ಆ್ಯಪ್ನಗರ

ಸಕ್ಕರೆ ಕಾಯಿಲೆ ಇರುವವರ ಬ್ರೇಕ್‌ಫಾಸ್ಟ್ ಹೇಗಿರಬೇಕು ಗೊತ್ತಾ?

ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಹೋಗುವುದಿಲ್ಲ. ಅಚ್ಚುಕಟ್ಟಾದ ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಸಮಸ್ಯೆಯನ್ನು ನಿರ್ವಹಣೆ ಮಾಡಿಕೊಳ್ಳಬಹುದು.

Vijaya Karnataka Web 28 Jan 2021, 10:16 am
ಮಧುಮೇಹಿ ರೋಗಿಗಳು ತಮ್ಮ ಆಹಾರ ಪದ್ಧತಿಯಲ್ಲಿ ನಿಯಂತ್ರಣ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಕೆಲವೊಂದು ಆಹಾರಗಳನ್ನು ಬೇಡ ಎಂದರೂ ಸೇವನೆ ಮಾಡಬೇಕಾಗಿ ಬರುತ್ತದೆ.
Vijaya Karnataka Web read these to know the best and worst breakfast for diabetes
ಸಕ್ಕರೆ ಕಾಯಿಲೆ ಇರುವವರ ಬ್ರೇಕ್‌ಫಾಸ್ಟ್ ಹೇಗಿರಬೇಕು ಗೊತ್ತಾ?


ಇನ್ನು ಕೆಲವು ಆಹಾರಗಳನ್ನು ಮನಸ್ಸು ಮತ್ತು ಕಣ್ಣುಗಳು ಆಸೆಪಟ್ಟರು ಸೇವನೆ ಮಾಡಲು ಸಾಧ್ಯವಿರುವುದಿಲ್ಲ. ಏಕೆಂದರೆ ದೇಹದಲ್ಲಿ ಇದರಿಂದ ಸಕ್ಕರೆ ಅಂಶದ ಏರುಪೇರು ಉಂಟಾಗುತ್ತದೆ.

ಅನಾರೋಗ್ಯಕರವಾದ ಆಹಾರ ಪದ್ಧತಿಯಿಂದ ತಮ್ಮ ಮಧುಮೇಹ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡಿಕೊಂಡು ಕಷ್ಟ ಪಡುವ ಬದಲು ಕಟ್ಟುನಿಟ್ಟಾದ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಅದರಲ್ಲೂ ವಿಶೇಷವಾಗಿ ಬೆಳಗಿನ ಉಪಹಾರದ ಸಮಯದಲ್ಲಿ ಒಳ್ಳೆಯ ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡುವುದರೊಂದಿಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಈ ಲೇಖನದಲ್ಲಿ ಮಧುಮೇಹಿ ರೋಗಿಗಳು ಯಾವ ಆಹಾರವನ್ನು ಸೇವನೆ ಮಾಡಬಹುದು ಮತ್ತು ಯಾವುದನ್ನು ಸೇವನೆ ಮಾಡಬಾರದು ಎಂಬುದರ ಬಗ್ಗೆ ತಿಳಿಸಿಕೊಡಲಾಗಿದೆ.

​ಹೆಚ್ಚು ನಾರಿನಂಶ ಮತ್ತು ಕಡಿಮೆ ಸಕ್ಕರೆ ಅಂಶ

  • ಮಧುಮೇಹಿ ರೋಗಿಗಳಿಗೆ ದೇಹದಲ್ಲಿ ಜೀರ್ಣಶಕ್ತಿ ಚೆನ್ನಾಗಿರಬೇಕಾಗುತ್ತದೆ. ಹಾಗಾಗಿ ಆಹಾರದಲ್ಲಿ ನಾರಿನ ಅಂಶ ತುಂಬಾ ಅವಶ್ಯಕ. ಇನ್ನು ಸಕ್ಕರೆ ಅಂಶದ ಬಗ್ಗೆ ಹೇಳುವುದಾದರೆ ಈಗಾಗಲೇ ತಮ್ಮ ಮೈಯಲ್ಲಿ ಸಾಕಷ್ಟು ಪ್ರಮಾಣದ ಸಿಹಿ ಅಂಶ ಇರುತ್ತದೆ.
  • ಹಾಗಾಗಿ ತಾವು ಸೇವನೆ ಮಾಡುವ ಯಾವುದೇ ಆಹಾರ ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಪ್ರಮಾಣವನ್ನು ಹೊಂದಿರಬೇಕು. ಇದಕ್ಕೆ ಸೂಕ್ತವಾದ ಆಹಾರ ಎಂದರೆ ಸಿರಿಧಾನ್ಯಗಳು. ಸಿರಿಧಾನ್ಯಗಳಲ್ಲಿ ಅತ್ಯುತ್ತಮವಾದ ಆರೋಗ್ಯ ಪ್ರಯೋಜನಗಳು ಸಿಗಲಿವೆ.
  • ಇದರಿಂದ ಮಧುಮೇಹ ಅಚ್ಚುಕಟ್ಟಾಗಿ ನಿರ್ವಹಣೆ ಆಗಲಿದೆ. ಸಿರಿಧಾನ್ಯಗಳನ್ನು ಪ್ರತಿದಿನ ಉಪಹಾರದಲ್ಲಿ ಸೇವನೆ ಮಾಡುವ ಅಭ್ಯಾಸವನ್ನು ಮಧುಮೇಹಿ ರೋಗಿಗಳು ಇಟ್ಟುಕೊಳ್ಳಬಹುದು.

ಮಧುಮೇಹಿಗಳ ಆಹಾರ ಹೀಗಿರಲಿ

​Porridge

  • ಇದನ್ನು ಹಿಂದಿ ಭಾಷೆಯಲ್ಲಿ ದಾಲಿಯಾ ಎಂದು ಕರೆಯುತ್ತಾರೆ. ಇದು ಸಹ ಸಕ್ಕರೆ ಕಾಯಿಲೆ ಇರುವವರಿಗೆ ಅತ್ಯುತ್ತಮವಾದ ಉಪಹಾರ ಎಂದು ಹೇಳಬಹುದು. ಇದನ್ನು ಉಪ್ಪು ಅಥವಾ ಸಿಹಿಯ ಲೇಪನದೊಂದಿಗೆ ತಯಾರು ಮಾಡಬಹುದು.
  • ಆದರೆ ಮಧುಮೇಹಿ ರೋಗಿಗಳು ಹೆಚ್ಚಿನ ಪ್ರಮಾಣದ ಸಕ್ಕರೆಯಂಶವನ್ನು ಸೇವನೆ ಮಾಡಲು ಸಾಧ್ಯವಿಲ್ಲದೆ ಇರುವುದರಿಂದ ಸ್ವಲ್ಪ ಉಪ್ಪನ್ನು ಹಾಕಿ ಸಾಕಷ್ಟು ಬಗೆಯ ತರಕಾರಿಗಳನ್ನು ಸೇರಿಸಿ ಸೇವನೆ ಮಾಡಬಹುದು.

​ಬ್ರೆಡ್

  • ಬಹುತೇಕ ಜನರು ಈಗಲೂ ಸಹ ಬೆಳಗಿನ ಸಮಯದಲ್ಲಿ ಉಪಹಾರದ ವಿಚಾರ ಬಂದಾಗ ಕೇವಲ ಬ್ರೆಡ್ ಮತ್ತು ಹಾಲು ಸೇವನೆ ಮಾಡುತ್ತಾರೆ. ಮಧುಮೇಹಿ ರೋಗಿಗಳು ಇದನ್ನು ಅಭ್ಯಾಸವಾಗಿ ರೂಡಿ ಮಾಡಿಕೊಳ್ಳಬಹುದು.
  • ಆದರೆ ಇದು ತನ್ನಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೆಟ್ ಅಂಶ ಹೊಂದಿರುವ ಕಾರಣ ಅತ್ಯಂತ ಆರೋಗ್ಯಕರವಾದ ಆಹಾರ ಎಂದು ಈಗಲೂ ನಂಬಲಾಗಿದೆ.
  • ಹೆಚ್ಚಿನ ಪ್ರಮಾಣದ ನಾರಿನ ಅಂಶ ಇದರಲ್ಲಿ ಕಂಡು ಬರುವ ಕಾರಣ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಶಕ್ತಿ ಪಡೆದಿದೆ.

ತಪ್ಪಿಯೂ ಬೂಸ್ಟ್ ಹಿಡಿದಿರುವ ಬ್ರೆಡ್, ಮಕ್ಕಳಿಗೆ ತಿನ್ನಲು ಕೊಡಬೇಡಿ!

​ಅವಕ್ಯಾಡೊ ಹಣ್ಣುಗಳು

  • ಅವಕ್ಯಾಡೊ ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದ ಆರೋಗ್ಯಕರವಾದ ಕೊಬ್ಬಿನ ಅಂಶಗಳು ಸಿಗುತ್ತವೆ. ನಿಮ್ಮ ಬೆಳಗಿನ ಉಪಹಾರದ ಸಮಯದಲ್ಲಿ ನೀವು ಇವುಗಳನ್ನು ಯಾವುದೇ ಅನುಮಾನವಿಲ್ಲದೆ ಸೇವನೆ ಮಾಡಬಹುದು.
  • ಇದರ ಜೊತೆಗೆ ಇನ್ನೂ ಕೆಲವು ಹಣ್ಣುಗಳು, ಕೋಳಿ ಮೊಟ್ಟೆ, ಓಟ್ಸ್ ಎಲ್ಲವೂ ಆರೋಗ್ಯಕರವಾದ ಆಹಾರಗಳಾಗಿವೆ. ನಿಮಗೆ ಇವುಗಳಿಂದ ಹೆಚ್ಚು ಪ್ರಯೋಜನ ಸಿಗಲಿದೆ.

​ಯಾವ ಉಪಹಾರಗಳನ್ನು ಮಧುಮೇಹಿಗಳು ತಿನ್ನಬಾರದು ಗೊತ್ತಾ?

  • ಸಕ್ಕರೆ ಅಂಶ ಮತ್ತು ಅತ್ಯಂತ ಸರಳವಾದ ಕಾರ್ಬೋಹೈಡ್ರೇಟ್ ಅಂಶ ಒಳಗೊಂಡಿರುವ ಆಹಾರಗಳನ್ನು ಮಧುಮೇಹಿ ರೋಗಿಗಳು ಸೇವನೆ ಮಾಡಲೇಬಾರದು.
  • ಇನ್ನೂ ಬೆಳಗಿನ ಸಮಯದಲ್ಲಿ ಅಥವಾ ದಿನದ ಯಾವುದೇ ಸಮಯದಲ್ಲಿ ಕುಡಿಯುವ ಕಾಫಿ ಮತ್ತು ಚಹಾಗೆ ಸಕ್ಕರೆ ಬೆರೆಸಬಾರದು.
  • ಸಂಸ್ಕರಿಸಿ ತಯಾರಿಸಿದ ಜ್ಯೂಸ್, ಹಣ್ಣಿನ ಸ್ಮೂತಿಗಳು, ಚಾಕಲೇಟ್, ಫ್ರೂಟ್ ಜಾಮ್, ಪೇಸ್ಟ್ರಿ, ಕೇಕ್ ಇತ್ಯಾದಿಗಳಿಂದ ಸ್ವಲ್ಪ ದೂರ ಇದ್ದರೆ ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ