ಆ್ಯಪ್ನಗರ

ಗಡ್ಡಧಾರಿ ಪುರುಷರಿಗಿಂತ ಶ್ವಾನಗಳೇ ಹೆಚ್ಚು ಕ್ಲೀನ್! ಯಾಕೆ ಗೊತ್ತಾ?

ನಾಯಿಯ ತುಪ್ಪಳಕ್ಕಿಂತ ಪುರುಷರ ಗಡ್ಡದಲ್ಲಿ ಹೆಚ್ಚು ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳು ಇರಬಹುದು ಎಂಬುದು ಅಧ್ಯಯನವೊಂದರಲ್ಲಿ ಕಂಡುಬಂದಿದೆ. ಹೀಗಾಗಿ, ಗಡ್ಡಧಾರಿ ಪುರುಷರಿಗಿಂತ ಶ್ವಾನಗಳೇ ಶುಚಿಯಾಗಿರುತ್ತವೆ ಎಂದು ತಿಳಿದುಬಂದಿದೆ.

Times Now 17 Apr 2019, 4:50 pm
ಹೊಸದಿಲ್ಲಿ: ನೀವು ಗಡ್ಡವನ್ನು ಇಷ್ಟಪಡುತ್ತೀರಾ? ನಿಮಗೆ ಹೆಚ್ಚು ಗಡ್ಡ ಬಂದ ದಿನ ಸೆಲ್ಫಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಲು ನೀವು ಇಷ್ಟಪಡುವುದಿಲ್ಲವೇ? ಅಲ್ಲದೆ, ಗಡ್ಡ ಬಿಡುವುದಕ್ಕೋಸ್ಕರ ಹಾಗೂ ನೋ ಶೇವ್‌ ನವೆಂಬರ್ ಎಂಬುದನ್ನು ನೀವು ಬೆಂಬಲಿಸುತ್ತೀರಾ? ಇನ್ನು, ಗಡ್ಡ ಬಿಡುವ ಹುಡುಗರು ನಿಮಗೆ ಇಷ್ಟ ಎನ್ನುವ ಕಾರಣಕ್ಕೆ ಗಡ್ಡ ಬಿಟ್ಟಿರುವ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೀರಾ? ಈ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ಇದನ್ನು ನೀವು ಓದಲೇಬೇಕು.
Vijaya Karnataka Web beard


ಸ್ವಿಟ್ಜರ್ಲೆಂಡ್‌ನ ಹಿರ್ಸ್‌ಲ್ಯಾಂಡೆನ್‌ ಕ್ಲಿನಿಕ್‌ನ ಪ್ರೊಫೆಸರ್‌ಗಳು ನಡೆಸಿರುವ ಅಧ್ಯಯನದ ಪ್ರಕಾರ ನಾಯಿಯ ತುಪ್ಪಳಕ್ಕಿಂತ ಪುರುಷರ ಗಡ್ಡದಲ್ಲಿ ಹೆಚ್ಚು ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳು ಇರಬಹುದು ಎಂದು ತಿಳಿದುಬಂದಿದೆ. 18 ಪುರುಷರ ಮುಖದಲ್ಲಿನ ಕೂದಲು ಹಾಗೂ 30 ವಿವಿಧ ತಳಿಯ ಶ್ವಾನಗಳ ಕತ್ತಿನ ಸ್ವ್ಯಾಬ್‌ ಪರೀಕ್ಷೆಯನ್ನು ಸಂಶೋಧಕರು ನಡೆಸಿದ್ದಾರೆ.

ಶ್ವಾನಗಳಿಂದ ಮನುಷ್ಯರ ಗಡ್ಡಕ್ಕೆ ಸೂಕ್ಷ್ಮಜೀವಿಗಳು ಹರಡುತ್ತವೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಅಧ್ಯಯನ ನಡೆದಿತ್ತಾದರೂ, ಈ ಪರೀಕ್ಷೆಯಲ್ಲಿ ಪುರುಷರ ಗಡ್ಡದಲ್ಲಿ ಶ್ವಾನಗಳ ತುಪ್ಪಳಕ್ಕಿಂತ ಹೆಚ್ಚು ಸೂಕ್ಷ್ಮಜೀವಿಗಳು ಪತ್ತೆಯಾಗಿವೆ ಎಂಬುದು ತಿಳಿದುಬಂದಿದೆ.

18 ರಿಂದ 76 ವರ್ಷ ವಯಸ್ಸಿನ ಪುರುಷರನ್ನು ಅಧ್ಯಯನಗೊಳಪಡಿಸಲಾಗಿದ್ದು, ಅವರ ಗಡ್ಡಗಳಲ್ಲಿ ಹೆಚ್ಚು ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಶ್ವಾನಗಳ ತುಪ್ಪಳಗಳಲ್ಲಿ 23 ಬ್ಯಾಕ್ಟೀರಿಯಾಗಳು ಇದ್ದರೆ ಪುರುಷರ ಗಡ್ಡದಲ್ಲಿ ಸರಾಸರಿ 30 ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಸ್ಯಾಂಪಲ್‌ಗಳ ಪೈಕಿ 7 ಪುರುಷರ ಗಡ್ಡದಲ್ಲಿ ಹೆಚ್ಚು ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದು, ಅವರು ಅನಾರೋಗ್ಯಕ್ಕೀಡಾಗುವ ಆತಂಕವೂ ಇದೆ ಎಂಬುದು ಕಂಡುಬಂದಿದೆ.

ಈ ಸಂಬಂಧ ಪ್ರೊಫೆಸರ್ ಆ್ಯಂಡ್ರಿಯಾಸ್ ಗಟ್ಜೆಟ್‌, ''ಪುರುಷರ ಗಡ್ಡದಲ್ಲಿ ನಾಯಿಗಳ ತುಪ್ಪಳಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾಗಳು ಕಂಡುಬಂದಿವೆ'' ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಈ ಅಧ್ಯಯನಗಳ ಆಧಾರದ ಮೇಲೆ ಗಡ್ಡಧಾರಿ ಪುರುಷರಿಗಿಂತ ಶ್ವಾನಗಳೇ ಶುಚಿಯಾಗಿರುತ್ತವೆ ಎನ್ನಬಹುದು''ಎಂದು
ಗಟ್ಜೆಟ್‌ ಹೇಳಿದ್ದಾರೆ.

ನೀವಿನ್ನೂ ನಿಮ್ಮ ಗಡ್ಡದ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ್ದೀರಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ