ಆ್ಯಪ್ನಗರ

ರಾತ್ರಿ ಹೊತ್ತು ಮೊಸರು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ?

ರಾತ್ರಿ ಊಟಕ್ಕೆ ಮೊಸರು ತೆಗೆದುಕೊಳ್ಳುವುದು ಒಳ್ಳೆಯದಲ್ಲ ಎಂದು ಕೆಲವರು ಸಲಹೆ ನೀಡುತ್ತಾರೆ. ರಾತ್ರಿ ಹೊತ್ತು ಮೊಸರು ತಿಂದರೆ ಏನಾಗುತ್ತದೆ? ಯಾರಿಗೆ ಒಳ್ಳೆಯದಲ್ಲ ಎಂಬ ಮಾಹಿತಿ ನೋಡಿ ಇಲ್ಲಿದೆ.

TIMESOFINDIA.COM 2 Sep 2020, 7:39 pm
ಹೆಚ್ಚಿನರಿಗೆ ಊಟ ಹೊಟ್ಟೆ ತುಂಬಿದ ತೃಪ್ತಿ ಸಿಗಬೇಕೆಂದರೆ ಸ್ವಲ್ಪ ಮೊಸರನ್ನ ತಿನ್ನಲೇಬೇಕು. ಅದು ಮಧ್ಯಾಹ್ನವಿರಲಿ, ರಾತ್ರಿಯಿರಲಿ ಊಟವೆಂದ ಮೇಲೆ ಮೊಸರು ಇರಲೇಬೇಕೆಂದು ಬಯಸುತ್ತಾರೆ.
Vijaya Karnataka Web curd


ಮತ್ತೆ ಕೆಲವರು ಅದರಲ್ಲೂ ಮುಂಬಯಿ ಕಡೆ ರಾತ್ರಿ ಊಟಕ್ಕೆ ಮೊಸರು ಬಳಸುವುದಿಲ್ಲ, ರಾತ್ರಿ ಮೊಸರು ಬಳಸಿದರೆ ಕಫ ಆಗುತ್ತದೆ ಎಂದು ಹೇಳುತ್ತಾರೆ. ರಾತ್ರಿ ಊಟಕ್ಕೆ ಮೊಸರು ಬಳಸಬಹುದೇ? ಇದರ ಕುರಿತು ಆಯುರ್ವೇದ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಆಯುರ್ವೇದದ ಪ್ರಕಾರ ರಾತ್ರಿ ಹೊತ್ತು ಮೊಸರು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ. ಮೊಸರು ಹುಳಿ ಮತ್ತು ಸಿಹಿ ಮಿಶ್ರಿತ. ಇದನ್ನು ರಾತ್ರಿ ಹೊತ್ತು ತಿನ್ನುವುದರಿಂದ ಕೆಲವರಿಗೆ ಕಫ ಆಗುವುದು.


ಮೊಸರು ದೇಹಕ್ಕೆ ಒಳ್ಳೆಯದಾದರೂ ಇದನ್ನು ಎಲ್ಲಾ ಸಮಯದಲ್ಲೂ ಸೇವನೆ ಮಾಡಬಾರದು ಎಂದು ಹೇಳಲಾಗುತ್ತದೆ. ಅದರಲ್ಲೂ ಕಫ ಪ್ರವೃತ್ತಿ ಇರುವಂತಹ ಜನರು ಮೊಸರು ಸೇವನೆ ಮಾಡಬಾರದು ಎಂದು ತಜ್ಞರು ಹೇಳುವರು. ರಾತ್ರಿ ವೇಳೆ ಊಟಕ್ಕೆ ಮೊಸರು ಸೇವನೆ ಮಾಡಲೇಬಾರದು ಎಂದು ಹೇಳಲಾಗುತ್ತದೆ. ಅದರಲ್ಲೂ ಅಸ್ತಮಾ ಮತ್ತು ಮೂಳೆ ಸಮಸ್ಯೆ ಇರುವಂತಹ ಜನರು ಮೊಸರನ್ನು ರಾತ್ರಿ ವೇಳೆ ಸೇವಿಸಲೇಬಾರದು.

ಅಸ್ತಮಾ, ಸಂಧಿವಾತದವರು ರಾತ್ರಿ ವೇಳೆ ಮೊಸರು ಸೇವಿಸಲೇಬಾರದು!


ಮೊಸರಿನಲ್ಲಿ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಇತರ ಕೆಲವೊಂದು ಖನಿಜಾಂಶಗಳು ಇವೆ. ಇದು ಮೂಳೆ ಹಾಗೂ ಹಲ್ಲುಗಳಿಗೆ ಅಗತ್ಯವಾಗಿ ಬೇಕು. ಮೊಸರು ಒತ್ತಡ ಕಡಿಮೆ ಮಾಡುವುದು ಮತ್ತು ಅಪಧಮನಿ ಆರೋಗ್ಯ ಕಾಪಾಡುವುದು. ಆದರೆ ಮೊಸರು ತಿನ್ನುವ ವೇಳೆ ನಾವು ಇವುಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ಆಯುರ್ವೇದದ ಪ್ರಕಾರ ರಾತ್ರಿ ವೇಳೆ ಮೊಸರು ಸೇವನೆ ನಿಷಿದ್ಧ.


ಯಾರಿಗೆ ಬೇಗನೆ ಶೀತ, ಕಫ ಸಮಸ್ಯೆ ಬರುತ್ತದೋ ಅವರು ಮೊಸರನ್ನು ರಾತ್ರಿ ಹೊತ್ತು ಮೊಸರು ತಿನ್ನದಿರುವುದು ಒಳ್ಳೆಯದು. ಏನೂ ತೊಂದರೆಯಾಗದಿದ್ದರೆ ಮೊಸರು ತಿನ್ನಬಹುದು.

ರಾತ್ರಿ ಮಜ್ಜಿಗೆ ಕುಡಿಯಬಹುದೇ?
* ಮೊಸರು ಬದಲಿಗೆ ರಾತ್ರಿ ಮಜ್ಜಿಗೆ ಬಳಸಬಹುದು.
* ಮೊಸರು ಬದಲಿಗೆ ಯೋಗರ್ಟ್ ಬಳಸಬಹುದು.
* ಮಜ್ಜಿಗೆ ಹಾಗೂ ಯೋಗರ್ಟ್ ಬಳಸುವಾಗ ಚಿಟಕೆಯಷ್ಟು ಕಾಳು ಮೆಣಸಿನ ಪುಡಿ ಹಾಕಿದರೆ ಒಳ್ಳೆಯದು.
* ಇನ್ನು ಹಗಲಿನಲ್ಲಿ ಮೊಸರು ತೆಗೆದುಕೊಳ್ಳುವಾಗ ಸಕ್ಕರೆ ಹಾಕದೆ ಬಳಸಿ, ರಾತ್ರಿ ಹೊತ್ತಿನಲ್ಲಿ ಬಳಸುವುದಾದರೆ ಸ್ವಲ್ಪ ಸಕ್ಕರೆ ಹಾಕಿ ತಿನ್ನಿ. ಇದು ಜೀರ್ಣಕ್ರಿಯೆಗೆ ಸಹಕಾರಿ.

ಎಳೆ ಮಕ್ಕಳಿಗೆ ಅನಾನಸ್ ಹಣ್ಣನ್ನು ತಿನ್ನಿಸಬಹುದೇ ?

ಶೀತ, ಕಫ ಇದ್ದಾಗ ರಾತ್ರಿ ಹೊತ್ತು ಮೊಸರು ತಿನ್ನಬೇಡಿ, ಏನೂ ಸಮಸ್ಯೆ ಇಲ್ಲದಿದ್ದರೆ ಒಂದು ಕಪ್‌ ಮೊಸರು ಸವಿಯಲು ಯೋಚಿಸುವ ಅಗತ್ಯವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ