ಆ್ಯಪ್ನಗರ

ಮೂತ್ರ ಸೋಂಕಿನ ಸಮಸ್ಯೆ ಇರುವ ಮಹಿಳೆಯರು ನಿಂಬೆ ಜ್ಯೂಸ್ ಕುಡಿಯಬೇಕಂತೆ..

ನಿಂಬೆಹಣ್ಣಿನ ಪಾನೀಯವನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುತ್ತಾ ಬರುವುದರಿಂದ, ದೇಹದ ತೂಕ, ಬೊಜ್ಜು ಸಮಸ್ಯೆ ಕಡಿಮೆ ಆಗುವುದು ಮಾತ್ರವಲ್ಲದೆ, ಮಹಿಳೆಯರಲ್ಲಿ ಕಂಡು ಬರುವ ಮೂತ್ರ ಸೋಂಕಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

Vijaya Karnataka Web 24 May 2022, 4:19 pm
ಸಾಮಾನ್ಯವಾಗಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅದರಲ್ಲೂ ಕೆಲವೊಂದು ಯಾರ ಬಳಿಯೂ ಹಂಚಿ ಕೊಳ್ಳಲಾಗದ ಸಮಸ್ಯೆಗಳು ಕೂಡ ಇರುತ್ತವೆ.
Vijaya Karnataka Web international womens health day drink lemon juice in empty stomach daily to prevent uti
ಮೂತ್ರ ಸೋಂಕಿನ ಸಮಸ್ಯೆ ಇರುವ ಮಹಿಳೆಯರು ನಿಂಬೆ ಜ್ಯೂಸ್ ಕುಡಿಯಬೇಕಂತೆ..


ಉದಾಹರಣೆಗೆ ನೋಡುವುದಾದರೆ, ಬ್ಯಾಕ್ಟೀರಿಯಗಳ ಸೋಂಕು, ಯೋನಿಯ ಭಾಗದಲ್ಲಿ ಫಂಗಸ್ ಬೆಳವಣಿಗೆ, ಮೂತ್ರನಾಳದ ಸೋಂಕಿನ ಸಮಸ್ಯೆ, ಕೆಲವೊಮ್ಮೆ ಸ್ವಚ್ಛತೆಯನ್ನು ಕಾಯ್ದುಕೊಳ್ಳದೇ ಮುಟ್ಟಿನ ಸಮಯದಲ್ಲಿ ಕಾಡುವ ಸಮಸ್ಯೆಗಳು ಇಂತಹ ಸಮಸ್ಯೆಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಕೆಗೆ ಇನ್ನಷ್ಟು ಕಿರಿಕಿರಿ ಉಂಟುಮಾಡುತ್ತವೆ. ಕೆಲವೊಮ್ಮೆ ಎಷ್ಟೇ ಶುಚಿತ್ವ ಅಥವಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ ಕೂಡ ಈ ರೀತಿ ಆಗಬಹುದು

ಈಗಂತೂ ಯಾವುದೇ ಸಮಸ್ಯೆಗಳಿಗೂ, ವೈದ್ಯರು ನೀಡುವ ಕೆಲವೊಂದು ಔಷಧಿಗಳು, ತಕ್ಕ ಮಟ್ಟಿಗೆ ಆದರೂ ಪರಿಹಾರ ಒದಗಿಸುತ್ತದೆ. ಮನೆಯಲ್ಲಿಯೂ ಕೂಡ ಕೆಲವು ಮನೆಮದ್ದುಗಳನ್ನು ಉಪ ಯೋಗಿಸಿಕೊಂಡು ಪರಿಣಾಮಕಾರಿಯಾದ ಪರಿಹಾರಗಳನ್ನು ಕಂಡುಕೊಳ್ಳಬಹುದು. ಅದರಲ್ಲೂ ಮನೆಮದ್ದುಗಳ ವಿಷ್ಯಕ್ಕೆ ಬರುವುದಾದರೆ, ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಎಂದರೆ ನಿಂಬೆಹಣ್ಣಿನ ಜ್ಯೂಸ್ ಅಥವಾ ಶರಬತ್ತು! ಹೌದು ಒಂದು ವೇಳೆ ಬಹಳೆಯರಿಗೆ ಮೂತ್ರನಾಳದ ಸೋಂಕಿನ ಸಮಸ್ಯೆ ಇದ್ದರೆ, ಪ್ರತಿದಿನ ಒಂದು ಲೋಟ ನಿಂಬೆ ಹಣ್ಣಿನ ಪಾನಕವನ್ನು ಕುಡಿಯುತ್ತಾ ಬರುವುದರಿಂದ, ಈ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ.

ಮೂತ್ರನಾಳದ ಸೋಂಕು ನಿವಾರಣೆಗೆ ಏನು ಮಾಡಬೇಕು?

ದೀರ್ಘಕಾಲದಿಂದ ಮೂತ್ರನಾಳದ ಸೋಂಕಿನ ಸಮಸ್ಯೆ ಇರುವ ಮಹಿಳೆಯರು, ಅಂತಹವರು ಪ್ರತಿದಿನ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸ ಹಿಂಡಿ, ಚೆನ್ನಾಗಿ ಮಿಕ್ಸ್ ಮಾಡಿ ಕೊಂಡು, ಪ್ರತಿದಿನ ಖಾಲಿ ಹೊಟ್ಟೆಗೆ ಕುಡಿಯುತ್ತಾ ಬರುವುದರಿಂದ, ದೇಹದೊಳಗೆ ಇರುವ ಕಲ್ಮಶ ಗಳು ಮೂತ್ರ ವಿಸರ್ಜನೆಯ ಮೂಲಕ ಹೊರಗೆ ಹೋಗಿ, ಕ್ರಮೇಣವಾಗಿ ಮೂತ್ರ ನಾಳದ ಸೋಂಕಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ವಿಟಮಿನ್ ಸಿ

  • ಬೀಜವಿಲ್ಲದೇ ಇದ್ದರೆ ನಿಂಬೆ ಹಣ್ಣು ಸಂಜೀವಿನಿಯೇ ಆಗುತ್ತಿತ್ತು ಎಂಬ ಗಾದೆಯೊಂದಿದೆ. ಇದು ನಿಜ ಕೂಡ ಸಿಟ್ರಸ್ ಜಾತಿಗೆ ಸೇರಿದ ನಿಂಬೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶವನ್ನು ಈ ಹಣ್ಣಿನ ಪಾನೀಯವನ್ನು ಕುಡಿಯುವುದರಿಂದ,
  • ಮೂತ್ರನಾಳದ ಸೋಂಕು ನಿವಾರಣೆಗೆ ಸಹಾಯವಾಗುತ್ತದೆ. ಇನ್ನು ಇದರ ಪಾನೀಯವನ್ನು ನಿಯ ಮಿತವಾಗಿ ಕುಡಿಯುತ್ತಾ ಬರುವುದರಿಂದ, ರಕ್ತದಲ್ಲಿನ ಪಿಹೆಚ್ ಮಟ್ಟವನ್ನು ನಿಯಂತ್ರಿಸಲು ಸಹಾ ಯವಾಗುತ್ತದೆ, ಜೊತೆಗೆ ಸೋಂಕುಕಾರಕ ಬ್ಯಾಕ್ಟೀರಿ ಯಾಗಳಿಂದ ನಮ್ಮ ಆರೋಗ್ಯಕ್ಕೆ ಆಗುವ ಹಾನಿ ಯನ್ನು ತಡೆಯುತ್ತದೆ. ಇದರಿಂದ ಮಹಿಳೆಯರಲ್ಲಿ ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಾ ಗಳು, ನಿವಾರಣೆಯಾಗಿ, ಅತ್ಯುತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಯಲ್ಲಿ ಸಹಾಯವಾಗುತ್ತದೆ.

ನಿಂಬೆ ಹಣ್ಣಿನ ಗುಣಗಳು

  • ಇನ್ನು ನಿಂಬೆ ಹಣ್ಣಿನಲ್ಲಿ ವಿಟಮಿನ್ ' ಬಿ ', ವಿಟಮಿನ್ ' ಸಿ ', ಪಾಸ್ಪರಸ್, ಕಾರ್ಬೋಹೈಡ್ರೇಟ್ ಅಂಶಗಳು ಯಥೇಚ್ಛವಾಗಿದ್ದು, ಮನುಷ್ಯನಲ್ಲಿ ದೈಹಿಕ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೆಚ್ಚಿಸು ವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೇ ನಿಂಬೆ ಹಣ್ಣಿನ ರಸದಲ್ಲಿ ಪ್ರಮುಖವಾಗಿ ಮೂತ್ರವರ್ಧಕ ಗುಣ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತದೆ.
  • ಹೀಗಾಗಿ ಈ ಸಮಸ್ಯೆ ಇರುವವರು, ಪ್ರತಿದಿನ ಖಾಲಿಹೊಟ್ಟೆಗೆ, ನಿಂಬೆ ಹಣ್ಣಿನ ಪಾನಕ ಕುಡಿಯುತ್ತಾ ಬರು ವುದರಿಂದ, ಪದೇ ಪದೇ ಮೂತ್ರ ವಿಸರ್ಜನೆ ಮಾಡುವ ಹಾಗೆ ಮಾಡಿ, ದೇಹದಿಂದ ಮೂತ್ರ ನಾಳದ ಸೊಂಕು ಉಂಟು ಮಾಡುವ ಕೆಟ್ಟ ಬ್ಯಾಕ್ಟೀರಿಯಾಗಳು ದೇಹದಿಂದ ಹೊರಗೆ ಹೋಗುವಂತೆ ಮಾಡುತ್ತದೆ.

ನೀವು ಹೀಗೆ ಮಾಡಿ ಸಾಕು

  • ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ, ಪೂರ್ತಿ ಅರ್ಧ ನಿಂಬೆಹಣ್ಣಿನ ರಸ ಹಿಂಡಿ,ಇದಕ್ಕೆ ಚಿಟಿಕೆ ಯಷ್ಟು ಉಪ್ಪನ್ನು ಬೆರೆಸಿ, ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬರುವ ಅಭ್ಯಾಸ ಮಾಡಿಕೊಳ್ಳಬೇಕು. ಉತ್ತಮ ಫಲಿತಾಂಶಕ್ಕಾಗಿ, ಈ ಸಮಸ್ಯೆ ಇರುವವರು ಪ್ರತಿದಿನ, ಈ ಪಾನೀಯವನ್ನು ಕುಡಿಯುತ್ತಾ ಬರುವುದರಿಂದ, ಈ ಮೂತ್ರನಾಳದ ಸೋಂಕು ಪರಿಹಾರವಾಗುತ್ತದೆ
  • ಒಂದು ವೇಳೆ ನಿಮಗೆ ಗ್ರೀನ್ ಟೀ, ಇಷ್ಟವಾಗುವ ಹಾಗೆ ಇದ್ದರೆ, ಪ್ರತಿದಿನ ಗ್ರೀನ್ ಟೀಗೆ, ಒಂದು ಟೀ ಚಮಚ ನಿಂಬೆ ಹಣ್ಣಿನ ರಸ, ಸ್ವಲ್ಪ ತುರಿದ ಶುಂಠಿ, ಒಂದು ಟೀ ಜೇನುತುಪ್ಪ ಬೆರೆಸಿ ಸೇವನೆ ಮಾಡಿ.
  • ಇಲ್ಲಾಂದರೆ, ನಿಮ್ಮ ಪ್ರತಿದಿನದ ಸಲಾಡ್ ಅಥವಾ ನಿಮ್ಮ ದೈನಂದಿನ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಸಂದರ್ಭದಲ್ಲಿ ಕೂಡ, ಒಂದು ಅರ್ಧ ತುಂಡು ಬೀಜ ನಿವಾರಣೆ ಮಾಡಿದ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಸೇವನೆ ಮಾಡಬಹುದು.

ಈ ಟಿಪ್ಸ್ ಅನುಸರಿಸಿ

  • ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಏನಿಲ್ಲ ಅಂದರೂ ಕೂಡ ದಿನಕ್ಕೆ ಸರಾಸರಿ 2-3 ಲೀಟರ್ ನೀರು ಕುಡಿಯಿರಿ
  • ವಿಟಮಿನ್ ಸಿ ಅಧಿಕವಾಗಿ ಇರುವಂತಹ ಆಹಾರಗಳಾದ ಕಿತ್ತಳೆ, ಸ್ಟ್ರಾಬೆರಿ ಸೀಬೆ ಹಣ್ಣು, ತರಕಾರಿ ಗಳಾದ ಬ್ರಾಕೋಲಿ, ಕೇಲ್, ದೊಣ್ಣೆ ಮೆಣಸು, ಇಂತಹ ತರಕಾರಿಗಳನ್ನು ಹೆಚ್ಚು ಸೇವಿಸಿ
  • ಕಾಫಿ, ಕಾರ್ಬೋನೇಟೆಡ್ ಪಾನೀಯಗಳು, ಕೃತಕ ಸಿಹಿ, ಮಸಾಲೆಯುಕ್ತ ಆಹಾರಗಳಿಂದ ಆದಷ್ಟು ದೂರವಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ