ಆ್ಯಪ್ನಗರ

ಮಹಿಳೆಯರು ತಮ್ಮ ಈ ವಿಚಾರಗಳಲ್ಲಿ ಸ್ವಚ್ಛತೆಯನ್ನು ನಿರ್ವಹಣೆ ಮಾಡಲೇಬೇಕು!

ತಮ್ಮ ದೇಹದ ಸೌಂದರ್ಯಕ್ಕೆ ಮಹಿಳೆಯರು ಎಷ್ಟು ಹೆಚ್ಚಿನ ಆದ್ಯತೆ ಕೊಡುತ್ತಾರೆ, ಅದೇ ರೀತಿ ಸ್ವಚ್ಛತೆಗೆ ಕೂಡ ಅಷ್ಟೇ ಪ್ರಾಮುಖ್ಯತೆ ಕೊಡಬೇಕು.

Vijaya Karnataka Web 14 Oct 2021, 1:08 pm
ಮಹಿಳೆಯರಿಗೆ ದೇಹದಲ್ಲಿ ಹಲವಾರು ಕಾಯಿಲೆಗಳಿಗೆ ಕಾರಣವಾಗುವುದು ಎಂದರೆ ಅದರಲ್ಲಿ ದೈಹಿಕ ಸ್ವಚ್ಛತೆ ಸರಿಯಾಗಿ ಕಾಯ್ದುಕೊಳ್ಳದೇ ಇರುವುದು ಕೂಡ ಒಂದು. ಇದು ಕ್ರಮೇಣವಾಗಿ ಹಲವಾರು ಸೋಂಕುಗಳಿಗೆ ಕಾರಣವಾಗಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ತಂದುಕೊಡುತ್ತದೆ.
Vijaya Karnataka Web these healthy hygiene tips are must for women at any age
ಮಹಿಳೆಯರು ತಮ್ಮ ಈ ವಿಚಾರಗಳಲ್ಲಿ ಸ್ವಚ್ಛತೆಯನ್ನು ನಿರ್ವಹಣೆ ಮಾಡಲೇಬೇಕು!


ಆರೋಗ್ಯ ತಜ್ಞರು ಹೇಳುವ ಹಾಗೆ ಕೆಲವೊಂದು ವಿಚಾರಗಳನ್ನು ಗಮನದಲ್ಲಿ ತೆಗೆದುಕೊಂಡರೆ ಮಹಿಳೆಯರು ಸ್ವಚ್ಛತೆಯ ವಿಷಯದಲ್ಲಿ ಯಾಮಾರುವ ಹಾಗಿಲ್ಲ. ಈ ನಿಟ್ಟಿನಲ್ಲಿ ಕೆಲವೊಂದು ಟಿಪ್ಸ್ ಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

​ಮನೆಗೊಂದು ಟಾಯ್ಲೆಟ್ ಅವಶ್ಯಕ

ಪ್ರತಿಮನೆಯಲ್ಲೂ ಟಾಯ್ಲೆಟ್ ಇರಬೇಕು ಎಂಬ ಸರ್ಕಾರದ ಕನಸು ನಿಜಕ್ಕೂ ನನಸಾಗಬೇಕು. ಇದು ಮಹಿಳೆಯರ ಗೌರವದ ಪ್ರಶ್ನೆ ಒಂದು ಕಡೆಯಾದರೆ, ಅವರ ಆರೋಗ್ಯದ ದೃಷ್ಟಿಕೋನ ಇನ್ನೊಂದು ಕಡೆ. ಬಯಲು ಶೌಚಾಲಯ ವ್ಯವಸ್ಥೆಯಿಂದ ಯಾವಾಗ ಎಲ್ಲಾ ಪ್ರದೇಶಗಳು ಮುಕ್ತವಾಗುತ್ತವೆ, ಆಗ ಟೈಫಾಯ್ಡ್, ಕಾಲರ, ಹೆಪಟೈಟಿಸ್ ಸಮಸ್ಯೆಗಳು ದೂರವಾಗುತ್ತವೆ.

​ಋತುಸ್ರಾವದ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳು

  • ಮಹಿಳೆಯರು ತಮ್ಮ ಋತುಸ್ರಾವದ ಅಥವಾ ಮುಟ್ಟಿನ ಸಂದರ್ಭಗಳಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಮತ್ತು ಸ್ವಚ್ಛತೆಯ ಬಗ್ಗೆ ಕೂಡ ಅಷ್ಟೇ ಗಮನ ಕೊಡಬೇಕು.
  • ಈ ಸಂದರ್ಭದಲ್ಲಿ ಆದಷ್ಟು ಸ್ಯಾನಿಟರಿ ನ್ಯಾಪ್ಕಿನ್ ಬಳಕೆಮಾಡುವ ಪ್ರಕ್ರಿಯೆಗೆ ಮುಂದಾಗಬೇಕು. ಪ್ರತಿ 6 ಗಂಟೆಗೊಮ್ಮೆ ಇವುಗಳನ್ನು ಬದಲಿಸಿಕೊಂಡು ಉಂಟಾಗುವ ಸೋಂಕಿನಿಂದ ತಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕು.
  • ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಗಳ ಲಭ್ಯತೆ ಇರುವಂತೆ ನೋಡಿಕೊಳ್ಳುವುದು ಉತ್ತಮ. ಈ ವಿಚಾರದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

​ಮತ್ತೆ ಮತ್ತೆ ಒಂದೇ ಬಟ್ಟೆಗಳನ್ನು ಧರಿಸುವುದು

ಋತುಸ್ರಾವದ ಸಂದರ್ಭದಲ್ಲಿ ಆಗಾಗ ಬಟ್ಟೆ ಬದಲಿಸುವುದು ತುಂಬಾ ಅವಶ್ಯಕವಾಗಿರುತ್ತದೆ. ಏಕೆಂದರೆ ಬಟ್ಟೆಗಳಲ್ಲಿ ಸೋಂಕುಕಾರಕ ಕ್ರಿಮಿಗಳು ಹೆಚ್ಚು ಕಂಡುಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಇವುಗಳನ್ನು ಸ್ವಚ್ಛ ಮಾಡದೆ ಯಾವುದೇ ಕಾರಣಕ್ಕೂ ಧರಿಸಲು ಹೋಗಬಾರದು.

​ಲೈಂಗಿಕ ವಿಷಯದ ಬಗ್ಗೆ ಶಾಲಾ ಹೆಣ್ಣು ಮಕ್ಕಳಿಗೆ ಪಾಠ

ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಂದರ್ಭ ಮತ್ತು ಲೈಂಗಿಕ ವಿಚಾರಗಳ ಬಗ್ಗೆ ಪಠ್ಯ ಪುಸ್ತಕದ ಮೂಲಕ ಅರಿವು ಮೂಡಿಸುವುದು ಬಹಳ ಅಗತ್ಯವಾಗಿದೆ. ಮನೆಯಲ್ಲಿ ಪೋಷಕರು ಕೂಡ ಈ ಬಗ್ಗೆ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸಬೇಕು ಮತ್ತು ಸ್ವಚ್ಛತೆಯ ಬಗ್ಗೆ ತಿಳಿಸಿಕೊಡಬೇಕು.

​ಸ್ವಚ್ಛವಾದ ನೀರು ಕುಡಿಯುವುದು ತುಂಬಾ ಅಗತ್ಯ

ಕೇವಲ ಮೇಲಿನ ಕಾರಣಗಳು ಮಾತ್ರವಲ್ಲದೆ ಕುಡಿಯುವ ನೀರಿನ ಬಗ್ಗೆ ಕೂಡ ಹೆಣ್ಣುಮಕ್ಕಳಿಗೆ ತಿಳಿಸಿಕೊಡಬೇಕು. ಏಕೆಂದರೆ ಕಲುಷಿತ ನೀರು ಮಹಿಳೆಯರ ದೇಹದ ಆರೋಗ್ಯಕ್ಕೆ ತುಂಬಾ ಹಾನಿಕರ ಪ್ರಭಾವಗಳನ್ನು ಉಂಟು ಮಾಡುತ್ತದೆ.

​ಉತ್ತಮ ಆಹಾರ ಪದ್ಧತಿ ತುಂಬಾ ಅವಶ್ಯಕ

  • ಮಹಿಳೆಯರು ತಮ್ಮ ದೈಹಿಕ ಸ್ವಚ್ಛತೆಯ ಜೊತೆಗೆ ತಮ್ಮ ಆಹಾರ ಪದ್ಧತಿಯ ಕಡೆಗೆ ಕೂಡ ಹೆಚ್ಚು ಗಮನ ನೀಡಬೇಕು. ಸಮತೋಲನದ ಆಹಾರ ಪದ್ಧತಿಯನ್ನು ಅನುಸರಿಸುವ ಜೊತೆಗೆ ಮೊದಲಾದ ತಮ್ಮ ದೇಹದ ಆರೋಗ್ಯಕ್ಕೆ ಮತ್ತು ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು.
  • ತಮ್ಮ ದೇಹದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆ ದೇಹದಲ್ಲಿ ಅನೇಕ ಬಗೆಯ ವೈಪರೀತ್ಯಗಳಿಗೆ ಕಾರಣವಾಗುತ್ತದೆ. ಈ ಬಗ್ಗೆ ಮಹಿಳೆಯರು ಗಮನಹರಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ