ಆ್ಯಪ್ನಗರ

ಹೈ ಬಿಪಿ ಸಮಸ್ಯೆ ಇದ್ದರೆ ಈ ಉಸಿರಾಟದ ವ್ಯಾಯಾಮಗಳು ನಿಮಗೆ ಹೆಲ್ಪ್ ಫುಲ್!

ನಿಮ್ಮ ರಕ್ತದ ಒತ್ತಡವನ್ನು ಹೆಚ್ಚಾಗದಂತೆ ನೋಡಿಕೊಳ್ಳಿ. ಅದಕ್ಕಾಗಿ ವೈದ್ಯರು ಕೊಡುವ ಮಾತ್ರೆಗಳ ಜೊತೆಗೆ ಕೆಲವೊಂದು ಉಸಿರಾಟ ವ್ಯಾಯಾಮಗಳನ್ನು ಸಹ ಮಾಡಿ.

Produced byಮನೋಹರ್ ಶೆಟ್ಟಿ | Vijaya Karnataka Web 29 May 2023, 3:27 pm
ಹುಟ್ಟುವ ಮಗುವಿಗೂ ಬಿಪಿ ಇರುತ್ತದೆ ಎಂದು ಕೇಳಿದ್ದೇವೆ. ಆದರೆ ಅದು ನಾರ್ಮಲ್ ಆಗಿರುತ್ತದೆ. ಮಗುವಿಗೆ ಮನಸ್ಸಿನ ಭಾವನೆಗಳು ಮತ್ತು ಇನ್ನಿತರ ಸಂಕೋಲೆಗಳು ನ್ಯೂಟ್ರಲ್ ಆಗಿರುತ್ತವೆ. ದೊಡ್ಡವ ರಾಗುತ್ತಿದ್ದಂತೆ ನಮ್ಮ ಸುತ್ತಮುತ್ತಲ ಸಂದರ್ಭಗಳು, ನಮ್ಮ ಜೀವನ ಶೈಲಿ, ನಾವು ತಿನ್ನುವ ಆಹಾರ ಎಲ್ಲವೂ ಸಹ ನಮ್ಮ ರಕ್ತದ ಒತ್ತಡವನ್ನು ಏರುಪೇರು ಮಾಡುತ್ತವೆ. ಕೆಲವರಿಗೆ ರಕ್ತದ ಒತ್ತಡ ಹೆಚ್ಚಾಗುತ್ತದೆ ಇನ್ನು ಕೆಲವರಿಗೆ ಕಡಿಮೆಯಾಗುತ್ತದೆ.
Vijaya Karnataka Web high bp can be controlled by these breathing exercises
ಹೈ ಬಿಪಿ ಸಮಸ್ಯೆ ಇದ್ದರೆ ಈ ಉಸಿರಾಟದ ವ್ಯಾಯಾಮಗಳು ನಿಮಗೆ ಹೆಲ್ಪ್ ಫುಲ್!


ಒಂದು ವೇಳೆ ಬಿಪಿ ಹೆಚ್ಚಾದರೆ ಅದರಿಂದ ನಿಮ್ಮ ಹೃದಯ, ಕಿಡ್ನಿ, ಮೆದುಳು ಮತ್ತು ಕಣ್ಣುಗಳು ಹಾನಿಗೆ ಒಳಗಾಗುತ್ತವೆ. ಹಾಗಾಗಿ ಸಾಧ್ಯವಾ ದಷ್ಟು ನಿಮ್ಮ ರಕ್ತದ ಒತ್ತಡವನ್ನು ಆಗಾಗ ಪರೀಕ್ಷೆ ಮಾಡಿಸಿಕೊಂಡು ಅದು ನಾರ್ಮಲ್ ಆಗಿ ಇರುವಂತೆ ನೋಡಿಕೊಳ್ಳಿ. ಇದರ ಹೊರತಾಗಿ ನಿಮ್ಮ ರಕ್ತದ ಒತ್ತಡವನ್ನು ಸಹಜ ಸ್ಥಿತಿಯಲ್ಲಿ ಕಾಪಾಡುವ ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮಗಳು ಇಲ್ಲಿವೆ.

ಉಸಿರಾಟದ ವ್ಯಾಯಾಮಗಳು ಮತ್ತು ಬಿಪಿ

  • ಮನುಷ್ಯನಿಗೆ ಎರಡು ತರಹದ ರಕ್ತದ ಒತ್ತಡಗಳು ಕಾಣಿಸುತ್ತವೆ. ಒಂದು ಸಿಸ್ಟೋಲಿಕ್ ಇನ್ನೊಂದು ಡಯಾಸ್ಟೋಲಿಕ್. ಸಿಸ್ಟೋಲಿಕ್ ಎಂದರೆ ಹೃದಯ ಬಡಿದುಕೊಳ್ಳುವ ಸಂದರ್ಭದಲ್ಲಿ ಉಂಟಾಗುವ ಒತ್ತಡದ ಮಾಪನ.
  • ಡಯಾಸ್ಟೋಲಿಕ್ ಎಂದರೆ ಹೃದಯ ಬಡಿದ ನಂತರದಲ್ಲಿ ಅದು ಸುಮ್ಮನಿದ್ದಾಗ ಉಂಟಾಗುವ ಒತ್ತಡದ ಮಾಪನ.
  • ಇತ್ತೀಚಿನ ಸಂಶೋಧನೆಯೊಂದು ಹೇಳುವ ಹಾಗೆ ಕೇವಲ ಎರಡು ನಿಮಿಷದ ನಿಧಾನವಾದ ಮತ್ತು ಆಳ ವಾದ ಉಸಿರಾಟ ಸಿಸ್ಟೋಲಿಕ್ ಮಾಪನವನ್ನು 8.6mm Hg ಮತ್ತು ಡಯಾಸ್ಟೋಲಿಕ್ ಮಾಪನವನ್ನು 4.9 mm Hg ಅಷ್ಟು ಕಡಿಮೆಗೊಳಿಸುತ್ತದೆ.
  • ಹಾಗಾಗಿ ಆರೋಗ್ಯ ತಜ್ಞರು ಈ ಕೆಳಗಿನ ಮೂರು ಬಗೆ ಯ ಉಸಿರಾಟದ ವ್ಯಾಯಾಮಗಳನ್ನು ರಕ್ತದ ಒತ್ತಡದ ನಿರ್ವಹಣೆಗಾಗಿ ಸೂಚಿಸಿದ್ದಾರೆ.

ಬಿಪಿ ಸಮಸ್ಯೆ ಇದ್ದವರಿಗೆ ಈ ಯೋಗಾಸನಗಳು ಬೆಸ್ಟ್

ಡಯಾಫ್ರಾಗ್ಮ್ಯಾಟಿಕ್ (Diaphragmatic) ಉಸಿರಾಟ

  • ಇದನ್ನು ಹೊಟ್ಟೆಯ ಉಸಿರಾಟ ಎಂದು ಕೂಡ ಕರೆಯುತ್ತಾರೆ. ಮೊದಲಿಗೆ ಆರಾಮವಾಗಿ ಕುಳಿತು ಕೊಳ್ಳಿ. ಈಗ ನಿಮ್ಮ ಒಂದು ಕೈ ತೆಗೆದು ನಿಮ್ಮ ಎದೆಯ ಮೇಲೆ ಇಟ್ಟುಕೊಳ್ಳಿ ಮತ್ತು ಇನ್ನೊಂದನ್ನು ನಿಮ್ಮ ಹೊಟ್ಟೆಯ ಮೇಲೆ ಇಟ್ಟುಕೊಳ್ಳಿ. ಈಗ ನಿಧಾನವಾಗಿ ಮೂಗಿನ ಮೂಲಕ ಉಸಿರಾಡಿ.
  • ಈ ಸಂದರ್ಭದಲ್ಲಿ ಬಾಯಿ ಮುಚ್ಚಿಕೊಂಡಿರಿ. ನಿಧಾನ ವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಿದ್ದಂತೆ ನಿಮ್ಮ ಹೊಟ್ಟೆ ಯಲ್ಲಿ ಗಾಳಿ ತುಂಬಿಕೊಳ್ಳುವಂತೆ ಮಾಡಿ ಮತ್ತು ನಿಮ್ಮ ಎದೆಯನ್ನು ಮಾತ್ರ ಹಾಗೆ ಇಟ್ಟು ಕೊಳ್ಳಿ.
  • ಈಗ ನಿಧಾನವಾಗಿ ಬಾಯಿಯಿಂದ ಉಸಿರನ್ನು ಹೊರಗೆ ಬಿಡಿ. ನೀವು ಉಸಿರನ್ನು ಒಳಗೆ ತೆಗೆದು ಕೊಳ್ಳಲು ತೆಗೆದುಕೊಂಡ ಸಮಯಕ್ಕಿಂತ ಉಸಿರನ್ನು ಹೊರಗೆ ಬಿಡುವ ಸಮಯ ಹೆಚ್ಚಾಗಿರಲಿ.​

ಈ ಉಸಿರಾಟದ ವ್ಯಾಯಾಮಗಳು ಮಾನಸಿಕ ಆತಂಕವನ್ನು ದೂರ ಮಾಡುತ್ತವೆಯಂತೆ

ಸಮವೃತ್ತಿ ಪ್ರಾಣಾಯಾಮ

  • ಸಮವೃತ್ತಿ ಪ್ರಾಣಾಯಾಮವನ್ನು ಈ ರೀತಿ ಮಾಡ ಬಹುದು. ಒಂದು ಕಡೆ ಆರಾಮವಾಗಿ ಕುಳಿತುಕೊಂಡು ಬಾಯಿಯಿಂದ ಉಸಿರನ್ನು ಹೊರಗೆ ಬಿಡಬೇಕು.
  • ಈಗ ಬಾಯಿಯನ್ನು ಮುಚ್ಚಿಕೊಂಡು ನಿಧಾನವಾಗಿ ಉಸಿ ರನ್ನು ಒಳಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ನಾಲ್ಕು ಎಣಿಕೆ ಯನ್ನು ಮಾಡಿ.
  • ಅದೇ ರೀತಿ ಉಸಿರನ್ನು ಹಿಡಿದು ಕೊಂಡಿರುವ ಸಮ ಯದಲ್ಲೂ ಸಹ ನಾಲ್ಕು ಎಣಿಕೆ ಮಾಡಿ. ಈಗ ಉಸಿ ರನ್ನು ಹೊರಗೆ ಬಿಡುವ ಸಂದರ್ಭದಲ್ಲಿ ಮತ್ತೆ ನಾಲ್ಕು ಎಣಿಕೆ ಮಾಡಿ.​

4-7-8 ವ್ಯಾಯಾಮ!

  • ಇದಂತೂ ನಿಮ್ಮ ರಕ್ತದ ಒತ್ತಡದ ವಿಷಯದಲ್ಲಿ ಮ್ಯಾಜಿಕ್ ಮಾಡುತ್ತದೆ ಎಂದು ಹೇಳಬಹುದು. ಈ ವ್ಯಾಯಾಮವನ್ನು ಈ ರೀತಿ ಪ್ರಾಕ್ಟೀಸ್ ಮಾಡಿ.
  • ಅದೇನೆಂದರೆ ಆರಾಮಾಗಿ ಒಂದು ಕಡೆ ಕುಳಿತು ಕೊಂಡು ನಿಧಾನವಾಗಿ ನಿಮ್ಮ ಬಾಯಿಂದ ಉಸಿರನ್ನು ಹೊರಗೆ ಬಿಡಿ.
  • ಈಗ ಬಾಯಿ ಮುಚ್ಚಿಕೊಂಡು ನಾಲ್ಕು ಸೆಕೆಂಡುಗಳಲ್ಲಿ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಏಳು ಸೆಕೆಂಡ್ಗಳ ಕಾಲ ಉಸಿರನ್ನು ಹಾಗೆ ಬಿಗಿ ಹಿಡಿದು ಒತ್ತಡ ವಾಗಿ ಬಾಯಿಯಿಂದ ಎಂಟು ಸೆಕೆಂಡುಗಳ ಕಾಲದಲ್ಲಿ ಉಸಿರನ್ನು ಹೊರಗೆ ಬಿಡಿ.

ಬಿಪಿ ಕಾಯಿಲೆ ಇದ್ಯಾ? ಹಾಗಾದ್ರೆ ಈ ಯೋಗಾಸನಗ ಳನ್ನು ದಿನಾ ಪ್ರ್ಯಾಕ್ಟೀಸ್ ಮಾಡಿ...

ರಕ್ತದ ಒತ್ತಡವನ್ನು ಕಡಿಮೆ ಮಾಡುವ ಇನ್ನಿತರ ವಿಧಾನಗಳು

  • ತುಂಬಾ ಜನರಿಗೆ ರಕ್ತದ ಒತ್ತಡ ಇರುವ ಸಂದರ್ಭದಲ್ಲಿ ಅದನ್ನು ನಿರ್ವಹಣೆ ಮಾಡಿಕೊಳ್ಳಲು ಔಷಧಿಗಳ ಅಗತ್ಯ ವಿರುತ್ತದೆ. ಹಾಗಾಗಿ ನಿಮ್ಮ ವೈದ್ಯರ ಬಳಿ ರಕ್ತದ ಒತ್ತಡದ ಔಷಧಿಗಳನ್ನು ಕೇಳಿ ಪಡೆಯಿರಿ.
  • ಇದರ ಜೊತೆಗೆ ಜೀವನ ಶೈಲಿಯಲ್ಲಿ ಬದಲಾವಣೆ ಗಳನ್ನು ತಂದುಕೊಳ್ಳುವುದು ಕೂಡ ರಕ್ತದ ಒತ್ತಡ ವನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.
  • ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆಂ ಷನ್ ಸಂಸ್ಥೆ ಹೇಳುವ ಪ್ರಕಾರ ಉತ್ತಮ ಪೌಷ್ಟಿಕಾಂಶ ಹೊಂದಿರುವ ಆಹಾರಗಳನ್ನು ಸೇವಿಸುವುದರಿಂದ, ಉಪ್ಪಿನ ಅಂಶವನ್ನು ಕಡಿಮೆ ಸೇವಿಸುವುದರಿಂದ, ಧೂಮಪಾನ ಮತ್ತು ಮಧ್ಯಪಾನ ಅಭ್ಯಾಸವನ್ನು ಕೈ ಬಿಡುವುದರಿಂದ ನಿಮ್ಮ ರಕ್ತದ ಒತ್ತಡ ನಿಯಂತ್ರಣ ದಲ್ಲಿ ಉಳಿಯುತ್ತದೆ.

Read in English High blood pressure: 3 daily breathing exercises to lower your BP

ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ