂಠಿ ಆಯುರ್ವೇದ ಶಾಸ್ತ್ರದಲ್ಲಿ ದೇಹದ ಕಫ ದೋಷದ ಪ್ರಭಾವವನ್ನು ಕಡಿಮೆ ಮಾಡುತ್ತದೆ.
  • ಹಾಗಾಗಿ ಇದು ಮೇಲಿನ ಆರೋಗ್ಯ ಸಮಸ್ಯೆಗಳಿಗೆ ಮತ್ತು ಉಸಿರಾಟ ತೊಂದರೆಗೆ ಅತ್ಯುತ್ತಮ ನೈಸರ್ಗಿಕ ಔಷಧಿ ಎಂದು ಹೆಸರು ಪಡೆದಿದೆ.
  • ಜೊತೆಗೆ ತುಪ್ಪ ದೇಹಕ್ಕೆ ತಂಪು ಪ್ರಭಾವವನ್ನು ನೀಡು ತ್ತದೆ. ದೀರ್ಘಕಾಲದ ನೆಗಡಿ, ಶೀತ, ಕೆಮ್ಮು ಇವುಗಳಿಗೆ ರಾಮಬಾಣ ವಾಗಿ ಈ ಲಾಡು ನೆರವಿಗೆ ಬರುತ್ತದೆ.

All Image Courtesy: Istock

ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ