ಆ್ಯಪ್ನಗರ

ಅರಿಶಿನ ಸೇವನೆ ಸ್ವಲ್ಪ ಜಾಸ್ತಿ ಆದರೂ ಪರವಾಗಿಲ್ಲ, ಆರೋಗ್ಯಕ್ಕೆ ಒಳ್ಳೆಯದೇ!

ಅರಶಿನ ದೇಹಾರೋಗ್ಯಕ್ಕೆ ತುಂಬಾ ಲಾಭಕಾರಿ. ಇದನ್ನು ನಾವು ಔಷಧಿ ಹಾಗೂ ಆಹಾರದಲ್ಲಿ ಬಳಕೆ ಮಾಡಲಾಗುತ್ತಿದೆ.

Vijaya Karnataka Web 26 Oct 2020, 5:58 pm
ಅರಿಶಿನವನ್ನು ಆಯುರ್ವೇದದಲ್ಲಿ ನೂರಾರು ವರ್ಷಗಳಿಂದಲೂ ಬಳಕೆ ಮಾಡಿಕೊಂಡು ಬರಲಾಗುತ್ತಿದ್ದು, ಇದು ಆಹಾರದಲ್ಲೂ ಬಳಕೆಯಾಗುವಂತಹ ಪ್ರಮುಖ ಗಿಡಮೂಲಿಕೆ. ಹಲವಾರು ಔಷಧೀಯ ಗುಣ ಹೊಂದಿರುವಂತಹ ಅರಶಿನವನ್ನು ನಾವು ಆಹಾರದಲ್ಲಿ ಹಾಗೂ ಔಷಧೀಯಾಗಿ ಬಳಕೆ ಮಾಡಿಕೊಂಡು ಬರುತ್ತಿದ್ದೇವೆ.
Vijaya Karnataka Web things that could happen when you eat more turmeric
ಅರಿಶಿನ ಸೇವನೆ ಸ್ವಲ್ಪ ಜಾಸ್ತಿ ಆದರೂ ಪರವಾಗಿಲ್ಲ, ಆರೋಗ್ಯಕ್ಕೆ ಒಳ್ಳೆಯದೇ!


ಕರ್ಕ್ಯೂಮಿನ್ ಎನ್ನುವ ಅಂಶವನ್ನು ಹೊಂದಿರುವ ಅರಶಿನವು ನೋವು, ಉರಿಯೂತದಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಈ ಲೇಖನದಲ್ಲಿ ನಾವು ನಿಮಗೆ ಅರಶಿನ ಅತಿಯಾಗಿ ಸೇವನೆ ಮಾಡಿದರೆ, ಅದರಿಂದ ಏನಾಗಲಿದೆ ಎನ್ನುವ ಬಗ್ಗೆ ತಿಳಿಸಿಕೊಡಲಿದ್ದೇವೆ.

ದೇಹದಲ್ಲಿ ಆಂಟಿಆಕ್ಸಿಡೆಂಟ್ ಪರಿಣಾಮ ಹೆಚ್ಚಿಸುವುದು

ವಯಸ್ಸಾಗುವುದಕ್ಕೆ ಕೂಡ ಪ್ರಮುಖ ಕಾರಣವಾಗಿರುವಂತಹ ಆಕ್ಸಿಡೇಟಿವ್ ಹಾನಿಯು ಕಾರಣವಾಗಿರುವುದು. ಇದರಲ್ಲಿ ಫ್ರೀ ರ್ಯಾಡಿಕಲ್ ಕೂಡ ಒಂದಾಗಿದ್ದು, ಅರಶಿನ ಸೇವನೆ ಮಾಡಿದರೆ, ಅದರಿಂದ ಫ್ರೀ ರ್ಯಾಡಿಕಲ್ ನ್ನು ಅದು ತಟಸ್ಥಗೊಳಿಸುವುದು ಮತ್ತು ದೇಹದಲ್ಲಿ ಆಂಟಿಆಕ್ಸಿಡೆಂಟ್ ಕಿಣ್ವಗಳು ಸಕ್ರಿಯವಾಗುವಂತೆ ಮಾಡುವುದು.

ತೂಕ ಇಳಿಸಲು ಸಹಕಾರಿ

ತೂಕ ಹೆಚ್ಚಳವಾದರೆ, ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ದೇಹವನ್ನು ವಕ್ಕರಿಸಿಕೊಳ್ಳುವುದು. ಅರಶಿನದಲ್ಲಿ ಇರುವಂತಹ ಕರ್ಕ್ಯೂಮಿನ್ ಅಂಶವು ಉರಿಯೂತ ಕಡಿಮೆ ಮಾಡಿ ಬೊಜ್ಜು ಕರಿಗಿಸಲು ಪರಿಣಾಮಕಾರಿ.

ಕೇವಲ ಅರಶಿನ ಸೇವನೆ ಹೆಚ್ಚು ಮಾಡಿದರೆ ಮಾತ್ರ ಬೊಜ್ಜು ಕರಗಿಸಲು ಸಾಧ್ಯವಿಲ್ಲ, ಇದರೊಂದಿಗೆ ವ್ಯಾಯಾಮ ಹಾಗೂ ಆಹಾರ ಕ್ರಮವು ಸರಿಯಾಗಿ ಇರಬೇಕು. ಇದರಿಂದ ಬೊಜ್ಜನ್ನು ಕಡಿಮೆ ಮಾಡಿ ಕರಗಿಸಬಹುದು ಎಂದು ಅಮೆರಿಕಾದ ಅಧ್ಯಯನವೊಂದು ಹೇಳಿದೆ.

ದೇಹ ತೂಕ ಇಳಿಸಲು ಐದು ಪ್ರೋಟೀನ್‌ಯುಕ್ತ ಉಪಾಹಾರಗಳು

ಕ್ಯಾನ್ಸರ್ ತಡೆಯುವುದು

ಕ್ಯಾನ್ಸರ್ ಅಪಾಯ ತಗ್ಗಿಸಲು ಹಾಗೂ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ಅರಶಿನವು ತುಂಬಾ ಪರಿಣಾಮಕಾರಿ.

ಇದರಲ್ಲಿ ಇರುವಂತಹ ಕರ್ಕ್ಯೂಮಿನ್ ಅಂಶವು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವುದು ಮತ್ತು ಗಡ್ಡೆಯಲ್ಲಿ ಹೊಸ ರಕ್ತನಾಳಗಳ ಬೆಳವಣಿಗೆಯನ್ನು ಕಡಿಮೆ ಮಾಡುವುದು ಹಾಗೂ ಕ್ಯಾನ್ಸರ್ ಹರಡದಂತೆ ತಡೆಯುವುದು.

ಕರುಳಿನ ಕ್ಯಾನ್ಸರ್ ದೂರ ಮಾಡುವ ಆಹಾರ ಪದಾರ್ಥಗಳು

ಮನಸ್ಥಿತಿ ಸುಧಾರಣೆ

ಖಿನ್ನತೆ ನಿವಾರಣೆ ಮಾಡುವಲ್ಲಿ ಅರಶಿನವು ತುಂಬಾ ಪರಿಣಾಮಕಾರಿ ಎಂದು ವೈಜ್ಞಾನಿಕವಾಗಿ ಸಾಬೀತು ಆಗಿದೆ. ಖಿನ್ನತೆಯಿಂದಾಗಿ ಮೆದುಳಿನ ಬಿಡಿಎನ್ ಎಫ್ ನ್ನು ಕಡಿಮೆ ಮಾಡುವುದು ಮತ್ತು ನೆನಪು ಹಾಗೂ ಕಲಿಕೆಗೆ ಪ್ರಮುಖವಾಗಿ ಬೇಕಾಗಿರುವ ಮೆದುಳಿನ ಭಾಗ ಹಿಪ್ಪೊಕ್ಯಾಂಪಸ್ ನ್ನು ಕುಗ್ಗಿಸುವುದು. ಅರಶಿನದಲ್ಲಿ ಇರುವಂತಹ ಕರ್ಕ್ಯೂಮಿನ್ ಅಂಶವು ಬಿಡಿಎನ್ ಎಫ್ ಮಟ್ಟ ಸುಧಾರಣೆ ಮಾಡುವುದು ಮತ್ತು ಮನಸ್ಥಿತಿ ಸುಧಾರಿಸುವುದು.

ರಕ್ತದಲ್ಲಿನ ಸಕ್ಕರೆ ಮಟ್ಟ ವೃದ್ಧಿಸುವುದು

ಅರಶಿನವು ಉರಿಯೂತ ಕಡಿಮೆ ಮಾಡಿ, ಆಕ್ಸಿಡೇಟಿವ್ ಒತ್ತಡ ತಗ್ಗಿಸುವುದು. ಮಧುಮೇಹದಲ್ಲಿ ಈ ಎರಡು ಅಂಶಗಳು ಪ್ರಮುಖ ಪಾತ್ರ ವಹಿಸುವುದು. ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಅರಶಿನವು ತುಂಬಾ ಲಾಭಕಾರಿ ಎಂದು ವೈಜ್ಞಾನಿಕವಾಗಿಯೂ ಸಾಬೀತು ಆಗಿದೆ.

ಕರಿಬೇವಿನ ಸೊಪ್ಪಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವ ಶಕ್ತಿಯಿದೆ!

ಅಲ್ಜೈಮರ್ ತಡೆಯುವುದು

51ರಿಂದ 84ರ ಹರೆಯದ ಅಲ್ಝೈಮರ್ ಇಲ್ಲದೆ ಇರುವಂತಹ ಜನರಿಗೆ ಕರ್ಕ್ಯೂಮಿನ್ ಸಾರವನ್ನು ನೀಡಿದ ವೇಳೆ ಅದು ನೆನಪು ಹಾಗೂ ಬುದ್ಧಿಮತ್ತೆಯನ್ನು ಹೆಚ್ಚಿಸಿದೆ ಎಂದು ಹೇಳಲಾಗಿದೆ. ಅರಶಿನವು ಅಲ್ಝೈಮರ್ ನ್ನು ತಡೆಯುವಲ್ಲಿ ಸಹಕಾರಿ.

ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು

ಅರಶಿನದಲ್ಲಿ ಅಧಿಕ ಮಟ್ಟದ ಕರ್ಕ್ಯೂಮಿನ್ ಅಂಶವಿರುವ ಕಾರಣದಿಂದಾಗಿ ಇದು ಕೊಲೆಸ್ಟ್ರಾಲ್ ತಗ್ಗಿಸಲು ತುಂಬಾ ಸಹಕಾರಿ ಆಗಿರುವುದು.

ಕೆಟ್ಟ ಕೊಲೆಸ್ಟ್ರಾಲ್ ನ್ನು ಕರ್ಕ್ಯೂಮಿನ್ ಅಂಶವು ಕಡಿಮೆ ಮಾಡುವುದು ಎಂದು ಸಾಬೀತು ಆಗಿದೆ. ಇದು ರಕ್ತನಾಳಗಳಲ್ಲಿ ಪದರ ನಿರ್ಮಾಣವಾಗುವುದನ್ನು ಕೂಡ ತಡೆಯುವುದು ಎಂದು ಅಧ್ಯಯನಗಳು ತಿಳಿಸಿವೆ.

Read in English

7 things that happen when you eat more turmeric

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ