ಆ್ಯಪ್ನಗರ

ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ

ನಮ್ಮ ದೇಹದ ಕೆಲವೊಂದು ಅಂಗಗಳು ದೇಹದ ಒಳಗೆ ಇರುವುದರಿಂದ ಅವುಗಳ ಸ್ವಚ್ಛತೆಯ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಲು ಆಗುವುದಿಲ್ಲ. ಇವುಗಳ ಶುಚಿತ್ವವನ್ನು ಕಾಪಾಡಿಕೊಳ್ಳಲು ನಾವು ಆಹಾರದ ಮುಖಾಂತರವೇ ಪ್ರಯತ್ನ ಪಡಬೇಕಾಗುತ್ತದೆ.

Vijaya Karnataka Web 26 Jul 2021, 6:01 pm
ಆರೋಗ್ಯವಾಗಿ ಇರಬೇಕು ಎನ್ನುವುದು ಪ್ರತಿಯೊಬ್ಬರ ಧ್ಯೇಯವಾಗಿರುತ್ತದೆ. ಇದಕ್ಕಾಗಿ ಹಲವಾರು ರೀತಿಯ ಉಪಾಯಗಳನ್ನು, ವಿಧಾನಗಳನ್ನು, ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ನಮ್ಮ ಇಡೀ ದೇಹ ಆರೋಗ್ಯವಾಗಿ ಇರಬೇಕು ಎಂದರೆ ನಮ್ಮ ಇಡೀ ದೇಹದ ವಿವಿಧ ಅಂಗಗಳನ್ನು ನಾವು ಶುಚಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ಕೆಲವೊಂದು ಅಂಗಗಳು ದೇಹದ ಹೊರಗೆ ಇರುವುದರಿಂದ ಹಾಗೂ ಇವುಗಳನ್ನು ಸ್ವಚ್ಛ ಮಾಡಿಕೊಳ್ಳುವುದರ ಬಗ್ಗೆ ನಾವು ಕಾಳಜಿ ತೆಗೆದುಕೊಳ್ಳಬಹುದು. ಅಂತಹ ಅಂಗಗಳಲ್ಲಿ ನಾಲಿಗೆಯು ಕೂಡ ಒಂದಾಗಿದೆ.
Vijaya Karnataka Web tongue scarping can improve your health in five ways
ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ


​ಬಾಯಿಯ ಆರೋಗ್ಯ

ಯಾವುದೇ ಮೂಳೆಗಳು ಇಲ್ಲದಿರುವ ಅಂಗವೆಂದರೆ ಅದು ನಾಲಿಗೆ. ನಾಲಿಗೆಯ ಮುಖಾಂತರ ನಾವು ಬಹಳಷ್ಟು ಕಾರ್ಯಗಳನ್ನು ಮಾಡಬಹುದಾಗಿದೆ. ನಾವು ತಿನ್ನುವ ಆಹಾರ ರುಚಿ ನೋಡುವುದರಿಂದ ಹಿಡಿದು ನಾವು ಮಾತನಾಡುವ ವರೆಗೂ ಪ್ರತಿಯೊಂದು ವಿಷಯಕ್ಕೂ ನಾಲಿಗೆಯ ಸಹಾಯ ಬೇಕಾಗುತ್ತದೆ. ನಾಲಿಗೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯಾರೊಂದಿಗಾದರೂ ಮಾತನಾಡುವಾಗ ನಮ್ಮ ಬಾಯಿಯಿಂದ ದುರ್ವಾಸನೆ ಹೊರಬರುತ್ತಿದ್ದರೆ ಅದು ತುಂಬಾ ಮುಜುಗರದ ವಿಷಯವಾಗುತ್ತದೆ. ನಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೇಹದ ಬೇರೆ ಅಂಗಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ.

ಬಾಯಿಯ ಆರೋಗ್ಯ ಎಂದಾಕ್ಷಣ ನಮ್ಮ ಜನರು ಕೇವಲ ಹಲ್ಲುಗಳ ಆರೋಗ್ಯದ ಬಗ್ಗೆ ಗಮನ ನೀಡುತ್ತಾರೆ. ಆದರೆ ಬಾಯಿಯ ಆರೋಗ್ಯದಲ್ಲಿ ನಾಲಿಗೆಯು ಕೂಡ ಮಹತ್ತರವಾದ ಸ್ಥಾನವನ್ನು ಪಡೆದುಕೊಳ್ಳುತ್ತದೆ. ನಾಲಿಗೆಯನ್ನು ಶುಚಿ ಮಾಡುವುದು ಬಹಳ ಕಷ್ಟವಾದ ಕೆಲಸವಲ್ಲ, ಆದರೆ ಇದನ್ನು ಸರಿಯಾಗಿ ಮಾಡದಿದ್ದಾಗ ಹಲವಾರು ತೊಂದರೆಗಳು ಉದ್ಭವವಾಗಬಹುದು. ಕೆಟ್ಟ ಬ್ಯಾಕ್ಟೀರಿಯಾಗಳನ್ನು ದೂರವಿಡಲು ನಾಲಿಗೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ನಾಲಿಗೆಯನ್ನು ಚೆನ್ನಾಗಿ ಉಜ್ಜಿ ಕೆರೆದು ಶುಚಿ ಮಾಡುವುದರಿಂದ ನಾಲಿಗೆ ಮೇಲೆ ಇರುವ ಬ್ಯಾಕ್ಟಿರಿಯಾಗಳು, ಶಿಲೀಂಧ್ರಗಳು, ಹಲವು ವಿಷಪದಾರ್ಥಗಳು ದೇಹದ ಒಳಗಡೆ ಹೋಗುವುದರಿಂದ ತಡೆಯಬಹುದಾಗಿದೆ. ನಾಲಿಗೆಯನ್ನು ತೊಳೆಯುವುದು ಎಂದಾಕ್ಷಣ ಇದು ಕೇವಲ ನಾಲಿಗೆಯನ್ನು ತೊಳೆಯುವುದು ಅಷ್ಟೇ ಅಲ್ಲದೆ ನಿಮ್ಮ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ ಎನ್ನುವುದು ನೆನಪಿರಲಿ.

ನಿಮ್ಮ ಆರೋಗ್ಯ ನಾಲಿಗೆಯನ್ನು ತೊಳೆಯುವುದರಿಂದ ಹೇಗೆ ವೃದ್ಧಿಸುತ್ತದೆ ಎಂಬುದನ್ನು ತಿಳಿಸಲು 5 ವಿಷಯಗಳನ್ನು ನೀಡಿದ್ದೇವೆ.

​ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ

ಜೀರ್ಣಕ್ರಿಯೆಯ ಆರಂಭಿಕ ಸ್ಥಳವೆಂದರೆ ಅದು ಬಾಯಿ. ನಾವು ತಿನ್ನುವ ಆಹಾರವು ವಿವಿಧ ಅಂಗಗಳನ್ನು ದಾಟಿ ಹೊಟ್ಟೆ ಹಾಗೂ ಜಟರಗಳನ್ನು ಸೇರಿ ಜೀರ್ಣಕ್ರಿಯೆಯ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಆದರೆ ಇದು ಆರಂಭವಾಗುವುದು ಬಾಯಿಯ ಮುಖಾಂತರ. ಬಾಯಿಯ ಎಂಜಲಿನಲ್ಲಿ ಉಪಸ್ಥಿತರಿರುವ ಕಿಣ್ವಗಳು ಆಹಾರ ಪದಾರ್ಥಗಳನ್ನು ಸುಲಭವಾಗಿ ಕತ್ತರಿಸಿ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ನಾಲಿಗೆಯನ್ನು ಕೆರೆದು ಸ್ವಚ್ಛ ಮಾಡುವುದರಿಂದ ಈ ಕಿಣ್ವಗಳು ಶುಚಿಯಾಗಿ,ಹೊಸದಾಗಿ ಉದ್ಭವವಾಗುತ್ತವೆ. ಇದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಸಲೀಸಾಗಿ ನಡೆಯುತ್ತದೆ.

ಈ ಚಿಹ್ನೆಗಳು ಕಂಡುಬಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿದೆ ಎಂದರ್ಥ

​ದೇಹದ ವಿವಿಧ ಅಂಗಗಳನ್ನು ಉತ್ತೇಜಿಸುತ್ತದೆ

ನಾಲಿಗೆಯನ್ನು ಕೆರೆದು ತೊಳೆಯುವುದರ ಮುಖಾಂತರ ಹೊಸ ಕಿಣ್ವಗಳು ಉದ್ಭವವಾಗುತ್ತದೆ ಎಂದು ನಾವು ಈಗಾಗಲೇ ತಿಳಿಸಿದ್ದೇವೆ. ರಾತ್ರಿಯಿಡೀ ನಾಲಿಗೆ ಮೇಲೆ ಶೇಖರವಾಗಿರುವ ವಿಷಪದಾರ್ಥಗಳನ್ನು ಕೆರೆದು ತೊಳೆದಾಗ ಹಳೆ ಕಿಣ್ವಗಳು ಹೊರಹೋಗಿ ಹೊಸ ಕಿಣ್ವಗಳು ಉದ್ಭವವಾಗುತ್ತದೆ. ಈ ಕಿಣ್ವಗಳು ದೇಹದ ಒಳಗೆ ಹೋದಾಗ ವಿವಿಧ ಅಂಗಗಳನ್ನು ಉತ್ತೇಜಿಸುತ್ತದೆ. ಇದರಿಂದ ನಿಮ್ಮ ಅಂಗಗಳು ಶಕ್ತಿಯನ್ನು ಪಡೆದುಕೊಳ್ಳುತ್ತವೆ.

​ಬಾಯಿಯ ದುರ್ವಾಸನೆಯನ್ನು ದೂರಮಾಡುತ್ತದೆ

ಬಾಯಿಯ ದುರ್ವಾಸನೆ ಎಷ್ಟು ಮುಜುಗರದ ವಿಷಯ ಎಂದು ನಿಮಗೆ ಆಗಲೇ ತಿಳಿದಿದೆ. ರಾತ್ರಿ ನಾಲಿಗೆಯ ಮೇಲೆ ಶೇಖರಿಸಲ್ಪಟ್ಟ ವಿಷಪದಾರ್ಥಗಳು, ಬ್ಯಾಕ್ಟೀರಿಯಾಗಳು, ಶಿಲಿಂದ್ರಗಳು ದುರ್ವಾಸನೆಗೆ ಕಾರಣವಾಗಿರುತ್ತವೆ. ಬೆಳಿಗ್ಗೆ ಎದ್ದ ತಕ್ಷಣ ನಾಲಗೆಯನ್ನು ಚೆನ್ನಾಗಿ ಶುಚಿ ಮಾಡುವುದರಿಂದ ಈ ವಿಷಪದಾರ್ಥಗಳು ದೇಹದಿಂದ ಹೊರಕ್ಕೆ ಹೋಗಿ ಬಾಯಿ ದುರ್ವಾಸನೆಯನ್ನು ತಡೆಗಟ್ಟುತ್ತವೆ.

​ಆಹಾರ ಪದಾರ್ಥಗಳ ನಿಮ್ಮ ರುಚಿಯನ್ನು ಹೆಚ್ಚಿಸುತ್ತದೆ

ನಾಲಗೆಯನ್ನು ಚೆನ್ನಾಗಿ ಉಜ್ಜಿ ತೊಳೆಯುವುದರಿಂದ ನೀವು ಸೇವಿಸುವ ಆಹಾರವನ್ನು ನಾಲಿಗೆಯೂ ಹೆಚ್ಚಾಗಿ ರುಚಿಸುವಂತೆ ಮಾಡುತ್ತದೆ. ಈ ಪ್ರಕ್ರಿಯೆಯನ್ನು ದಿನಕ್ಕೆರಡು ಬಾರಿ ಮಾಡಬೇಕಾಗುತ್ತದೆ. ನಾಲಿಗೆ ಮೇಲೆ ಹಲವಾರು ಸತ್ತ ಜೀವಕೋಶಗಳು ಶೇಖರಣೆ ಆಗಿರುತ್ತದೆ. ಇದನ್ನು ಚೆನ್ನಾಗಿ ಉಜ್ಜಿ ತೊಳೆದು ಶುಚಿ ಮಾಡುವುದರಿಂದ ಆಹಾರ ಪದಾರ್ಥಗಳು ಹೆಚ್ಚಾಗಿ ರುಚಿಸುತ್ತವೆ.

ನಿಮ್ಮ ರಕ್ತಪರಿಚಲನೆ ಸಮರ್ಪಕವಾಗಿಲ್ಲ ಎಂದು ಸೂಚಿಸುವ ಲಕ್ಷಣಗಳಿವು

​ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುತ್ತದೆ

ಬಾಯಿಯ ದುರ್ವಾಸನೆಯಿಂದ ಎಂಎಲ್ಇಡಿದು ಹಲ್ಲುಗಳ ಸಮಸ್ಯೆಯವರೆಗೂ ಎಲ್ಲಾ ಸಮಸ್ಯೆಗಳು ಬ್ಯಾಕ್ಟೀರಿಯಾಗಳಿಂದ ಉದ್ಭವವಾಗುತ್ತದೆ. ನಾಲಿಗೆಯನ್ನು ಚೆನ್ನಾಗಿ ಕೆರೆದು ತೊಳೆಯುವುದರಿಂದ ಕೆಟ್ಟ ಬ್ಯಾಕ್ಟೀರಿಯಾಗಳು ಹೊರ ಹೋಗಿ ಉತ್ತಮ ಬ್ಯಾಕ್ಟೀರಿಯಾಗಳು ನಾಲಿಗೆ ಮೇಲೆ ಉಪಸ್ಥಿತವಿರುವ ಹಾಗೆ ಮಾಡುತ್ತವೆ. ಹೀಗೆ ಮಾಡುವುದರಿಂದ ದೇಹದ ಒಳಗೆ ಕೆಟ್ಟ ಬ್ಯಾಕ್ಟೀರಿಯಾಗಳು ಹೋಗುವುದನ್ನು ತಪ್ಪಿಸುತ್ತದೆ.

​ಮೂಳೆಗಳಿಲ್ಲದಿದ್ದರೂ ದೇಹದ ಪ್ರಮುಖ ಅಂಗ

ನಾಲಿಗೆಯು ನಮ್ಮ ದೇಹದಲ್ಲಿ ಅತಿ ಮುಖ್ಯವಾದ ಅಂಗವಾಗಿದೆ. ನಾಲಿಗೆಗೆ ಯಾವುದೇ ರೀತಿಯ ಮೂಳೆಗಳು ಇಲ್ಲದಿದ್ದರೂ ಸಹ ಅದು ನಮ್ಮ ದೇಹದ ಅತ್ಯಂತ ಮುಖ್ಯವಾದ ಭಾಗವಾಗಿದೆ.ನಮ್ಮ ದೇಹದ ಎಲ್ಲಾ ಅಂಗಗಳನ್ನು ನಾವು ಸ್ವಚ್ಛವಾಗಿಟ್ಟುಕೊಂಡರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ನಾವು ಸೇವಿಸುವ ಆಹಾರವು ನಾಲಿಗೆಯ ಮುಖಾಂತರವೇ ಆಗಿರುವುದರಿಂದ ನಾವು ನಮ್ಮ ದೇಹದ ಮುಖ್ಯ ಅಂಗವಾಗಿರುವ ನಾಲಿಗೆಯನ್ನು ಶುಚಿತ್ವದಿಂದ ಇಟ್ಟುಕೊಳ್ಳುವುದು ಒಳ್ಳೆಯದು. ಬಾಯಿಯನ್ನು ಆರೋಗ್ಯವಾಗಿಟ್ಟುಕೊಳ್ಳದೇ ಇದ್ದರೆ, ಬಾಯಿಯ ಒಳಗಿರುವ ಹಲ್ಲುಗಳು ಹಾಳಾಗುವ ಸಾಧ್ಯತೆ ಇರುತ್ತದೆ.

ಯಾವುದೇ ಕಾರಣಕ್ಕೂ ನಾಲಿಗೆಯಲ್ಲಿ ಬ್ಯಾಕ್ಟೀರಿಯಾಗಳು ಉಳಿಯುವಂತೆ ಮಾಡಬೇಡಿ. ಈ ರೀತಿಯ ಬ್ಯಾಕ್ಟೀರಿಯಗಳನ್ನು ನೀವು ಹೊಂದುವುದರಿಂದ ಇದು ಹಲವಾರು ರೀತಿಯ ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.ಅಲ್ಲದೆ ಈ ರೀತಿಯ ಬ್ಯಾಕ್ಟೀರಿಯಾಗಳು ನಿಮ್ಮ ಆಹಾರದ ಜೊತೆಗೆ ನಿಮ್ಮ ಹೊಟ್ಟೆ ಸೇರುವ ಸಾಧ್ಯತೆ ಇರುತ್ತದೆ.ಆದ್ದರಿಂದ ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಸಮಯದಲ್ಲಿ ನಿಮ್ಮ ನಾಲಿಗೆಯನ್ನು ಸ್ವಚ್ಚ ಮಾಡಿಕೊಂಡು ಮಲಗುವುದು ಉತ್ತಮ. ಇದರಿಂದ ಯಾವುದೇ ರೀತಿಯ ಸಮಸ್ಯೆಗಳು ನಿಮಗೆ ಬರುವುದಿಲ್ಲ.

To Read in English Click: 5 ways how cleaning tongue can boost your health

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ