ಆ್ಯಪ್ನಗರ

ಹೋಳಿ ನಂತರದ ಆರೋಗ್ಯ ಕಾಳಜಿ

ಹೋಳಿ ಆಡುವ ಮುನ್ನ ಒಂದಿಷ್ಟು ಎಚ್ಚರಿಕೆ ವಹಿಸುವುದರ ಜತೆ ಅನಂತರವೂ ದೇಹದ ರಕ್ಷಣೆಗೆ ಎಚ್ಚರಿಕೆ ವಹಿಸಬೇಕು.

Vijaya Karnataka Web 20 Mar 2019, 5:18 pm
ಹೋಳಿ ಆಚರಣೆ ಎಷ್ಟು ಖುಷಿಕರವೋ ಅಷ್ಟೇ ಅಹಿತಕರವೂ ಹೌದು.
Vijaya Karnataka Web skin and hair care tips for safe holi
ಹೋಳಿ ನಂತರದ ಆರೋಗ್ಯ ಕಾಳಜಿ


ಬಣ್ಣಗಳಲ್ಲಿ ಬಹುತೇಕ ರಾಸಾಯನಿಕಗಳಿರುತ್ತವೆ. ಕೆಲವು ಬಣ್ಣಗಳಲ್ಲಿ ತಾಮ್ರ, ಸೀಸ, ಬೆಳ್ಳಿ, ಅಲ್ಯೂಮಿನಿಯಂ ಮತ್ತು ಅಯೋಡಿನ್‌ ಇರುತ್ತವೆ. ಇಂತಹ ರಾಸಾಯನಿಕ ಮಿಶ್ರಿತ ಬಣ್ಣಗಳೊಂದಿಗೆ ಓಕುಳಿಯಾಡಿದಾಗ, ಮೊದಲು ಹಾನಿಗೊಳ್ಳುವುದು ಕೂದಲು ಹಾಗೂ ಚರ್ಮ. ಅಲ್ಲದೆ ಬಣ್ಣಗಳು ಒಳಗೊಂಡ ರಾಸಾಯನಿಕಗಳ ಪ್ರಭಾವದಿಂದ ಹೋಳಿ ಆಡಿದ ನಂತರ ಅಲರ್ಜಿಯಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಕೆಲವು ಬಣ್ಣಗಳಲ್ಲಿ ಡೈ, ಇಂಜಿನ್‌ ಆಯಿಲ್‌ ಹಾಗೂ ಪುಡಿ ಮಾಡಿದ ಗಾಜು ಸಹ ಇರುತ್ತದೆ. ಇಂತಹ ಬಣ್ಣಗಳು ಕೂದಲನ್ನು ಹಾಳು ಮಾಡುವುದರ ಜತೆಗೆ ನೆತ್ತಿಗೂ ಹಾನಿಯುಂಟು ಮಾಡುತ್ತವೆ. ಕೆಲವರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ಇದರಿಂದ ಕೂದಲು ಹಾಗೂ ನೆತ್ತಿಗೆ ದೀರ್ಘಕಾಲದ ಹಾನಿಯುಂಟಾಗುತ್ತದೆ. ಆದ್ದರಿಂದ ಹೋಳಿ ನಂತರ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದನ್ನು ಡಾ. ಅಕ್ಷ ಯ್‌ ಭಾತ್ರ ಇಲ್ಲಿ ಹೇಳಿದ್ದಾರೆ.

ಹೋಳಿ ಆರೈಕೆ

ಹೋಳಿ ಆಡಿದ ಮೇಲೆ ನಿಮ್ಮ ಕೂದಲನ್ನು ಉಗುರು ಬೆಚ್ಚನೆ ನೀರಿನಿಂದ ತೊಳೆದುಕೊಳ್ಳಿ. ಮೃದುವಾದ ಶಾಂಪುವಿನಿಂದ ಕೂದಲನ್ನು ಉಜ್ಜಿ. ನಂತರ ಕಂಡೀಷನರ್‌ ಹಾಕಿಕೊಳ್ಳಿ. ಅದು ಕೂದಲನ್ನು ಮೃದುವಾಗಿಸಿ, ರಾಸಾಯನಿಕ ಬಣ್ಣಗಳಿಂದಾಗುವ ಒರಟುತನವನ್ನು ಹೋಗಲಾಡಿಸುತ್ತದೆ. ಕೂದಲನ್ನು ನಯವಾಗಿ ಒರೆಸಿ. ಹೇರ್‌ ಡ್ರೈಯರ್‌ ಉಪಯೋಗಿಸಬೇಡಿ.
ತಲೆಗೆ ಸ್ನಾನ ಮಾಡಿದ ನಂತರ ಆಲಿವ್‌ ಎಣ್ಣೆ ಹಚ್ಚಿ. ಹೋಳಿ ನಂತರದ 3 ದಿನಗಳವರೆಗೆ ನಿತ್ಯ ಆಲಿವ್‌ ಎಣ್ಣೆ ಹಚ್ಚಿ. ನೆತ್ತಿಯನ್ನು ತೈಲದಿಂದ ಉಜ್ಜಿದರೆ, ನೆತ್ತಿ ತಂಪಾಗುತ್ತದೆ ಹಾಗೂ ತೇವದಿಂದ ಕೂಡಿರುತ್ತದೆ. ನೀರಿನ ಬಲೂನ್‌ ಕಣ್ಣಿಗೆ ಬಡಿದರೆ, ತಕ್ಷ ಣ ನೀರಿನಿಂದ ತೊಳೆಯಿರಿ. ಉರಿ ಇದ್ದರೆ ತಕ್ಷ ಣ ವೈದ್ಯ ಚಿಕಿತ್ಸೆ ಪಡೆಯಿರಿ. ಕಣ್ಣಿನಲ್ಲಿ ರಕ್ತ ಸೋರಿದರೆ, ಕಣ್ಣುಗಳನ್ನು ಸ್ವಚ್ಛವಾದ ಬಿಳಿ ಬಟ್ಟೆ ಅಥವಾ ಹತ್ತಿಯಿಂದ ಮುಚ್ಚಿ. ತಕ್ಷ ಣ ನೇತ್ರತಜ್ಞರನ್ನು ಕಾಣಿರಿ. ಕಣ್ಣನ್ನು ಉಜ್ಜಬೇಡಿ.



ಹೋಳಿ ಚರ್ಮದ ಆರೈಕೆ

ನಿಮಗೆ ಇಸುಬು/ಕರಪಾಣಿ ಇದ್ದರೆ, ಹೋಳಿ ಆಡುವ ಮುನ್ನ ರಕ್ಷ ಣಾತ್ಮಕ ಬಿಳಿ ಪ್ಯಾರಾಫಿನ್‌ ಹಚ್ಚಿಕೊಳ್ಳಿ. ಸಾಧ್ಯವಾದಷ್ಟು ಮುಖದ ಮೇಲೆ ಬಣ್ಣ ಹಾಕಿಸಿಕೊಳ್ಳಬೇಡಿ. ನಿಮಗೆ ಅಲರ್ಜಿ ಇದ್ದರೆ ಸೂಕ್ತ ವೈದ್ಯ ಚಿಕಿತ್ಸೆ ಪಡೆಯಿರಿ. ಬಣ್ಣಗಳನ್ನು ತೊಳೆಯಲು ಬೆಚ್ಚನೆ ನೀರು ಹಾಗೂ ತೇವಾಂಶ ನೀಡುವ ಸಾಬೂನು ಉಪಯೋಗಿಸಿ. ಚರ್ಮವನ್ನು ಸಾಬೂನಿನಿಂದ ಒರಟಾಗಿ ಉಜ್ಜಬೇಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ