ಆ್ಯಪ್ನಗರ

ಸರ್ವಿಕಲ್‌ ಸ್ಪಾಂಡಿಲೋಸಿಸ್‌ ಸಮಸ್ಯೆ ನಿವಾರಣೆಗೆ ಮನೆ ಮದ್ದು

ಸರ್ವಿಕಲ್‌ ಸ್ಪಾಂಡಿಲೋಸಿಸ್‌ ಸಮಸ್ಯೆ ನಿವಾರಣೆಗೆ ನೋವು ನಿವಾರಕ ಮಾತ್ರೆಗಳ ಮೇಲಿನ ಅವಲಂಬನೆ ಅಪಾಯ. ಸಾಧ್ಯವಾದಷ್ಟು ಮನೆ ಮದ್ದು ಸೇವಿಸಿ.

Agencies 6 May 2019, 3:33 pm
ಇತ್ತೀಚೆಗೆ ಸರ್ವಿಕಲ್‌ ಸ್ಪಾಂಡಿಲೋಸಿಸ್‌ ಸಮಸ್ಯೆ ಹೆಚ್ಚುತ್ತಿದೆ. ಆದರೆ ಹಲವರು ಈ ಸಮಸ್ಯೆಯಿಂದ ತಾತ್ಕಾಲಿಕವಾಗಿ ಮುಕ್ತಿ ಹೊಂದಲು ಮಾತ್ರೆಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ. ಆದರೆ ನೋವು ನಿವಾರಕ ಮಾತ್ರೆಗಳು ಮಿದುಳಿನ ನರಗಳ ಮೇಲೆ ಪ್ರಭಾವ ಬೀರಿ ತಾತ್ಕಾಲಿಕವಾಗಿ ನೋವು ಕಾಣದಿರುವಂತೆ ಮಾಡುತ್ತವೆ. ಆದರೆ ಇವುಗಳ ಮೇಲಿನ ಅವಲಂಬನೆ ದೇಹದ ಇತರೇ ಅಂಗಗಳ ಮೇಲೆ ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಪ್ರಾಕೃತಿಕ ಚಿಕಿತ್ಸೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ.
Vijaya Karnataka Web Pain


ಕಾರಣ

ಬೆನ್ನುಮೂಳೆಗೆ ಪೆಟ್ಟು ಬೀಳುವುದು, ಅನಿಯಮಿತ ಭಂಗಿಯಲ್ಲಿ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವುದು, ಅಪಘಾತಗಳಲ್ಲಿ ಕುತ್ತಿಗೆಗೆ ಪೆಟ್ಟು ಮತ್ತು ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದಿರುವುದು, ಯಥೇಚ್ಚವಾಗಿ ಮೊಬೈಲ್‌ ಬಳಕೆ, ಸರಿಯಾದ ಚಾಲನಾ ನಿಯಮಗಗಳನ್ನು ಪಾಲಿಸದೇ ವಾಹನ ಚಲಾಯಿಸುವುದು, ನಿಯಮಿತವಾಗಿ ವ್ಯಾಯಾಮ ಇಲ್ಲದಿರುವಿಕೆ, ಅನಿಯಮಿತ ಜೀವನಶೈಲಿ ಮತ್ತು ಆಹಾರ, ಅತಿಯಾದ ತೂಕ, ವಂಶವಾಹಿನಿ, ಹೆಚ್ಚಿನ ಭಾರವನ್ನು ಕುತ್ತಿಗೆ ಅಥವಾ ತಲೆಯ ಮೇಲೆ ಹೊರುವುದು, ಅತಿಯಾದ ಪ್ರಯಾಣ, ಕುಳಿತು ನಿದ್ದೆ ಮಾಡುವುದು ಪ್ರಮುಖ ಕಾರಣ.

ಲಕ್ಷ ಣಗಳು

ಕುತ್ತಿಗೆಯ ನೋವು, ಕುತ್ತಿಗೆಯ ಮಾಂಸಖಂಡಗಳ ಸೆಳೆತ ಮತ್ತು ಬಿಗಿತ, ಭುಜ ಅಥವಾ ಕೈಗಳಲ್ಲಿ ಮರಗಟ್ಟುವಿಕೆ, ಕುತ್ತಿಗೆಯಿಂದ ನೋವು ಭುಜಗಳು ಮತ್ತು ಕೈಗಳಿಗೆ ಹರಿಯುವುದು, ಪೂರ್ಣ ಒಂದು ಕೈಯಲ್ಲಿ ಅಸಹಜ ಸಂವೇದನೆ, ಕೈಯಿಂದ ಬರೆಯಲು ಮತ್ತು ವಸ್ತುವನ್ನು ಹಿಡಿದುಕೊಳ್ಳಲು ತೊಂದರೆಯೆನಿಸುವುದು, ಕಾಲಿನಲ್ಲಿ ನೋವು ಕಾಣಿಸಿಕೊಳ್ಳುವುದು ಮತ್ತು ನಡೆಯಲು ಕಷ್ಟವಾಗುವುದು, ಕುತ್ತಿಗೆ, ಭುಜ ಮತ್ತು ಕೈಗಳಲ್ಲಿ ನಿಶ್ಯಕ್ತಿಯ ಅನುಭವ, ಕುತ್ತಿಗೆಯ ಚಲನೆಯಲ್ಲಿ ನೋವು ಕಾಣಿಸಿಕೊಳ್ಳುವುದು, ಕೈಗಳಲ್ಲಿ ಸ್ಪರ್ಶ ಜ್ಞಾನ ಕಡಿಮೆಯಾಗುವುದು.

ಹೀಗೆ ಮಾಡಿ

ಬೆಳ್ಳುಳ್ಳಿ ಎಸಳನ್ನು ಎಳ್ಳೆಣ್ಣೆಯಲ್ಲಿ ಹಾಕಿ ಕಾಯಿಸಿ ನೋವಿನ ಭಾಗಕ್ಕೆ ಹಚ್ಚುವುದರಿಂದ ನೋವು ಶಮನವಾಗುತ್ತದೆ.

ಪ್ರತಿದಿನ ಎಳ್ಳು ಮತ್ತು ಬೆಲ್ಲದಿಂದ ತಯಾರಿಸಿದ ಉಂಡೆಯನ್ನು ತಿನ್ನುವುದರಿಂದ ದೇಹಕ್ಕೆ ಕ್ಯಾಲ್ಷಿಯಂ ಒದಗಿಸುತ್ತದೆ.

ತೀವ್ರ ನೋವು ಮತ್ತು ಜೋಮಿಗೆ ಸಾಸಿವೆ ಎಣ್ಣೆ ಮತ್ತು ಎಳ್ಳೆಣ್ಣೆಯಯ ಮಿಶ್ರಣವನ್ನು ಹಚ್ಚಿ 20 ನಿಮಿಷಗಳ ನಂತರ ಬೆಚ್ಚನೆಯ ಶಾಖವನ್ನು ನೀಡಿ.

ಶುಂಠಿ ಕಷಾಯವನ್ನು ಬೆಳಗ್ಗೆ ಮತ್ತು ಸಂಜೆ ತೆಗೆದುಕೊಳ್ಳುವುದರಿಂದ ಸ್ಪಾಂಡಿಲೋಸಿಸ್‌ನ ಉರಿಯೂತ ಮತ್ತು ನೋವು ಶಮನವಾಗುತ್ತದೆ.

ಪ್ರತಿದಿನ ಅರಿಶಿನವನ್ನು ನೀರಿಗೆ ಅಥವಾ ಹಾಲಿಗೆ ಹಾಕಿ ಕುದಿಸಿ ಅದನ್ನು ಪ್ರತಿದಿನ ರಾತ್ರಿ ಕುಡಿಯಿರಿ.

ಎಳ್ಳೆಣ್ಣೆಯನ್ನು ಕುತ್ತಿಗೆ, ಭುಜ ಮತ್ತು ಕೈಗಳಿಗೆ ಹಚ್ಚಿ ಬೆಚ್ಚನೆಯ ಉಪ್ಪಿನ ಶಾಖವನ್ನು ನೀಡುವುದು ಉತ್ತಮ.

ಪ್ರತಿದಿನ ಬೆಳಗ್ಗೆ ಬೆಳ್ಳುಳ್ಳಿಯ ಎಸಳನ್ನು ತಿನ್ನಿ.

ಊಟದಲ್ಲಿ ಹೆಚ್ಚೆಚ್ಚು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ಪಾಲಕ್‌, ಸೊಪ್ಪು, ಕ್ಯಾರೆಟ್‌, ಬೆಂಡೆಕಾಯಿ, ಬೀಟ್‌ರೂಟ್‌ಗಳ ಬಳಕೆಯನ್ನು ಹೆಚ್ಚಿಸಿ.

ಊಟದಲ್ಲಿ ಕರಿದ ಪದಾರ್ಥಗಳು, ಎಣ್ಣೆ, ಮಸಾಲೆ, ಉಪ್ಪುಗಳ ಬಳಕೆಯು ಸಮಸ್ಯೆಯನ್ನು ಹೆಚ್ಚಿಸುವುದಕ್ಕೆ ಕಾರಣವಾಗುವುದರಿಂದ ಇವನ್ನು ಕಡಿಮೆಗೊಳಿಸಿ.

ಕರಿಬೇವಿನ ರಸವನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ