ಆ್ಯಪ್ನಗರ

ಅಸ್ತಮಾವನ್ನು ಸೋಲಿಸುವುದಕ್ಕೆ ಒಂದೇ ಒಂದು ಕೆಂಪು ಈರುಳ್ಳಿ ಸಾಕು

ಕೆಂಪು ಈರುಳ್ಳಿ ಕೇವಲ ತಿನ್ನಲು ಸಾಮಾನ್ಯ ಈರುಳ್ಳಿಗಿಂತ ಹೆಚ್ಚು ರುಚಿಕರ ಮಾತ್ರವಲ್ಲದೆ ತನ್ನಲ್ಲಿರುವ ವಿಶೇಷ ಗುಣ ಲಕ್ಷಣಗಳಿಂದ ಮನುಷ್ಯನ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ಸರಿ ಪಡಿಸುತ್ತದೆ. ಕೆಂಪು ಈರುಳ್ಳಿಯ ಇನ್ನಷ್ಟು ಮಾಹಿತಿಗೆ ಈ ಲೇಖನ ಒಮ್ಮೆ ಓದಿ.

Vijaya Karnataka Web 15 Feb 2020, 1:09 pm
ಈರುಳ್ಳಿ, ಪ್ರತಿ ಮನೆಯ ಆಹಾರ ತಯಾರಿಕೆಯಲ್ಲಿ ಬಳಕೆಯಾಗುವ ಆಹಾರ ಪದಾರ್ಥ. ನಾಲಿಗೆಗೆ ಖಾರ ಮತ್ತು ಹೆಚ್ಚುವಾಗ ಕಣ್ಣಂಚಿನಲ್ಲಿ ಸ್ವಲ್ಪ ನೀರು ತರಿಸಿದರೂ ನಂತರ ಮನುಷ್ಯನನ್ನು ಆರೋಗ್ಯವಂತನನ್ನಾಗಿ ಕಿರು ನಗೆ ಬೀರುವಂತೆ ಮಾಡುವ ಒಂದು ತರಕಾರಿ ಗುಂಪಿಗೆ ಸೇರಿದ ಒಂದು ಹಸಿ ಆಹಾರ. ಈರುಳ್ಳಿ ದೇಹಕ್ಕೆ ತಂಪು ಎನ್ನುವ ಮಾತಿದೆ.
Vijaya Karnataka Web impressive benefits of red onions to get rid of asthma
ಅಸ್ತಮಾವನ್ನು ಸೋಲಿಸುವುದಕ್ಕೆ ಒಂದೇ ಒಂದು ಕೆಂಪು ಈರುಳ್ಳಿ ಸಾಕು


​ಕೆಂಪು ಈರುಳ್ಳಿಯ ತಾಕತ್ತು

ತಮ್ಮಲ್ಲಿನ ಆಸ್ತಮಾ ಸಮಸ್ಯೆಯ ಪರಿಹಾರಕ್ಕಾಗಿ ಹಲವರು ಅನೇಕ ವಸ್ತುಗಳ ಮೊರೆ ಹೋಗುವರು. ಆದರೆ ಅವರ ಅಡುಗೆ ಮನೆಯಲ್ಲಿರುವ ಕೆಂಪು ಈರುಳ್ಳಿ ಅಸ್ತಮಾಗೆ ನಾಟೀ ವೈದ್ಯ ಎಂಬುದು ಅವರಿಗೆ ತಿಳಿದಿರದ ಸತ್ಯ ಎನಿಸುತ್ತದೆ. ಕೆಂಪು ಈರುಳ್ಳಿ ಕೇವಲ ತಿನ್ನಲು ಸಾಮಾನ್ಯ ಈರುಳ್ಳಿಗಿಂತ ಹೆಚ್ಚು ರುಚಿಕರ ಮಾತ್ರವಲ್ಲದೆ ತನ್ನಲ್ಲಿರುವ ವಿಶೇಷ ಗುಣ ಲಕ್ಷಣಗಳಿಂದ ಮನುಷ್ಯನ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ಸರಿ ಪಡಿಸುತ್ತದೆ. ಈರುಳ್ಳಿಯ ಬಣ್ಣಗಳನ್ನು ನೋಡುವುದಾದರೆ ನಮಗೆ ಎರಡು ಬಗೆಯ ಈರುಳ್ಳಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಕೆಂಪು ಬಣ್ಣದ ಈರುಳ್ಳಿ ಮತ್ತು ಬಿಳಿ ಬಣ್ಣದ ಈರುಳ್ಳಿ. ಬಿಳಿ ಬಣ್ಣದ ಈರುಳ್ಳಿಗಳಿಗೆ ಹೋಲಿಸಿದರೆ ಕೆಂಪು ಬಣ್ಣದ ಈರುಳ್ಳಿಗಳಲ್ಲಿ ಆಂಟಿ - ಆಕ್ಸಿಡೆಂಟ್ ಅಂಶ ಬಹಳಷ್ಟಿದ್ದು, ಹೆಚ್ಚಿನ ಆಂಟಿ - ಇನ್ಫಾಮೇಟರಿ ಗುಣ ಲಕ್ಷಣಗಳನ್ನು ಹೊಂದಿದೆ. ಜೊತೆಗೆ ಕೆಂಪು ಈರುಳ್ಳಿಗಳಲ್ಲಿ ವಿಟಮಿನ್ ' ಸಿ ' ಅಂಶ ಮತ್ತು ಸಲ್ಫರ್ ಅಂಶ ಹೆಚ್ಚಾಗಿರುವುದರಿಂದ ಒಬ್ಬ ಮನುಷ್ಯನ ಅಸ್ತಮಾ ಸಮಸ್ಯೆಯನ್ನು ಗುಣ ಪಡಿಸುವುದರಲ್ಲಿ ನೈಸರ್ಗಿಕ ಔಷಧಿಗಳಾಗಿ ಕೆಲಸ ಮಾಡುತ್ತವೆ.

​ಅಸ್ತಮಾ ನಿವಾರಣೆಗೆ ಕೆಂಪು ಈರುಳ್ಳಿ ಬಳಸುವ ವಿಧಾನಗಳು

ಸೌತೆಕಾಯಿ ಈರುಳ್ಳಿ ಸಲಾಡ್

ಬೇಕಾಗಿರುವ ಸಾಮಗ್ರಿಗಳು : -

*1 ಮಧ್ಯಮ ಗಾತ್ರದ ಕೆಂಪು ಈರುಳ್ಳಿ

*2 ಸೌತೆಕಾಯಿಗಳು

*ಸ್ವಲ್ಪ ನಿಂಬೆ ಹಣ್ಣಿನ ರಸ

*1 ಕಪ್ ಚೆನ್ನಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು

*2 ಬೆಳ್ಳುಳ್ಳಿ ಎಸಳುಗಳು

* ಸ್ವಲ್ಪ ಗಟ್ಟಿ ಮೊಸರು

ತಯಾರು ಮಾಡುವ ವಿಧಾನ

ಇದು ಸಲಾಡ್ ಆಗಿರುವುದರಿಂದ ಯಾವುದೇ ಬಗೆಯ ಮುನ್ನೆಚ್ಚರಿಕೆಯ ತಯಾರಿಕೆಗಳು ಅಗತ್ಯವಿಲ್ಲ. ಕೇವಲ ಮೇಲಿನ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಎಲ್ಲವನ್ನೂ ಚೆನ್ನಾಗಿ ಕಲಸಿ ರುಚಿಗೆ ಸ್ವಲ್ಪ ಮೆಣಸಿನ ಪುಡಿಯನ್ನು ಬೆರೆಸಿದರೆ ಸೌತೆಕಾಯಿ ಈರುಳ್ಳಿ ಸಲಾಡ್ ಸವಿಯಲು ಸಿದ್ಧ. ಈ ಸಲಾಡ್ ನಲ್ಲಿ ಎಲ್ಲಾ ಪದಾರ್ಥಗಳು ಸಾಮಾನ್ಯ ಆಹಾರ ಪದಾರ್ಥಗಳಾಗಿದ್ದು ಯಾರು ಬೇಕಾದರೂ ಎಲ್ಲಿ ಬೇಕಾದರೂ ತಯಾರು ಮಾಡಿಕೊಳ್ಳಬಹುದು. ಸೌತೆಕಾಯಿಗೆ ಮತ್ತು ಮೊಸರಿಗೆ ತನ್ನದೇ ಆದ ಆರೋಗ್ಯ ಪ್ರಯೋಜನಗಳು ಇರುವುದರಿಂದ ಈರುಳ್ಳಿಯ ಜೊತೆಗೂಡಿ ಮನುಷ್ಯನ ದೇಹದ ಅಸ್ತಮಾ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವಲ್ಲಿ ಯಶಸ್ವಿ ಆಗುತ್ತವೆ.


ಬೆಳ್ಳುಳ್ಳಿ-ಈರುಳ್ಳಿ ಸಿಪ್ಪೆಯ ಲಾಭಗಳು ಗೊತ್ತಾದ್ರೆ ಖಂಡಿತ ಬಿಸಾಡಲು ಮನಸ್ಸು ಬರಲ್ಲ!

​ಈರುಳ್ಳಿ ಸೌತೆಕಾಯಿ ಸಲಾಡ್ ಸೇವನೆ ಎಷ್ಟು ದಿನಗಳಿಗೊಮ್ಮೆ?

ನಿಮ್ಮ ಅಸ್ತಮಾ ಸಮಸ್ಯೆಯಿಂದ ಪರಿಣಾಮಕಾರಿಯಾಗಿ ಮುಕ್ತಿ ಪಡೆಯಲು ಈರುಳ್ಳಿ ಸೌತೆಕಾಯಿ ಸಲಾಡ್ ಅನ್ನು ದಿನ ಬಿಟ್ಟು ದಿನ ಸೇವನೆ ಮಾಡಬೇಕು.

ಜೇನು ತುಪ್ಪ ಮತ್ತು ಈರುಳ್ಳಿಯ ಮಿಶ್ರಣ : -

ಬೇಕಾಗಿರುವ ಸಾಮಾಗ್ರಿಗಳು :

*1/2 ಕೆಜಿ ಕೆಂಪು ಈರುಳ್ಳಿ

**ಜೇನುತುಪ್ಪ ( ಸುಮಾರು 6 - 8 ಟೇಬಲ್ ಚಮಚಗಳಷ್ಟು )

ತಾಜಾ ನಿಂಬೆ ಹಣ್ಣುಗಳು ( ಸುಮಾರು 3 - 4 )

*ಬ್ರೌನ್ ಶುಗರ್ ( ಸುಮಾರು 300 - 400 ಗ್ರಾಂ ಗಳಷ್ಟು )

*ನೀರು ( ಸುಮಾರು 5 - 6 ಗ್ಲಾಸ್ ಗಳಷ್ಟು )

​ತಯಾರು ಮಾಡುವ ವಿಧಾನ

*ಮೊದಲಿಗೆ ಒಂದು ಪ್ಯಾನ್ ಸ್ಟೌವ್ ಮೇಲಿಟ್ಟು ಬಿಸಿ ಮಾಡಿ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಕರಗುವವರೆಗೂ ಬಿಸಿಯಲ್ಲಿಡಿ.

ಸ*ಣ್ಣಗೆ ಹೆಚ್ಚಿದ ಕೆಂಪು ಈರುಳ್ಳಿಯನ್ನು ಹಾಕಿ ಚೆನ್ನಾಗಿ ತಿರುವಿ ಮಿಶ್ರಣ ಮಾಡಿ.

*ನೀರು ಮುಕ್ಕಾಲು ಭಾಗದವರೆಗೆ ಕಡಿಮೆಯಾಗುವವರೆಗೂ ಚೆನ್ನಾಗಿ ಕುದಿಸಿ.

*ಮಿಶ್ರಣವನ್ನು ತಣ್ಣಗಾಗಲು ಬಿಟ್ಟು ಅದಕ್ಕೆ ನಿಂಬೆ ಹಣ್ಣಿನ ರಸ ಸೇರಿಸಿ.

*ಕೊನೆಯಲ್ಲಿ ಜೇನು ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

*ಒಂದು ಗಾಳಿ ರಹಿತ ಕಂಟೈನರ್ ಅಥವಾ ಜಾರ್ ನಲ್ಲಿ ಭದ್ರವಾಗಿ ಎತ್ತಿಡಿ.

​ಸೇವನೆ ಹೇಗೆ?

ಅಸ್ತಮಾ ಸಮಸ್ಯೆಯ ಗುಣ ಲಕ್ಷಣ ಕಡಿಮೆ ಆಗುವವರೆಗೆ,

ವಯಸ್ಕರಿಗೆ ಪ್ರತಿ ಆಹಾರ ಸೇವನೆಯ ಮುಂಚೆ 1 ಟೇಬಲ್ ಚಮಚ

ಮಕ್ಕಳಿಗೆ ಪ್ರತಿ ಆಹಾರಸೇವನೆಯ ಮುಂಚೆ 1/2 ಟೇಬಲ್ ಚಮಚ

ಅಸ್ತಮಾ ರೋಗದ ನಿವಾರಣೆಗಾಗಿ ಕೇವಲ ಕೆಂಪು ಈರುಳ್ಳಿಗಳಿಗೆ ಸಂಬಂಧ ಪಟ್ಟ ಮನೆ ಮದ್ದುಗಳನ್ನು ಹೊರತುಪಡಿಸಿ ಈ ಕೆಳಗಿನ ಕೆಲವೊಂದು ಇತರ ಟಿಪ್ಸ್ ಗಳನ್ನು ಅನುಸರಿಸಬಹುದು.


ಅಸ್ತಮಾ ತಡೆಗಟ್ಟಲು ಟಾಪ್ 5 ಮನೆಮದ್ದು

​ವ್ಯಾಯಾಮ ಅಥವಾ ಯೋಗ

*ಯಾವುದೇ ಔಷಧಿಗಳು ಕೈ ಕೊಟ್ಟರೂ ನೈಸರ್ಗಿಕ ಗಿಡ ಮೂಲಿಕೆಗಳು ಎಂದಿಗೂ ಮನುಷ್ಯನಿಗೆ ಸಹಕಾರಿ. ಆದ್ದರಿಂದ ಗಿಡಮೂಲಿಕೆಗಳಿಂದ ಕೂಡಿದ ನೈಸರ್ಗಿಕ ಆಹಾರ ಪದ್ಧತಿಗಳ ಮೊರೆ ಹೋಗಿ.

*ಆರೋಗ್ಯ ತಜ್ಞರ ಪ್ರಕಾರ ವ್ಯಾಯಾಮ ಮತ್ತು ಯೋಗ ಮನುಷ್ಯನಿಗೆ ಸಾಕಷ್ಟು ಪ್ರಯೋಜನಕಾರಿ. ಆದ್ದರಿಂದ ನಿಯಮಿತ ವ್ಯಾಯಾಮ ಅಥವಾ ಯೋಗದ ಪಾಲನೆ ಮಾಡಿ.

*ಮನುಷ್ಯನ ಆರೋಗ್ಯ ಚೆನ್ನಾಗಿರಬೇಕಾದರೆ ನಿದ್ದೆ ಬಹಳಷ್ಟು ಅವಶ್ಯಕ. ಆದ್ದರಿಂದ ಸಾಕಷ್ಟು ನಿದ್ರೆ ಮಾಡಿ.

*ದೇಹದ ಹೆಚ್ಚಿನ ತೂಕ ಹೊಂದಿರುವವರು ಸಾಧ್ಯವಾದಷ್ಟು ಸಾಮಾನ್ಯ ದೈಹಿಕ ತೂಕ ನಿರ್ವಹಣೆ ಮಾಡಿ.

ನಿಮ್ಮ ಆಹಾರ ಪದ್ಧತಿಯಲ್ಲಿ ಉಷ್ಣ ಪದಾರ್ಥಗಳಾದ ಬೆಳ್ಳುಳ್ಳಿ, ಶುಂಠಿ ಮತ್ತು ಜೇನು ತುಪ್ಪದ ಬಳಕೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.

*ಇನ್ನು ಫ್ಲಾಕ್ಸ್ ಸೀಡ್ಸ್ ಮತ್ತು ಮೀನುಗಳಲ್ಲಿ ಕಂಡು ಬರುವ ಒಮೆಗಾ - 3 ಫ್ಯಾಟಿ ಆಸಿಡ್ ಅಂಶಗಳು ಮನುಷ್ಯನ ದೇಹಕ್ಕೆ ಬಹಳಷ್ಟು ಉತ್ತಮ ಪ್ರಯೋಜನಗಳನ್ನು ನೀಡುವುದರಲ್ಲಿ ಯಶಸ್ವಿಯಾಗಿವೆ. ಈ ಅಂಶ ದೇಹ ಸೇರಿದ ಸಮಯದ ನಂತರ ಮನುಷ್ಯನ ದೇಹದ ಉಸಿರಾಟದ ನಾಳದ ಉರಿಯೂತವನ್ನು ತಗ್ಗಿಸಿ ಶ್ವಾಸಕೋಶದ ಕಾರ್ಯ ಚಟುವಟಿಕೆಯನ್ನು ಉತ್ತಮ ಪಡಿಸಿ ವಿಪರೀತ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಒಳ್ಳೆಯ ಪ್ರಯೋಜನವನ್ನು ಉಂಟು ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ