ಆ್ಯಪ್ನಗರ

ಊಟಕ್ಕೆ ಮೊದಲು ಹೀಗೆ ಮಾಡಿದ್ರೆ, ಖಂಡಿತ ತೂಕ ನಿಯಂತ್ರಿಸಬಹುದು!

ಊಟಕ್ಕೆ ಮೊದಲು ನೀವು ಈ ಕೆಲಸಗಳನ್ನು ಮಾಡಿದರೆ ಆಗ ತೂಕ ಹೆಚ್ಚಾಗುವುದು ತಪ್ಪುವುದು.

Vijaya Karnataka Web 27 May 2021, 6:32 pm
ಸ್ನೇಹಿತರು ಅಥವಾ ಕುಟುಂಬದವರ ಜತೆಗೆ ಹೊರಗಡೆ ಊಟಕ್ಕೆ ಹೋಗುತ್ತೇವೆ. ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಕೂಡ ರುಚಿರುಚಿಯಾದ ಅಡುಗೆಯು ನಮ್ಮನ್ನು ಸೆಳೆಯುವುದು.
Vijaya Karnataka Web things you should do before a huge meal to ensure you dont put on weight
ಊಟಕ್ಕೆ ಮೊದಲು ಹೀಗೆ ಮಾಡಿದ್ರೆ, ಖಂಡಿತ ತೂಕ ನಿಯಂತ್ರಿಸಬಹುದು!


ಇಂತಹ ಸಂದರ್ಭದಲ್ಲಿ ಎಲ್ಲವನ್ನು ಮರೆತು, ಬಾಯಿಗೆ ಯಾವುದು ರುಚಿಯಾಗಿರುತ್ತದೆಯಾ ಅದನ್ನು ಸೇವನೆ ಮಾಡುತ್ತೇವೆ. ಆದರೆ ಮುಂದೆ ಇದು ದೇಹದಲ್ಲಿ ತೂಕ ಹೆಚ್ಚಳ ಮಾಡಿ ಅನಾರೋಗ್ಯ ಉಂಟು ಮಾಡುವುದು ಎನ್ನುವುದನ್ನು ಸಂಪೂರ್ಣವಾಗಿ ಮರೆತು ಬಿಡುತ್ತೇವೆ.

ಇಂತಹ ಸಂದರ್ಭದಲ್ಲಿ ರುಚಿಕರವಾದ ಊಟವನ್ನು ಬಿಡಲು ಆಗದು, ಅತಿಯಾಗಿ ತಿಂದರೆ ಅದರಿಂದ ದೊಡ್ಡ ಸಮಸ್ಯೆ. ಇದಕ್ಕೆ ಏನಾದರೂ ಪರಿಹಾರ ಕಂಡುಕೊಂಡರೆ ತುಂಬಾ ಒಳ್ಳೆಯದು. ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಊಟಕ್ಕೆ ಮೊದಲು ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಂಡರೆ ತುಂಬಾ ಒಳ್ಳೆಯದು ಮತ್ತು ಅದನ್ನು ನೀವು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ಅದು ಲಾಭಕಾರಿ ಆಗಲಿದೆ.

​ಪುದೀನಾ ಟೀ ಸೇವಿಸಿ

ಪ್ರತಿಯೊಬ್ಬರಿಗೂ ಹಚ್ಚ ಹಸಿರಾದ ಪುದೀನಾ ಎಲೆಗಳ ತಾಜಾ ಸುವಾಸನೆ ಎಂದರೆ ಬಹಳ ಇಷ್ಟ. ಮನಸ್ಸಿಗೆ ಸಾಕಷ್ಟು ಮುದ ನೀಡುವ ಕೆಲಸವನ್ನು ಪುದೀನಾ ಎಲೆಗಳು ಮಾಡುತ್ತವೆ.... ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಪುದೀನಾ ಟೀ ಕುಡಿದರೆ ಅದರಿಂದ ಹಸಿವು ಕಡಿಮೆ ಆಗುವುದು. ಇದರಲ್ಲಿನ ಸುವಾಸನೆಯು ನೈಸರ್ಗಿಕವಾಗಿ ಹಸಿವನ್ನು ತಗ್ಗಿಸುವುದು.

ಹೊಟ್ಟೆ ಕೆಟ್ಟು ಹೋದ ಸಂದರ್ಭದಲ್ಲಿ ಬಿಸಿ ಬಿಸಿ ಪುದೀನಾ ಚಹಾ ಕುಡಿದು ನೋಡಿ...

​ಒಂದು ಲೋಟ ನೀರು

ಹೊಟ್ಟೆಯು ಒಂದು ಲೀಟರ್ ನಷ್ಟು ಆಹಾರ ಮತ್ತು ನೀರನ್ನು ಶೇಖರಿಸಿಕೊಂಡು ಇಡಬಲ್ಲದು. ಇದರಿಂದ ನೀವು ಒಂದು ಲೋಟ ನೀರನ್ನು ಊಟಕ್ಕೆ ಮೊದಲು ಕುಡಿದರೆ ಅದು ತುಂಬಾ ನೆರವಾಗಲಿದೆ.
ದಾಲ್ಚಿನ್ನಿ ನೀರು ಕುಡಿಯಿರಿ
ಚಮಚ ದಾಲ್ಚಿನ್ನಿ ಹುಡಿಯನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಮತ್ತು ಐದು ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಒಂದು ಚಮಚ ಜೇನುತುಪ್ಪ ಹಾಕಿ ಸರಿಯಾಗಿ ಕಲಸಿಕೊಂಡು ಕುಡಿಯಿರಿ. ಇದು ಬಿಸಿ ಇರುವಾಗಲೇ ಸೇವಿಸಿ.


ಪಪ್ಪಾಯಿ ಸೇವಿಸಿ

  • ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದರೆ ಅದರಿಂದ ತೂಕ ಇಳಿಸಲು ತುಂಬಾ ನೆರವಾಗಲಿದೆ. ಯಾಕೆಂದರೆ ಈ ಅದ್ಭುತ ಹಾಗೂ ರುಚಿಕರ ಹಣ್ಣಿನಲ್ಲಿ ಪಪೈನ್ ಎನ್ನುವ ಅಂಶವಿದೆ ಮತ್ತು ಇದು ಕೊಬ್ಬು ಕರಗಿಸಿ, ಫ್ರೀ ರ್ಯಾಡಿಕಲ್ ನ್ನು ದೂರ ಮಾಡುವುದು ಹಾಗೂ ದೇಹದಲ್ಲಿರುವಂತಹ ಅತಿಯಾದ ನೀರಿನಾಂಶವನ್ನು ತೆಗೆಯುವುದು.
  • ಇದರಲ್ಲಿ ಹೀರಿಕೊಳ್ಳಬಹುದಾದ ನಾರಿನಾಂಶವಿದೆ ಮತ್ತು ತುಂಬಾ ಕಡಿಮೆ ಕ್ಯಾಲರಿ ಇದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆಗ ಖಂಡತವಾಗಿಯೂ ದೇಹಕ್ಕೆ ಹಲವಾರು ಲಾಭಗಳು ಸಿಗುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಇದು ಹೆಚ್ಚು ತೂಕ ಕೂಡ ಹಾಕುವುದಿಲ್ಲ.

​ಸೇಬು ತಿನ್ನಿ


  • ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುವ ಮಾತಿದೆ. ಸೇಬಿನಲ್ಲಿ ಇರುವಂತಹ ಅದ್ಭುತವಾದ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಸಹಕಾರಿ ಮತ್ತು ಇದು ಆರೋಗ್ಯವನ್ನು ಕಾಪಾಡುವುದು.
  • ತೂಕ ಇಳಿಸಿಕೊಳ್ಳಲು ಬಯಸಿದರೆ ಈ ಹಣ್ಣು ತುಂಬಾ ಪರಿಣಾಮಕಾರಿ. ಸೇಬಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಇದೆ ಮತ್ತು ಹೀರಿಕೊಳ್ಳಬಹುದಾದ ನಾರಿನಾಮಶವಿದೆ. ಇದು ಬೇಗನೆ ಹೊಟ್ಟೆ ತುಂಬುವಂತೆ ಮಾಡುವುದು ಮತ್ತು ದೇಹಕ್ಕೆ ಯಾವುದೇ ಹೆಚ್ಚುವರಿ ಕ್ಯಾಲರಿ ಸೇರ್ಪಡೆ ಆಗುವುದಿಲ್ಲ.

ಸೇಬು ಹಣ್ಣನ್ನು ಸಿಪ್ಪೆಯ ಸಮೇತ ಅಥವಾ ಸಿಪ್ಪೆ ತೆಗೆದು ತಿನ್ನಬೇಕೇ?

​ವ್ಯಾಯಾಮ

ವ್ಯಾಯಾಮ ಮಾಡಿದರೆ ಅದರಿಂದ ಹಸಿವಿನ ಹಾರ್ಮೋನ್ ಕಡಿಮೆ ಆಗುವುದು. ನೀವು ಕೇವಲ 15 ನಿಮಿಷ ವ್ಯಾಯಾಮ ಮಾಡಿದರೂ ಅದರಿಂದ ಕಡಿಮೆ ಊಟ ಮಾಡಬಹುದು.

​ಸರಿಯಾದ ನಿದ್ರೆ

ನಿದ್ರೆಯ ಕೊರತೆಯಿಂದಾಗಿ ಹಾರ್ಮೋನ್ ಗಳಲ್ಲಿ ವೈಪರಿತ್ಯವು ಉಂಟಾಗಬಹುದು. ಇದು ಹಸಿವು ಹೆಚ್ಚು ಮಾಡುವುದು ಮತ್ತು ಅನಾರೋಗ್ಯಕಾರಿ ಆಹಾರ ಸೇವನೆ ಮಾಡುವಂತೆ ಮಾಡಬಹುದು. ಹೀಗಾಗಿ ರಾತ್ರಿ ಸರಿಯಾಗಿ ನಿದ್ರೆ ಮಾಡಿ.

ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಆಗಾಗ ಎಚ್ಚರ ಆಗುತ್ತಿದೆಯೇ?

​ಹಸಿವು ಕಟ್ಟಿಕೊಳ್ಳಬೇಡಿ!

ಮಾಂಸಾಹಾರಿ ಊಟ ಮಾಡಲಿಕ್ಕಿದೆ ಅಥವಾ ಪಾರ್ಟಿ ಇದೆ ಎಂದು ಹಸಿದುಕೊಂಡು ಕೂರಬಾರದು. ದೇಹವು ಹಸಿದ ವೇಳೆ ಹೆಚ್ಚುವರಿ ಕ್ಯಾಲರಿಯನ್ನು ಕೊಬ್ಬಿನ ರೂಪದಲ್ಲಿ ಸಂಗ್ರಹಿಸುವುದು. ಹೀಗಾಗಿ ಯಾವಾಗಲೂ ಊಟ ತಪ್ಪಿಸಬೇಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ