ಆ್ಯಪ್ನಗರ

ಎಡದ ಕೈ ನೋವು ಹಾರ್ಟ್‌ ಅಟ್ಯಾಕ್‌ ಲಕ್ಷಣ ಇರಬಹುದು! ಎಚ್ಚರ...

ನೋವು ಎಂದರೆ ದೇಹದಲ್ಲಿ ಬರುವುದು ಸಾಮಾನ್ಯ. ಎಡದ ಕೈ ನೋವಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ.

Vijaya Karnataka Web 5 Jan 2021, 4:12 pm
ಹೃದಯಾಘಾತ ಎಂದರೆ ಅದು ಅಚಾನಕ್ ಆಗಿ ಬಂದು ಪ್ರಾಣ ಹಾನಿ ಮಾಡುವುದು ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಖಂಡಿತವಾಗಿಯೂ ಹೃದಯಾಘಾತಕ್ಕೆ ಮೊದಲು ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುವುದು. ಆದರೆ ಹೆಚ್ಚಿನ ಜನರು ಇದು ಸಾಮಾನ್ಯವೆಂದು ಕಡೆಗಣಿಸುವರು.
Vijaya Karnataka Web left arm pains you shouldnt ignore its dangerous signs of such diseases
ಎಡದ ಕೈ ನೋವು ಹಾರ್ಟ್‌ ಅಟ್ಯಾಕ್‌ ಲಕ್ಷಣ ಇರಬಹುದು! ಎಚ್ಚರ...


ಹೀಗಾಗಿ ಅದು ಹೃದಯಾಘಾತಕ್ಕೆ ಕಾರಣವಾಗುವುದು. ಹೆಚ್ಚಾಗಿ ಹೃದಯಾಘಾತಕ್ಕೆ ಮೊದಲು ಕಾಣಿಸಿಕೊಳ್ಳುವಂತಹ ಕೆಲವು ಲಕ್ಷಣಗಳು ಸಾಮಾನ್ಯವಾಗಿರುವ ಪರಿಣಾಮ ಯಾರು ಕೂಡ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲ್ಲ. ಹೀಗಾಗಿ ಹೃದಯಾಘಾತದಿಂದ ಪ್ರಾಣಹಾನಿ ಸಂಭವಿಸುವುದು ಹೆಚ್ಚು.

ಹೃದಯಾಘಾತಕ್ಕೆ ಮೊದಲು ಎಡ ಕೈಯಲ್ಲಿ ನೋವು ಕಾಣಿಸಿಕೊಳ್ಳುವುದು ಎಂದು ಹೇಳಲಾಗುತ್ತದೆ. ಆದರೆ ಇದು ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ಬರುವುದು. ಮಧ್ಯ ಮತ್ತು ಹಿರಿಯ ವಯಸ್ಸಿನವರಲ್ಲಿ ಹೃದಯಾಘಾತಕ್ಕೆ ಮೊದಲು ಎಡದ ಕೈಯಲ್ಲಿ ನೋವು ಕಾಣಿಸುವುದು. ಹೀಗೆ ಆದರೆ ಅದನ್ನು ಹೃದಯಾಘಾತದ ಲಕ್ಷಣವೆಂದು ವೈದ್ಯರು ಪರಿಗಣಿಸುವರು.

ಹೃದಯಾಘಾತವಾದ ವೇಳೆ ಎಡದ ಕೈಯಲ್ಲಿ ನೋವಿನ ಜತೆಗೆ ಬೆವರುವಿಕೆ, ವಾಕರಿಕೆ, ಆತಂಕ ಮತ್ತು ವಾಂತಿ ಕಂಡುಬರುವುದು. ಇದೆಲ್ಲವೂ ಇದ್ದರೆ ಆಗ ಖಂಡಿತವಾಗಿಯೂ ಇದನ್ನು ಹೃದಯಾಘಾತವೆಂದು ಪರಿಗಣಿಸಬಹುದು.

ಎಡ ಕೈಯಲ್ಲಿ ನೋವು ಕಂಡುಬರುವುದು ಬೇರೆ ಕಾರಣಗಳಿಂದಲೂ ಆಗಿರಬಹುದು. ಅದು ಯಾವುದು ಎಂದು ನೀವು ತಿಳಿಯಿರಿ.

​ಕೆಲವು ಮೂಳೆಗಳ ಪರಿಸ್ಥಿತಿ

  • ಎಡದ ಕೈಯಲ್ಲಿ ನೋವು ಕಂಡುಬಂದರೆ ಅದು ಹೃದಯಾಘಾತವೆಂದು ಬೆಚ್ಚಿಬೀಳಬಾರದು. ಸಾಮಾನ್ಯವಾಗಿ ಭುಜದ ಸಂಧಿವಾತದ ಸಮಸ್ಯೆಯಿಂದಲೂ ಕಾಡುವಂತಹ ಮೂಳೆಗಳಲ್ಲಿನ ನೋವು ಇದಕ್ಕೆ ಕಾರಣವಾಗಿರಬಹುದು.
  • ಕಂಪ್ಯೂಟರ್ ನಲ್ಲಿ ಹೆಚ್ಚು ಸಮಯ ಕೆಲಸ ಮಾಡುವ ಪರಿಣಾಮಕಾರಿ ಬರುವಂತಹ ಪರಿಸ್ಥಿತಿಯು ಇದಾಗಿರಬಹುದು. ದೀರ್ಘಕಾಲ ತನಕ ನೀವು ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಲಿದ್ದರೆ ಮತ್ತು ನೋವು ಕಂಡುಬಂದರೆ ಆಗ ನೀವು ವೈದ್ಯರನ್ನು ಸಂಪರ್ಕಿಸಿ.

ಈ ನಾಲ್ಕು ಬಗೆಯ ಮೀನುಗಳು ಮೂಳೆಗಳು ಬಲಗೊಳ್ಳಲು ಸಹಾಯ ಮಾಡುತ್ತವೆ

​ಗರ್ಭಕಂಠದ ಸಂಕೋಚನ

ಗರ್ಭಕಂಠದ ಸಂಕೋಚನದಿಂದಾಗಿ ಎಡದ ಕೈಯಲ್ಲಿ ನೋವು ಕಂಡುಬರುವುದು. ಇದರಿಂದಾಗಿ ನರಗಳು ಒತ್ತಲ್ಪಡುವುದು. ಭುಜದ ಭಾಗದಲ್ಲಿ ನರಗಳ ಮೇಲೆ ಒತ್ತಡ ಬಿದ್ದರೆ ಅದರಿಂದ ಎಡದ ಕೈಯಲ್ಲಿ ನೋವು ಕಂಡುಬರುವುದು. ಪೊರೆಯ ಭಾಗದಲ್ಲಿನ ನೋವಿನಿಂದಾಗಿ ಎಡದ ಕೈಯಲ್ಲಿ ನೋವು ಕಂಡುಬರುವುದು.

​​ಭುಜದ ಗಾಯ

ಯಾವುದೇ ಸಂದರ್ಭದಲ್ಲಿ ಭುಜದಲ್ಲಿ ಆಗಿರುವಂತಹ ಗಾಯ ಅಥವಾ ನೋವಿನಿಂದಾಗಿ ಎಡದ ಕೈಯಲ್ಲಿ ನೋವು ಕಂಡುಬರುವುದು. ಭುಜದ ಭಾಗದಲ್ಲಿ ಕಂಡುಬರುವಂತಹ ಗಡ್ಡೆಯಿಂದಲೂ ನೋವು ಕಂಡುಬರುವುದು. ಭುಜದ ಭಾಗದಲ್ಲಿನ ನರಗಳು ಒತ್ತಲ್ಪಟ್ಟರೂ ನೋವು ಬರುವುದು.

ಭುಜದ ನೋವನ್ನು ನಿರ್ಲಕ್ಷಿಸಬೇಡಿ, ಭಯಾನಕ ಕಾಯಿಲೆಗಳ ಸೂಚನೆ ಆಗಿರಬಹುದು!

​ಇಂಜೆಕ್ಷನ್

ಕೆಲವೊಂದು ಅನಾರೋಗ್ಯಕ್ಕೆ ತೆಗೆದುಕೊಳ್ಳುವಂತಹ ಇಂಜೆಕ್ಷನ್ ಕೂಡ ನೋವಿಗೆ ಕಾರಣವಾಗುವುದು. ಸರ್ಪಸುತ್ತು ಇತ್ಯಾದಿಗಳಿಗೆ ತೆಗೆದುಕೊಳ್ಳುವಂತಹ ಸ್ಥಳೀಯ ಇಂಜೆಕ್ಷನ್ ನಿಂದಾಗಿ ಎಡದ ಕೈಯಲ್ಲಿ ನೋವು ಕಂಡುಬರುವುದು.

​ನಿದ್ರೆಯ ಭಂಗಿ

ದೇಹದ ಒಂದು ಬದಿಗೆ ಯಾವಾಗಲೂ ಮಲಗುತ್ತಿದ್ದರೆ ಆಗ ನೋವು ಕಂಡುಬರುವುದು ಸಾಮಾನ್ಯ. ರಾತ್ರಿ ವೇಳೆ ಇದು ಅತಿಯಾದ ನೋವು ಉಂಟು ಮಾಡಬಹುದು. ಭುಜದ ಭಾಗದಲ್ಲಿ ನರಗಳು ಅತಿಯಾಗಿ ಒತ್ತಡಕ್ಕೆ ಒಳಗಾದ ಪರಿಣಾಮವಾಗಿ ನೋವು ಕಂಡುಬರುವುದು.

ನಿದ್ರೆಯಲ್ಲಿ ಬೆವರಿಳಿಯಲು ಕಾರಣಗಳು ಏನಿರಬಹುದು ಗೊತ್ತೇ?

​ಎಡದ ಕೈಯ ನೋವು: ಹೃದಯಾಘಾತ ಮತ್ತು ಇತರ ಸಮಸ್ಯೆಗೆ ವ್ಯತ್ಯಾಸವೇನು?

  • ಹೃದಯಾಘಾತ ಮತ್ತು ಇತರ ಸಮಸ್ಯೆಯನ್ನು ಪ್ರತ್ಯೇಕಿಸಲು ವೈದ್ಯರು ಹಲವಾರು ಅಂಶಗಳನ್ನು ಪರಿಗಣಿಸುವರು. ಹೃದಯಾಘಾತವಾದರೆ ಆಗ ಬೆವರುವಿಕೆ, ವಾಕರಿಕೆ, ಆತಂಕ ಹಾಗೂ ರಕ್ತದೊತ್ತಡದಲ್ಲಿ ಕುಸಿತ ಕಂಡುಬರುವುದು. ನೋವು ತೀವ್ರವಾಗುವುದು ಮತ್ತು ನಡೆಯುವಾಗ ಇದು ಮತ್ತಷ್ಟು ಹೆಚ್ಚಾಗುವುದು.
  • ನೋವು ಹೃದಯಾಘಾತದ ಇತರ ಕೆಲವು ಲಕ್ಷಣಗಳ ಜತೆಗೆ ಹೆಚ್ಚಾಗುತ್ತಲಿದ್ದರೆ ಆಗ ನೀವು ಇದನ್ನು ಗಂಭೀರವಾಗಿ ಪರಿಗಣಿಸಿ. ಸಾಮಾನ್ಯವಾಗಿ ನಡೆಯುವಾಗ, ವ್ಯಾಯಾಮ ಮಾಡುವ ವೇಳೆ, ಲೈಂಗಿಕ ಕ್ರಿಯೆ ವೇಳೆ, ಭಾವನಾತ್ಮಕ ಮತ್ತು ದೈಹಿಕ ಶ್ರಮದ ವೇಳೆ ಎದೆ ಭಾಗದಲ್ಲಿ ನೋವು ಕಾಣಿಸುತ್ತಿದ್ದರೆ ನೀವು ವೈದ್ಯರ ಬಳಿ ಪರೀಕ್ಷಿಸಿ.
  • ಮಧುಮೇಹ, ಹೃದಯಾಘಾತದ ಕೌಟುಂಬಿಕ ಇತಿಹಾಸ, ಅಧಿಕ ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್ ಸಮಸ್ಯೆಯು ಇದ್ದರೆ ಆಗ ನೋವು ಕಂಡುಬಂದರೆ ಇದನ್ನು ಗಂಭೀರವಾಗಿ ಪರಿಗಣಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ