ಆ್ಯಪ್ನಗರ

Thyroid Problem: ಥೈರಾಯ್ಡ್‌ ಸಮಸ್ಯೆಯಿಂದ ಪುರುಷರಲ್ಲಿ ಫಲವತ್ತತೆಯ ಕೊರತೆಯುಂಟಾಗುತ್ತಂತೆ

ಥೈರಾಯ್ಡ್‌ ಸಮಸ್ಯೆಯನ್ನು ಎಂದಿಗೂ ಕಡೆಗಣಿಸದಿರಿ, ಇದು ಕ್ರಮೇಣ ನಿಮ್ಮ ಫಲವತ್ತತೆಯನ್ನು ಕುಂಠಿತಗೊಳಿಸುತ್ತದೆ, ಇದರಿಂದ ಮಕ್ಕಳಾಗುವ ಸಾಧ್ಯತೆ ಕಡಿಮೆ ಮಾಡುತ್ತದೆ.

Produced byರಜತಾ | Vijaya Karnataka Web 19 Jun 2023, 3:18 pm
ಥೈರಾಯ್ಡ್ ಸಮಸ್ಯೆಯು ಗಂಡು ಹಾಗೂ ಹೆಣ್ಣುಗಳಿಬ್ಬರಲ್ಲೂ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಥೈಯಾಯ್ಡ್‌ನಿಂದ ಕೆಲವರಿಗೆ ತೂಕ ಹೆಚ್ಚಾದರೆ ಇನ್ನೂ ಕೆಲವರಿಗೆ ತೂಕ ಕಡಿಮೆಯಾಗುತ್ತದೆ. ಥೈರಾಯ್ಡ್ ಗ್ರಂಥಿಯಿಂದ ಪುರುಷರಲ್ಲಿ ಫಲವತ್ತತೆ ಕೊನೆಗೊಳ್ಳಲು ಪ್ರಾರಂಭವಾಗುತ್ತದೆ ಎನ್ನುವುದು ನಿಮಗೆ ಗೊತ್ತಾ? ಥೈರಾಯ್ಡ್‌ನಿಂದಾಗಿ ಪುರುಷರ ಫಲವತ್ತತೆ ಕೊನೆಗೊಳ್ಳುವ ಮೊದಲು ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಅವು ಯಾವುವು ಅನ್ನೋದನ್ನು ತಿಳಿಯೋಣ.
Vijaya Karnataka Web thyroid disease causes infertility in men
Thyroid Problem: ಥೈರಾಯ್ಡ್‌ ಸಮಸ್ಯೆಯಿಂದ ಪುರುಷರಲ್ಲಿ ಫಲವತ್ತತೆಯ ಕೊರತೆಯುಂಟಾಗುತ್ತಂತೆ


​ಥೈರಾಯ್ಡ್ ಕಾಯಿಲೆ ಎಂದರೇನು?

ಗಂಟಲಿನೊಳಗೆ ಚಿಟ್ಟೆಯಾಕಾರದ ಥೈರಾಯ್ಡ್ ಗ್ರಂಥಿ ಇದೆ, ಇದು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ. ಈ ಹಾರ್ಮೋನ್‌ಗಳ ಉತ್ಪಾದನೆಯಲ್ಲಿ ಇಳಿಕೆ ಅಥವಾ ಹೆಚ್ಚಳವನ್ನು ಥೈರಾಯ್ಡ್ ಸಮಸ್ಯೆ ಎಂದು ಕರೆಯಲಾಗುತ್ತದೆ. ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಅಧಿಕವಾಗಿದ್ದರೆ, ಅದನ್ನು ಹೈಪರ್ ಥೈರಾಯ್ಡಿಸಮ್ ಎಂದು ಕರೆಯಲಾಗುತ್ತದೆ. ಇದರಲ್ಲಿ, ಅದರ ಕೊರತೆಯನ್ನು ಹೈಪೋಥೈರಾಯ್ಡಿಸಮ್ ಎಂದು ಕರೆಯಲಾಗುತ್ತದೆ.

ಥೈರಾಯ್ಡ್ ಸಮಸ್ಯೆಯು ಪುರುಷರಲ್ಲಿ ಫಲವತ್ತತೆಯನ್ನು ಹೇಗೆ ನಾಶಪಡಿಸುತ್ತದೆ ಎಂದು Allo Health ನ ಮಾನಸಿಕ ಚಿಕಿತ್ಸಕ ಮತ್ತು ಸಂಬಂಧ ತಜ್ಞ ಕನುಶಾ Yk ಹೇಳಿದ್ದಾರೆ.

ಇದನ್ನೂ ಓದಿ: ಈ ಎಲ್ಲಾ ಆಹಾರಗಳು ಥೈರಾಯ್ಡ್‌ ಸಮಸ್ಯೆ ಇರುವವರಿಗೆ ಒಳ್ಳೆಯದಂತೆ

​ಪುರುಷರಲ್ಲಿ ಥೈರಾಯ್ಡ್ ವಿಧಗಳು

ಪುರುಷರು ಸಾಮಾನ್ಯವಾಗಿ ಹೈಪೋಥೈರಾಯ್ಡಿಸಮ್, ಆಟೋಇಮ್ಯೂನ್ ಹೈಪೋಥೈರಾಯ್ಡಿಸಮ್ (ಹಶಿಮೊಟೊಸ್ ಥೈರಾಯ್ಡಿಟಿಸ್), ಆಟೋಇಮ್ಯೂನ್ ಹೈಪರ್ ಥೈರಾಯ್ಡಿಸಮ್ (ಗ್ರೇವ್ಸ್ ಕಾಯಿಲೆ ಅಥವಾ ಥೈರಾಯ್ಡ್ ಕ್ಯಾನ್ಸರ್) ನಿಂದ ಬಳಲುತ್ತಿದ್ದಾರೆ ಎಂದು ಸಂಬಂಧ ತಜ್ಞರು ವಿವರಿಸಿದರು.

​ಪುರುಷರಲ್ಲಿ ಥೈರಾಯ್ಡ್‌ನ ಸಾಮಾನ್ಯ ಲಕ್ಷಣಗಳು

  • ತೂಕ ಹೆಚ್ಚಾಗುವುದು ಅಥವಾ ನಷ್ಟವಾಗುವುದು
  • ಕೂದಲು ಉದುರುವಿಕೆ
  • ತೀವ್ರ ಬಳಲಿಕೆ
  • ಖಿನ್ನತೆ
  • ನಿದ್ರಾಹೀನತೆ

ಇದನ್ನೂ ಓದಿ: ಈ ಟಿಪ್ಸ್‌ಗಳನ್ನು ಪಾಲಿಸಿದ್ರೆ ಶೀಘ್ರ ಸ್ಖಲನದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು


​ಪುರುಷ ಫಲವತ್ತತೆಯ ಮೇಲೆ ಥೈರಾಯ್ಡ್ ಪರಿಣಾಮ


ತಜ್ಞರ ಪ್ರಕಾರ, ಹೈಪೋಥೈರಾಯ್ಡ್ ಟೆಸ್ಟೋಸ್ಟೆರಾನ್, LH ಹಾರ್ಮೋನ್, FSH ಹಾರ್ಮೋನ್‌ನಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಪುರುಷರ ಫಲವತ್ತತೆಗೆ ಇದು ಬಹಳ ಮುಖ್ಯ. ಅದೇ ಸಮಯದಲ್ಲಿ, ಹೈಪರ್ ಥೈರಾಯ್ಡಿಸಮ್ ನಿಂದಾಗಿ ವೀರ್ಯದ ಉತ್ಪಾದನೆಯು ಕಡಿಮೆಯಾಗುತ್ತದೆ.

​ಫಲವತ್ತತೆ ಕಡಿಮೆಯಾಗುವ ಲಕ್ಷಣಗಳು


ಥೈರಾಯ್ಡ್‌ನಿಂದ ಫಲವತ್ತತೆ ಕಡಿಮೆಯಾಗಲು ಪ್ರಾರಂಭಿಸಿದಾಗ, ಪುರುಷರಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬರುತ್ತವೆ.

  • ಲೈಂಗಿಕ ಬಯಕೆ ಕಡಿಮೆಯಾಗುವುದು
  • ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ
  • ವೀರ್ಯ ಗುಣಮಟ್ಟದಲ್ಲಿ ದುರ್ಬಲತೆ
  • ಕಡಿಮೆ ವೀರ್ಯ ಎಣಿಕೆ
  • ವೃಷಣಗಳ ಕಾರ್ಯದ ನಷ್ಟ

ಇದನ್ನೂ ಓದಿ: ಯುವಕರನ್ನು ಕಾಡುವ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕಾರಣಗಳೇನು ಗೊತ್ತಾ?


​ಪುರುಷರಲ್ಲಿ ಥೈರಾಯ್ಡ್ ಕಾಯಿಲೆಗೆ ಪರಿಹಾರವೇನು?

ತಜ್ಞರ ಪ್ರಕಾರ, ಪುರುಷರಲ್ಲಿ ಹೈಪೋಥೈರಾಯ್ಡ್ ಮತ್ತು ಹೈಪರ್ ಥೈರಾಯ್ಡ್ ಅನ್ನು ಹಿಂತಿರುಗಿಸಬಹುದು. ಇದಕ್ಕಾಗಿ ಆಂಟಿಥೈರಾಯ್ಡ್ ಔಷಧಗಳು, ವಿಕಿರಣಶೀಲ ಅಯೋಡಿನ್, ಶಸ್ತ್ರಚಿಕಿತ್ಸೆಯಂತಹ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಈ ಕ್ರಮಗಳೊಂದಿಗೆ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಸಾಮಾನ್ಯವಾಗುತ್ತದೆ ಮತ್ತು ಫಲವತ್ತತೆ ಕೂಡ ಸಂಪೂರ್ಣವಾಗಿ ಸುಧಾರಿಸಬಹುದು.

ಲೇಖಕರ ಬಗ್ಗೆ
ರಜತಾ
ರಜತ ಬಂಗೇರ ಅವರು ಒಂದು ದಶಕದ ಅನುಭವ ಹೊಂದಿರುವ ಅನುಭವಿ ಪತ್ರಕರ್ತರಾಗಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಲೈಫ್‌ಸ್ಟೈಲ್ ಪತ್ರಕರ್ತರಾಗಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದರು. ಆರೋಗ್ಯ , ಅಡುಗೆ, ಫ್ಯಾಷನ್ ಮತ್ತು ಪ್ರಯಾಣದ ಬಗ್ಗೆ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿಹೊಂದಿರುವ ಇವರು ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ. ಪ್ರಸ್ತುತ, ರಜತ ಅವರು ನಮ್ಮ ಲೈಫ್‌ಸ್ಟೈಲ್ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಳೆದ ಎಂಟು ವರ್ಷಗಳಿಂದ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸ್ಥಾನದಲ್ಲಿ, ಉನ್ನತ-ಗುಣಮಟ್ಟದ ವಿಷಯವನ್ನು ಓದುಗರಿಗೆ ಒದಗಿಸುತ್ತಿದ್ದಾರೆ. ಉದಯೋನ್ಮುಖ ಪ್ರವೃತ್ತಿಗಳನ್ನು ಗುರುತಿಸುವ ಮತ್ತು ಉತ್ತಮ ಲೇಖನಗಳನ್ನು ರಚಿಸುವ ಇವರು ನಮ್ಮ ಸಂಸ್ಥೆಯ ಪ್ರಮುಖ ಲೈಫ್‌ಸ್ಟೈಲ್ ಪತ್ರಕರ್ತರಲ್ಲಿ ಒಬ್ಬರೆಂದು ಖ್ಯಾತಿಯನ್ನು ಗಳಿಸಿದ್ದಾರೆ. ಕೆಲಸವನ್ನು ಹೊರತುಪಡಿಸಿ, ರಜತ ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ತನ್ನ ಪ್ರಯಾಣದ ಮೂಲಕ ವಿಭಿನ್ನ ಸಂಸ್ಕೃತಿಗಳನ್ನು ಅನುಭವಿಸುವುದನ್ನು ಆನಂದಿಸುತ್ತಾರೆ. ಅವರು ಅತ್ಯಾಸಕ್ತಿಯ ನೃತ್ಯಗಾರ್ತಿಯೂ ಆಗಿದ್ದು, ಶಾಸ್ತ್ರೀಯ ಭಾರತೀಯ ನೃತ್ಯ ಪ್ರಕಾರಗಳಲ್ಲಿ ನಿರ್ದಿಷ್ಟ ಆಸಕ್ತಿಯನ್ನು ಹೊಂದಿದ್ದಾರೆ. ಈ ಹವ್ಯಾಸಗಳು ಅವರ ಬರವಣಿಗೆಯನ್ನು ಪ್ರೇರೇಪಿಸುತ್ತವೆ... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ