ಆ್ಯಪ್ನಗರ

ಈ ಏಳು ಬಗೆಯ ತರಕಾರಿ ಜ್ಯೂಸ್ ಹಲವಾರು ಸಮಸ್ಯೆಗಳಿಗೆ ರಾಮಬಾಣ

ಹಣ್ಣುಗಳು ಹಾಗೂ ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ತರಕಾರಿ ಜ್ಯೂಸ್ ಕುಡಿದರೆ ಅದರಿಂದ ನಾನಾ ರೀತಿಯ ಲಾಭಗಳು ದೇಹಕ್ಕೆ ಆಗುವುದು. ಇನ್ನು ಹಲವು ಬಗೆಯ ತರಕಾರಿಗಳನ್ನು ಜತೆಗೆ ಸೇರಿಸಿಕೊಂಡು ತಯಾರಿಸಿಕೊಳ್ಳುವ ಜ್ಯೂಸ್ ನಿಂದ ದೇಹಕ್ಕೆ ತುಂಬಾ ಲಾಭವಿದೆ.

Vijaya Karnataka Web 13 Feb 2020, 11:15 am
ಕಾಯಿಲೆಗಳು ಅದಾಗಿಯೇ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಕೆಲವು ಸಲ ನಾವು ತಿನ್ನುವಂತಹ ಆಹಾರ ಹಾಗೂ ಜೀವನಶೈಲಿಯು ಇದರಲ್ಲಿ ಪ್ರಮುಖ ಪಾತ್ರ ವಹಿಸುವುದು. ಆರೋಗ್ಯಕರ ಆಹಾರ ತಿಂದರೆ ಅದರಿಂದ ಮುಂದೆ ಬರಬಹುದಾದ ಹಲವಾರು ರೀತಿಯ ಅನಾರೋಗ್ಯದ ಸಮಸ್ಯೆ ತಡೆಯಬಹುದು. ಮುಖ್ಯವಾಗಿ ಹಣ್ಣುಗಳು ಹಾಗೂ ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ತರಕಾರಿ ಜ್ಯೂಸ್ ಕುಡಿದರೆ ಅದರಿಂದ ನಾನಾ ರೀತಿಯ ಲಾಭಗಳು ದೇಹಕ್ಕೆ ಆಗುವುದು. ಹಲವು ಬಗೆಯ ತರಕಾರಿಗಳನ್ನು ಜತೆಗೆ ಸೇರಿಸಿಕೊಂಡು ತಯಾರಿಸಿಕೊಳ್ಳುವ ಜ್ಯೂಸ್ ನಿಂದ ದೇಹಕ್ಕೆ ತುಂಬಾ ಲಾಭವಿದೆ. ಇಂತಹ ಜ್ಯೂಸ್ ನಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಇರುವುದು. ಹಲವು ವಿಧದ ತರಕಾರಿಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಅದು ನಿಜವಾಗಿಯೂ ಆರೋಗ್ಯಕ್ಕೆ ತುಂಬಾ ಲಾಭಕಾರಿ ಆಗಿರುವುದು. ಬನ್ನಿ ಇಂದಿನ ಲೇಖನದಲ್ಲಿ ಕೆಲವೊಂದು ಕಾಯಿಲೆಗಳನ್ನು ನಿವಾರಣೆ ಮಾಡುವ ತರಕಾರಿ ಜ್ಯೂಸ್ ಗಳ ಬಗ್ಗೆ ನೀಡಿದ್ದೇವೆ ಮುಂದೆ ಓದಿ
Vijaya Karnataka Web these natural juices will fight several diseases
ಈ ಏಳು ಬಗೆಯ ತರಕಾರಿ ಜ್ಯೂಸ್ ಹಲವಾರು ಸಮಸ್ಯೆಗಳಿಗೆ ರಾಮಬಾಣ



​ಕೊಲೆಸ್ಟ್ರಾಲ್ ಚಿಕಿತ್ಸೆಗೆ ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ನಲ್ಲಿ ಇರುವಂತಹ ಪೊಟಾಶಿಯಂ ಮತ್ತು ಮೆಗ್ನಿಶಿಯಂ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ನೆರವಾಗುವುದು. ಇದು ಅಧಿಕ ರಕ್ತದೊತ್ತಡ ಸಾಮಾನ್ಯಗೊಳಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಇರುವಂತಹ ಜನರು ನಿಯಮಿತವಾಗಿ ಈ ಜ್ಯೂಸ್ ಕುಡಿಯಬೇಕು.

​ಯೂರಿಕ್ ಆಮ್ಲಕ್ಕೆ ಬೀಟ್ ರೂಟ್ ಜ್ಯೂಸ್

ಬೀಟ್ ರೂಟ್, ಕ್ಯಾರೆಟ್ ಮತ್ತು ಸೌತೆಕಾಯಿ ಹಾಕಿಕೊಂಡು ಒಳ್ಳೆಯ ಆರೋಗ್ಯಕರ ಜ್ಯೂಸ್ ತಯಾರಿಸಿಕೊಳ್ಳಬಹುದು. ಇದು ಯೂರಿಕ್ ಆಮ್ಲದಿಂದಾಗಿ ಗಂಟುಗಳಲ್ಲಿ ಕಾಣಿಸಿಕೊಂಡಿರುವಂತಹ ನೋವು ಮತ್ತು ಉರಿಯೂತ ಕಡಿಮೆ ಮಾಡಲು ನೆರವಾಗುವುದು. ರಕ್ತದಲ್ಲಿರುವ ಯೂರಿಕ್ ಆಮ್ಲ ಮಟ್ಟವು ಹೆಚ್ಚಾದ ಮೇಲೆ ಗಂಟುಗಳಲ್ಲಿ ಕಲ್ಲುಗಳು ನಿರ್ಮಾಣವಾಗುವುದು. ಇದರಿಂದಾಗಿ ಗಂಟುನೋವು, ಕೆಂಪಾಗುವುದು, ಉರಿಯೂತ ಮತ್ತು ತುರಿಕೆ ಸಮಸ್ಯೆ ಬರುವುದು.


ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಿ!

​ತೂಕ ಇಳಿಸುವ ಜ್ಯೂಸ್

ತೂಕ ಇಳಿಸಲು ನಾನಾ ರೀತಿಯ ಪ್ರಯತ್ನಪಟ್ಟು ವಿಫಲರಾಗಿರುವಂತಹ ಜನರಿಗೆ ಈ ಜ್ಯೂಸ್ ತುಂಬಾ ಸಹಕಾರಿ. 10 ಗ್ರಾಂ ಕೇಲ್, 5 ಗ್ರಾಂ ಬಸಲೆ, 5 ಗ್ರಾಂ ಸೌತೆಕಾಯಿ ಮತ್ತು 5 ಗ್ರಾಂ ಲೆಟಿಸ್ ಸೇರಿಸಿಕೊಂಡು ಜ್ಯೂಸ್ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಹಾಕಿಕೊಂಡು ತೆಳು ಮಾಡಿಕೊಳ್ಳಿ ಮತ್ತು ಬಳಿಕ ಕುಡಿಯಿರಿ. ಈ ಜ್ಯೂಸ್ ಹೊಟ್ಟೆ ಮತ್ತು ತೊಡೆ ಭಾಗದ ಕೊಬ್ಬು ಕಡಿಮೆ ಮಾಡುವುದು. ಈ ಜ್ಯೂಸ್ ನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಧನಾತ್ಮಕ ಫಲಿತಾಂಶ ಸಿಗಬೇಕಾದರೆ ನೀವು ಇದನ್ನು ಒಂದು ತಿಂಗಳ ಕಾಲ ಕುಡಿಯಿರಿ.

​ವಯಸ್ಸಾಗುವ ಲಕ್ಷಣ ತಡೆಯಲು ಹೂಕೋಸು ಮತ್ತು ಕೆಂಪು ಮೆಣಸಿನ ಜ್ಯೂಸ್

ವಯಸ್ಸಾಗುತ್ತಾ ಹೋದಂತೆ ನೆರಿಕೆ, ಕಪ್ಪು ಕಲೆಗಳು ಮತ್ತು ನಿಸ್ತೇಜ ಚರ್ಮದ ಸಮಸ್ಯೆಯು ಸಾಮಾನ್ಯವಾಗಿರುವುದು. ವಯಸ್ಸಾಗುವ ಲಕ್ಷಣ ತಡೆಯಲು ಐದು ಗ್ರಾಂ ಎಲೆಕೋಸು, 4 ಗ್ರಾಂ ಕ್ಯಾರೇಟ್ ಮತ್ತು 3 ಗ್ರಾಂ ಕೆಂಪು ಮೆಣಸು ಹಾಕಿಕೊಂಡು ಮಿಶ್ರಣ ಮಾಡಿ ಆರೋಗ್ಯಕರ ಜ್ಯೂಸ್ ತಯಾರಿಸಿಕೊಳ್ಳಿ. ಇದನ್ನು ಪ್ರತಿನಿತ್ಯವೂ ಮೂರು ವಾರಗಳ ಕಾಲ ಸೇವಿಸಿ.

​ಆತಂಕ ನಿವಾರಣೆಗೆ ಸೌತೆಕಾಯಿ ಮತ್ತು ಲೆಟಿಸ್ ಜ್ಯೂಸ್

ಆಧುನಿಕ ಯುಗದಲ್ಲಿ ಒತ್ತಡ ಹಾಗೂ ಆತಂಕವು ಸಾಮಾನ್ಯ ಸಂಗತಿ. ಇದನ್ನು ನಿವಾರಣೆ ಮಾಡಲು ಸೌತೆಕಾಯಿ ಮತ್ತು ಲೆಟಿಸ್ ನ್ನು ಸೇರಿಸಿಕೊಂಡು ಜ್ಯೂಸ್ ಮಾಡಿ. ಇದಕ್ಕೆ ಐಸ್ ಹಾಕಿಕೊಂಡು ಸೇವಿಸಿ. ಈ ಆರೋಗ್ಯಕರ ಜ್ಯೂಸ್ ನರಗಳಿಗೆ ಆರಾಮ ನೀಡುವುದು ಮತ್ತು ಆತಂಕ ಕಡಿಮೆ ಮಾಡುವುದು.

​ಕೂದಲು ಉದುರುವಿಕೆಗೆ ಜ್ಯೂಸ್

500 ಗ್ರಾಂ ಜಲಸಸ್ಯದ ಜ್ಯೂಸ್ ಮಾಡಿಕೊಳ್ಳಿ. ಈ ಆರೋಗ್ಯಕಾರಿ ಜ್ಯೂಸ್ ನ್ನು ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿ. 15 ನಿಮಿಷ ಕಾಲ ಹಾಗೆ ಕೂದಲು ಜ್ಯೂಸ್ ನಲ್ಲಿ ನೆನೆಯಲಿ ಮತ್ತು ಇದರ ಬಳಿಕ ಬಿಸಿ ನೀರಿನಲ್ಲಿ ಕೂದಲು ತೊಳೆಯಿರಿ.


ಅಶ್ವಗಂಧದ ಉಪಯೋಗಗಳು ಕೇಳಿದ್ರೆ, ನಿಜಕ್ಕೂ ಅಚ್ಚರಿಪಡುವಿರಿ!

​ಕೇಲ್, ಹಸಿರು ದ್ರಾಕ್ಷಿ ಜ್ಯೂಸ್

ಈ ಆರೋಗ್ಯಕರ ತರಕಾರಿ ಜ್ಯೂಸ್ ಕಬ್ಬಿನಾಂಶ ಮತ್ತು ವಿಟಮಿನ್ ಕೆಯಿಂದ ಸಮೃದ್ಧವಾಗಿದೆ. ಮಹಿಳೆಯರಿಗೆ ಋತುಚಕ್ರ ಹಾಗೂ ಗರ್ಭಧಾರಣೆ ವೇಳೆ ಇದು ಅಗತ್ಯವಾಗಿರುವುದು. ಇದು ರಕ್ತ ಸರಬರಾಜಿಗೆ ನೆರವಾಗುವುದು ಮತ್ತು ಮೂಳೆಯ ಆರೋಗ್ಯವನ್ನು ಇದು ಕಾಪಾಡುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ