ಆ್ಯಪ್ನಗರ

ಸ್ಮಾರ್ಟ್‌ಫೋನ್‌ನಿಂದ ಮೊಡವೆ

ನೀವು ಹೆಚ್ಚು ಸಮಯ ಮೊಬೈಲ್‌ ಬಳಸುತ್ತೀರ? ಹಾಗಾದರೆ ಅದು ನಿಮ್ಮ ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ.

Vijaya Karnataka 25 Jul 2019, 5:00 am
ನೀವು ಹೆಚ್ಚು ಸಮಯ ಮೊಬೈಲ್‌ ಬಳಸುತ್ತೀರ? ಹಾಗಾದರೆ ಅದು ನಿಮ್ಮ ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ.
Vijaya Karnataka Web is your smartphone causing acne
ಸ್ಮಾರ್ಟ್‌ಫೋನ್‌ನಿಂದ ಮೊಡವೆ

ಮೊಬೈಲ್‌ ಮೇಲಿನ ಅವಲಂಬನೆ ಹಲವು ಆರೋಗ್ಯ ಸಮಸ್ಯೆಗಳು ಉಂಟು ಮಾಡುತ್ತವೆ. ಅದೇ ರೀತಿ ಚರ್ಮದ ಆರೋಗ್ಯಕ್ಕೂ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಈ ಸಂಬಂಧ ನಡೆದ ಹಲವು ಅಧ್ಯಯನಗಳು ಕೂಡ ಇದನ್ನು ಸಾಬೀತು ಮಾಡಿವೆ.

ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆಯಿಂದ ಮೊಡವೆಗಳು ಮೂಡುವ ಸಾಧ್ಯತೆ ಇದೆ ಎನ್ನುತ್ತಾರೆ ಚರ್ಮರೋಗ ತಜ್ಞರು. ಬ್ಯಾಕ್ಟೀರಿಯಾಗಳು ನಿಮ್ಮ ಫೋನ್‌ನ ಪರದೆಯ ಮೇಲೆ ವ್ಯಾಪಕವಾಗಿರುವುದರಿಂದ ಮಾತನಾಡುವಾಗ ತ್ವಚೆಗೆ ತಾಗಿಸುವುದರಿಂದ ಬ್ಯಾಕ್ಟೀರಿಯಾಗಳು ತ್ವಚೆಗೆ ವರ್ಗಾವಣೆಯಾಗಿ ಮೊಡವೆಗಳು ಉಂಟಾಗಬಹುದು. ಅಲ್ಲದೆ ಚರ್ಮ ಕಳೆಗುಂದಲು ಇದು ಕಾರಣವಾಗುತ್ತದೆ. ನಿಮ್ಮ ಫೋನ್‌ನೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ನಿಮ್ಮ ಚರ್ಮದ ನೈಸರ್ಗಿಕ ಬಣ್ಣ ಕಳೆಗುಂದುತ್ತದೆ. ಬಹು ಬೇಗ ಸುಕ್ಕುಗಳು ಉಂಟಾಗಿ ವಯಸ್ಸಾದಂತೆ ಕಾಣುತ್ತದೆ. ಅಲ್ಲದೆ ಸ್ಕಿನ್‌ ಕ್ಯಾನ್ಸರ್‌ ಅಪಾಯ ಕೂಡ ಇದೆ ಎಂದು ತಜ್ಞರು ಎಚ್ಚರಿಸಿದ್ದು, ಸನ್‌ಬರ್ನ್‌ನಿಂದ ಆಗುವ ಅಪಾಯಕ್ಕಿಂತ ಇದರಿಂದ ಆಗುವ ತೊಂದರೆ ದೊಡ್ಡದು ಎನ್ನಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ