ಆ್ಯಪ್ನಗರ

ಈಗಿನ ಸಮಯದಲ್ಲಿ ವೈದ್ಯರು ಮತ್ತು ದಾದಿಯರು ಜನರ ಪಾಲಿಗೆ ದೇವರಿದ್ದಂತೆ!!

ಮೇ 12 ದಾದಿಯರ ದಿನ ಎಂದು ಕರೆಯಲು ಒಂದು ಕಾರಣವಿದೆ. ಅದೇನೆಂದರೆ ಈಗಿನ ಆಧುನಿಕ ನರ್ಸಿಂಗ್ ವ್ಯವಸ್ಥೆಯ ಸಂಸ್ಥಾಪನೆಯ ರೂವಾರಿ ಫ್ಲೋರೆನ್ಸ್ ನೈಟಿಂಗೇಲ್ ಹುಟ್ಟಿದ ದಿನ ಇದು.

Vijaya Karnataka Web 12 May 2021, 10:45 am
ನಮ್ಮ ಸಮಾಜದಲ್ಲಿ ವೈದ್ಯರು ಮತ್ತು ದಾದಿಯರು ಮಾಡುವ ಕೆಲಸಕ್ಕೆ ವಿಶೇಷವಾದ ಪ್ರಾಮುಖ್ಯತೆಯಿದೆ. ಏಕೆಂದರೆ ಜನರ ಜೀವ ರಕ್ಷಣೆ ಮಾಡುವ ಕೆಲಸವನ್ನು ಅವರು ಅತ್ಯಂತ ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ.
Vijaya Karnataka Web international nurses day 2021 know why nurses are important in healthcare
ಈಗಿನ ಸಮಯದಲ್ಲಿ ವೈದ್ಯರು ಮತ್ತು ದಾದಿಯರು ಜನರ ಪಾಲಿಗೆ ದೇವರಿದ್ದಂತೆ!!


ಒಬ್ಬ ಬೀದಿ ಭಿಕ್ಷುಕನಿಗೆ ಕಾಯಿಲೆ ಬಂದರೂ ವೈದ್ಯಕೀಯವಾಗಿ ಆರೈಕೆ ಮಾಡಲು ದಾದಿಯರು ಬೇಕು, ಅದೇ ರೀತಿ ಒಬ್ಬ ಮಂತ್ರಿಗೆ ಕಾಯಿಲೆ ಬಂದಾಗಲೂ ದಾದಿ ಬೇಕೇ ಬೇಕು. ಈಗಿನ ಕೊರೋನಾ ಸಂದರ್ಭದಲ್ಲಿ ತಮ್ಮ ಸ್ವಂತ ಕುಟುಂಬದವರನ್ನು ಲೆಕ್ಕಿಸದೆ ಸಮಾಜದ ಆರೋಗ್ಯದ ದೃಷ್ಟಿಯಲ್ಲಿ ಅವರು ಮಾಡುತ್ತಿರುವ ಸೇವೆಗೆ ಪ್ರತಿಯೊಬ್ಬರು ತಲೆಬಾಗಲೇಬೇಕು. ಹಾಗಾಗಿ ಇಂದು ಮೇ 12 ಅಂತರಾಷ್ಟ್ರೀಯ ದಾದಿಯರ ದಿನ ಎಂದು ಪ್ರಖ್ಯಾತವಾಗಿದೆ.

​ಕೋವಿಡ್-19 ಸಂದರ್ಭದಲ್ಲಿ ದಾದಿಯರ ಪಾತ್ರ ಬಹಳ ದೊಡ್ಡದು

  • ಅಂತಾರಾಷ್ಟ್ರೀಯ ದಾದಿಯರ ದಿನ ಎಲ್ಲರ ದೃಷ್ಟಿಯಲ್ಲಿ ಒಂದು ಮನ್ನಣೆ ಪಡೆಯಬೇಕು, ದಾದಿಯರ ನಿಜವಾದ ಅರ್ಹತೆ ಪ್ರತಿಯೊಬ್ಬರಿಗೂ ತಿಳಿಯಬೇಕು ಎನ್ನುವ ಕಾರಣದಿಂದ ವಿಶ್ವ ಆರೋಗ್ಯ ಸಂಸ್ಥೆ ನೂರಾರು ಪಾಲುದಾರರನ್ನು ಸೇರಿಸಿಕೊಂಡಿದೆ.
  • ಈ ಹಿಂದೆಯೂ ಕೂಡ ದಾದಿಯರು ಮಾಡಿರುವ ಕೆಲಸವನ್ನು ಮತ್ತು ರೋಗಿಷ್ಟ ಜನರ ಸೇವೆಯನ್ನು ಯಾರೂ ಸಹ ಮರೆಯುವಂತಿಲ್ಲ.
  • ಅದೇ ರೀತಿ ಈಗಲೂ ಕೂಡ ಜನರ ಜೀವ ಉಳಿಸಲು ಅವರು ಕೊಡುತ್ತಿರುವ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆಯನ್ನು ನಾವೆಲ್ಲರೂ ಗೌರವಿಸಬೇಕು. ಜನರ ಆರೋಗ್ಯವನ್ನು ರಕ್ಷಣೆ ಮಾಡುವಲ್ಲಿ ಅವರ ನಿಷ್ಠೆ ಪ್ರತಿಯೊಬ್ಬರಿಗೂ ಮಾರ್ಗದರ್ಶಿ.

​ವಿಶ್ವದೆಲ್ಲೆಡೆ ದಾದಿಯರ ಕೊರತೆ ಎದ್ದು ಕಾಣುತ್ತಿದೆ

  • ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚಿಗೆ ಕೊಟ್ಟ ಹೇಳಿಕೆಯ ಪ್ರಕಾರ, ಈಗಿರುವ ಜನಸಂಖ್ಯೆ ಮತ್ತು ರೋಗಿಗಳಿಗೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ದಾದಿಯರ ಲಭ್ಯತೆ ಕಡಿಮೆ ಆಗಿದೆ.
  • ಸರಿಯಾಗಿ ಅಂದಾಜಿಸಿ ನೋಡುವುದಾದರೆ, ಈಗಲೂ ಸಹ 5.9 ಮಿಲಿಯನ್ ದಾದಿಯರ ಅವಶ್ಯಕತೆ ಇದೆ. ಕಡಿಮೆ ಆದಾಯ ಇರುವ ರಾಷ್ಟ್ರಗಳಿಗೆ ಇಂತಹ ಅವಶ್ಯಕತೆ ಬರುತ್ತದೆ.

​ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ

  • ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸರ್ಕಾರಗಳು ದಾದಿಯರಿಗೆ ಪ್ರೋತ್ಸಾಹ ನೀಡಿ, ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ದಾದಿಯರ ಕೆಲಸಗಳಿಗೆ ಜನರನ್ನು ಆಹ್ವಾನಿಸಿ ಏರಿಕೆಯಾಗುತ್ತಿರುವ ಜನಸಂಖ್ಯೆಯ ಆರೋಗ್ಯವನ್ನು ರಕ್ಷಣೆ ಮಾಡಬೇಕಾಗಿದೆ.
  • ಅಂತರಾಷ್ಟ್ರೀಯ ದಾದಿಯರ ದಿನವಾದ ಇಂದು ಅವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿ ಅವರ ಕೆಲಸದಲ್ಲಿ ಸುರಕ್ಷತೆಯನ್ನು ಒದಗಿಸಿ ಜನರ ಸೇವೆಯಲ್ಲಿ ತೊಡಗುವಂತೆ ಅವರನ್ನು ಹುರಿದುಂಬಿಸಬೇಕು.
  • ಸೋಂಕಿನ ವಿಚಾರ ಬಂದಾಗ ದಾದಿಯರ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಅವರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಬೇಕು. ಹಾಗಿದ್ದಾಗ ಮಾತ್ರ ಸಮಾಜದ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ