ಆ್ಯಪ್ನಗರ

ತೆಳ್ಳಗಾಗಲು ತುಪ್ಪ ತಿನ್ನುತ್ತಿದ್ದ ಕರೀನಾ

ಆರೋಗ್ಯಕರವಾಗಿ ತೂಕ ಕಮ್ಮಿಯಾಗಲು ಕರೀನಾ ಕೆಲ ಟಿಪ್ಸ್ ನೀಡಿದ್ದಾರೆ ನೋಡಿ:

Vijaya Karnataka Web 14 Dec 2017, 11:50 am
ಹೆರಿಗೆ ಬಳಿಕ ದೇಹದಲ್ಲಿ ಬದಲಾವಣೆಯಾಗುವುದು ಸಹಜ. ಕೆಲವರಿಗಂತೂ ಮೈ ತೂಕ ತುಂಬಾ ಅಧಿಕವಾಗುವುದು. ಹಾಗಂತ ಟೆನ್ಷನ್‌ ಪಡಬೇಕಾಗಿಲ್ಲ.
Vijaya Karnataka Web how kareena lost weight
ತೆಳ್ಳಗಾಗಲು ತುಪ್ಪ ತಿನ್ನುತ್ತಿದ್ದ ಕರೀನಾ


ಹೆರಿಗೆಯ ಬಳಿಕ ಹೆಚ್ಚುತ್ತಿರುವ ದೇಹ ತೂಕದ ಕಡೆ ಗಮನ ಕೊಡದೆ ಪೋಷಕಾಂಶಗಳಿರುವ ಆಹಾರದ ಕಡೆಗೆ ಗಮನ ಕೊಡುವುದು ತಾಯಿ, ಮಗನ ಆರೋಗ್ಯ ದೃಷ್ಟಿಯಿಂದ ಬಹುಮುಖ್ಯ.

ಆರು ತಿಂಗಳ ಬಳಿಕ ಮೈ ತೂಕ ಕಡಿಮೆ ಮಾಡುವುದರ ಕುರಿತು ಗಮನ ಕೊಡಬಹುದು. ತೂಕ ಕಮ್ಮಿ ಮಾಡಲು ಕ್ರಾಷ್ ಡಯಟ್‌ ಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಬದಲು ಆರೋಗ್ಯಕರವಾಗಿ ತೂಕ ಕಮ್ಮಿ ಮಾಡಿಕೊಳ್ಳಿ.

ಆರೋಗ್ಯಕರವಾಗಿ ತೂಕ ಕಮ್ಮಿಯಾಗಲು ಕರೀನಾ ಕೆಲ ಟಿಪ್ಸ್ ನೀಡಿದ್ದಾರೆ ನೋಡಿ:

1. ತುಪ್ಪ ತಿನ್ನಿ: ಒಳ್ಳೆಯ ಕೊಬ್ಬು ದೇಹಕ್ಕೆ ಅವಶ್ಯಕ. ಕರೀನಾ ಅವರ ನ್ಯೂಟ್ರಿಷಿಯನಿಸ್ಟ್ ರುಜುತಾ ದಿವೇಕರ್‌ ಅವರು ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ, ತ್ವಚೆಯ ಹೊಳಪಿಗೆ , ಸ್ನಾಯುಗಳು ಬಲವಾಗಿರಲು ತುಪ್ಪ ತಿನ್ನಲೇಬೇಕು ಎಂದು ಸಲಹೆ ನೀಡುತ್ತಾರೆ. ತೆಳ್ಳಗಾಗಿ ಮತ್ತೆ ಅದೇ ಯೌವನದ ಲುಕ್‌ ಪಡೆಯಲು ಕರೀನಾಳಿಗೆ ಈ ಡಯಟ್‌ ಸಹಾಯ ಮಾಡಿದೆ.

2. ನೋ ಶಾರ್ಟ್‌ ಕಟ್‌: ತೂಕ ಕಮ್ಮಿಯಾಗಲು ಶಾರ್ಟ್‌ ಕಟ್‌ ಬೇಡ. ನಿಯಮಿತವಾಗಿ ವ್ಯಾಯಾಮ ಮಾಡಿ.



3. ಸರಿಯಾದ ಸಮಯಕ್ಕೆ ಊಟ: ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದರಿಂದ ಜಂಕ್‌ ಫುಡ್‌ಗಳಿಂದ ದೂರವಿರಬಹುದು.

4. ತಕ್ಷಣವೇ ರಿಸಲ್ಟ್‌ ಕಾಣುವುದಿಲ್ಲ: ಆರೋಗ್ಯಕರ ಆಹಾರ ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ರಿಸಲ್ಟ್‌ ಗೊತ್ತಾಗಲು 21 ದಿನಗಳಾದರೂ ಬೇಕು. ಒಂದು ವಾರ ಪಾಲಿಸಿ ಸ್ವಲ್ಪವೂ ತೆಳ್ಳಗಾಗಿಲ್ಲ ಎಂದು ಕ್ರಾಷ್‌ ಡಯಟ್‌ ಮಾಡುವುದು ಅಥವಾ ವ್ಯಾಯಾಮ ಮಾಡದೇ ಇರುವುದು ಮಾಡಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ