ಆ್ಯಪ್ನಗರ

ಸೌನಾ ಸ್ನಾನ ಹೃದಯಕ್ಕೆ ಉತ್ತಮ

ಸಾಮಾನ್ಯವಾದ ಒಂದು ಸೌನಾ ಬಾತ್‌ನಿಂದ ಒಂದು ಸಾಮಾನ್ಯವಾದ ವಾಕಿಂಗ್‌ನಿಂದಾಗುವಷ್ಟು ಪ್ರಯೋಜನವಿದೆ ಎನ್ನಲಾಗಿದೆ.

Agencies 4 Jun 2019, 11:33 am
ಪದೇ ಪದೇ ಸೌನಾ ಸ್ನಾನ ಮಾಡುವುದು ಬಹಳ ಸುರಕ್ಷಿತ ಹಾಗೂ ಹೃದಯದ ಕಾಯಿಲೆ ಉಳ್ಳವರಿಗೆ ಅತ್ಯುತ್ತಮ ಎಂದು ಅಧ್ಯಯನವೊಂದು ತಿಳಿಸಿದೆ. ಅತಿ ಉಷ್ಣದ ಹವೆಗೆ ಸ್ವಲ್ಪ ಹೊತ್ತು ಮೈಯೊಡ್ಡುವ ಚಿಕಿತ್ಸೆಯೇ ಸೌನಾ ಬಾತ್‌.
Vijaya Karnataka Web Sauna


ಫಿನ್‌ಲ್ಯಾಂಡ್‌ನಲ್ಲಿ ಸಾವಿರಾರು ವರ್ಷಗಳಿಂದ ಆರೋಗ್ಯ ಮತ್ತು ರಿಲ್ಯಾಕ್ಸೇಷನ್‌ಗಾಗಿ ಬಳಕೆಯಲ್ಲಿದ್ದ ಈ ಚಿಕಿತ್ಸೆಯು ಇದೀಗ ಜಗತ್ತಿನ ಇತರ ಪ್ರದೇಶಗಳಲ್ಲಿಯೂ ಜನಪ್ರಿಯವಾಗುತ್ತಿದೆ. ಸೌನಾ ಸೆಷನ್‌ಗಳಿಗೆ ತೊಡಗಿಸಿಕೊಂಡಾಗ ದೇಹದಲ್ಲಿ ಎಂಡಾರ್ಫಿನ್‌ನಂತಹ ಹಾರ್ಮೋನ್‌ಗಳ ಪ್ರಮಾಣ ಹೆಚ್ಚುತ್ತದಂತೆ. ಇದರಿಂದಾಗಿ ವ್ಯಕ್ತಿಯ ಮಾನಸಿಕ ಸ್ಥಿತಿಯೂ ಉಲ್ಲಸಿತಗೊಳ್ಳುತ್ತದೆಯಂತೆ.

ಸಾಮಾನ್ಯವಾದ ಒಂದು ಸೌನಾ ಬಾತ್‌ನಿಂದ ಒಂದು ಸಾಮಾನ್ಯವಾದ ವಾಕಿಂಗ್‌ನಿಂದಾಗುವಷ್ಟು ಪ್ರಯೋಜನವಿದೆ ಎನ್ನಲಾಗಿದೆ. ರಕ್ತ ಪರಿಚಲನೆ, ಉಸಿರಾಟ, ಹೃದಯದ ಆರೋಗ್ಯ, ರೋಗನಿರೋಧಕ ಶಕ್ತಿ ಇತ್ಯಾದಿ ಎಲ್ಲದರ ಮೇಲೂ ಇದರಿಂದ ಸಕಾರಾತ್ಮಕ ಪರಿಣಾಮವಾಗುತ್ತದೆ ಎನ್ನಲಾಗಿದೆ. ಇಷ್ಟೇ ಅಲ್ಲ, ವಿವಿಧ ಬಗೆಯ ಚರ್ಮರೋಗಗಳು, ಆಥ್ರೈರ್‍ಟಿಸ್‌, ತಲೆನೋವು, ಫ್ಲೂ ಇತ್ಯಾದಿಗಳಿಂದ ಗುಣಮುಖರಾಗುವಲ್ಲೂ ಇದು ಪೂರಕ ಎಂದು ವಿದೇಶಿ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಹೇಳಿದೆ. ಸೌನಾ ಸ್ನಾನ ರಕ್ತದೊತ್ತಡ ಹಾಗೂ ಆಕ್ಸಿಡೇಟಿವ್‌ ಒತ್ತಡದಿಂದಲೂ ಮುಕ್ತಗೊಳಿಸುತ್ತದೆ ಎಂದಿಗೆ ಅಧ್ಯಯನ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ