ಆ್ಯಪ್ನಗರ

ಮಾನಸಿಕ ಆರೋಗ್ಯಕ್ಕೆ ಮಾರಕ ಶೂಟಿಂಗ್‌ ಸಂಬಂಧಿ ಗೇಮ್‌

ಎಲ್ಲಾ ವಯಸ್ಸಿನವರನ್ನು ಸೆಳೆಯುವ ಶೂಟಿಂಗ್‌ ಸಂಬಂಧಿ ಗೇಮ್‌ ಇದೀಗ ಮಕ್ಕಳಲ್ಲಿ ಚಟವನ್ನು ಉಂಟು ಮಾಡುತ್ತಿದ್ದು, ಈ ಸಂಬಂಧ ಹಲವು ಪ್ರಕರಣಗಳು ವರದಿಯಾಗುತ್ತಿವೆ.

Vijaya Karnataka 27 Sep 2018, 10:46 am
ವರ್ಣರಂಜಿತ ಕಾರ್ಟೂನ್‌, ಗ್ರಾಫಿಕ್ಸ್‌ಗಳನ್ನು ಒಳಗೊಂಡ ಈ ಆಟಗಳು ಯಥೇಚ್ಚವಾಗಿ ಗಮನ ಸೆಳೆಯುತ್ತಿವೆ. ಶೂಟಿಂಗ್‌ ಗೇಮ್‌ಗಳು ಎಂದು ಕರೆಸಿಕೊಳ್ಳುವ ಇವು ಆಸಕ್ತಿಯನ್ನು ಕೆರಳಿಸುತ್ತಲೇ ಹೋಗುತ್ತವೆ. ಯಥೇಚ್ಛವಾಗಿ ಡೌನ್‌ಲೋಡ್‌ ಆಗುತ್ತಿರುವ ಬ್ಯಾಟಲ್‌ ರಾಯಲ್‌ ಗೇಮ್‌ಗಳು ವ್ಯಾಪಾಕವಾಗಿ ಸೆಳೆಯುತ್ತಿವೆ. ಚಟದ ಹಂತಕ್ಕೆ ಕರೆದೊಯ್ಯುವ ಈ ಆಟಗಳು ಹಿಂಸೆಯನ್ನು ಪ್ರಚೋದಿಸದಿದ್ದರೂ ಮೋಜು ನೀಡುವ ಮೂಲಕ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.
Vijaya Karnataka Web health bit
ಮಾನಸಿಕ ಆರೋಗ್ಯಕ್ಕೆ ಮಾರಕ ಶೂಟಿಂಗ್‌ ಸಂಬಂಧಿ ಗೇಮ್‌

ಡಿಜಿಟಲ್‌ ಡಿ ಆ್ಯಡಿಕ್ಷನ್‌ ಕ್ಲಿನಿಕ್‌ಗಳಿಗೆ ಬರುವ ಪ್ರಕರಣಗಳಲ್ಲಿ ಕೆಲವು ಇಂತಹ ಗೇಮ್‌ ಸಂಬಂಧಿ ಚಟಗಳನ್ನು ಒಳಗೊಂಡಿರುತ್ತವೆ. ಬೆಂಗಳೂರು ನಗರವೊಂದರಲ್ಲೇ ಪ್ರತಿ ತಿಂಗಳು 4-5 ಪ್ರಕರಣಗಳು ದಾಖಲಾಗುತ್ತಿದ್ದು, ಮಕ್ಕಳು ಶæೖಕ್ಷಣಿಕವಾಗಿ ಹಿಂದುಳಿಯುವಂತಹ, ಮಾನಸಿಕ ಒತ್ತಡಕ್ಕೆ ಒಳಗಾಗುವ ಪ್ರಕರಣಗಳು ವರದಿಯಾಗುತ್ತಿವೆ.
ಗುರುತಿಸಿ
ಆಟಕ್ಕೆ ಅಂಟಿಕೊಳ್ಳುವ ಮಕ್ಕಳು ಹೆಚ್ಚು ಹೊತ್ತು ಆನ್‌ಲೈನ್‌ನಲ್ಲಿ ಕಳೆಯುತ್ತಾರೆ. ಶಾಲೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ಲಕ್ಷಿಸುತ್ತಾರೆ. ಕುಟುಂಬವನ್ನು ನಿರ್ಲಕ್ಷಿಸುವುದು, ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ಆರಂಭವಾಗುತ್ತÜವೆ ಎಂದು ಹೇಳಲಾಗಿದೆ.
ಪೋಷಕರು ಎಚ್ಚರ
ಅತಿಯಾಗಿ ಮಕ್ಕಳು ಆಡುವ ಆಟಗಳ ಮೇಲೆ ಗಮನವಿರಲಿ. ಏನನ್ನು ಆಡುತ್ತಿದ್ದಾರೆ, ಯಾವ ಆಟದಲ್ಲಿ ಹೆಚ್ಚು ತಲ್ಲೀನರಾಗುತ್ತಾರೆ ಎಂಬ ಅರಿವು ಇರಲಿ. ಶೈಕ್ಷಣಿಕ ಸಂಗತಿಗಳಲ್ಲಿ ಹಿಂದುಳಿದಿದ್ದರೆ ಅದರ ಹಿಂದಿನ ಕಾರಣ ತಿಳಿದುಕೊಳ್ಳಿ. ರಾತ್ರಿ ನಿದ್ರೆ ಗೆಡುತ್ತಿದ್ದರೆ, ನಡತೆಯಲ್ಲಿ ಬದಲಾಗಿದ್ದರೆ, ಮಾನಸಿಕ ಸಮತೋಲನ ಕಳೆದುಕೊಂಡಿದ್ದರೆ ಖಂಡಿತವಾಗಲೂ ತಜ್ಞರ ಸಲಹೆ ಪಡೆಯಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ