ಆ್ಯಪ್ನಗರ

ಮುಟ್ಟಿನ ಸಮಯದಲ್ಲಿ ಕಾಡುವ ನೋವನ್ನು ಕಡಿಮೆ ಮಾಡುವ ಆಹಾರಗಳು

ಮುಟ್ಟಿನ ಸಮಯದಲ್ಲಿ ಸಹಿಸಲು ಅಸಾಧ್ಯವಾದ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುವುದು. ಈ ನೋವು ಶಮನಕ್ಕೆ ಮಾತ್ರೆ ಸೇವಿಸುವುದು ಆರೋಗ್ಯಕರವಲ್ಲ. ಬದಲಿಗೆ ಯಾವುದೇ ಅಡ್ಡಪರಿಣಾಮವಿಲ್ಲದ ನೈಸರ್ಗಿಕ ಆಹಾರಗಳನ್ನ ಸೇವಿಸಿದರೆ ನೋವು ಕಡಿಮೆಯಾಗುವುದು

Agencies 8 Nov 2019, 5:46 pm
ಋತುಚಕ್ರವೆನ್ನುವುದು ಕೆಲವು ಮಹಿಳೆಯರಿಗೆ ತುಂಬಾ ನೋವು ಹಾಗೂ ಅಸಹನೆ ನೀಡುವಂತಹ ಸಮಯವಾಗಿರುವುದು. ಈ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕವಾಗಿಯೂ ಬದಲಾವಣೆಗಳು ಆಗುವುದು. ಕೆಲವು ಮಹಿಳೆಯರಲ್ಲಿ ಹೊಟ್ಟೆ ನೋವು, ತಲೆನೋವು ಇತ್ಯಾದಿಗಳು ಕಾಣಿಸಿಕೊಳ್ಳುವುದು. ಈ ಸಮಯದಲ್ಲಿ ತಿನ್ನುವ ಬಯಕೆಯು ಹೆಚ್ಚಾಗುವುದು. ಇದರಿಂದ ಏನಾದರೂ ಇದ್ದರೆ ಅದನ್ನು ತಿಂದು ಮುಗಿಸಬೇಕು ಎಂದು ಅನಿಸುವುದು ಇದೆ.
Vijaya Karnataka Web Periods pain


ಆದರೆ ನೀವು ಇಂತಹ ಸಮಯದಲ್ಲಿ ಚಾಕಲೇಟ್ ಕೇಕ್ ತಿಂದರೆ ಅದು ನಿಮಗೆ ತುಂಬಾ ರುಚಿಯಾಗಿದೆ ಎಂದು ಅನಿಸಬಹುದು. ಆದರೆ ಅದರಿಂದ ಖಂಡಿತ ವಾಗಿಯೂ ನಿಮ್ಮ ದೇಹಕ್ಕೆ ಯಾವುದೇ ಪ್ರಯೋಜನವಾಗದು. ಆದರೆ ಈ ಸಮಯದಲ್ಲಿ ಕೆಲವೊಂದು ಆಹಾರಗಳು ಖಂಡಿತವಾಗಿಯೂ ನಿಮಗೆ ನೆರವಾಗಲಿದೆ. ಇದರ ಬಗ್ಗೆ ನೀವು ಗಮನಹರಿಸಬೇಕು. ಇಂತಹ ಆಹಾರವು ನಿಮ್ಮ ದೇಹದ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುವುದು. ಅದು ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಸೆಳೆತ ನಿವಾರಿಸುವುದು.ಆ ಆಹಾಗಳು ಯಾವುದು ಎಂದು ತಿಳಿಯಿರಿ.

ಹೆಚ್ಚೆಚ್ಚು ನೀರು ಕುಡಿಯಿರಿ
ಋತುಚಕ್ರದ ಸಂದರ್ಭದಲ್ಲಿ ಹೆಚ್ಚಾಗಿ ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುವುದು ಇದೆ. ಆದರೆ ಹೆಚ್ಚಿನವರು ಈ ವೇಳೆ ನೀರು ಡಿಯುವ ಬಗ್ಗೆ ಆಲೋಚನೆ ಮಾಡುವುದಿಲ್ಲ. ಆದರೆ ನೀರು ಕುಡಿದರೆ ಅದರಿಂದ ದೇಹವು ನೀರನ್ನು ಉಳಿಸಿಕೊಳ್ಳಲು ನೆರವಾಗುವುದು. ನಿಮಗೆ ನೀರು ಕುಡಿಯುವುದು ಅಷ್ಟಾಗಿ ಇಷ್ಟ ವಿಲ್ಲವೆಂದಾದರೆ ಆಗ ನೀವು ಯಾವುದಾದರೂ ಹಸಿರೆಲೆ ತರಕಾರಿಗಳು ಅಥವಾ ನೀರಿನಾಂಶವು ಹೆಚ್ಚಿರುವ ಹಣ್ಣುಗಳನ್ನು ತಿನ್ನಬಹುದು. ಇದು ರುಚಿಕರವಾಗಿರುವ ಜತೆಗೆ ದೇಹಕ್ಕೆ ನೀರನ್ನು ಕೂಡ ಒದಗಿಸುವುದು. ಬಿಸಿಯಾಗಿರುವ ಪಾನೀಯಗಳು ಸೆಳೆತ ಕಡಿಮೆ ಮಾಡಲು ನೆರವಾಗುವುದು.

ರಾಷ್ಟ್ರೀಯ ಆರೋಗ್ಯ ತಪಾಸಣಾ ದಿನದ ವಿಶೇಷ ಲೇಖನ ತಪ್ಪದೇ ಓದಿ

ಸಾಲ್ಮನ್ ಮೀನು
ಸಮುದ್ರಾಹಾರವು ದೇಹಕ್ಕೆ ತುಂಬಾ ಒಳ್ಳೆಯದು. ನೀವು ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿ ಇರುವಂತಹ ಸಾಲ್ಮನ್ ನ್ನು ತಿನ್ನಬಹುದು. ಸಾಲ್ಮನ್ ತಿಂದರೆ ಅದರಿಂದ ದೇಹದ ಉರಿಯೂತ ಕಡಿಮೆ ಆಗುವುದರ ಜತೆಗೆ ಸೆಳೆತ ನಿವಾರಣೆ ಆಗುವುದು. ಸಾಲ್ಮನ್ ನಲ್ಲಿ ಉನ್ನತ ಮಟ್ಟದ ಪ್ರೋಟೀನ್, ವಿಟಮಿನ್ ಡಿ ಮತ್ತು ಬಿ6 ಇದೆ. ವಿಟಮಿನ್ ಡಿ ಮತ್ತು ಬಿ6 ಋತುಚಕ್ರದ
ಸಮಸ್ಯೆ ನಿವಾರಣೆ ಮಾಡುವಲ್ಲಿ ಪರಿಣಾಮಕಾರಿ ಎಂದು ಹಿಂದಿನ ಕೆಲವು ಅಧ್ಯಯನಗಳು ಹೇಳಿವೆ.

ಬಾಳೆಹಣ್ಣು
ಬಾಳೆಹಣ್ಣು ತಿಂದರೆ ಆಗ ದೇಹಕ್ಕೆ ವಿಟಮಿನ್ ಬಿ6 ಮತ್ತು ಪೊಟಾಶಿಯಂ ಸಿಗುವುದು. ಇವೆರಡು ಸ್ನಾಯು ಸೆಳೆತ ಮತ್ತು ಹೊಟ್ಟೆ ಉಬ್ಬರ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಋತುಚಕ್ರದ ವೇಳೆ ಮಹಿಳೆಯರು ಎದುರಿಸುವ ಮತ್ತೊಂದು ಸಮಸ್ಯೆಯೆಂದರೆ ಅದು ಹೊಟ್ಟೆ ಉಬ್ಬರ. ಇದಕ್ಕೆ ಬಾಳೆಹಣ್ಣು ಪರಿಹಾರ ನೀಡುವುದು.

ಹಸಿರೆಲೆ ತರಕಾರಿಗಳು
ಋತುಚಕ್ರದ ವೇಳೆ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವ ಆಗುವ ಪರಿಣಾಮದಿಂದಾಗಿ ಈ ಸಮಯದಲ್ಲಿ ಕಬ್ಬಿನಾಂಶ ಅಧಿಕವಾಗಿ ಇರುವ ಆಹಾರ ಸೇವನೆ ಮಾಡಬೇಕು. ಇದರಿಂದ ಹೆಚ್ಚಿನ ಪ್ರಮಾಣದ ರಕ್ತ ನಷ್ಟವಾಗಿರುವುದನ್ನು ಸರಿದೂಗಿಸಬಹುದು. ಬರ್ಗರ್ ತಿನ್ನಬೇಕು ಎಂದು ಮನಸ್ಸಾಗಿರಬಹುದು. ಆದರೆ ಇದರ ಬದಲಿಗೆ ತರಕಾರಿ ತಿನ್ನಿ. ವಿವಿಧ ರೀತಿಯ ಪೋಷಕಾಂಶಗಳಿಂದ ತುಂಬಿರುವಂತಹ ಹಸಿರೆಲೆ ತರಕಾರಿಗಳು ಸ್ನಾಯು ಸೆಳೆತ ನಿವಾರಣೆ ಮಾಡುವುದು.

ಓಟ್ಸ್
ಓಟ್ಸ್ ತುಂಬಾ ಆರೋಗ್ಯಕಾರಿ ಮತ್ತು ಇದನ್ನು ನಾವು ತಿಂಡಿ ಹಾಗೂ ಉಪಾಹಾರದಲ್ಲಿ ಹೆಚ್ಚು ಇಷ್ಟಪಟ್ಟು ತಿನ್ನುತ್ತೇವೆ. ಓಟ್ಸ್ ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಓಟ್ಸ್ ನಲ್ಲಿ ನಾರಿನಾಂಶವಿದೆ ಮತ್ತು ದೀರ್ಘಕಾಲದ ತನಕ ಹೊಟ್ಟೆ ತುಂಬಿರುವಂತೆ ಮಾಡಿ, ಜೀರ್ಣಕ್ರಿಯೆಗೆ ಸಹಕಾರಿ ಆಗಿರಲಿದೆ. ಓಟ್ಸ್ ನಲ್ಲಿ ಸತು ಮತ್ತು ಮೆಗ್ನಿಶಿಯಂ ಕೂಡ ಸಮೃದ್ಧವಾಗಿದೆ. ಇದು
ತೀವ್ರವಾದ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗುವುದು.

ಬ್ರಾಕೋಲಿ
ಅಧಿಕ ನಾರಿನಾಂಶ ಹೊಂದಿರುವ ಬ್ರಾಕೋಲಿಯು ಹೊಟ್ಟೆ ಉಬ್ಬರ ಕಡಿಮೆ ಮಾಡುವುದು. ಇದರಲ್ಲಿ ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ ವಿಟಮಿನ್ ಎ, ಸಿ, ಬಿ6 ಮತ್ತು ಇ ಇದೆ. ಈ ಎಲ್ಲಾ ಪೋಷಕಾಂಶಗಳು ಸ್ನಾಯು ಸೆಳೆತ ಮತ್ತು ಋತುಚಕ್ರಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ನಿವಾರಣೆ ಮಾಡುವುದು.

ನಿಮಗೆ 'ದಾಳಿಂಬೆ ಸಿಪ್ಪೆಯ' ಔಷಧೀಯ ಗುಣ ಗೊತ್ತಾದರೆ, ಖಂಡಿತ ಬಿಸಾಕುವುದಿಲ್ಲ!

ಕ್ಯಾಮೊಮೈಲ್ ಚಹಾ
ಕ್ಯಾಮೊಮೈಲ್ ಚಹಾ ತುಂಬಾ ರುಚಿಕರ, ಕೆಫಿನ್ ಮುಕ್ತ ಮತ್ತು ಸ್ನಾಯು ಸೆಳೆತ ಕಡಿಮೆ ಮಾಡುವುದು. ಇದು ದೇಹಕ್ಕೆ ಶಮನ ನೀಡುವುದು ಎಂದು ಪೋಷಕಾಂಶ ತಜ್ಞರು ಹೇಳಿರುವರು.

ಶುಂಠಿ ಮತ್ತು ದಾಲ್ಚಿನ್ನಿ
ಈ ಎರಡು ಗಿಡಮೂಲಿಕೆಯನ್ನು ಸಾಮಾನ್ಯ ಶೀತಕ್ಕೆ ಬಳಕೆ ಮಾಡುವರು. ಆದರೆ ಶುಂಠಿ ಮತ್ತು ದಾಲ್ಚಿನಿಯು ಋತುಚಕ್ರದ ಸೆಳೆತ ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಶುಂಠಿಯನ್ನು ಹಿಂದಿನಿಂದಲೂ ಚೀನಾದ ಔಷಧಿಯಲ್ಲಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಶುಂಠಿ ಮತ್ತು ದಾಲ್ಚಿನಿಯನ್ನು ಬಿಸಿ ನೀರಿಗೆ ಹಾಕಿಕೊಂಡು ಕುಡಿದರೆ ಅದರಿಂದ ರಾತ್ರಿ ಸಮಯದಲ್ಲಿ ಪರಿಹಾರ
ಸಿಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ