ಆದರೆ ಕೆಲವೊಂದು ಪರಿಹಾರಗಳನ್ನು ಕಂಡು ಕೊಳ್ಳುವುದರಿಂದ ಸುಲಭವಾಗಿ ಇದರಿಂದ ದೂರವಾಗಬಹುದು. ಮನೆಯಲ್ಲಿ ಸಿಗುವಂತಹ ಕೆಲವೊಂದು ಆಹಾರ ಪದಾರ್ಥಗಳನ್ನು ಈ ವಿಚಾರದಲ್ಲಿ ಬಳಕೆ ಮಾಡಿಕೊಂಡು ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಅಂತಹ ಆಹಾರ ಪದಾರ್ಥಗಳು ಯಾವುವು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಶುಂಠಿ ಮತ್ತು ಜೇನುತುಪ್ಪದ ಸೇವನೆ
- ಪುರುಷರ ಶೀಘ್ರಸ್ಕಲನ ಸಮಸ್ಯೆಯನ್ನು ಬಹಳ ಪರಿಣಾಮಕಾರಿಯಾಗಿ ಪರಿಹಾರ ಮಾಡುವ ಗುಣಲಕ್ಷಣ ಶುಂಠಿ ಮತ್ತು ಜೇನುತುಪ್ಪ ಎರಡರಲ್ಲೂ ಸಹ ಕಂಡುಬರುತ್ತದೆ. ಆಹಾರ ಪದ್ಧತಿಯಲ್ಲಿ ಶುಂಠಿ ಬಳಕೆ ಮಾಡುವುದರಿಂದ ಪುರುಷರ ಜನನಾಂಗದ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಚಾರ ಉಂಟಾಗುತ್ತದೆ.
- ಇದು ಶೀಘ್ರಸ್ಖಲನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತರುತ್ತದೆ ಮತ್ತು ಜೇನು ತುಪ್ಪ ಈ ವಿಷಯದಲ್ಲಿ ಶುಂಠಿಗೆ ಸಹಕಾರಿಯಾಗಿ ನಿಲ್ಲುತ್ತದೆ. ರಾತ್ರಿ ಮಲಗುವ ಸಮಯದಲ್ಲಿ ಸ್ವಲ್ಪ ಶುಂಠಿ ಮತ್ತು ಅರ್ಧ ಟೀ ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವನೆ ಮಾಡಿ ಮಲಗಿ.
ಬೆಳ್ಳುಳ್ಳಿ ಸೇವನೆ ಮಾಡಿ
- ಪುರುಷರು ತಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಬೆಳ್ಳುಳ್ಳಿಯನ್ನು ಆಗಾಗ ಬಳಕೆ ಮಾಡುವುದರಿಂದ ದೇಹದಲ್ಲಿ ಉಷ್ಣಾಂಶದ ಸಮತೋಲನ ಕಾಪಾಡಿ ಕೊಂಡಂತಾಗುತ್ತದೆ.
- ಇದು ಪುರುಷರ ಶ್ರೀಘ್ರ ಸ್ಕಲನ ಸಮಸ್ಯೆಯನ್ನು ಪರಿಹಾರ ಮಾಡಲು ಅನುಕೂಲವಾಗುತ್ತದೆ. ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಕಂದು ಬಣ್ಣಕ್ಕೆ ಬರುವಂತೆ ಹುರಿದು ಸೇವನೆ ಮಾಡಬೇಕು. ಪ್ರತಿದಿನ ಮೂರರಿಂದ ನಾಲ್ಕು ಬೆಳ್ಳುಳ್ಳಿಗಳನ್ನು ಈ ರೀತಿ ಸೇವನೆ ಮಾಡುವುದರಿಂದ ಪರಿಹಾರ ಸಿಗುತ್ತದೆ.
ಬೆಳ್ಳುಳ್ಳಿ ಬಗ್ಗೆ ಸಾಕಷ್ಟು ಗೊತ್ತು, ಆದರೆ ಇದರ ಎಣ್ಣೆಯ ಬಗ್ಗೆ...?
ಕೋಳಿ ಮೊಟ್ಟೆ , ಕ್ಯಾರೆಟ್ ಮತ್ತು ಜೇನು ತುಪ್ಪ
ಈ ಮೂರು ಆಹಾರ ಪದಾರ್ಥಗಳ ಕಾಂಬಿನೇಷನ್ ಪುರುಷರ ಶೀಘ್ರ ಸ್ಖಲನ ಸಮಸ್ಯೆಗೆ ಉತ್ತಮ ಪರಿಹಾರ ಎಂದು ತೋರುತ್ತದೆ. ಹಾಗಾಗಿ ನೀವು ಅರ್ಧ ಬೇಯಿಸಿದ ಕೋಳಿ ಮೊಟ್ಟೆ ತೆಗೆದುಕೊಂಡು ಅದಕ್ಕೆ ತುರಿದ ಕ್ಯಾರೆಟ್ ಹಾಕಿ 3 ಟೀ ಚಮಚ ಜೇನು ತುಪ್ಪವನ್ನು ಹಾಕಿ ಮಿಶ್ರಣ ಮಾಡಿ ಸೇವನೆ ಮಾಡಿ. ಸುಮಾರು ಮೂರು ತಿಂಗಳವರೆಗೆ ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದರಿಂದ ಸುಲಭವಾಗಿ ನಿಮ್ಮ ಸಮಸ್ಯೆಯಿಂದ ಹೊರಬರಬಹುದು.
ಅಶ್ವಗಂಧ ಒಮ್ಮೆ ಟ್ರೈ ಮಾಡಿ
- ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅಶ್ವಗಂಧ ಪರಿಹಾರ ಎಂದು ಈಗಾಗಲೇ ಸಾಬೀತಾಗಿದೆ. ಪುರುಷರ ಶೀಘ್ರಸ್ಖಲನ ಸಮಸ್ಯೆಗೆ ಕೂಡ ಇದು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.
- ಆಯುರ್ವೇದ ವೈದ್ಯರನ್ನು ಒಮ್ಮೆ ಭೇಟಿ ಮಾಡಿ ಹೊಸಬಗೆಯ ಇಂತಹ ಗಿಡಮೂಲಿಕೆ ಪದಾರ್ಥವನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದಕ್ಕೆ ಮುಂಚೆ ಅವರ ಸಲಹೆಯನ್ನು ತೆಗೆದುಕೊಂಡು ಆನಂತರ ಉಪಯೋಗಿಸಿ.
ಅಶ್ವಗಂಧದ ಉಪಯೋಗಗಳು ಕೇಳಿದ್ರೆ, ನಿಜಕ್ಕೂ ಅಚ್ಚರಿಪಡುವಿರಿ!
ಹಸಿರು ಈರುಳ್ಳಿ ಬೀಜಗಳು
- ಬಹುತೇಕ ಪ್ರಕರಣಗಳಲ್ಲಿ ಪುರುಷ ಶೀಘ್ರ ಸ್ಕಲನ ಸಮಸ್ಯೆಯನ್ನು ಅತ್ಯುತ್ತಮವಾಗಿ ಪರಿಹಾರ ಮಾಡುವಲ್ಲಿ ಹಸಿರು ಈರುಳ್ಳಿ ಬೀಜಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದ ಉದಾಹರಣೆಗಳಿವೆ.
- ಹಾಗಾಗಿ ಈ ಬೀಜಗಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಊಟಕ್ಕೆ ಮುಂಚೆ ದಿನದಲ್ಲಿ ಮೂರು ಬಾರಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ಲೈಂಗಿಕ ಆರೋಗ್ಯ ಉತ್ತಮಗೊಳ್ಳುತ್ತದೆ.