ಆ್ಯಪ್ನಗರ

ಈ ಟೈಮ್‌ನಲ್ಲಿ ಕಾಫಿ ಹೀರಿದರೆ ದೇಹಕ್ಕೆ ಒಳ್ಳೆಯದು

​ ಬೆಳಗ್ಗೆ ಎಷ್ಟೊತ್ತಿಗೆ ಕಾಫಿ ಕುಡಿಯುತ್ತೀರಾ? ಸಾಮಾನ್ಯವಾಗಿ 6-9 ಗಂಟೆಯ ಒಳಗೆ ಒಂದು ಲೋಟ ಕಾಫಿ ಹೀರಿ ಬಿಡುತ್ತೇವೆ ಅಲ್ವಾ?

Vijaya Karnataka Web 12 Jun 2017, 11:15 am
ಬೆಳಗ್ಗೆ ಎಷ್ಟೊತ್ತಿಗೆ ಕಾಫಿ ಕುಡಿಯುತ್ತೀರಾ? ಸಾಮಾನ್ಯವಾಗಿ 6-9 ಗಂಟೆಯ ಒಳಗೆ ಒಂದು ಲೋಟ ಕಾಫಿ ಹೀರಿ ಬಿಡುತ್ತೇವೆ ಅಲ್ವಾ? ಮತ್ತೆ ಕೆಲವರಿಗೆ ಬೆಡ್‌ ಕಾಫಿ ಕುಡಿದ ಮೇಲೆಯೇ ಮುಂದಿನ ದಿನಚರಿ.
Vijaya Karnataka Web right time to drink coffee
ಈ ಟೈಮ್‌ನಲ್ಲಿ ಕಾಫಿ ಹೀರಿದರೆ ದೇಹಕ್ಕೆ ಒಳ್ಳೆಯದು


ಆದರೆ ಕಾಫಿ ಕುಡಿಯಲು ಇದು ಸರಿಯಾದ ಸಮಯ ಅಲ್ಲವೆಂದು ವಿಜ್ಞಾನ ಹೇಳುತ್ತದೆ. ಕಾಫಿಯ ಕೆಫೀನ್‌ ನಮ್ಮ ದೇಹವನ್ನು ಬಾಧಿಸದೆ, ನಾವು ಕುಡಿದ ಕಾಫಿ ಔ‍ಷಧಿಯಾಗಿ ಪರಿಣಮಿಸಬೇಕೆ? ಹಾಗಾದರೆ ಕಾಫಿಯನ್ನು ಈ ನಿರ್ಧಿಷ್ಟ ಈ ಸಮಯದಲ್ಲಿಯಷ್ಟೇ ಕುಡಿಯಬೇಕು.

ಹಾಗಾದರೆ ಕಾಫಿ ಕುಡಿಯಲು ಸೂಕ್ತ ಸಮಯ ಯಾವುದು?
ಬೆಳಗ್ಗೆ 9.30ಯಿಂದ 11.30, ಮಧ್ಯಾಹ್ನ 1.30ರಿಂದ 5.30 ಅಥವಾ ರಾತ್ರಿ 7 ಗಂಟೆ ಮೇಲೆ.

ಏಕೆ ಈ ಸಮಯ ಒಳ್ಳೆಯದು

ನಮ್ಮ ದೇಹದಲ್ಲಿ ಸರ್ಕಾಡೈನ್‌ ರಿಥಮ್‌ (circadian rhythm) ಎಂಬ ಹಾರ್ಮೋನ್ cortisol ಎಂಬ ಹಾರ್ಮೋನ್‌ ಉತ್ಪತ್ತಿ ಮಾಡುತ್ತದೆ . ಇದು ನಮ್ಮ ದೇಹವನ್ನು ಎಚ್ಚರವಾಗಿರುವಂತೆ ಮಾಡುತ್ತದೆ. ನಮ್ಮ ದೇಹದಲ್ಲಿ ಈ ಹಾರ್ಮೋನ್‌ ಅತ್ಯಧಿಕ ಇರುವ ಸಮಯದಲ್ಲಿ ಕಾಫಿ ಕುಡಿಯುವುದು ಒಳ್ಳೆಯದಲ್ಲವೆಂದು ವಿಜ್ಞಾನ ಹೇಳುತ್ತದೆ.

ಈ ಹಾರ್ಮೋನ್‌ ಅತ್ಯಧಿಕ ಇರುವ ಸಮಯದಲ್ಲಿ ಕಾಫಿ ಕುಡಿದರೆ ಕಾಫಿಯು ನಮ್ಮ ದೇಹದಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ, ಬದಲಿಗೆ ಮತ್ತಷ್ಟು ಕಾಫಿ ಬೇಕೆನಿಸುತ್ತದೆ. ಇದರಿಂದ ದೇಹದಲ್ಲಿ ಕೆಫೀನ್‌ ಅಂಶ ಹೆಚ್ಚಾಗುವುದು.

ಅದೇ ಈ ಹಾರ್ಮೋನ್‌ಗಳ ಉತ್ಪತ್ತಿ ಕಡಿಮೆಯಾಗುವ ಸಮಯದಲ್ಲಿ ಸೇವಿಸುವಯದರಿಂದ ದೇಹಕ್ಕೆ ಹುರುಪು ದೊರೆಯುವುದು.

ಬೆಳಗ್ಗೆ 7-9 ಗಂಟೆವರೆಗೆ ಈ ಹಾರ್ಮೋನ್‌ಗಳ ಉತ್ಪತ್ತಿ ಅಧಿಕವಿರುತ್ತದೆ. ನಂತರ ಕಡಿಮೆಯಾಗುತ್ತಾ ಹೋಗುವುದು, ಆಗ ತೂಕಡಿಕೆ ಬರಬಹುದು. ಈ ಸಮಯದಲ್ಲಿ ಕಾಫಿಯನ್ನು ಹೀರಿ, ಹುಮ್ಮಸ್ಸು ಮರಳಿ ಪಡೆಯಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ