ಆ್ಯಪ್ನಗರ

ಏನಿದು ಓಮಿಕ್ರಾನ್ ವೈರಸ್? ಇದರ ಲಕ್ಷಣಗಳು ಹಾಗೂ ನಿಯಂತ್ರಣ ಹೇಗೆ?

ಹೊಸ ರೂಪಾಂತರವು ಈಗ ವಿಶ್ವದೆಲ್ಲೆಡೆಯಲ್ಲಿ ತುಂಬಾ ಭೀತಿಯನ್ನು ಸೃಷ್ಟಿಸಿದೆ.

Vijaya Karnataka Web 29 Nov 2021, 2:50 pm
ಕೊರೊನಾ ಮಹಾಮಾರಿಯು ಇನ್ನೇನು ಹೋಯಿತು ಎನ್ನುವಷ್ಟರಲ್ಲಿ ಅದರ ಹೊಸ ರೂಪವು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಇದು ತುಂಬಾ ಚಿಂತೆಯ ವಿಷಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವಂತಹ ಹೊಸ ರೂಪಾಂತರವನ್ನು `ಒಮಿಕ್ರಾನ್’ ಎಂದು ಹೆಸರಿಸಲಾಗಿದೆ.
Vijaya Karnataka Web omicron covid variant risks symptoms and tests
ಏನಿದು ಓಮಿಕ್ರಾನ್ ವೈರಸ್? ಇದರ ಲಕ್ಷಣಗಳು ಹಾಗೂ ನಿಯಂತ್ರಣ ಹೇಗೆ?


ಕಳೆದ ಸೋಮವಾರ ದಕ್ಷಿಣ ಆಫ್ರಿಕಾದ ತಜ್ಞರು ಇದನ್ನು ಪತ್ತೆ ಮಾಡಿದ್ದಾರೆ. ಇದು ಸಾರ್ಸ್-ಕೋವಿ-2 ವೈರಸ್ ಗುಂಪಿಗೆ ಸೇರಿದ್ದಾಗಿದೆ ಎಂದು ಅವರು ಹೇಳಿರುವರು. ಇದು ಡೆಲ್ಟಾ ರೂಪಾಂತರಕ್ಕಿಂತಲೂ ಹೆಚ್ಚು ವೇಗವಾಗಿ ಹರಡಬಲ್ಲದು ಎಂದು ಹೇಳಲಾಗುತ್ತಿದೆ. ಈಗ ಇರುವಂತಹ ಲಸಿಕೆಯು ಇದಕ್ಕೆ ಹೆಚ್ಚು ಪರಿಣಾಮಕಾರಿ ಆಗದು ಎಂದು ಹೇಳಲಾಗುತ್ತಿದೆ.

​ಒಮಿಕ್ರಾನ್ ಬಗ್ಗೆ ನಾವು ಎಷ್ಟು ತಿಳಿದುಕೊಳ್ಳಬೇಕು?

  • ಹೊಸ ತಳಿಯು ಸಾರ್ಸ್-ಕೊವಿ-2ನಂತೆ ಹರಡುತ್ತಲಿದೆ. ಇದರ ರೂಪಾಂತರವು ಒಂದು ನಿಗದಿತ ಸಮಯದ ಬಳಿಕ ತಿಳಿದುಬರುತ್ತಲಿದೆ. ಇದರ ರೂಪಾಂತರದಲ್ಲಿ ಯಾವುದು ಹೆಚ್ಚು ಮಾರಕ ಎನ್ನುವ ಬಗ್ಗೆ ವಿಶ್ವದೆಲ್ಲೆಡೆಯಲ್ಲಿನ ಆರೋಗ್ಯ ತಜ್ಞರು ಗಮನಹರಿಸಿರುವರು. ಎನ್ ಜಿಎಸ್-ಎಸ್ ಎ ಇಂತಹ ಪ್ರಕ್ರಿಯೆ ಮೂಲಕವೇ ಇದನ್ನು ಪತ್ತೆ ಮಾಡಿದೆ.
  • ಬಿ.1.1.529 ಬಹು ಪ್ರೋಟೀನ್ ರೂಪಾಂತರವಾಗಿದೆ ಮತ್ತು ಇದು ಹೆಚ್ಚು ಸೋಂಕನ್ನು ಉಂಟು ಮಾಡುವುದು ಎಂದು ತಿಳಿದುಬಂದಿದೆ. ಕಳೆದ ಎರಡು ವಾರಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎರಡು ಪಟ್ಟು ಕೊರೊನಾ ಸೋಂಕಿತರ ಸಂಖ್ಯೆಯು ಹೆಚ್ಚಾಗಿದೆ.
  • ಜೋಹನ್ಸ್ ಬರ್ಗ್ ಮತ್ತು ಪ್ರಿಟೋರಿಯಾ ಇರುವಂತಹ ಗೌಟೆಂಗ್ ಪ್ರಾಂತ್ಯದಲ್ಲಿ ಇದು ತೀವ್ರವಾಗಿ ಹರಡುತ್ತಲಿದೆ ಎಂದು ಎನ್ ಜಿಎಸ್-ಎಸ್ ಎ ತಿಳಿಸಿದೆ.

​ಈ ರೂಪಾಂತರವನ್ನು ಯಾವುದು ನಿರೂಪಿಸುವುದು?

  • ಹೊಸ ತಳಿಯ ರೂಪಾಂತರವನ್ನು ಬಿ.1.1.529 ಎಂದು ಹೇಳಲಾಗಿದೆ. ಇದನ್ನು ತುಂಬಾ ಅಸಾಮಾನ್ಯ ರೂಪಾಂತರವೆಂದು ಹೇಳಳಾಗಿದೆ. ಇದು ಪ್ರೋಟೀನ್ ಸ್ಪೈಕ್ ನ್ನು ಎನ್ ಕೋಡ್ ಮಾಡಿಕೊಂಡು ಆಗ ಮೂಲಕ ಮಾನುಷ್ಯನ ಅಂಗಾಂಶಗಳ ಮೇಲೆ ಪ್ರವೇಶ ಪಡೆಯುತ್ತದೆ.
  • ಇದರಲ್ಲಿ ಕೆಲವೊಂದು ರೂಪಾಂತರಗಳು ಮನುಷ್ಯನ ಪ್ರತಿರೋಧಕ ವ್ಯವಸ್ಥೆಯನ್ನು ತಪ್ಪಿಸಿಕೊಂಡು ಹೋಗುವಂತಹ ಶಕ್ತಿ ಹೊಂದಿದೆ ಎಂದು ಹೇಳಲಾಗಿದೆ. ಕೆಲವೊಂದು ರೂಪಾಂತರಗಳು ಅಲ್ಫಾ ಮತ್ತು ಡೆಲ್ಟಾ ತಳಿಯಲ್ಲಿ ಕಂಡುಬಂದಿದೆ.
  • ಆದರೆ ಇತರ ಕೆಲವು ರೂಪಾಂತರಗಳನ್ನು ಇದುವರೆಗೆ ಪತ್ತೆ ಮಾಡಿಲ್ಲ ಎಂದು ಎನ್ ಜಿಎಸ್ ಎಸ್ ಎ ಹೇಳಿದೆ. ಇದರಿಂದ ಯಾವ ರೀತಿಯ ಪರಿಣಾಮಗಳು ಆಗಬಹುದು ಎನ್ನುವ ಬಗ್ಗೆ ತಿಳಿಯಲು ಅಧ್ಯಯನಗಳು ತೀವ್ರಗತಿಯಲ್ಲಿ ನಡೆಯುತ್ತಲಿದೆ.

​ಯಾವ ರೂಪಾಂತರವು ಚಿಂತೆಗೆ ಕಾರಣವಾಗಿದೆ?

ರೂಪಾಂತರದ ಸರಪಳಿಯಾಗಿರುವಂತಹ ಎಚ್655ಯ+ಎನ್679ಕೆ+ಪಿ681ಎಚ್ ತುಂಬಾ ಪರಿಣಾಮಕಾರಿ ಆಗಿ ಮಾನುಷ್ಯನ ಅಂಗಾಂಶಗಳ ಒಳಗಡೆ ಪ್ರವೇಶ ಪಡೆಯುವುದು ಎಂದು ತಜ್ಞರು ಹೇಳಿರುವರು. ಎನ್ ಎಸ್ ಪಿ6 ಅಲ್ಫಾ, ಬೆಟಾ, ಗಮಾ ಮತ್ತು ಲಬ್ಡಾ ಮಾದರಿಯಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ.

​ವಿಶ್ವ ಸಂಸ್ಥೆ ಏನು ಹೇಳುತ್ತಲಿದೆ?

  • ತಂತ್ರಜ್ಞರ ಸಮಿತಿಯು ಹೊಸ ರೂಪಾಂತರವನ್ನು ವಿಶ್ಲೇಷಣೆ ಮಾಡಿದೆ ಮತ್ತು ಇದು ಚಿಂತೆಯ ವಿಚಾರವಾಗಿದೆ ಎಂದು ಅದು ಹೇಳಿದೆ.
  • ಒಮಿಕ್ರಾನ್ ಇನ್ನು ಹೊಸ ರೂಪವನ್ನು ಪಡೆದುಕೊಂಡರೆ ಆಗ ಇದರಿಂದ ಅದು ಹರಡುವಂತಹ ಸಾಧ್ಯತೆಯು ಹೆಚ್ಚಾಗುವುದು ಮತ್ತು ಲಸಿಕೆ, ಚಿಕಿತ್ಸೆ ಹಾಗೂ ಔಷಧಿಯ ಪರಿಣಾಮವು ಕಡಿಮೆ ಆಗುವುದು ಎಂದು ಹೇಳಿದೆ.
  • ದಕ್ಷಿಣ ಆಫ್ರಿಕಾದಿಂದ ಈ ಹೊಸ ರೂಪಾಂತರದ ಬಗ್ಗೆ ತಿಳಿದುಬಂದಿದೆ. ಇದರ ಬಗ್ಗೆ ಸಂಪೂರ್ಣವಾಗಿ ಇನ್ನಷ್ಟೇ ತಿಳಿದುಬರಬೇಕಾಗಿದೆ ಎಂದು ವಿಶ್ವಸಂಸ್ಥೆಯ ಕೊರೊನಾ ತಾಂತ್ರಿಕ ತಂಡದ ಮರಿಯಾ ವ್ಯಾನ್ ಕೆರ್ಕೊಹೊವ್ ತಿಳಿಸಿದರು.
  • ಇದು ತುಂಬಾ ಹೆಚ್ಚಿನ ರೂಪಾಂತರವನ್ನು ಹೊಂದಿರುವಂತಹ ತಳಿ. ಇದರಿಂದಾಗಿ ಇದು ಚಿಂತೆಯನ್ನು ಮೂಡಿಸಿದೆ ಎಂದು ಹೇಳಿರುವರು.

​ಲಕ್ಷಣಗಳಲ್ಲಿ ಯಾವುದೇ ಬದಲಾವಣೆಗಳು ಇದೆಯಾ?

ಹೊಸ ರೂಪಾಂತರದಿಂದ ಯಾವುದೇ ರೀತಿಯ ಹೊಸ ಲಕ್ಷಣಗಳು ಕಂಡುಬಂದಿಲ್ಲ ಎಂದು ದಕ್ಷಿಣ ಆಫ್ರಿಕಾದಲ್ಲಿ ವೈದ್ಯಕೀಯ ತಜ್ಞರು ಹೇಳಿರುವರು. ಡೆಲ್ಟಾದಂತೆ ಇದರ ಲಕ್ಷಣಗಳು ಕೆಲವು ಜನರಲ್ಲಿ ಕಾಣಿಸದೆ ಕೂಡ ಇರಬಹುದು ಎಂದು ವೈದ್ಯರು ಹೇಳಿರುವರು.

​ಲಸಿಕೆ ಪರಿಣಾಮ ಮತ್ತು ಕಾಯಿಲೆಯ ತೀವ್ರತೆಯನ್ನು ವಿಜ್ಞಾನಿಗಳು ಪತ್ತೆ ಮಾಡುವುದು ಹೇಗೆ?

  • ಪ್ರಯೋಗಾಲದಲ್ಲಿ ಇದರ ಬಗ್ಗೆ ಪರೀಕ್ಷೆ ಹಾಗೂ ಅಧ್ಯಯನಗಳು ನಡೆಸಿದ ಬಳಿಕವಷ್ಟೇ ಇದಕ್ಕೆ ಲಸಿಕೆ ಪರಿಣಾಮಕಾರಿ ಆಗುತ್ತದೆಯಾ ಮತ್ತು ಇದರ ತೀವ್ರತೆಯು ಎಷ್ಟು ಇರುವುದು ಹೇಳಬಹುದಾಗಿದೆ ಎಂದು ತಜ್ಞರು ತಿಳಿಸಿರುವರು.
  • ಇದರ ಸೋಂಕಿತರ ಬಗ್ಗೆ ಸರಿಯಾದ ಪರಿಶೀಲನೆ ಹಾಗೂ ಅವರನ್ನು ತೀವ್ರ ನಿಗಾದಲ್ಲಿ ಇಟ್ಟುಕೊಂಡು ಪರೀಕ್ಷಿಸಲಾಗುತ್ತಿದೆ. ಕಾಯಿಲೆಯ ತೀವ್ರತೆ ಅಥವಾ ಚಿಕಿತ್ಸೆಗೆ ಇದು ಪರಿಣಾಮ ಬೀರುತ್ತಲಿದ್ದರೆ ಆಗ ಇದರ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಜ್ಞರು ಹೇಳಿರುವರು.

​ಆರ್ ಟಿಪಿಸಿಆರ್ ಪರೀಕ್ಷೆಯಿಂದ ಇದನ್ನು ಪತ್ತೆ ಮಾಡುವುದು ಕಠಿಣವೇ?

ಪಿಸಿಆರ್ ಪರೀಕ್ಷೆಯು ಸಾರ್ಸ್-ಕೊವಿ-2ನ ಅಂತಿಮ ಎರಡು ತಳಿಯನ್ನು ಪತ್ತೆ ಮಾಡುವುದು. ಇದರಿಂದಾಗಿ ಹೊಸದಾಗಿ ಕಂಡುಬಂದಿರುವ ಒಮಿಕ್ರಾನ್ ನ್ನು ಪಿಸಿಆರ್ ಪರೀಕ್ಷೆಯಿಂದ ಪತ್ತೆ ಮಾಡುವುದು ಸ್ವಲ್ಪ ಕಷ್ಟವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿರುವರು.

​ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?

  • ಲಸಿಕೆಯು ಇಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಾವಿನ ಪ್ರಮಾಣದ ಅಪಾಯದಿಂದ ರಕ್ಷಿಸಲು ಲಸಿಕೆಯನ್ನು ಪಡೆಯುವುದು ಅಗತ್ಯ. ಲಸಿಕೆಯನ್ನು ಸಂಪೂರ್ಣವಾಗಿ ತೆಗೆದು ಕೊಂಡಿರುವವರಿಗೆ ಇದರ ಪರಿಣಾಮವು ಕಡಿಮೆ ಇದೆ ಎಂದು ಕೆಲವೊಂದು ಸೋಂಕಿತರಿಂದ ತಿಳಿದುಬಂದಿದೆ.
  • ಕೊರೊನಾ ಸಾಂಕ್ರಾಮಿಕವು ಇನ್ನು ಸಂಪೂರ್ಣವಾಗಿ ಕೊನೆಗೊಂಡಿಲ್ಲ. ಇದು ಹೊಸ ರೂಪದಲ್ಲಿ ಬರುತ್ತಲೇ ಇದೆ. ಇದರ ಸರಪಳಿಯನ್ನು ಮುರಿಯುವುದು ಅತೀ ಅಗತ್ಯ. ಇದಕ್ಕಾಗಿ ಮಾಸ್ಕ್ ಧರಿಸುವುದು, ಲಸಿಕೆ ಹಾಕಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ