ಆ್ಯಪ್ನಗರ

ಈ ನುಗ್ಗೆ ಹೂವಿನ ಪಲ್ಯದ ಪ್ರಯೋಜನಗಳು ಗೊತ್ತಾದ್ರೆ, ದಿನಾ ಮಾಡಿ ತಿನ್ನುವಿರಿ!!

ನುಗ್ಗೆ ಹೂವು ಅಥವಾ ಮೊರಿಂಗಾ ಹೂಗಳಿಂದ ಚಹ ತಯಾರು ಮಾಡುವುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಸಬ್ಜಿ ತಯಾರು ಮಾಡುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?

Vijaya Karnataka Web 23 Jan 2021, 6:00 pm
ನುಗ್ಗೆ ಹೂವು ಅಥವಾ ಮೊರಿಂಗಾ ಹೂಗಳು ಮನುಷ್ಯನ ದೇಹಕ್ಕೆ ಸಾಕಷ್ಟು ಆರೋಗ್ಯಕರ. ರಕ್ತದ ಒತ್ತಡವನ್ನು ಕಡಿಮೆ ಮಾಡುವ ನೈಸರ್ಗಿಕ ಉತ್ಪನ್ನ ಎಂದೇ ಇದನ್ನು ಕರೆಯಲಾಗುತ್ತದೆ. ಮಧುಮೇಹ ಸಮಸ್ಯೆಯನ್ನು ಸಹ ಸುಲಭವಾಗಿ ಇದು ನಿಯಂತ್ರಣ ಮಾಡಬಲ್ಲದು.
Vijaya Karnataka Web know the secrets health benefits of moringa flower sabzi recipe
ಈ ನುಗ್ಗೆ ಹೂವಿನ ಪಲ್ಯದ ಪ್ರಯೋಜನಗಳು ಗೊತ್ತಾದ್ರೆ, ದಿನಾ ಮಾಡಿ ತಿನ್ನುವಿರಿ!!


ಕೇವಲ ಚಹಾದ ರೂಪದಲ್ಲಿ ಮಾತ್ರ ಇದನ್ನು ಸೇವನೆ ಮಾಡಬೇಕು ಎಂದೇನಿಲ್ಲ. ಸಬ್ಜಿ ಸಹ ಮಾಡಿ ರುಚಿಕರವಾಗಿ ಸವಿಯಬಹುದು. ಈ ಲೇಖನದಲ್ಲಿ ಅದರ ಬಗ್ಗೆ ತಿಳಿದುಕೊಳ್ಳೋಣ

​ಸಬ್ಜಿ ತಯಾರು ಮಾಡಲು ಬೇಕಾಗಿರುವ ಸಾಮಗ್ರಿಗಳು

  • ಸುಮಾರು ಕಾಲು ಕೆಜಿ ಆಗುವಷ್ಟು ಮೊರಿಂಗಾ ಹೂವು
  • ಸುಮಾರು ಕಾಲು ಕೆಜಿ ಹಸಿಬಟಾಣಿ ಕಾಳುಗಳು
  • 2 ಈರುಳ್ಳಿ
  • ಮೂರು ಟೊಮ್ಯಾಟೋ ಹಣ್ಣು
  • ಒಂದು ಹಸಿಮೆಣಸಿನಕಾಯಿ
  • ಒಂದು ಟೇಬಲ್ ಚಮಚ ತುಪ್ಪ
  • ಒಂದು ಟೀ ಚಮಚ ಕೆಂಪು ಮೆಣಸಿನಕಾಯಿ ಪುಡಿ
  • ಅರ್ಧ ಟೀ ಚಮಚ ಜೀರಿಗೆ ಪುಡಿ
  • ಅರ್ಧ ಟೀ ಚಮಚ ಸಾಸಿವೆ ಕಾಳುಗಳು
  • ಅರ್ಧ ಟೇಬಲ್ ಚಮಚ ಗರಂ ಮಸಾಲ
  • ಉಪ್ಪು ರುಚಿಗೆ ತಕ್ಕಷ್ಟು

​ಮೊರಿಂಗಾ ಹೂವಿನ ಸಬ್ಜಿ ತಯಾರು ಮಾಡುವ ವಿಧಾನ

  • ಮೊದಲಿಗೆ ಸ್ಟೌವ್ ಮೇಲೆ ಒಂದು ಪಾತ್ರೆಯಲ್ಲಿ ನೀರನ್ನು ಒಂದು ಟೀ ಚಮಚ ಉಪ್ಪು ಹಾಕಿ ಚೆನ್ನಾಗಿ ಕುದಿಸಿ.
  • ಇದಕ್ಕೆ ಮೊರಿಂಗಾ ಹೂಗಳನ್ನು ಸೇರಿಸಿ.
  • ಮುಚ್ಚಳವನ್ನು ಮುಚ್ಚಿ ಸುಮಾರು ಎರಡು ನಿಮಿಷಗಳವರೆಗೆ ಸಿಮ್ ನಲ್ಲಿ ಬಿಡಿ
  • ಈಗ ಉರಿಯನ್ನು ಆರಿಸಿ ಇಡೀ ರಾತ್ರಿ ಅಂದರೆ ಸುಮಾರು 9 ರಿಂದ 10 ಗಂಟೆಗಳ ಕಾಲ ಹಾಗೆ ಬಿಡಿ.
  • ಮರುದಿನ ಬೆಳಗ್ಗೆ ಇದನ್ನು ಸೋಸಿಕೊಂಡು ಶುದ್ಧವಾದ ನೀರಿನಲ್ಲಿ ತೊಳೆದುಕೊಳ್ಳಿ.
  • ಈಗ ಒಂದು ಪಾತ್ರೆಗೆ ಹೊಸದಾಗಿ ನೀರನ್ನು ಸುರಿದು ಇದನ್ನು ಜೊತೆಗೆ ಹಾಕಿಕೊಂಡು ಮತ್ತೊಮ್ಮೆ ಸುಮಾರು 15 ನಿಮಿಷಗಳವರೆಗೆ ಚೆನ್ನಾಗಿ ಕುದಿಸಿ. ಈ ಪ್ರಕ್ರಿಯೆ ಬಹಳಷ್ಟು ಮುಖ್ಯವಾಗುತ್ತದೆ. ಈ ಸಮಯದಲ್ಲಿ ಮೊರಿಂಗಾ ಹೂಗಳಲ್ಲಿ ಇರುವ ಕಹಿ ಅಂಶ ದೂರವಾಗುತ್ತದೆ.
  • ಚೆನ್ನಾಗಿ ಬೇಯಿಸಿದ ನಂತರ ನೀರನ್ನು ಸೋಸಿಕೊಂಡು, ನಿಮ್ಮ ಕೈಗಳಿಂದ ನೀರನ್ನು ಚೆನ್ನಾಗಿ ಹಿಂಡಿ ಉಳಿದ ಹೂವಿನ ಹಿಪ್ಪೆಯನ್ನು ಬೇರೆ ಕಡೆ ಇಡಿ.
  • ಈಗ ಒಂದು ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಂಡು ಅದಕ್ಕೆ ಒಗ್ಗರಣೆಗೆ ಸ್ವಲ್ಪ ಜೀರಿಗೆ ಮತ್ತು ಸಾಸಿವೆ ಕಾಳುಗಳನ್ನು ಹಾಕಿ ಸಿಡಿಸಿ.
  • ಹೆಚ್ಚಿದ ಈರುಳ್ಳಿಯನ್ನು ಕಾದಿರುವ ಎಣ್ಣೆಗೆ ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಿ.
  • ಇದಕ್ಕೆ ಟೊಮ್ಯಾಟೋ ಹಣ್ಣುಗಳು, ಹಸಿ ಬಟಾಣಿ ಮತ್ತು ಹಸಿಮೆಣಸಿನಕಾಯಿಯನ್ನು ಸೇರಿಸುವುದನ್ನು ಮರೆಯಬೇಡಿ. ಸುಮಾರು ಐದರಿಂದ ಏಳು ನಿಮಿಷಗಳು ಒಲೆಯ ಮೇಲೆ ಇದು ಹಾಗೆ ಇರುವಂತೆ ನೋಡಿಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು ಮತ್ತು ಕೆಂಪು ಮೆಣಸಿನಕಾಯಿ ಪುಡಿಯನ್ನು ಹಾಕಿ. ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ತೆಗೆದಿಟ್ಟುಕೊಂಡು ಮೊರಿಂಗಾ ಹೂವಿನ ಹಿಪ್ಪೆಯನ್ನು ಇದಕ್ಕೆ ಹಾಕಿ.
  • ಸುಮಾರು ಮೂರರಿಂದ ನಾಲ್ಕು ನಿಮಿಷಗಳು ಎಣ್ಣೆಯಲ್ಲಿ ಚೆನ್ನಾಗಿ ಹುರಿದು, ಇದರ ಮೇಲೆ ಗರಂ ಮಸಾಲ ಹಾಕಿ ಮಿಶ್ರಣ ಮಾಡಿ.
  • ರೋಟಿ ದಾಲ್ ಜೊತೆಗೆ ಇದು ತಿನ್ನಲು ಹೇಳಿ ಮಾಡಿಸಿದ ಹಾಗೆ ಇರುತ್ತದೆ.

​ಕೆಲವು ಉಪಯುಕ್ತ ಟಿಪ್ಸ್

  • ಮೊರಿಂಗಾ ಹೂಗಳನ್ನು ನೀವು ಖರೀದಿ ಮಾಡುವಾಗ ಅವುಗಳಿಗೆ ಕೇವಲ ಹೂವುಗಳು ಮತ್ತು ಮೊಗ್ಗುಗಳು ಮಾತ್ರ ಇರುವಂತೆ ತೆಗೆದುಕೊಳ್ಳಿ. ಹಿಂಭಾಗದ ಕಡ್ಡಿಗಳು ಇಲ್ಲದಂತೆ ಗಮನವಹಿಸಿ.
  • ಏಕೆಂದರೆ ಕಡ್ಡಿಗಳನ್ನು ಸ್ವಚ್ಛ ಮಾಡಲು ಕಷ್ಟವಾಗುತ್ತದೆ ಮತ್ತು ಇವುಗಳನ್ನು ಒಂದು ವೇಳೆ ಬೇಯಿಸಿದರೆ ಸಬ್ಜಿ ರುಚಿ ಹಾಳಾಗುತ್ತದೆ.
  • ಬೇಯಿಸಿದ ನೀರಿನಲ್ಲಿ ಹೂಗಳು ಇಡೀ ರಾತ್ರಿ ಹಾಗೆ ಉಳಿಯುವಂತೆ ನೋಡಿಕೊಳ್ಳಿ. ದೀರ್ಘಕಾಲದವರೆಗೆ ಇದನ್ನು ಹಾಗೆಯೇ ಬಿಟ್ಟು ಇದರ ಕಹಿ ಗುಣವನ್ನು ದೂರ ಮಾಡಬಹುದು.

​ಪೌಷ್ಟಿಕಾಂಶಗಳ ವಿವರಗಳು

  • ಮೊರಿಂಗಾ ಹೂಗಳಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಅಮೈನೋ ಆಮ್ಲಗಳು ಹೆಚ್ಚಾಗಿರುತ್ತವೆ. ಗರ್ಭಿಣಿ ಮಹಿಳೆಯರಿಗೆ ಮತ್ತು ಬಾಣಂತಿ ಮಹಿಳೆಯರಿಗೆ ಸ್ತನಗಳಲ್ಲಿ ಹಾಲನ್ನು ಹೆಚ್ಚು ಮಾಡುವ ಗುಣಲಕ್ಷಣಗಳು ಇವುಗಳಲ್ಲಿವೆ.
  • ಈ ಹೂಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶ ಇರುವ ಕಾರಣ ರಕ್ತದ ಒತ್ತಡ ನಿಯಂತ್ರಣವಾಗುತ್ತದೆ ಎಂದು ಹೇಳುತ್ತಾರೆ. ಮಧುಮೇಹ ಸಮಸ್ಯೆ ಇರುವವರು ಕೂಡ ಇದನ್ನು ಅಚ್ಚುಕಟ್ಟಾಗಿ ಸೇವನೆ ಮಾಡಬಹುದು. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಜೊತೆಗೆ ಸಾಮಾನ್ಯ ಶೀತ ಮತ್ತು ಸೋಂಕಿನ ಸಮಸ್ಯೆ ದೂರವಾಗುತ್ತದೆ.

Read in English: How to make nutritious Moringa flower sabzi

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ