ಆ್ಯಪ್ನಗರ

ದೇಹದ ಪ್ರತಿರೋಧಕ ವ್ಯವಸ್ಥೆ ಬಲಪಡಿಸುವ ಅದ್ಭುತ ಜ್ಯೂಸ್‌ಗಳು

ಹಣ್ಣು ಹಾಗೂ ತರಕಾರಿಗಳನ್ನು ಬಳಸಿಕೊಂಡು ಪ್ರತಿರೋಧಕ ಶಕ್ತಿ ಬಲಪಡಿಸಬಹುದು. ಅವುಗಳಿಂದ ತಯಾರಿಸುವ ಜ್ಯೂಸ್ ದೇಹಕ್ಕೆ ತುಂಬಾ ಒಳ್ಳೆಯದು.

Agencies 3 Jul 2020, 4:02 pm
ಮನುಷ್ಯನ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯು ದುರ್ಬಲವಾಗಿದ್ದರೆ ಆಗ ಪದೇ ಪದೇ ಹಲವಾರು ರೀತಿಯ ಅನಾರೋಗ್ಯಗಳು ನಮ್ಮನ್ನು ಕಾಡುವುದು. ಇದನ್ನು ತಡೆಯಲು ಪ್ರತಿರೋಧಕ ವ್ಯವಸ್ಥೆ ಬಲವಾಗಿಟ್ಟುಕೊಳ್ಳಬೇಕು. ಮುಖ್ಯವಾಗಿ ನಾವು ತಿನ್ನುವಂತಹ ಆಹಾರ ಮತ್ತು ದೈಹಿಕ ಚಟುವಟಿಕೆಯಿಂದ ಪ್ರತಿರೋಧಕ ವ್ಯವಸ್ಥೆಯು ಬಲಿಷ್ಠವಾಗುವುದು. ಅದರಲ್ಲೂ ಮುಖ್ಯವಾಗಿ ಕೆಲವೊಂದು ಆಹಾರ ಮತ್ತು ಜ್ಯೂಸ್ ಗಳು ಪ್ರತಿರೋಧಕ ವ್ಯವಸ್ಥೆ ಅಂದರೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.
Vijaya Karnataka Web Juice


ಪ್ರತಿರೋಧಕ ವ್ಯವಸ್ಥೆ ಬಲಪಡಿಸಬೇಕಾದರೆ ಏನು ಮಾಡಬೇಕೆಂದು ಪ್ರತಿಯೊಬ್ಬರು ಕೇಳುವಂತಹ ಪ್ರಶ್ನೆಯಾಗಿದೆ. ಬ್ರಾಕೋಲಿ ಅಥವಾ ಬೆಳ್ಳುಳ್ಳಿಯನ್ನು ಹಸಿಯಾಗಿ ಜಗಿದು ತಿನ್ನುವುದರಿಂದ ಹಿಡಿದು ಕೆಲವೊಂದು ಆಹಾರಗಳು ನಮ್ಮ ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು. ಈ ಲೇಖನದಲ್ಲಿ ನಾವು ನಿಮಗೆ ಕೆಲವೊಂದು ಪಾನೀಯಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ದೇಹದಲ್ಲಿ ಬೇಗನೆ ಜೀರ್ಣವಾಗುವ ಜತೆಗೆ ಆರೋಗ್ಯವನ್ನು ವೃದ್ಧಿಸುವುದು.

ಲಿಂಬೆ ಮತ್ತು ಶುಂಠಿಯ ಬಿಸಿ ಚಹಾ
ಲಿಂಬೆ ಮತ್ತು ಶುಂಠಿಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳು ಇವೆ. ಪ್ರತಿನಿತ್ಯವೂ ಇದರ ಚಾ ಕುಡಿದರೆ ಅದರಿಂದ ಪ್ರತಿರೋಧಕ ಶಕ್ತಿಯು ವೃದ್ಧಿಸುವುದು. ಶುಂಠಿಯು ರಕ್ತ ಸಂಚಾರ ಸುಧಾರಿಸುವುದು ಮತ್ತು ಲಿಂಬೆಯು ಉರಿಯೂತ ಶಮನ ಮಾಡುವುದು. ಇದಕ್ಕೆ ನೀವು ಸ್ವಲ್ಪ ದಾಲ್ಚಿನಿ ಹುಡಿ ಹಾಕಿಕೊಂಡು ಕುಡಿದರೆ ಅದರಿಂದ ಬ್ಯಾಕ್ಟೀರಿಯಾದ ಕಾರ್ಯವನ್ನು ಇದು ನಿಧಾನಗೊಳಿಸುವುದು ಮತ್ತು ಬೆಳೆಯದಂತೆ ತಡೆಯುವುದು.

ಕಲ್ಲಂಗಡಿ ಮತ್ತು ಪುದೀನಾ ಸ್ಮೂಥಿ
ಕೆಲವರಿಗೆ ಜ್ಯೂಸ್ ಗಿಂತಲೂ ಸ್ಮೂಥಿ ತುಂಬಾ ಇಷ್ಟವಾಗುವುದು. ಇಂತಹವರು ಕಲ್ಲಂಗಡಿ ಮತ್ತು ಪುದೀನಾ ಹಾಕಿಕೊಂಡು ಸ್ಮೂಥಿ ಮಾಡಿಕೊಳ್ಳಬಹುದು. ಇದರಲ್ಲಿ ಇರುವಂತಹ ಲೈಕೊಪೆನೆ ಎನ್ನುವ ಅಂಶವು ಪ್ರತಿರೋಧಕ ವ್ಯವಸ್ಥೆಗೆ ಬಲ ನೀಡುವುದು. ಮೂಗು ಕಟ್ಟಿದ ಸಮಸ್ಯೆಯಿದ್ದರೆ ಪುದೀನಾವು ಸರಿಯಾಗಿ ಉಸಿರಾಡಲು ನೆರವಾಗುವುದು.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನೆಲ್ಲಿಕಾಯಿ ಜ್ಯೂಸ್

ಬೆರ್ರಿ ಸ್ಮೂಥಿ
ದೇಹಕ್ಕೆ ಬೇಕಾಗುವಂತಹ ಎಲ್ಲಾ ರೀತಿಯ ವಿಟಮಿನ್ ಗಳು ಬೆರ್ರಿಯಲ್ಲಿದೆ. ಸ್ಟಾಬೆರ್ರಿ, ರಸ್ಬೇರಿ ಮತ್ತು ಬ್ಲೂಬೆರ್ರಿ ಹಾಕಿಕೊಂಡು ಮಾಡಿಕೊಂಡ ಸ್ಮೂಥಿಯು ತುಂಬಾ ಪೋಷಕಾಂಶಗಳನ್ನು ಒಳಗೊಂಡಿದೆ.

ಕಿತ್ತಳೆ ಮತ್ತು ದ್ರಾಕ್ಷಿ ಜ್ಯೂಸ್
ಪ್ರತಿನಿತ್ಯವೂ ಒಂದು ಸಿಟ್ರಸ್ ಹಣ್ಣು ತಿಂದರೆ ಅದರಿಂದ ದೇಹಕ್ಕೆ ಬೇಕಾಗುವಂತಹ ವಿಟಮಿನ್ ಸಿ ಲಭ್ಯವಾಗುವುದು. ಇದು ಸೊಂಕಿನ ವಿರುದ್ಧ ಹೋರಾಡಲು ನೆರವಾಗುವುದು. ನೀವು ಕಿತ್ತಳೆ ಬಳಸಿಕೊಂಡು ಜ್ಯೂಸ್ ತಯಾರಿಸಬಹುದು. ಟೊಮೆಟೊ ಜ್ಯೂಸ್ ಕೂಡ ನೀವು ಮಾಡಿಕೊಂಡು ಕುಡಿಯಬಹುದು. ಯಾಕೆಂದರೆ ಟೊಮೆಟೊದಲ್ಲಿ ಕೂಡ ವಿಟಮಿನ್ ಸಿ ಸಮೃದ್ಧವಾಗಿದೆ.

ಕೊರೊನಾ ವೈರಸ್ ಭೀತಿ: ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ಕೇಲ್, ಬ್ರಾಕೋಲ್ ಮತ್ತು ಪಾಲಕ್ ಜ್ಯೂಸ್
ತರಕಾರಿ ತಿನ್ನುವುದು ನಿಮಗೆ ಇಷ್ಟವಿಲ್ಲದೆ ಇದ್ದರೆ ಆಗ ನೀವು ಜ್ಯೂಸ್ ಮಾಡಿಕೊಂಡು ಕುಡಿದರೆ ಅದು ರುಚಿಕರವಾಗಿರುವುದು. ಯಾಕೆಂದರೆ ತರಕಾರಿಗಳು ಪ್ರತಿರೋಧಕ ಶಕ್ತಿ ವೃದ್ಧಿಸುವುದು. ಈ ಎಲ್ಲಾ ತರಕಾರಿಗಳಲ್ಲಿ ವಿಟಮಿನ್ ಎ, ಕೆ, ಸಿ, ಕ್ಯಾಲ್ಸಿಯಂ, ತಾಮ್ರ, ಪೊಟಾಶಿಯಂ ಮತ್ತು ಮೆಗ್ನಿಶಿಯಂ ಇದೆ. ಇದರ ರುಚಿಯು ಅದ್ಭುತವಾಗಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ