ಆ್ಯಪ್ನಗರ

ಚೆನ್ನಾಗಿ ಮೀನು ತಿನ್ನಿ, ಯಾವ ಕಾಯಿಲೆಯೂ ನಿಮ್ಮ ಹತ್ತಿರಬರಲ್ಲ!

ಮೀನು ಕೇವಲ ತಿನ್ನಲು ರುಚಿ ಮಾತ್ರವಲ್ಲದೆ, ಅದರ ಆರೋಗ್ಯ ಪ್ರಯೋಜನಗಳು ಹಲವಾರಿವೆ. ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿದೆ.

Vijaya Karnataka Web 22 Jan 2020, 2:25 pm
ನಿಮಗೆ ಗೊತ್ತಿರಬಹುದು ಪಶ್ಚಿಮ ಬಂಗಾಳದ, ಅಸ್ಸಾಂ ರಾಜ್ಯದ ಹಾಗೂ ಕರಾವಳಿ ಪ್ರದೇಶಗಳ ಜನರು ಹೆಚ್ಚಾಗಿ ಮತ್ತು ಬಹುತೇಕವಾಗಿ ತಮ್ಮ ಎಲ್ಲಾ ಆಹಾರಗಳಲ್ಲಿ ಮೀನುಗಳ ಬಳಕೆ ಮಾಡುತ್ತಾರೆ. ಅವರುಗಳು ಮೀನಿನ ಆಹಾರದ ಮೇಲೆ ಅಷ್ಟೊಂದು ಅವಲಂಬಿತವಾಗಿರುವುದನ್ನು ಕಂಡರೆ ನಿಮಗೆ ತಮಾಷೆ ಅನ್ನಿಸಬಹುದು. ಆದರೆ ನಿಜ ಸಂಗತಿಯೇ ಬೇರೆ ಇದೆ.ಅದೇನೆಂದರೆ ಮೀನಿನಷ್ಟು ಆರೋಗ್ಯಕರ ಆಹಾರ ಮತ್ತೊಂದಿಲ್ಲ.
Vijaya Karnataka Web reasons eating fish every day is really good for you
ಚೆನ್ನಾಗಿ ಮೀನು ತಿನ್ನಿ, ಯಾವ ಕಾಯಿಲೆಯೂ ನಿಮ್ಮ ಹತ್ತಿರಬರಲ್ಲ!


​ಮೀನಿನ ರುಚಿ ಬಲ್ಲವರಿಗೇ ಗೊತ್ತು

ಹೌದು. ಒಂದೊಂದು ರೀತಿಯ ಮೀನುಗಳು ಒಂದೊಂದು ಬಗೆಯಲ್ಲಿ ಬಾಯಿಗೆ ರುಚಿ ಕೊಡುತ್ತವೆ. ಅವು ದೊಡ್ಡ ಮೀನುಗಳಾದ ರಾಹು ಅಥವಾ ಭೆಟ್ಕಿ ಆಗಿರಲಿ ಅಥವಾ ಸಣ್ಣ ಮೀನುಗಳಾದ ಮ್ಯಾಕೆರೆಲ್ಸ್ ಮತ್ತು ಸಾರ್ಡಿನ್ಸ್ ಆಗಿರಲಿ, ತಮ್ಮಲ್ಲಿ ಅಮೋಘ ಮತ್ತು ಅದ್ಭುತವಾದ ಸ್ವಾದ ತುಂಬಿಕೊಂಡಿರುತ್ತವೆ. ಜೊತೆಗೆ ಮೀನಿನ ಮಾಂಸ ಇತರ ಆಹಾರ ಪದಾರ್ಥಗಳಿಗಿಂತ ಬಹು ಬೇಗನೆ ಬೇಯುತ್ತದೆ. ಯಾವುದೇ ತರಹದ ಮೀನನ್ನು ಸುಲಭವಾಗಿ ಬೇಟೆಯಾಡಿ ನೀವು ಅದನ್ನು ಎಣ್ಣೆಯಲ್ಲಿ ಕರಿಯಬಹುದು, ಹುರಿಯಬಹುದು, ನೀರಿನ ಹವೆಯಲ್ಲಿ ಬೇಯಿಸಬಹುದು, ನೀರಿನಲ್ಲಿ ಕುದಿಸಬಹುದು ಹಾಗೂ ಕೆಂಡದಲ್ಲಿ ಸುಡಬಹುದು. ಮೀನು ಹೇಗೆ ಬೆಂದರೂ, ತನ್ನ ಅದ್ಭುತವಾದ ರುಚಿಯೊಂದಿಗೆ ಅನ್ನದಿಂದ ಹಿಡಿದು ರೊಟ್ಟಿಯವರೆಗೂ ಚೆನ್ನಾಗಿ ಬೆರೆಯುತ್ತದೆ.

ಆಹಾರವನ್ನು ಪದೇ ಪದೇ ಬಿಸಿ ಮಾಡುತ್ತಿದ್ದರೆ ಅದು ವಿಷಯುಕ್ತಗೊಳ್ಳಬಹುದು!


​ಆರೋಗ್ಯದ ವಿಷಯದಲ್ಲಿ ಎತ್ತಿದ ಕೈ

ರುಚಿಯ ವಿಷಯ ಒಂದು ಕಡೆಯಾದರೆ, ನಮ್ಮ ದೇಹಕ್ಕೆ ಮೀನಿನ ಆಹಾರದಿಂದ ಬರುವ ಆರೋಗ್ಯ ಪ್ರಯೋಜನಗಳು ಇನ್ನೊಂದು ಕಡೆ. ನೀವು ಊಹಿಸಲು ಅಸಾಧ್ಯವಾದ ರೀತಿಯಲ್ಲಿ ನಿಮ್ಮ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ತಂದು ಕೊಡುವ ಹೊಣೆ ಮೀನಿನದ್ದು. ಇಲ್ಲಿನ ಕೆಲವೊಂದು ಕಾರಣಗಳು ನೀವು ಪ್ರತಿ ದಿನ ಮೀನುಗಳನ್ನು ಏಕೆ ಸೇವಿಸಬೇಕೆಂದು ತಿಳಿಸಿಕೊಡುತ್ತವೆ.

​ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾದ ಫ್ಯಾಟ ಆಮ್ಲಗಳು ಮೀನುಗಳಲ್ಲಿ ಲಭ್ಯವಿವೆ

ಇತರ ಸಮುದ್ರದ ಆಹಾರ ಪದಾರ್ಥಗಳಿಗೆ ಹೋಲಿಸಿದರೆ, ಫ್ಯಾಟಿ ಫಿಷ್ ಗಳಾದ ( ಸಾಲ್ಮನ್, ಟ್ರೌಟ್, ಸಾರ್ಡಿನ್ಸ್, ಟುನ ಮತ್ತು ಮ್ಯಾಕರಲ್ ) ನಿಮ್ಮ ದೇಹಕ್ಕೆ ಅತ್ಯುತ್ತಮವೆಂದು ಸಾಬೀತು ಪಡಿಸಿವೆ. ಏಕೆಂದರೆ ಈ ಮೀನುಗಳಲ್ಲಿ ಮನುಷ್ಯನ ದೇಹಕ್ಕೆ ಪ್ರತಿ ಹಂತದಲ್ಲೂ ಅಗತ್ಯವಾಗಿ ಅವಶ್ಯಕತೆ ಇರುವ ದೇಹಕ್ಕೆ ಒಳ್ಳೆಯ ಕೊಬ್ಬಿನ ಅಂಶ ಎಂದೇ ಗುರುತಿಸಿಕೊಂಡಿರುವ ಒಮೆಗಾ - 3 ಫ್ಯಾಟಿ ಆಸಿಡ್ ಗಳು ಹೇರಳವಾಗಿ ಲಭ್ಯವಿವೆ. ಈ ಫ್ಯಾಟಿ ಆಸಿಡ್ ಗಳು ಮಾನವನ ಕಣ್ಣುಗಳು ಮತ್ತು ಮೆದುಳಿನ ನರ ನಾಡಿಗಳು ಸರಾಗವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತವೆ. ಆದ್ದರಿಂದಲೇ ವೈದ್ಯರು ಸಹ ಗರ್ಭಿಣಿಯರಿಗೆ ಬೆಳೆಯುತ್ತಿರುವ ಮಗುವಿನ ಅಂಗಾಂಶಗಳ ಅಭಿವೃದ್ಧಿಗಾಗಿ ಇವುಗಳನ್ನು ತಿನ್ನಲು ಸೂಚನೆ ಕೊಡುತ್ತಾರೆ.

ಬಂಗುಡೆ ಮೀನು ತಿಂದ್ರೆ ತೂಕ ಇಳಿಯುತ್ತೆ-ಮಧುಮೇಹ ನಿಯಂತ್ರಣಕ್ಕೆ ಬರುತ್ತೆ


Video-ಚೆನ್ನಾಗಿ ಮೀನು ತಿನ್ನಿ, ಯಾವ ಕಾಯಿಲೆಯೂ ನಿಮ್ಮ ಹತ್ತಿರಬರಲ್ಲ!

​ಹೃದಯದ ಆರೋಗ್ಯ ವೃದ್ಧಿಸುತ್ತದೆ

ಮೀನುಗಳಲ್ಲಿ ಸ್ಯಾಚುರೇಟೆಡ್ ಫ್ಯಾಟ್‌ಗಳು ಇಲ್ಲದಿರುವ ಕಾರಣ ಇವುಗಳ ಸೇವನೆಯಿಂದ ಮನುಷ್ಯನ ಹೃದಯಕ್ಕೆ ಯಾವುದೇ ಬಗೆಯ ತೊಂದರೆಗಳು ಉಂಟಾಗುವುದಿಲ್ಲ. ಬದಲಿಗೆ ಹೃದಯದ ಆರೋಗ್ಯಕ್ಕೆ ಒಳ್ಳೆಯದೇ ಆಗುತ್ತದೆ. ಇದಕ್ಕೆ ಕಾರಣ ಮನುಷ್ಯನ ಹೃದಯದ ಆರೋಗ್ಯವನ್ನು ಹಾಳು ಮಾಡುವ ಕೊಲೆಸ್ಟ್ರಾಲ್ ಅಂಶವನ್ನು ಮೀನುಗಳ ದಿನ ನಿತ್ಯ ಸೇವನೆಯಿಂದ ದೂರ ಇಡಬಹುದು. ಆದರೆ ಈ ಒಳ್ಳೆಯ ಕೆಲಸ ನೀವು ಚಿಕನ್ ಅಥವಾ ಮಟನ್ ತಿನ್ನುವುದರಿಂದ ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಹೃದಯದ ಆರೋಗ್ಯಕ್ಕೆ ಸಂಬಂಧ ಪಟ್ಟ ಯಾವುದೇ ಕಾಯಿಲೆಗಳನ್ನು ದೂರ ಇಡಬೇಕಾದರೆ ಮೊದಲು ಮೀನಿನ ಸೇವನೆಯನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಿ.

​ವಿಟಮಿನ್ ' ಡಿ ' ಅಂಶದ ಆಗರ

ಮೀನುಗಳು ಸಹಜವಾಗಿ ವಿಟಮಿನ್ ' ಡಿ ' ಅಂಶದ ಮೂಲ ಎಂದು ಗುರುತಿಸಿಕೊಂಡಿವೆ. ಅಂದರೆ ಮೀನುಗಳ ದೇಹದ ತುಂಬಾ ವಿಟಮಿನ್ ' ಡಿ ' ಅಂಶ ಸೇರಿದೆ ಎಂದರೆ ತಪ್ಪಾಗಲಾರದು. ಮನುಷ್ಯನ ದೇಹಕ್ಕೆ ತಾನು ತಿನ್ನುವ ಪ್ರತಿಯೊಂದು ಆಹಾರದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳನ್ನು ಹೀರಿಕೊಂಡು ಸಂಪೂರ್ಣ ದೇಹದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕಾದರೆ ವಿಟಮಿನ್ ' ಡಿ ' ಅಂಶದ ಅವಶ್ಯಕತೆ ತುಂಬಾ ಇದೆ. ಮೀನಿನ ಸೇವನೆ ಈ ವಿಷಯದಲ್ಲಿ ನಿಮಗೆ ಬಹಳ ಸಹಾಯ ಮಾಡುತ್ತದೆ ಮತ್ತು ನೀವು ಒಮ್ಮೆ ಮೀನಿನ ಆಹಾರದ ರುಚಿ ಹಿಡಿದರೆ, ನಿಮ್ಮನ್ನು ಮತ್ತೆ ಮತ್ತೆ ತಿನ್ನುವಂತೆ ಪ್ರೇರೇಪಿಸುತ್ತದೆ.

ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು ಗೊತ್ತೇ?


​ಒಟ್ಟಾರೆ ಆರೋಗ್ಯ ವೃದ್ಧಿಸುವಲ್ಲಿ ಎತ್ತಿದ ಕೈ

ಇಷ್ಟೇ ಅಲ್ಲದೆ ನಿಮ್ಮ ದೇಹದ ಮೆಟಬಾಲಿಸಂ ಪ್ರಕ್ರಿಯೆ, ಉತ್ತಮ ಗುಣಮಟ್ಟದ ನಿದ್ದೆ, ದೇಹದ ಚರ್ಮದ ಅದ್ಭುತ ಕಾಂತಿ ಮತ್ತು ಮನಸ್ಸಿನ ಏಕಾಗ್ರತೆಯನ್ನು ಉತ್ತಮಗೊಳ್ಳುವಂತೆ ಮೀನಿನ ಆಹಾರ ನೋಡಿಕೊಳ್ಳುತ್ತದೆ. ನಿಮ್ಮ ದೇಹದ ಉರಿಯೂತವನ್ನು ಕಡಿಮೆ ಮಾಡಿ ತನ್ನ ಅಮೋಘ ಆರೋಗ್ಯ ಪ್ರಯೋಜನಗಳಿಂದ ಮತ್ತು ಬಾಯಿಗೆ ರುಚಿ ಕೊಡುವ ಗುಣ ಲಕ್ಷಣಗಳಿಂದ ನಿಮ್ಮನ್ನು ಬೇರೆ ಆಹಾರಗಳ ಮೊರೆ ಹೋಗುವ ಅನಿವಾರ್ಯತೆಯಿಂದ ಸುಲಭವಾಗಿ ತಪ್ಪಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ