ಆ್ಯಪ್ನಗರ

ಸ್ವೀಟ್ಸ್‌ ತಿಂದರೆ ಡಯಾಬಿಟಿಸ್‌ ಬರುತ್ತೆ ಎನ್ನುವುದು ಸುಳ್ಳು....

ಸ್ವೀಟ್ಸ್‌ ತಿಂದರೆ ಶುಗರ್‌ ಬಂದು ಬಿಡುತ್ತೆ ಎನ್ನುವುದು ಎಷ್ಟು ನಿಜ ಎನ್ನುವುದು ಗೊತ್ತಿಲ್ಲ. ಆದರೆ ವಾಸ್ತವ ಎಂದರೆ ನಮ್ಮ ಜೀವನ ಶೈಲಿ, ಆಹಾರ ಪದ್ಧತಿಯೇ ಸಕ್ಕರೆ ಕಾಯಿಲೆಗೆ ರಹದಾರಿ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

Vijaya Karnataka Web 1 Jan 2019, 9:11 am
ಯ್ಯೋ, ನನಗೆ ಸ್ವೀಟ್‌ ಬೇಡ, ಏಕೆಂದರೆ ನನಗೀಗ ಶುಗರ್‌ ಬಂದಿದೆ. ಸ್ವಲ್ಪ ಕಂಟ್ರೋಲ್‌ ಮಾಡಬೇಕು.....
Vijaya Karnataka Web ಜಾಮೂನು
ಜಾಮೂನು


ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೇಳಿಬರುವ ಕಾಮನ್‌ ಡೈಲಾಗ್‌...

ಸ್ವೀಟ್ಸ್‌ ತಿಂದರೆ ಶುಗರ್‌ ಬಂದು ಬಿಡುತ್ತೆ ಎನ್ನುವುದು ಎಷ್ಟು ನಿಜ ಎನ್ನುವುದು ಗೊತ್ತಿಲ್ಲ.

ಆದರೆ ವಾಸ್ತವ ಎಂದರೆ ನಮ್ಮ ಜೀವನ ಶೈಲಿ, ಆಹಾರ ಪದ್ಧತಿಯೇ ಸಕ್ಕರೆ ಕಾಯಿಲೆಗೆ ರಹದಾರಿ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

ಯಾವುದೇ ಚಟುವಟಿಕೆ ಇಲ್ಲದೇ, ಕೇವಲ ಸಿಹಿ ಪದಾರ್ಥಗಳನ್ನು ತಿನ್ನುವವರು ಸಕ್ಕರೆ ಕಾಯಿಲೆಗೆ ಸುಲಭವಾಗಿ ತುತ್ತಾಗುತ್ತಾರೆ ಎನ್ನುತ್ತಾರೆ ಮುಂಬೈ ಮೂಲದ ಆಹಾರ ತಜ್ಞರಾದ ಕಾಜಲ್‌ ಬಥೆನಾ.

ಸಿಹಿ ತಿನಿಸು


ಸಕ್ಕರೆ ಅಥವಾ ಸಿಹಿ ತಿಂಡಿ ತಿನ್ನುವುದರಿಂದಲೇ ಶುಗರ್‌ ಬರುತ್ತದೆ ಎಂಬ ನಿರ್ಧಾರಕ್ಕೆ ಬರುವ ಮೊದಲು ನಮ್ಮ ದೇಹಕ್ಕೆ ಅಗತ್ಯವಿರುವ ಕಾರ್ಬೊಹೈಡ್ರೇಟ್ಸ್‌ ಬಗ್ಗೆ ತಿಳಿದುಕೊಳ್ಳುವುದು ಒಳಿತು. ಶುಗರ್‌ ನಮ್ಮ ದೇಹಕ್ಕೆ ಅಗತ್ಯ ಇದೆ. ಅದರ ಜತೆಗೆ ಹಣ್ಣುಗಳು, ತರಕಾರಿಗಳಲ್ಲೂ ಇದು ಇರುತ್ತದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಎಲ್ಲವನ್ನೂ ನಿಯಮಿತವಾಗಿ ಸೇವಿಸಬೇಕು. ಆದರೆ ಜಾಸ್ತಿ ಸೇವಿಸಿದರೆ ಶುಗರ್‌ ಲೆವೆಲ್‌ ಜಾಸ್ತಿಯಾಗುತ್ತದೆ. ಇದರಿಂದ ಕ್ಯಾಲೋರಿ ಹೆಚ್ಚಾಗುತ್ತದೆ. ಕ್ಯಾಲೋರಿ ಹೆಚ್ಚಾಗುತ್ತಿದ್ದಂತೆ ದೇಹದ ಏರಿಕೆ ಏರಿಕೆಯಾಗುತ್ತದೆ. ಇದು ಶುಗರ್‌ ಲೆವೆಲ್‌ ಹೆಚ್ಚಾಗಲು ದಾರಿ ಮಾಡಿಕೊಡುತ್ತದೆ.

ನಮ್ಮ ಆಹಾರ ಪದ್ಧತಿ ಮಿತವಾಗಿದ್ದರೆ ಎಲ್ಲವೂ ಹಿತವಾಗಿರುತ್ತದೆ. ಜತೆಗೆ ಸ್ವಲ್ಪ ದೈಹಿಕ ವ್ಯಾಯಾಮ ಇದ್ದರಂತೂ ಹೆಲ್ತಿಯಾಗಿರಬಹುದು.

ರಸಗುಲ್ಲಾ


ಅಮೆರಿಕನ್‌ ಡಯಾಬಿಟಿಸ್ ಅಸೋಸಿಯೇಷನ್‌ ವರದಿಗಳ ಪ್ರಕಾರ ಸಿಹಿ ತಿಂದರೆ ಸಕ್ಕರೆ ಕಾಯಿಲೆ ಬರುತ್ತದೆ ಎಂಬುದು ಸುಳ್ಳು ಎಂದು ತಿಳಿಸಿದೆ.

ಟೈಪ್ 1 ಡಯಾಬಿಟಿಸ್ ಬರುವುದಕ್ಕೆ ಜೀವನ ಶೈಲಿಯೇ ಕಾರಣ ಅಲ್ಲ ಎನ್ನುವುದು ತಿಳಿದುಕೊಳ್ಳಬೇಕು. ಸಕ್ಕರೆ ಅಂಶ ಹೆಚ್ಚಿರುವ ತಂಪು ಪಾನೀಯ, ಸೋಡಾ ಹಾಗೂ ಕ್ರೀಡಾಕಾರರು ಬಳಸುವ ಕೆಲವು ಪಾನೀಯಗಳನ್ನು ನಿಯಮಿತವಾಗಿ ಸೇವಿಸಬೇಕು ಎಂದು ತಿಳಿಸಲಾಗಿದೆ.

ಕೊಬ್ಬಿನ ಅಂಶ ದೇಹದಲ್ಲಿ ಹೆಚ್ಚಾಗಿ ಶೇಖರಣೆ ಆಗದಿರುವಂತೆ ನೋಡಿಕಂಡರೆ, ಸ್ವೀಟ್ಸ್‌, ಐಸ್‌ಕ್ರೀಮ್‌ಗಳನ್ನ ಸೇವಿಸಬಹದು ಎನ್ನುತ್ತಾರೆ ತಜ್ಞರು.

ಸ್ವೀಟ್ಸ್‌


ಇದಕ್ಕೆ ಮೂಲಮಂತ್ರ, ಏನು ಬೇಕಾದರೂ ತಿನ್ನಿ, ಎಲ್ಲವನ್ನೂ ದಂಡಿಸಿ ಕರಗಿಸಿ.

ತಂಪು ಪಾನೀಯವನ್ನು ಒಂದು ಕ್ಯಾನ್‌ ಸೇವಿಸಿದರೆ ಅದು 150 ಕ್ಯಾಲೋರಿ ಅಂಶ ಹೆಚ್ಚು ಮಾಡುತ್ತದೆ.

ಅದರಲ್ಲೂ ಆಹಾರ ಸೇವಿಸುವ ಸಂದರ್ಭದಲ್ಲಿ ಪಾನೀಯಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬಾರದು. ಇದರಿಂದ ಸಕ್ಕರ ಅಂಶ ನಿಧಾನವಾಗಿ ನಮ್ಮ ದೇಹದೊಳಗೆ ನುಸುಳುತ್ತದೆ.

ಕೇಸರ್‌ ಲಾಡು


ಸಕ್ಕರೆ ಕಾಯಿಲೆ ಇರುವವರು ಸ್ವೀಟ್ಸ್‌ ತಿನ್ನಬಹುದು? ಇದಕ್ಕೆ ತಜ್ಞರು ನೀಡುವ ಉತ್ತರ ಎಸ್‌. ಆದರೆ ಸಕ್ಕರೆ ಪ್ರಮಾಣ ದೇಹದಲ್ಲಿ ಹೆಚ್ಚಾಗದಂತೆ ನೋಡಿಕೊಂಡು ಎಚ್ಚರವಹಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ