ಆ್ಯಪ್ನಗರ

ಮನೆಯಲ್ಲೇ ತಯಾರಿಸಿದ ಮಾಸ್ಕ್ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಕೊರೊನಾ ಸಾಂಕ್ರಾಮಿಕವಾಗಿ ಹರಡುತ್ತಿರುವ ಕಾರಣ ಅದನ್ನು ತಡೆಯಲು ಬಳಕೆ ಮಾಡುವಂತಹ ಮಾಸ್ಕ್ ನ ಕೊರತೆ ಕಾಡುತ್ತಿದೆ. ಹೀಗಾಗಿ ಮನೆಯಲ್ಲೇ ನೀವು ಮಾಸ್ಕ್ ತಯಾರಿಸಿದೆ ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳಿ.

TIMESOFINDIA.COM 6 Apr 2020, 4:28 pm
ಕೊರೊನಾ ವೈರಸ್ ಎನ್ನುವುದು ಇಂದು ವಿಶ್ವದಲ್ಲಿ ಮರಣಮೃದಂಗ ಬಾರಿಸುತ್ತಿದೆ. ದಿನೇ ದಿನೇ ಈ ಸೋಂಕಿಗೆ ಒಳಗಾಗುವವರ ಹಾಗೂ ಸಾಯುವವರ ಸಂಖ್ಯೆಯು ಹೆಚ್ಚುತ್ತಲಿದೆ. ಕೆಲವು ದಿನಗಳ ಮೊದಲು ಭಾರತದಲ್ಲಿ ಕೆಲವೇ ಕೆಲವು ಇದ್ದಂತಹ ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯು ಇಂದಿನ ದಿನ ಮೂರು ಸಾವಿರದ ಗಡಿ ದಾಟಿದೆ.
Vijaya Karnataka Web precautions while using a handmade mask


ಕೊರೊನಾ ಸೋಂಕಿಗೆ ಯಾವುದೇ ಮದ್ದಿಲ್ಲದೆ ಇರುವ ಕಾರಣದಿಂದಾಗಿ ಇದು ವ್ಯಾಪಿಸುತ್ತಲೇ ಇದೆ. ಸಾವಿರಾರು ಜನರು ಈ ಸೋಂಕನ್ನು ಗೆದ್ದು ಬಂದಿದ್ದಾರೆ. ಇದನ್ನು ದೂರವಿಡಲು ಪ್ರಮುಖವಾಗಿ ಸಾಮಾಜಿಕ ಅಂತರ(ಸೋಷಿಯಲ್ ಡಿಸ್ಟೆನ್ಸ್) ಮುಖ್ಯವಾಗಿದೆ. ಹೀಗಾಗಿ ಭಾರತದಲ್ಲಿ ಈಗ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಲಾಕ್ ಡೌನ್ ವೇಳೆ ಕೂಡ ಕೆಲವು ಜನರು ಮನೆಯಿಂದ ಹೊರಗಡೆ ಬಂದು ತಮ್ಮ ಜೀವ ಮಾತ್ರವಲ್ಲದೆ, ಇತರರನ್ನು ಅಪಾಯಕ್ಕೀಡು ಮಾಡುತ್ತಿದ್ದಾರೆ. ಆದರೆ ಸೋಂಕಿನ ಬಗ್ಗೆ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಆಗ ಖಂಡಿತವಾಗಿಯೂ ನಾವು ಇದರಿಂದ ದೂರವಿರಬಹುದು.

ಕೈಗಳನ್ನು ಆಗಾಗ ಸಾಬೂನಿನಿಂದ ತೊಳೆಯುವುದು, ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಬಳಸುವುದು, ಮನೆಯಲ್ಲೇ ಇರುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವುದು ಇಲ್ಲಿ ಪ್ರಮುಖ ವಿಚಾರಗಳು.

ಕೊವಿಡ್-19 ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುವಂತಹ ಸೋಂಕು ಆಗಿದ್ದು, ಇದು ಏರೋಸಾಲ್ ಗಳಲ್ಲಿ ಸುಮಾರು ಮೂರು ಗಂಟೆಗಳ ಕಾಲ, ಪ್ಲಾಸ್ಟಿಕ್ ಸ್ಟೈನ್ ಲೆಸ್ ಸ್ಟೀಲ್ ಗಳಲ್ಲಿ ಮೂರು ದಿನಗಳ ಕಾಲ ಇರಬಲ್ಲದು. ಮಾಸ್ಕ್ ಬಳಸಿಕೊಂಡರೆ ಆಗ ಶ್ವಾಸಕೋಶಕ್ಕೆ ಸೋಂಕು ತಗುಲುವುದು ತಪ್ಪುತ್ತದೆ.

ಆದರೆ ಇಂದಿನ ದಿನಗಳಲ್ಲಿ ಅತಿಯಾದ ಬೇಡಿಕೆಯಿಂದಲೂ ಮಾಸ್ಕ್ ಕೊರತೆ ಕಾಡುತ್ತಲಿದೆ. ಕೆಲವು ಕಂಪೆನಿಗಳು ಮಾಸ್ಕ್ ತಯಾರಿಸಲು ಮುಂದೆ ಬಂದಿದೆ. ಅದೇ ರೀತಿಯಾಗಿ ಕೆಲವರು ಮನೆಯಲ್ಲೇ ಮಾಸ್ಕ್ ತಯಾರಿಸಿಕೊಳ್ಳುತ್ತಿದ್ದಾರೆ. ನಮ್ಮನ್ನು ಹಾಗೂ ನಮ್ಮ ಕುಟುಂಬದವರನ್ನು ಇಂತಹ ತುರ್ತು ಸಂದರ್ಭದಲ್ಲಿ ರಕ್ಷಿಸಿಕೊಳ್ಳುವುದು ಅತೀ ಅಗತ್ಯ. ಆದರೆ ಮನೆಯಲ್ಲೇ ತಯಾರಿಸಿದ ಮಾಸ್ಕ್ ಬಳಸುವ ಮೊದಲು ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

ಮನೆಯಲ್ಲೇ ತಯಾರಿಸಿದ ಮಾಸ್ಕ್ ಬಳಸುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ನೀವು ಇದನ್ನು ಬಳಸುವ ಮೊದಲು ಸರಿಯಾಗಿ ತೊಳೆಯಿರಿ ಮತ್ತು ಬಳಿಕ ಧರಿಸಿ. ಮಾಸ್ಕ್ ಧರಿಸುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ. ಮಾಸ್ಕ್ ಒದ್ದೆಯಾದರೆ ಅಥವಾ ತೇವಾಂಶವಿದ್ದರೆ ಆಗ ನೀವು ಬೇರೆ ಮಾಸ್ಕ್ ಧರಿಸಿ ಮತ್ತು ಇದನ್ನು ಸ್ವಚ್ಛ ಮಾಡಿ. ಒಂದು ಮಾಸ್ಕ್ ನ್ನು ತೊಳೆಯದೆ ಮತ್ತೆ ಅದನ್ನು ಬಳಸಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ