ಆ್ಯಪ್ನಗರ

ಬೇಗ ಮುಟ್ಟಾಗಲು ಮನೆಮದ್ದು

ಡೋಂಟ್ ವರಿ, ಅಡುಗೆ ಕೋಣೆಯಲ್ಲಿಯೇ ಇದೆ ಇದಕ್ಕೆ ಉಪಾಯ. ಇವನ್ನು ಸೇವಿಸಿದರೆ ನಿಜಕ್ಕೂ ನಿಮಗೆ ಬೇಗ ಮುಟ್ಟಾಗುತ್ತದೆ.

Vijaya Karnataka Web 16 Apr 2019, 3:11 pm
ನಿಮಗಿಷ್ಟವಿರಲಿ, ಇಲ್ಲದಿರಲಿ ಪ್ರತಿ ತಿಂಗಳಿಗೊಮ್ಮೆ ಮುಟ್ಟು ಬಂದೇ ಬರುತ್ತದೆ. ವಿಶೇಷ ಸಂದರ್ಭದಲ್ಲಿ ಮುಟ್ಟು ಎದುರಾದರೆ ನಿಜಕ್ಕೂ ಅದು ನಿಮ್ಮ ಆನಂದವನ್ನು ಕಿತ್ತುಕೊಳ್ಳುತ್ತದೆ. ಹೀಗಾಗಿ ನೀವು ಅವಧಿಗಿಂತ ಬೇಗ ಮುಟ್ಟನ್ನು ತಂದುಕೊಳ್ಳಲು ಪ್ರಯತ್ನಿಸುತ್ತೀರಿ. ಅದಕ್ಕಾಗಿ ಟಾಬ್ಲೆಟ್ ತೆಗೆದುಕೊಳ್ಳುತ್ತೀರಿ. ಆದರೆ ನಿಜಕ್ಕೂ ಅದು ಆರೋಗ್ಯಕ್ಕೆ ಹಾನಿಕರ.
Vijaya Karnataka Web Turmeric


ಡೋಂಟ್ ವರಿ, ಅಡುಗೆ ಕೋಣೆಯಲ್ಲಿಯೇ ಇದೆ ಇದಕ್ಕೆ ಉಪಾಯ. ಇವನ್ನು ಸೇವಿಸಿದರೆ ನಿಜಕ್ಕೂ ನಿಮಗೆ ಬೇಗ ಮುಟ್ಟಾಗುತ್ತದೆ.

ಪಪ್ಪಾಯ

ಮಹಿಳೆಯರು ಅನಿಯಮಿತ ಮುಟ್ಟಿನ ಸಮಸ್ಯೆಯನ್ನೆದುರಿಸುತ್ತಿದ್ದರೆ ವೈದ್ಯರು ಪಪ್ಪಾಯ ತಿನ್ನಿ ಎಂದು ಸಲಹೆ ನೀಡುತ್ತಾರೆ. ಗರ್ಭಾಶಯದ ಕುಗ್ಗುವಿಕೆಯನ್ನು ಪ್ರಚೋದಿಸಲು ಹಣ್ಣಾಗದ ಮತ್ತು ಅರೆ-ಹಣ್ಣಾದ ಪಪ್ಪಾಯಿ ಉತ್ತಮ. ಇದನ್ನು ನಿಯಮಿತವಾಗಿ ತಿನ್ನುವುದು ಋತುಚಕ್ರವನ್ನು ನಿಯಮಿತಗೊಳಿಸುತ್ತದೆ.

ವಿಟಾಮಿನ್ ಸಿ ಸಮೃದ್ಧ ಹಣ್ಣುಗಳು

ವಿಟಮಿನ್ ಸಿ ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುತ್ತದೆ . ಹೆಚ್ಚಿದ ಈಸ್ಟ್ರೊಜೆನ್ ಮಟ್ಟವು ಗರ್ಭಾಶಯದ ಕುಗ್ಗುವಿಕೆಗೆ ಕಾರಣವಾಗಿ ಬೇಗ ಮುಟ್ಟಾಗುತ್ತದೆ.

ವಿಟಮಿನ್ ಸಿ ಸಮೃದ್ಧ ಹಣ್ಣುಗಳು ಮತ್ತು ತರಕಾರಿಗಳು- ಬ್ರಕೋಲಿ, ಪಾಲಕ್, ದೊಣ್ಣೆ ಮೆಣಸಿನಕಾಯಿ, ಕಿತ್ತಳೆ, ನಿಂಬೆ, ಹೂಕೋಸು, ಕಿವಿ ಮತ್ತು ಸೀಬೆ.

ಅನಾನಸ್


ಅನಾನಸ್ ಸೇವನೆ ಪೆಲ್ವಿಕ್ ಪ್ರದೇಶದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ ಇದರಿಂದ ಗರ್ಭಕೋಶದ ಒಳ ಪದರ ಕುಗ್ಗಿ ಮುಟ್ಟು ತುರ್ತಾಗಿ ಉಂಟಾಗುತ್ತದೆ.

ಅರಿಶಿಣ

ಅರಿಶಿಣ, ಗರ್ಭಾಶಯದಲ್ಲಿನ ರಕ್ತದ ಹರಿವನ್ನು ಉತ್ತೇಜಿಸಿ ಬೇಗ ಮುಟ್ಟಾಗಲು ಕಾರಣವಾಗುತ್ತದೆ. ಇದು ಪೆಲ್ವಿಸ್ ಪ್ರದೇಶದಲ್ಲಿ ಉಷ್ಣತೆ ಹೆಚ್ಚಿಸಿ ಗರ್ಭಾಶಯದಲ್ಲಿನ ಸಂಕೋಚನವನ್ನುಂಟು ಮಾಡಿ ಮುಟ್ಟು ಆರಂಭವಾಗಲು ಕಾರಣವಾಗುತ್ತದೆ.

ಶುಂಠಿ ಚಹಾ


ಇದು ಕೂಡ ಪೆಲ್ವಿಸ್ ಪ್ರದೇಶದಲ್ಲಿ ಉಷ್ಣತೆ ಹೆಚ್ಚಿಸಿ ಗರ್ಭಾಶಯದಲ್ಲಿನ ಸಂಕೋಚನವನ್ನುಂಟು ಮಾಡಿ ಮುಟ್ಟು ಆರಂಭವಾಗಲು ಕಾರಣವಾಗುತ್ತದೆ. ಮುಟ್ಟಿನ ನೋವು ಶಮನಕ್ಕೂ ಇದು ಸಹಕಾರಿ

ಪಾರ್ಸ್ಲಿ

ಪಾರ್ಸ್ಲಿ ಒಂದು ಅದ್ಬುತ ಸುಗಂಧ ಸಸ್ಯ. ಸಾಮಾನ್ಯವಾಗಿ ಮಸಾಲೆಯಾಗಿ ಅದನ್ನು ಬಳಸ್ತಾರೆ. ಕೊತ್ತಂಬರಿ ಸೊಪ್ಪಿನ ರೀತಿಯಲ್ಲಿಯೇ ಅದನ್ನು ಉಪಯೋಗಿಸ್ತಾರೆ. ಇದು ಕೂಡ ಗರ್ಭಾಶಯವನ್ನು ಕುಗ್ಗಿಸಿ ಬೇಗ ಮುಟ್ಟಾಗಲು ಸಹಾಯ ಮಾಡುತ್ತದೆ.

ಬಿಸಿ ಮತ್ತು ಖಾರ ಆಹಾರ

ಬಿಸಿ ಮತ್ತು ಖಾರ ಅಥವಾ ಮಸಾಲೆಯುಕ್ತ ಆಹಾರವನ್ನು ತಿನ್ನುವುದು ನಿಮ್ಮ ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ ಇದರಿಂದ ಗರ್ಭಾಶಯದ ಕುಗ್ಗುವಿಕೆಯಾಗಿ ಬೇಗ ಮುಟ್ಟಾಗುತ್ತದೆ.

ಒಣ ದ್ರಾಕ್ಷಿ ಮತ್ತು ಬಿಸಿ ಹಾಲು


ಶತಮಾನಗಳಿಂದ ಒಣ ದ್ರಾಕ್ಷಿಯನ್ನು ಫಲವತ್ತತೆ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತದೆ. ರಕ್ತ ಸಂಚಾರವನ್ನು ಸುಗಮಮಗೊಳಿಸುವ ಹಾಲು ಮತ್ತು ಒಣ ದ್ರಾಕ್ಷಿ ಮಿಶ್ರಣ ಬೇಗ ಮುಟ್ಟಾಗಲು ಕಾರಣವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ