ಆ್ಯಪ್ನಗರ

ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚು ಮಾಡುವ ಟಾಪ್ 10 ಆಹಾರಗಳು

ಕೆಂಪು ರಕ್ತ ಕಣಗಳು ಮತ್ತು ಬಿಳಿ ರಕ್ತ ಕಣಗಳಂತೆ ಪ್ಲೇಟ್ಲೆಟ್ ಗಳು ಸಮರ್ಪಕ ಸಂಖ್ಯೆಯಲ್ಲಿ ನಮ್ಮ ದೇಹದಲ್ಲಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಕಾಯಿಲೆಗಳಿಗೆ ಗುರಿಯಾಗಬೇಕಾಗುತ್ತದೆ.

Produced byಮನೋಹರ್ ಶೆಟ್ಟಿ | Vijaya Karnataka Web 7 Dec 2023, 11:33 am
ನಮ್ಮ ರಕ್ತದಲ್ಲಿ ಒಂದು ವೇಳೆ ಪ್ಲೇಟ್ಲೆಟ್ ಕಡಿಮೆಯಾದರೆ ಅದರಿಂದ ಆರೋಗ್ಯಕ್ಕೆ ಹಲವಾರು ತೊಂದರೆಗಳು ಎದುರಾಗುತ್ತವೆ. ಮಾರಕ ಡೆಂಗ್ಯೂ ಜ್ವರ ಬರುವುದು ಕೂಡ ಇದೇ ಕಾರಣಕ್ಕೆ. ಡೆಂಗ್ಯೂ ಜ್ವರ ವಾಸಿಯಾಗಲು ನಿಮ್ಮ ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಾಗಿರಬೇಕು. ಇದಕ್ಕೆ ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದು ಕೊಳ್ಳಬೇಕು. ಕೇವಲ ಜ್ವರ ಬಂದಾಗ ಮಾತ್ರವಲ್ಲ, ಯಾವುದೇ ಸಮಯದಲ್ಲಿ ನೀವು ಈ ಕೆಳಗಿನ ಆಹಾರ ಪದಾರ್ಥಗಳನ್ನು ಸೇವಿಸಬಹುದು ಮತ್ತು ನಿಮ್ಮ ದೇಹದಲ್ಲಿ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಕೆಂಪು ರಕ್ತಕಣಗಳಂತೆ ಇವುಗಳು ಕೂಡ ನಮಗೆ ಅವಶ್ಯಕ ಎಂಬುದನ್ನು ಮರೆಯಬೇಡಿ.
Vijaya Karnataka Web these foods are meant to increase platelets in your blood
ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚು ಮಾಡುವ ಟಾಪ್ 10 ಆಹಾರಗಳು


ಪಪ್ಪಾಯಿ ಹಣ್ಣು

ಪರಂಗಿ ಹಣ್ಣು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ ಇದರಲ್ಲಿ ಪಪಾಯಿನ್ ಎನ್ನುವ ಅಂಶ ಕೂಡ ಇರುವುದರಿಂದ ಪ್ಲೇಟ್ಲೆಟ್ ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುವಂತೆ ಮಾಡುತ್ತದೆ.

ಪಪ್ಪಾಯಿ ಹಣ್ಣಿನ ಪ್ರಯೋಜನಗಳನ್ನೊಮ್ಮೆ ತಿಳಿದುಕೊಳ್ಳಿ

ಪಾಲಕ್ ಸೊಪ್ಪು

ವಿಟಮಿನ್ ಕೆ ಪ್ರಮಾಣ ಇರುವಂತಹ ಪಾಲಕ್ ಸೊಪ್ಪು ಒಂದು ಹಸಿರು ಎಲೆ ತರಕಾರಿ ಗುಂಪಿಗೆ ಸೇರಿದ ಆಹಾರ ಪದಾರ್ಥ. ಇದರಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಅಂಶಗಳು ನಮ್ಮ ದೇಹದಲ್ಲಿ ಆರೋಗ್ಯಕರವಾದ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ವೃದ್ಧಿಸುತ್ತವೆ. ಜೊತೆಗೆ ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಸಹ ವೃದ್ಧಿಸುವಂತೆ ಮಾಡುತ್ತವೆ.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು ಕೂಡ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲೂ ಸಹ ವಿಟಮಿನ್ ಸಿ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ.ಜೊತೆಗೆ ಒಂದು ವಿಶೇಷವಾದ ಆಂಟಿ ಆಕ್ಸಿಡೆಂಟ್ ಇದರಲ್ಲಿ ಇರುವುದ ರಿಂದ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇರುವ ಪ್ಲೇಟ್ಲೆಟ್ ಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ.

​ದಾಳಿಂಬೆ ಆರೋಗ್ಯದ ಮೇಲೆ ಮಾಡುವ ಚಮತ್ಕಾರಗಳಿವು…

ಕುಂಬಳಕಾಯಿ ಬೀಜಗಳು

ಜಿಂಕ್ ಮತ್ತು ವಿಟಮಿನ್ ಕೆ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿರುವ ಕುಂಬಳಕಾಯಿ ಬೀಜಗಳು ಆರೋಗ್ಯಕರವಾದ ರೀತಿಯಲ್ಲಿ ನಮ್ಮ ದೇಹಕ್ಕೆ ಸಹಾಯಕ ಎನಿಸಿಕೊಳ್ಳುತ್ತವೆ.ರಕ್ತದಲ್ಲಿನ ಪ್ಲೇಟ್ಲೆಟ್ ಗಳ ಸಂಖ್ಯೆ ಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಗಾಯ ಆದಂತಹ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡಲು ಸಹಾಯ ಮಾಡುತ್ತವೆ.

ಕುಂಬಳಕಾಯಿ ಬೀಜಗಳು, ನೋಡಲು ಸಣ್ಣಗೆ ಇದ್ದರೂ, ಸಿಕ್ಕಾಪಟ್ಟೆ ಪ್ರಯೋಜನಗಳಿವೆ!

ಅಲೋವೆರಾ

ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಖನಿಜಾಂಶಗಳು ಇದರಲ್ಲಿ ಹೆಚ್ಚಾಗಿ ಕಂಡು ಬರಲಿದ್ದು, ಜೊತೆಗೆ ಫಾಸ್ಫರಸ್, ಪೊಟಾಸಿಯಂ, ಜಿಂಕ್, ಸೋಡಿಯಂ, ತಾಮ್ರ ಮತ್ತು ವಿಟಮಿನ್ ಅಂಶಗಳಾದ ವಿಟಮಿನ್ ಬಿ, ವಿಟಮಿನ್ ಸಿ ಮತ್ತು ವಿಟಮಿನ್ ಇ ಅಂಶಗಳನ್ನು ಹೆಚ್ಚಾಗಿ ಹೊಂದಿ ರುತ್ತದೆ. ಇವೆಲ್ಲದರ ಕಾರಣದಿಂದ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದ ರಕ್ತದಲ್ಲಿ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಸಹ ವೃದ್ಧಿಸುತ್ತದೆ.

ಪರಂಗಿ ಎಲೆಗಳು

ನಿಮಗೆ ನೆನಪಿರಬಹುದು, ಡೆಂಗ್ಯೂ ಜ್ವರ ಬಂದಾಗ ಪರಂಗಿ ಎಲೆಗಳಿಂದ ಜ್ಯೂಸ್ ಮಾಡಿ ಕುಡಿಯಲು ಹೇಳಿ ರುತ್ತಾರೆ. ಪರಂಗಿ ಮರದ ಎಲೆಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಒಳಗಿನಿಂದಲೇ ಬಲಪಡಿಸಿ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ವೃದ್ಧಿಸುತ್ತವೆ. ಡೆಂಗ್ಯೂ ಜ್ವರದಿಂದ ಬಹಳ ಬೇಗನೆ ವಾಸಿ ಆಗುವಂತೆ ಪರಂಗಿ ಎಲೆಗಳು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿವೆ.

ಬೀಟ್ರೂಟ್

ಇದರಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಹೇರಳವಾಗಿ ಕಂಡು ಬರುವುದರ ಜೊತೆಗೆ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಕೂಡ ಹೆಚ್ಚಾಗಿ ಸಿಗುತ್ತದೆ. ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಇದು ನಮ್ಮ ದೇಹದಲ್ಲಿ ಹೆಚ್ಚು ಮಾಡುತ್ತದೆ ಎಂದು ಹೇಳುತ್ತಾರೆ. ಇದರ ಜೊತೆಗೆ ಪ್ಲೇಟ್ಲೆಟ್ ಗಳ ಪ್ರಮಾಣವನ್ನು ಸಹ ಹೆಚ್ಚಿಸುತ್ತದೆ.

ಕಿವಿ ಹಣ್ಣು

ಕೆಲವು ವರ್ಷಗಳ ಹಿಂದೆ ಕೇವಲ ಶ್ರೀಮಂತರ ಪಾಲಿಗೆ ಮಾತ್ರ ಸಿಗುತ್ತಿದ್ದ ಕಿವಿ ಹಣ್ಣುಗಳು ಈಗ ಮಾರುಕಟ್ಟೆಯಲ್ಲಿ ಎಲ್ಲಾ ಕಡೆ ಸುಲಭವಾಗಿ ಲಭ್ಯವಿವೆ. ಇದರಲ್ಲೂ ಸಹ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಯಥೇಚ್ಛ ವಾಗಿ ಸಿಗುತ್ತದೆ. ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಪ್ಲೇಟ್ಲೆಟ್ ಗಳ ಸಂಖ್ಯೆ ಹೆಚ್ಚಾಗುವಂತೆ ಸಹ ಇದು ಮಾಡುತ್ತದೆ.

ಎಳನೀರು

ಎಳನೀರು ನೈಸರ್ಗಿಕ ರೂಪದಲ್ಲಿ ಸಿಗುವ ಒಂದು ಆರೋಗ್ಯಕರ ಪಾನೀಯ. ಇದು ನಮ್ಮ ದೇಹದಲ್ಲಿ ವಿಟಮಿನ್ ಎ ಮತ್ತು ಬಿ ಜೊತೆಗೆ ವಿಟಮಿನ್ ಸಿ ಪ್ರಮಾಣವನ್ನು ಹೆಚ್ಚಾಗಿ ಒದಗಿಸುತ್ತದೆ. ಜೊತೆಗೆ ಎಳನೀರು ಸೇವನೆಯಿಂದ ನಮಗೆ ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ಕೂಡ ಸಿಗುತ್ತದೆ. ಹುಷಾರಿಲ್ಲದ ಸಂದರ್ಭದಲ್ಲಿ ನಾವು ಎಳನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆ ಕೂಡ ಹೆಚ್ಚಾಗುತ್ತದೆ.

ಸತತ 7 ದಿನಗಳವರೆಗೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ 'ಎಳನೀರು' ಕುಡಿದು ನೋಡಿ

ಲೀನ್ ಪ್ರೋಟೀನ್

ಮಾಂಸಾಹಾರಿಗಳಿಗೆ ಪ್ರಿಯವಾದ ಟರ್ಕಿ, ಚಿಕನ್, ಮೀನು ತಮ್ಮಲ್ಲಿ ಅನೇಕ ಪೌಷ್ಟಿಕಾಂಶಗಳ ಜೊತೆಗೆ ಲೀನ್ ಪ್ರೋಟೀನ್ ಗಳನ್ನು ಸಹ ಹೊಂದಿರುತ್ತದೆ. ದೇಹಕ್ಕೆ ಅಗತ್ಯವಾದ ಅಮೈನೋ ಆಮ್ಲಗಳು ಇದರ ಲ್ಲಿದ್ದು, ನಮ್ಮ ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆಗಳನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ.


Read in English: 10 superfoods that can help increase platelet count naturally

ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ