ಆ್ಯಪ್ನಗರ

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಇಂದ ಬಳಲುತ್ತಿರುವ ಮಹಿಳೆಯರಿಗೆ ಗರ್ಭವತಿಯರಾಗಲು ಇಲ್ಲಿದೆ ಕೆಲವು ಸಲಹೆಗಳು

ಗರ್ಭಕೋಶದ ಹಲವು ತೊಂದರೆಗಳಲ್ಲಿ ಬಹಳ ಮುಂಚೂಣಿಯಲ್ಲಿರುವುದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್. ಇತ್ತೀಚಿಗೆ ನಡೆಸಿದ ಕೆಲವು ಅಧ್ಯಯನಗಳ ಪ್ರಕಾರ ಭಾರತದಲ್ಲಿರುವ ಶೇಕಡಾ 20 ರಷ್ಟು ಮಹಿಳೆಯರು ಈ ತೊಂದರೆಯಿಂದ ಬಳಲುತ್ತಿದ್ದಾರೆ.

Vijaya Karnataka Web 21 Sep 2021, 9:36 am
ಆರೋಗ್ಯವೆಂಬುದು ಪ್ರತಿಯೊಬ್ಬರಿಗೂ ಬಹಳ ಪ್ರಮುಖವಾದ ವಿಷಯ. ಸಕಲ ಆಸ್ತಿ ಐಶ್ವರ್ಯಗಳನ್ನು ಸಂಪಾದಿಸಿದ ನಂತರವೂ ನಿಮ್ಮ ಆರೋಗ್ಯ ಉತ್ತಮವಾಗಿಲ್ಲ ಎಂದರೆ ನೀವು ಮಾಡಿರುವ ಕೆಲಸಗಳೆಲ್ಲವೂ ವ್ಯರ್ಥ ಎಂದರ್ಥ. ಜೀವನದಲ್ಲಿ ಪ್ರತಿಯೊಂದನ್ನು ಉತ್ತಮವಾಗಿ ಅನುಭವಿಸಬೇಕು ಎಂದರೆ ಉತ್ತಮವಾದ ಆರೋಗ್ಯ ಇರಲೇಬೇಕು. ಆರೋಗ್ಯ ಪುರುಷ ಅಥವಾ ಮಹಿಳೆ ಎನ್ನುವ ವಿಷಯದ ಮೇಲೆ ಅವಲಂಬಿತವಾಗಿರುವುದು ಇಲ್ಲ, ಇಬ್ಬರಿಗೂ ಕೂಡ ಆರೋಗ್ಯ ಅಷ್ಟು ಪ್ರಮುಖವೇ ಹೌದು.
Vijaya Karnataka Web tips to boost the fertility of women suffering from pcos
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಇಂದ ಬಳಲುತ್ತಿರುವ ಮಹಿಳೆಯರಿಗೆ ಗರ್ಭವತಿಯರಾಗಲು ಇಲ್ಲಿದೆ ಕೆಲವು ಸಲಹೆಗಳು


ಮಹಿಳೆಯರಲ್ಲಿ ಆರೋಗ್ಯ ಎಷ್ಟು ಪ್ರಮುಖವೋ, ತಾಯ್ತನದ ಭಾಗ್ಯ ದೊರೆಯುವುದು ಅಷ್ಟೇ ಪ್ರಮುಖ. ಪ್ರತಿಯೊಂದು ಹೆಣ್ಣು ಮಗುವು ಋತುಮತಿಯಾದ ದಿನಗಳ ನಂತರ, ಮದುವೆಯ ದಿನಗಳಿಂದಲೂ ಕೂಡ ಮುದ್ದಾದ ಮಗುವಿನ ಬಗ್ಗೆ ಕನಸು ಕಂಡಿರುತ್ತಾರೆ. ಮದುವೆಯಾದ ನಂತರ ದಂಪತಿಗಳ ಮುಂದಿನ ಆಲೋಚನೆ ಏನಿದ್ದರೂ ಅದು ಮಗುವಿನ ವಿಷಯವೇ ಆಗಿರುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟ ಸುಖಗಳು ಬಂದುಹೋದರು ಒಂದು ಮುದ್ದಾದ ಮಗು ಮಡಿಲು ಸೇರಿದಾಗ ಆಗುವ ಸಂತೋಷಕ್ಕೆ ಪಾರವೇ ಇಲ್ಲ. ಆದರೆ ಕೆಲವೊಮ್ಮೆ ಗರ್ಭಕೋಶದ ಹಲವು ತೊಂದರೆಗಳಿಂದ ಮಹಿಳೆಗೆ ಇಂತಹ ಭಾಗ್ಯವೂ ಲಭ್ಯವಾಗುವುದಿಲ್ಲ.

ಮಹಿಳೆಯ ದೇಹದಲ್ಲಿ ಉಂಟಾಗುವ ಹಲವಾರು ಹಾರ್ಮೋನುಗಳ ಅಸಮತೋಲನೆಯಿಂದ ಈ ತೊಂದರೆಯುಂಟಾಗುತ್ತದೆ. ಮಹಿಳೆಯ ದೇಹದಲ್ಲಿರುವ ಅಂಡಾಶಯಗಳು ಅಥವಾ ಓವರಿಗಳು ಪ್ರತಿ ತಿಂಗಳ ಋತುಸ್ರಾವದ ಅಂಗವಾಗಿ ಮೊಟ್ಟೆಯನ್ನು ತಯಾರಿಸಿ ಬಿಡುಗಡೆ ಮಾಡುತ್ತವೆ. ಆದರೆ ಮಹಿಳೆಯು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಂದ ಬಳಲುತ್ತಿದ್ದರೆ ಈ ಮೊಟ್ಟೆಗಳು ಸರಿಯಾಗಿ ಉತ್ಪಾದನೆಯಾಗುವುದಿಲ್ಲ ಹಾಗೂ ಸರಿಯಾದ ಸಮಯಕ್ಕೆ ಬಿಡುಗಡೆ ಕೂಡ ಆಗುವುದಿಲ್ಲ.

ಆದ್ದರಿಂದ ಈ ಎಲ್ಲ ಏರುಪೇರುಗಳು ಸಂಭವಿಸುವುದರಿಂದ ಮಹಿಳೆಗೆ ತಾಯ್ತನದ ಭಾಗ್ಯ ಕೆಲವೊಮ್ಮೆ ಮರಿಚಿಕೆಯಾಗುತ್ತದೆ. ಸೆಪ್ಟಂಬರ್ ತಿಂಗಳನ್ನು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ತೊಂದರೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಬಳಸಿಕೊಳ್ಳಲಾಗುತ್ತದೆ. ಈ ತೊಂದರೆಯಿಂದ ಬಳಲುವ ಮಹಿಳೆಯರಿಗೆ ತಾಯಿತನದ ಭಾಗ್ಯವನ್ನು ದೊರಕಿಸಿಕೊಳ್ಳಲು ಐದು ಸುಲಭವಾದ ಸಲಹೆಗಳನ್ನು ನೀಡಲಿದ್ದೇವೆ.

​ನೀವು ಇದಕ್ಕಾಗಿ ಔಷಧಗಳನ್ನು ತೆಗೆದುಕೊಳ್ಳಬೇಕಾಗಬಹುದು

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಬಂಜೆತನವನ್ನು ನಿವಾರಿಸಿ ತಾಯ್ತನದ ಭಾಗ್ಯವನ್ನು ದೊರಕಿಸಿಕೊಡಲು ಔಷಧಗಳ ಅವಶ್ಯಕತೆ ಇರುತ್ತದೆ. ಮಹಿಳೆಯ ದೇಹದಲ್ಲಿ ಅಂಡಾಶಯಗಳು ಸರಿಯಾದ ಸಮಯಕ್ಕೆ ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ತಯಾರಿಸಿ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಂದ ಬಳಲುತ್ತಿರುವ ಮಹಿಳೆಯರು ತಾಯಿಯಾಗಲು ಬಹಳ ಕಷ್ಟ ಪಡುತ್ತಿರುವವರು ಈ ಚಿಕಿತ್ಸೆಗೆ ಒಳಗಾಗಬಹುದು.

ಮಹಿಳೆಯ ದೇಹದಲ್ಲಿ ಸಾಮಾನ್ಯವಾಗಿ ಉಂಟಾಗುವ ಹಾರ್ಮೋನುಗಳನ್ನು ಸರಿಪಡಿಸಿ ಸಮಯಕ್ಕೆ ಸರಿಯಾಗಿ ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ಬಿಡುಗಡೆ ಮಾಡಲು ಔಷಧಗಳು ಸಹಾಯ ಮಾಡುತ್ತದೆ. ಕೆಲವು ಮಹಿಳೆಯರಿಗೆ ಈ ತೊಂದರೆ ಇದ್ದರೂ ಕೂಡ ಸರಿಯಾದ ಸಮಯಕ್ಕೆ ಮೊಟ್ಟೆಗಳು ಬಿಡುಗಡೆ ಆಗುತ್ತಿರುತ್ತವೆ. ಈ ರೀತಿಯ ಔಷಧಗಳನ್ನು ತೆಗೆದುಕೊಂಡು ಮೊಟ್ಟೆಗಳ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಅಥವಾ ಅವಶ್ಯಕತೆಗಿಂತ ಹೆಚ್ಚಿನ ಮೊಟ್ಟೆಗಳು ಬೇಕಾದಲ್ಲಿ ಕೂಡ ಈ ಔಷಧ ಉಪಯೋಗವಿದೆ.

ಮೂತ್ರಕೋಶದ ಕ್ಯಾನ್ಸರ್: ಲಕ್ಷಣಗಳು ಮತ್ತು ಮುನ್ನೆಚ್ಚರಿಕೆಗಳು

​ಆರೋಗ್ಯಕರವಾದ ದೇಹದ ತೂಕವನ್ನು ಕಾಯ್ದುಕೊಳ್ಳಬೇಕು

ಉತ್ತಮ ದೇಹದ ತೂಕವನ್ನು ಕಾಯ್ದುಕೊಳ್ಳುವುದರಿಂದ ಮಹಿಳೆಯರು ಬೇಗನೆ ಗರ್ಭವತಿಯಾಗಲು ಹಾಗೂ ಗರ್ಭವತಿಯಾದಾಗ ಉಂಟಾಗುವ ಹಲವು ಸಮಸ್ಯೆಗಳಿಂದ ನೀವು ಹೊರಬರಬಹುದು. ಬಾಡಿ ಮಾಸ್ ಇಂಡೆಕ್ಸ್, ಇದೊಂದು ವ್ಯಕ್ತಿಯ ಎತ್ತರಕ್ಕೆ ತಕ್ಕಂತೆ ಎಷ್ಟು ತೂಕ ಇರಬೇಕು ಎನ್ನುವ ಅಂಶವನ್ನು ಸೂಚಿಸುವ ವಿಧಾನವಾಗಿದೆ. ಗರ್ಭವತಿಯಾಗಲು ಬಯಸುವ ಮಹಿಳೆಯರು 18.5 ರಿಂದ 24.9 ರವರೆಗೆ ಬಿಎಂಐ ಹೊಂದಿರಬೇಕು. ಇದಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ನೀವು ಹೊಂದಿದ್ದರೆ ನೀವು ಗರ್ಭವತಿಯಾಗುವುದು ಕೊಂಚ ಕಷ್ಟವಾಗಬಹುದು.

ಈ ಸಂಖ್ಯೆಯು 35 ದಾಟಿದರೆ ಗರ್ಭವತಿಯಾಗುವ ಸಂದರ್ಭಗಳಲ್ಲಿ ತಾಯಿ ಹಾಗೂ ಮಗುವಿಗೆ ಇಬ್ಬರಿಗೂ ಕೂಡ ಅಪಾಯಗಳು ಉಂಟಾಗುವ ಸನ್ನಿವೇಶಗಳು ಹೆಚ್ಚು. ಈ ಸಂಖ್ಯೆಯು ಹೆಚ್ಚಾಗಿದ್ದರೆ ಅಂತಹ ಮಹಿಳೆಯರ ದೇಹದಲ್ಲಿ ಗರ್ಭವತಿಯಾದ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ದೀರ್ಘಕಾಲದ ಪ್ರಸವದ ನೋವು, ಗರ್ಭಪಾತ, ನಿಗದಿತ ಅವಧಿಗೂ ಮುನ್ನ ಮಗುವು ಜನನವಾಗುವುದು ಹಾಗೂ ತಾಯಂದಿರು ಗರ್ಭವತಿಯಾದಾಗ ಉಂಟಾಗುವ ಸಕ್ಕರೆ ಕಾಯಿಲೆಗಳು ಹೆಚ್ಚಾಗಬಹುದು.

​ಒತ್ತಡವನ್ನು ನಿಭಾಯಿಸಿಕೊಳ್ಳುವುದು

ಒತ್ತಡ ಹಾಗೂ ಆತಂಕಗಳು ಪ್ರತಿಯೊಬ್ಬರಿಗೂ ಕೂಡ ಕೆಡಕನ್ನು ಮಾಡುತ್ತವೆ. ಅದರಲ್ಲೂ ಗರ್ಭವತಿಯಾಗಲು ಬಯಸುತ್ತಿರುವ ಮಹಿಳೆಯರಿಗೆ ಇಂತಹ ಒತ್ತಡ ಮತ್ತು ಆತಂಕಗಳು ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಆದ್ದರಿಂದ, ಇಂತಹ ಮಹಿಳೆಯರು ಧ್ಯಾನ, ಒಳ್ಳೆಯ ಹಾಡುಗಳನ್ನು ಕೇಳುವುದು, ಯೋಗ ಮಾಡುವುದು, ನಡಿಗೆಯನ್ನು ಮಾಡುವುದು ಹಾಗೂ ಅವರ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯಗಳನ್ನು ಕಳೆದು ಒತ್ತಡದಿಂದ ದೂರ ಉಳಿಯಬೇಕು.

ಬಂಜೆತನದ ಈ ಕಾರಣಗಳನ್ನು ನೀವು ಎಂದಿಗೂ ನಿರ್ಲಕ್ಷಿಸಬಾರದು

​ಗರ್ಭವತಿಯಾಗಲು ಉತ್ತಮ ತಂತ್ರಜ್ಞಾನವುಳ್ಳ ವಿಧಾನಗಳನ್ನು ಅನುಸರಿಸುವುದು

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಂದ ಬಳಲುತ್ತಿರುವ ಮಹಿಳೆಯರಿಗೆ ಗರ್ಭವತಿಯಾಗಲು ಹಲವು ರೀತಿಯ ತೊಂದರೆಗಳು ಇರುತ್ತದೆ. ದೇಹದ ಮೇಲೆ ಅನಗತ್ಯ ಕೂದಲುಗಳು ಬೆಳೆಯುವುದರಿಂದ ಹಿಡಿದು ಅಧಿಕ ತೂಕದವರೆಗೂ ಪ್ರತಿಯೊಂದು ತೊಂದರೆಯೂ ಆಕೆಯು ತಾಯಿಯಾಗುವ ಸಂಭವಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇಂತಹ ಮಹಿಳೆಯರು ಹಲವು ತಂತ್ರಜ್ಞಾನಗಳನ್ನು ಬಳಸಿ ಗರ್ಭವತಿಯಾಗುವ ವಿಷಯಗಳ ಬಗ್ಗೆ ಹೆಚ್ಚಾದ ಜಾಗೃತಿ ಹಾಗೂ ಕಾಳಜಿಯನ್ನು ಹೊಂದಿರಬೇಕು. ಇವುಗಳನ್ನು ನೀವು ನಿಮ್ಮ ವೈದ್ಯರ ಬಳಿ ಚರ್ಚಿಸಿ ಮುಂದುವರೆಯಬಹುದು.

​ಉತ್ತಮ ಆಹಾರ ಪದ್ಧತಿ

ಉತ್ತಮ ಆಹಾರ ಪದ್ಧತಿ ಪ್ರತಿಯೊಂದು ಆರೋಗ್ಯದ ವಿಷಯಗಳನ್ನು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಿಮ್ಮೆಲ್ಲರಿಗೂ ತಿಳಿದಿದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಅಧಿಕ ತೂಕ ಒಂದು ಪೆಡಂಭೂತವಾಗಿ ಕಾಡುತ್ತಿದೆ. ಈ ರೀತಿ ಗಳಿಸಿಕೊಂಡ ಅಧಿಕ ತೂಕವನ್ನು ಕಳೆದುಕೊಳ್ಳಬೇಕು ಎಂದಿದ್ದರೆ ಉತ್ತಮ ಆಹಾರ ಸೇವಿಸಬೇಕು ಹಾಗೂ ಜಂಕ್ ಫುಡ್ ಗಳ ಸೇವನೆಯಿಂದ ದೂರವಿರಬೇಕು. ಜಿಂಕ್, ಕಬ್ಬಿಣಾಂಶ, ನಾರಿನಂಶ, ಕಾರ್ಬೋಹೈಡ್ರೇಟ್ಗಳು, ಒಳ್ಳೆಯ ಕೊಬ್ಬಿನಾಂಶಗಳು ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಬೀನ್ಸ್ ಹಾಗೂ ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಬೇಕು. ಸಕ್ಕರೆಗಳು ಹೆಚ್ಚಾಗಿರುವ ಪಾನೀಯಗಳಗಳನ್ನು ಸೇವಿಸಬಾರದು. ಅವಕಾಡೋ, ಒಣ ಹಣ್ಣುಗಳು ಹಾಗೂ ಉತ್ತಮ ಎಣ್ಣೆಗಳು ಇರುವ ಮೀನುಗಳನ್ನು ಹೆಚ್ಚಾಗಿ ಸೇವಿಸಬೇಕು.

To Read in English Click: 5 tips to boost fertility in women suffering from PCOS

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ