ಆ್ಯಪ್ನಗರ

ತುರಿಸುವುದನ್ನು ಬಿಡಿ, ಮನೆ ಮದ್ದಿಗೆ ಗಮನ ಕೊಡಿ

ಚರ್ಮದಲ್ಲಿ ತುರಿಕೆ ಸಂಭವಿಸುವುದು ಸಾಮಾನ್ಯ ಸಮಸ್ಯೆಯೇ ಹೊರತು ದೊಡ್ಡ ರೋಗವಲ್ಲ. ಹೆಚ್ಚು ತಲೆ ಕೆಡಿಸಿಕೊಳ್ಳದೆ ಮನೆ ಮದ್ದುಗಳನ್ನು ಪ್ರಯೋಗಿಸಿ. ತುರಿಕೆಯಿಂದ ಸುಲಭವಾಗಿ ಮುಕ್ತಿ ಹೊಂದಿ. ಆದರೆ ಚರ್ಮದಲ್ಲಿ ಹೆಚ್ಚು ತುರಿಕೆಯಾಗಿ, ಗಾಯಗಳು ಉಂಟಾದರೆ ತಕ್ಷಣ ತಜ್ಞ ವೈದ್ಯರನ್ನು ಭೇಟಿ ಮಾಡಿ.

Vijaya Karnataka Web 16 Feb 2019, 12:21 pm
ಸಾಮಾಜಿಕ ಮುಜುಗರವನ್ನುಂಟು ಮಾಡುವ ತುರಿಕೆ ಒಂದು ರೀತಿಯಲ್ಲಿ ಮಾನಸಿಕ ಹಿಂಸೆಯನ್ನುಂಟು ಮಾಡುತ್ತದೆ. ಅತಿಯಾದ ಬೆವರು, ಅಲರ್ಜಿ, ಕೀಟಗಳ ಕಡಿತ, ಚರ್ಮದ ಸೋಂಕು, ತೇವಾಂಶವಿಲ್ಲದ ಪರಿಸರ, ಕೆಲವು ಸೋಪುಗಳಿಂದ, ಡಿಟರ್ಜೆಂಟ್‌ಗಳ ಬಳಕೆಯಿಂದ ತುರಿಕೆ ಕಾಣಿಸಬಹುದು. ಅದೇ ಆದರೆ ಶಿಘ್ರದಲ್ಲೇ ಗುಣಮುಖವಾಗ ಬೇಕು ಎಂದು ಎಲ್ಲರೂ ಬಯಸುತ್ತಾರೆ. ಎಲ್ಲರೆದುರಲ್ಲಿ ಮೈ ಪರಚಿಕೊಳ್ಳುವುದನ್ನು ಯಾರು ಬಯಸುವುದಿಲ್ಲ.
Vijaya Karnataka Web Itching


ತುರಿಕೆಯ ಜತೆಗೆ ಚರ್ಮದಲ್ಲಿ ಬೊಕ್ಕೆಗಳು ಏಳುವುದು, ಕೆಂಪಾದ ಗಾಯವಾಗುವುದು ಆಗುತ್ತಿದ್ದರೆ ಚಿಂತೆ ಬಿಡಿ. ಇಲ್ಲಿರುವ ಕೆಲವು ಮನೆ ಮದ್ದುಗಳನ್ನು ಪ್ರಯೋಗಿಸಿ.

ಅಡುಗೆ ಸೋಡಾ: ಒಂದು ಕಪ್‌ ಅಡುಗೆ ಸೋಡಾವನ್ನು ಬಾತ್‌ಟಬ್‌ನಲ್ಲಿ ಬೆರಸಿ. ಈ ನೀರಲ್ಲಿ ದೇಹವನ್ನು ಅರ್ಧ ಗಂಟೆ ಮುಳುಗಿಸಿಡಿ. ನಂತರ ದಪ್ಪ ಟವೆಲ್‌ನಿಂದ ಒತ್ತಿ ಮೈ ಒರೆಸಿಕೊಳ್ಳಿ.

ಕೊಬ್ಬರಿ ಎಣ್ಣೆ: ತುರಿಕೆಯಿರುವ ಭಾಗಕ್ಕೆ ಕೊಂಚ ಬಿಸಿ ಮಾಡಿದ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್‌ ಮಾಡಿ

ಅಲೋವೆರಾ: ಚರ್ಮ ಬಿಳುಚಿಕೊಂಡಿದ್ದರೆ, ತುರಿಕೆಯಿದ್ದರೆ ಅಲೋವೆರಾ ಜೆಲ್‌ ಬಳಕೆ ಮಾಡಿ. ಸೋರಿಯಾಸಿಸ್‌, ಮೊಡವೆ ಮತ್ತು ಎಸ್ಜಿಮಾ ಮುಂತಾದ ದೀರ್ಘಕಾಲಿಕ ಚರ್ಮ ತೊಂದರೆಗಳನ್ನು ಅಲೋವೆರಾ ನಿವಾರಣೆ ಮಾಡುತ್ತದೆ.

ತುಳಸಿ: ತುಳಸಿ ಮತ್ತು ತಿನ್ನುವ ಸುಣ್ಣದ ಮಿಶ್ರಣ ತಯಾರಿಸಿರಿ. ಮಿಶ್ರಣವನ್ನು ತುರಿಕೆಯಾಗುತ್ತಿರುವ ಭಾಗದ ಮೇಲೆ ಹಚ್ಚಿರಿ. ಆರಂಭದಲ್ಲಿ ಸ್ವಲ್ಪ ಉರಿಯಾಗುತ್ತದೆ. ಈ ಲೇಪವನ್ನು ಮಾಡಲು ಮೊದಲು ತುಳಸಿಯ ಹದಿನೈದು ಎಲೆಗಳನ್ನು ತೆಗೆದುಕೊಂಡು ಉಗುರಿನಳತೆಯಲ್ಲಿ ಸುಣ್ಣ ಸೇರಿಸಿ ಅಂಗೈಯಲ್ಲಿ ತಿಕ್ಕಬೇಕು. ಅದು ನಂತರ ಒಂದು ಹಳದಿಬಣ್ಣದ ಲೇಪವಾಗುತ್ತದೆ.

ಎಳ್ಳೆಣ್ಣೆ: ತ್ವಚೆಯ ತುರಿಕೆಯನ್ನು ಎಳ್ಳೆಣ್ಣೆಯು ಗುಣಪಡಿಸಿ ತ್ವಚೆಗೆ ಪೋಷಕಾ೦ಶವನ್ನು ಒದಗಿಸುತ್ತದೆ. ತುರಿಕೆಯುಕ್ತ ತ್ವಚೆಯ ಕುರಿತ೦ತೆ ಎಳ್ಳೆಣ್ಣೆಯು ಪರಿಣಾಮಕಾರಿಯಾದ ನೈಸರ್ಗಿಕ ಪರಿಹಾರೋಪಾಯಗಳಲ್ಲಿ ಒ೦ದಾಗಿದೆ. ಎಳ್ಳೆಣ್ಣೆಯನ್ನು ಹದವಾಗಿ ಮಸಾಜ್ ಮಾಡಿಕೊಳ್ಳುವುದರ ಮೂಲಕ ತುರಿಕೆಯಿ೦ದ ಮುಕ್ತರಾಗಿರಿ. ಬಿಸಿಲಿನ ತಾಪದಿ೦ದಾಗಿ ಹಾಗೂ ಶುಷ್ಕ ತ್ವಚೆಯ ಕಾರಣದಿ೦ದಾಗಿ ತಲೆದೋರಬಹುದಾದ ತ್ವಚೆಯ ತುರಿಕೆಯನ್ನು ಹೋಗಲಾಡಿಸಿ, ತ್ವಚೆಯ ಉರಿಯನ್ನು ಸ೦ತೈಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ