ಆ್ಯಪ್ನಗರ

ತಾಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ಪ್ರತಿ ವರ್ಷದಂತೆ ಈ ವರ್ಷದ ಬೇಸಿಗೆಯಲ್ಲೂ ಮಾರುಕಟ್ಟೆಗೆ ಆರೋಗ್ಯಕರವಾದ, ಹೆಚ್ಚು ಪೌಷ್ಠಿಕಾಂಶವುಳ್ಳ, ಬೇಸಿಗೆ ಹಣ್ಣು ‘ತಾಳೆ’ ಬಂದಿದೆ. ಮತ್ತೇಕೆ ತಡ, ತಾಜಾ ತಾಳೆ ಹಣ್ಣನ್ನು ಖರೀದಿಸಿ, ಸೇವಿಸಿ.

Vijaya Karnataka Web 29 Apr 2021, 1:35 pm
ಬೇಸಿಗೆ ಬಂತೆಂದರೆ ಕಲ್ಲಂಗಡಿಯ ಜೊತೆಗೆ ನೆನಪಾಗುವ ಇನ್ನೊಂದು ತಂಪು ಹಣ್ಣು ತಾಳೆ ಹಣ್ಣು. ಇದು ದಕ್ಷಿಣ ಭಾರತದಲ್ಲಿ ಕಂಡುಬರುವ ಒಂದು ಜನಪ್ರಿಯ ಹಣ್ಣು. ಐಸ್ ಆಪಲ್ ಎಂದೂ ಕರೆಯಲ್ಪಡುವ ಇದನ್ನು ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
Vijaya Karnataka Web health benefits of eating ice apple
ತಾಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು


ಬಹಳ ರುಚಿಯಾಗಿರುವ ತಾಳೆ ಹಣ್ಣು ದೇಹವನ್ನು ತಂಪಾಗಿಸುವುದಲ್ಲದೆ, ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣುಗಳಲ್ಲಿ ಇದು ಒಂದಾಗಿದೆ. ಹಾಗಾದರೆ ಬನ್ನಿ ಈ ಹಣ್ಣಿನ ಆರೋಗ್ಯ ಪ್ರಯೋಜನಗಳು ಏನೆಂದು ತಿಳಿಯೋಣ. ತಾಳೆ ಹಣ್ಣು ಅಗತ್ಯವಾದ ಪೋಷಕಾಂಶಗಳಾದ ಕಾರ್ಬೋಹೈಡ್ರೇಟ್’ಗಳು, ಫೈಟೊನ್ಯೂಟ್ರಿಯೆಂಟ್ಸ್ ಮತ್ತು ಕ್ಯಾಲ್ಸಿಯಂನಿಂದ ಕೂಡಿದೆ.

ಕಡಿಮೆ ಕ್ಯಾಲೋರಿ ಹೊಂದಿರುವ ತಾಳೆ ಹಣ್ಣಿನಲ್ಲಿ ಫೈಬರ್, ಪ್ರೋಟೀನ್ ಮತ್ತು ವಿಟಮಿನ್ ಸಿ, ಎ, ಇ ಮತ್ತು ಕೆ ಕೂಡ ಇದೆ. ಅಷ್ಟೇ ಅಲ್ಲ, ಇದು ಕಬ್ಬಿಣ, ಪೊಟ್ಯಾಶಿಯಂ, ಸತು ಮತ್ತು ರಂಜಕದಂತಹ ಖನಿಜಗಳನ್ನು ಹೊಂದಿದೆ. ಒಟ್ಟಾರೆ ಇದನ್ನು ‘ಪರಿಪೂರ್ಣ ಹಣ್ಣು’ ಎಂದು ಪರಿಗಣಿಸುವುದರಲ್ಲಿ ಆಶ್ಚರ್ಯವಿಲ್ಲ ಬಿಡಿ. ನಿಮ್ಮ ಬೇಸಿಗೆ ಆಹಾರದಲ್ಲಿ ಈ ಹಣ್ಣನ್ನು ಸೇವಿಸಲು 8 ಕಾರಣಗಳು ಇಲ್ಲಿವೆ ನೋಡಿ…

​ನಿರ್ಜಲೀಕರಣವನ್ನು ನೈಸರ್ಗಿಕವಾಗಿ ಎದುರಿಸಬಹುದು

ತಾಳೆ ಹಣ್ಣು ದೇಹವನ್ನು ನೈಸರ್ಗಿಕವಾಗಿ ಹೈಡ್ರೇಟ್ ಮಾಡುವ ಅತ್ಯುತ್ತಮ ತಂಪಾದ ಹಣ್ಣು. ಬೇಸಿಗೆಯ ಬೇಗೆಯ ದಿನಗಳು ಸಾಕಷ್ಟು ಅನಾನುಕೂಲ ವಾತವರಣವನ್ನು ಸೃಷ್ಟಿ ಮಾಡುತ್ತವೆ. ಈ ದಿನಗಳಲ್ಲಿ ದೇಹ ನಿರ್ಜಲೀಕರಣವಾಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ತಾಳೆ ಹಣ್ಣು ದೇಹಕ್ಕೆ ತಂಪು ನೀಡುತ್ತದೆ. ನಿರ್ಜಲೀಕರಣವನ್ನು ನೈಸರ್ಗಿಕವಾಗಿ ಎದುರಿಸಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ತಾಳೆ ಹಣ್ಣು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರೋಗಗಳಿಂದ ದೂರವಿರಲು ಜೀವಸತ್ವಗಳು ಮತ್ತು ಖನಿಜಗಳು ಬೇಕಾಗುತ್ತವೆ. ತಾಳೆಹಣ್ಣು ಅನೇಕ ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದ್ದು, ನೀವಿದನ್ನು ಸೇವಿಸುವುದು ಒಳ್ಳೆಯದು.

​ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ

ತಾಳೆ ಹಣ್ಣು ಹೊಟ್ಟೆಯ ಕಾಯಿಲೆಗಳು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುತ್ತದೆ. ನೀವು ನಿಯಮಿತವಾಗಿ ಮಲಬದ್ಧತೆ, ಉಬ್ಬುವುದು ಮತ್ತು ವಾಕರಿಕೆ ಮುಂತಾದ ಹೊಟ್ಟೆಯ ಕಾಯಿಲೆಗಳನ್ನು ಎದುರಿಸಿದರೆ ತಾಳೆ ಹಣ್ಣನ್ನು ಸೇವಿಸುವುದು ಒಳ್ಳೆಯದು. ಏಕೆಂದರೆ ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಇಂತಹ ಸಮಸ್ಯೆಗಳನ್ನು ಗುಣಪಡಿಸಲು ಇದು ನೈಸರ್ಗಿಕ ಪರಿಹಾರವಾಗಿದೆ.

ಲಿಚ್ಚಿ ಹಣ್ಣು ಸೇವಿಸುವುದರಿಂದಾಗುವ ಲಾಭಗಳು ಏನು ಗೊತ್ತಾ?

​ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ

ತಾಳೆ ಹಣ್ಣು ನಿಮಗೆ ಹೆಚ್ಚು ವಯಸ್ಸಾದಂತೆ ಕಾಣುವುದನ್ನು ನಿಧಾನಗೊಳಿಸುತ್ತದೆ. ಹೌದು, ತಾಳೆ ಹಣ್ಣಿನಲ್ಲಿ ಬಲವಾದ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಫೈಟೊಕೆಮಿಕಲ್ಸ್ ಇರುವುದರಿಂದ ವಯಸ್ಸಾದಂತೆ ಕಾಣುವುದನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವು ಸ್ವತಂತ್ರ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ದದ್ದುಗಳನ್ನು ಗುಣಪಡಿಸುತ್ತದೆ

ಬೇಸಿಗೆಯಲ್ಲಿ ಚರ್ಮದ ಸಾಮಾನ್ಯ ಸಮಸ್ಯೆಗಳಾಗಿರುವ ಚರ್ಮದ ದದ್ದುಗಳು ಮತ್ತು ಬರ್ನ್ಸ್’ನಿಂದ ಬಳಲುತ್ತಿದ್ದರೆ, ತಾಳೆ ಹಣ್ಣನ್ನು ಗಾಯವಾಗಿರುವ ಜಾಗದಲ್ಲಿ ಹಚ್ಚುವುದರಿಂದ ಚರ್ಮಕ್ಕೆ ಕಿರಿಕಿರಿ ಉಂಟಾಗುವುದನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ಗಾಯವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

​ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ

ವಿಶೇಷವಾಗಿ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ತಾಳೆ ಹಣ್ಣು ತೂಕ ಇಳಿಸಿಕೊಳ್ಳುವವರಿಗೆ ಸಹಾಯ ಮಾಡುವ ಸಾಮರ್ಥ್ಯ ಹೊಂದಿದೆ. ಈ ಹಣ್ಣಿನಲ್ಲಿರುವ ನೀರಿನ ಅಂಶವು ದೇಹವು ಹೊಟ್ಟೆ ತುಂಬಿದಂತೆ ಭಾವನೆಯನ್ನು ಉಂಟು ಮಾಡುತ್ತದೆ. ಇದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಕಡಿಮೆ ಕ್ಯಾಲೋರಿ ಹಣ್ಣಾಗಿದ್ದು, ನಿಮಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

ಖಾಲಿ ಹೊಟ್ಟೆಯಲ್ಲಿ ಮಾವಿನ ಹಣ್ಣನ್ನು ಸೇವಿಸುತ್ತಿದ್ದೀರಾ?, ಹಾಗಿದ್ದರೆ ಇದನ್ನು ಓದ್ಲೇ ಬೇಕು

​ಗರ್ಭಿಣಿ ಮಹಿಳೆಯರಿಗೆ ಬಹಳ ಒಳ್ಳೆಯದು

ಗರ್ಭಾವಸ್ಥೆಯಲ್ಲಿ ಹೊಟ್ಟೆ ನೋವು ಮತ್ತು ಸೆಳೆತ ಸಾಮಾನ್ಯವಾಗಿದೆ. ನಿಮ್ಮ ಆಹಾರದಲ್ಲಿ ತಾಳೆ ಹಣ್ಣನ್ನು ಸೇರಿಸುವುದರಿಂದ ಸಣ್ಣ ಜೀರ್ಣಕಾರಿ ಸಮಸ್ಯೆಗಳನ್ನು ಸರಾಗಗೊಳಿಸುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ವಾಕರಿಕೆ ಭಾವನೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ತುಂಬಾ ಪೌಷ್ಟಿಕವಾದ ಹಣ್ಣಾಗಿದ್ದು, ಹಾಲುಣಿಸುವ ತಾಯಂದಿರ ಎದೆ ಹಾಲಿನ ಗುಣಮಟ್ಟವನ್ನು ಸುಧಾರಿಸುತ್ತದೆ.

​ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ

ತಾಳೆ ಹಣ್ಣುಗಳಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದೆ. ಇದು ಯಕೃತ್ತನ್ನು ಹಾನಿಯಾಗದಂತೆ ರಕ್ಷಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ನಿಮ್ಮ ದೇಹದಲ್ಲಿರುವ ವಿಷವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಇದು ಯಕೃತ್ತಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಆದ್ದರಿಂದ ಹೆಣ್ಣುಮಕ್ಕಳು ಈ ಬೇಸಿಗೆಯಲ್ಲಿ ತಾಳೆ ಹಣ್ಣನ್ನು ಸೇವಿಸಿ, ದೇಹವನ್ನು ಹೈಡ್ರೇಟ್ ಆಗಿಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ